Connect with us

FILM

ಪವಿತ್ರಗೌಡಗೆ ಖಡಕ್ ವಾರ್ನಿಂಗ್‌ ಕೊಟ್ಟ ಡಿ ಬಾಸ್‌ ಪತ್ನಿ- ಕಾನೂನು ಹೋರಾಟದ ಎಚ್ಚರಿಕೆ !

Published

on

BREAKING NEWS : ಪವಿತ್ರ ಗೌಡ ಸೋಶಿಯಲ್ ಮೀಡಿಯಾದಲ್ಲಿ ನನ್ನ ಮತ್ತು ದರ್ಶನ್ ಅವರ 10ವರ್ಷಗಳ ಜರ್ನಿ ಅನ್ನೋ ಫೋಟೋ ಶೇರ್ ಮಾಡಿದ್ದರು. ಅದಕ್ಕೆ ದರ್ಶನ್ ಪತ್ನಿ ವಿಜಿ ಫುಲ್ ಗರಂ ಆಗಿದ್ದು, ಪವಿತ್ರ ಗೌಡ ಅವರ ಹಳೆಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಖಡಕ್ ವಾರ್ನಿಂಗ್ ಸಹ ಕೊಟ್ಟಿದ್ದಾರೆ.

ತಮ್ಮ ಪತಿಯೊಟ್ಟಿಗಿನ ಚಿತ್ರಗಳನ್ನು ಹಂಚಿಕೊಂಡ ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಮೊದಲಿಗೆ ದರ್ಶನ್ ಆಪ್ತೆ ಪವಿತ್ರಗೌಡ ತಾವು ದರ್ಶನ್ ಜೊತೆಗಿರುವ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಇದರಲ್ಲಿ “ಒಂದು ದಶಕ ಕಳೆದಿದೆ, ಇದು ಶಾಶ್ವತವಾಗಿರಲಿ.” ನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆ ಥ್ಯಾಂಕ್ ಯು ಎಂದು ಬರೆದುಕೊಂಡಿದ್ದು, ಈ ಪೋಸ್ಟ್ @darshanthoogudeepashrinivas @khushigowda_7 ಅವರನ್ನು ಟ್ಯಾಗ್ ಸಹ ಮಾಡಿದ್ದಾರೆ.


ಪವಿತ್ರಗೌಡ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಜೊತೆಗಿನ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಸಿಡಿದೆದ್ದಿರುವ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್, “ಇದು ನಾನು ಆಕ್ಷನ್ ತಗೋಳೋದಕ್ಕೆ ರೈಟ್ ಟೈಮ್ “ಎಂದು ಪವಿತ್ರ ಗೌಡ ಮತ್ತು ಆಕೆಯ ಪತಿಯ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡೋ ಮೂಲಕ ಸಿಟ್ಟು ಹೊರಹಾಕಿದ್ದಾರೆ.


ಬಳಿಕ ಪವಿತ್ರಗೌಡ ಅವರ ಪತಿ ಸಂಜಯ್ ಸಿಂಗ್ ಮತ್ತು ಅವರ ಮಗಳ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ದರ್ಶನ್, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ, ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ.

ಪುರುಷ ವಿವಾಹಿತನೆಂದು ತಿಳಿದಿದ್ದರೂ ಕೂಡ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಅವರೊಂದಿಗಿರುವುದನ್ನುಆಯ್ಕೆ ಮಾಡಿಕೊಳ್ಳುತ್ತಾಳೆ… ಈ ಚಿತ್ರಗಳು ಸ್ಪಷ್ಟವಾಗಿವೆ. ಕುಶಿ ಗೌಡ ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು …. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ.

ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

 

FILM

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ; ಜಪಾನ್ ನತ್ತ 777 ಚಾರ್ಲಿ!

Published

on

777 ಚಾರ್ಲಿ ಭಾರೀ ಸದ್ದು ಮಾಡಿದ್ದ ಸಿನಿಮಾ. ಈ ಚಿತ್ರ ನೆಚ್ಚಿಕೊಳ್ಳದವರೇ ಇಲ್ಲ. ನಾಯಿ ಹಾಗೂ ಮನುಷ್ಯನ ನಡುವಿನ ಬಂಧವನ್ನು ಸಾರಿದ ಈ ಚಿತ್ರ ಭಾರೀ ಯಶಸನ್ನು ಬಾಚಿಕೊಂಡಿತ್ತು. ಇದೀಗ ಈ ಚಿತ್ರ ಜಪಾನ್ ನತ್ತ ಪಯಣ ಬೆಳೆಸಿದೆ.

ಜಪಾನ್ ನಲ್ಲಿ 777 ಚಾರ್ಲಿ :

ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದ 777 ಚಾರ್ಲಿ ಈಗಾಗಲೇ 5 ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಜಪಾನ್ ಸರದಿ. ಜಪಾನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಜೂ.28 ರಂದು ಜಪಾನ್ ನಗರಗಳಲ್ಲಿ 777 ಚಾರ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳು ಈಗಾಗಲೇ ಜಪಾನ್ ನಲ್ಲಿ ಸದ್ದು ಮಾಡಿವೆ. ಇದೀಗ ಚಾರ್ಲಿ ಸರದಿ. ಚಂದನವನದ(Sandalwood) ಪಾಲಿಗಿದು ಹೆಮ್ಮೆಯ ವಿಚಾರವೇ ಸರಿ.

ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ ‘Hachi: A Dog’s Tale’ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಯಶಸ್ಸು ಕಂಡಿತ್ತು.

2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್​ನಲ್ಲಿ ಡಬ್ ಆಗಿ ಬಿಡುಗಡೆಗೊಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ : PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!

ಕಿರಣ್​ ರಾಜ್​ ನಿರ್ದೇಶನದ 2022ರ ಜೂನ್ 10ರಂದು ಭಾರತದ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು. ಚಾರ್ಲಿಯಾಗಿ ನಾಯಿಯ ಅಭಿನಯ ಅದ್ಭುತ ಎನಿಸಿತ್ತು. ರಕ್ಷಿತ್ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದರು. ಚಿತ್ರದಲ್ಲಿ ಸಂಗೀತಾ ಶೃಂಗೇರಿ ಗಮನ ಸೆಳೆದಿದ್ದರು.

Continue Reading

FILM

PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!

Published

on

ಬೆಂಗಳೂರು : ಸಿಕ್ಕಾಪಟ್ಟೆ ಫೇಮಸ್ ಆಗಿದ್ದ ಧಾರಾವಾಹಿ ‘ಗೀತಾ’. ಈ ಧಾರಾವಾಹಿಯ ನಾಯಕ ‘ವಿಜಯ್’ ಅಂದ್ರೆ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಪದಾರ್ಪಣೆ ಮಾಡಿದ್ದಾರೆ. ಅವರ ವಿವಾಹ ಶುಕ್ರವಾರ ಅದ್ದೂರಿಯಾಗಿ ನೆರವೇರಿತು.


ಧನುಷ್ ಗೌಡ ಅವರು ಸಂಜನಾ ಎಂಬವರ ಜೊತೆಗೆ ಸಪ್ತಪದಿ ತುಳಿದಿದ್ದಾರೆ. ಸಂಜನಾ ಧನುಷ್ ಅತ್ತೆಯ ಮಗಳಾಗಿದ್ದು, ಇದು ಅರೆಂಜ್ಡ್ ಮ್ಯಾರೇಜ್ ಆಗಿದೆ.


ಇನ್ನು ಮದುವೆಯಲ್ಲಿ ಕುಟುಂಬದವರು, ಆಪ್ತರು, ಸ್ನೇಹಿತರು ಉಪಸ್ಥಿತರಿದ್ದರು.

ಧನುಷ್ ಅವರು ಆರತಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆದಿದೆ.

ಧನುಷ್ ಅವರ ಮದುವೆ, ಆರತಕ್ಷತೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. 

ಇದನ್ನೂ ಓದಿ : ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!

ಭವ್ಯಾ ಗೌಡ, ಮೌನ ಗುಡ್ಡೇಮನೆ, ರಿತ್ವಿಕ್ ಕೃಪಾಕರ್, ಸೇರಿ ಅನೇಕ ಕಿರುತೆರೆ ಹಿರಿತೆರೆ ತಾರೆಯರು ಆಗಮಿಸಿದ್ದರು.

 

ಮದುವೆ ಸಂಭ್ರಮದ ನಡುವೆಯೂ ಧನುಷ್ ವೋಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಮಾದರಿಯಾಗಿದ್ದಾರೆ. ಧನುಷ್ ನಡೆಗೆ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

 

Continue Reading

FILM

WATCH VIDEO : ಕಾಸರಗೋಡಿನಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್

Published

on

ಕಾಸರಗೋಡು : ಸನ್ನಿಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ. ತನ್ನ ಮಾದಕ ನೋಟದಿಂದ, ನಟನೆಯಿಂದ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮೋಹಕ ತಾರೆ. ಸದ್ಯ ಅವರು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಚಿತ್ರವೊಂದರ ಶೂಟಿಂಗ್ ಗಾಗಿ ಕಾಸರಗೋಡಿನಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಂಗೋಳಿ ಸಮೀಪದ ಶೇಣಿಯಲ್ಲಿ ಹಿಂದಿ ಚಿತ್ರವೊಂದರ ಶೂಟಿಂಗ್ ನಲ್ಲಿ ಅವರು ಭಾಗಿಯಾಗಿದ್ದಾರೆ. ಹೇಳಿ ಕೇಳಿ ಕಾಸರಗೋಡಿನಲ್ಲಿ ಚಿತ್ರೀಕರಣಕ್ಕೆ ಹೆಸರುವಾಸಿಯಾದ ಸುಂದರ ಪ್ರದೇಶ ಶೇಣಿ. ಇಲ್ಲಿ ಹಲವಾರು ಪರಭಾಷಾ ಚಲನಚಿತ್ರಗಳ ಚಿತ್ರೀಕರಣ ನಡೆದಿದೆ. ಇದೀಗ ಸನ್ನಿ ಲಿಯೋನ್ ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

ಶೇಣಿಯ ಶಾಲೆ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಶೂಟಿಂಗ್ ನಡೆಯುತ್ತಿದೆ. ಸನ್ನಿಯ ಮಾದಕ ನೋಟವನ್ನ ನೋಡಲು ರಸ್ತೆ ಬದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದಾರೆ.

 

Continue Reading

LATEST NEWS

Trending