FILM
ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!
ಸಿನಿಮಾ ರಂಗದಲ್ಲಿ ತಮಗಾದ ಕೆಟ್ಟ ಅನುಭವಗಳ ಬಗ್ಗೆ ನಟಿಯರು ಹೇಳಿಕೊಳ್ಳುತ್ತಲೇ ಇರುತ್ತಾರೆ. ಕಾಸ್ಟಿಂಗ್ ಕೌಚ್ ವಿಚಾರ ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಈ ನಡುವೆ ಮತ್ತೊಬ್ಬ ನಟಿ ಕಿರುತೆರೆಯಲ್ಲಿ ತನಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ. ಹೌದು, ಕಿರುತೆರೆ ಖ್ಯಾತ ನಟಿ ಕೃಷ್ಣಾ ಮುಖರ್ಜಿ ಈ ಬಗ್ಗೆ ನೋವು ಹಂಚಿಕೊಂಡಿದ್ದಾರೆ.
ಧಾರಾವಾಹಿಯಿಂದ ಹೊರಬರಲು ಕಾರಣ ತಿಳಿಸಿದ ನಟಿ:
ಕೃಷ್ಣಾ ‘ಯೇ ಹೇ ಮೊಹಾಬತೇ’ ಧಾರಾವಾಹಿ ಮೂಲಕ ಫೇಮಸ್ ಆಗಿದ್ದರು. ನಾಗಿನ್ 2 ಕೂಡ ಅವರಿಗೆ ಹೆಸರು ತಂದು ಕೊಟ್ಟಿದೆ. ಇದೀಗ ಅವರು ತಮಗಾದ ಕಿರುಕುಳದ ವಿಚಾರವನ್ನು ಹಂಚಿಕೊಂಡಿದ್ದಾರೆ. ಕೃಷ್ಣಾ ‘ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಇದರಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರು ನೀಡಿದ ಕಿರುಕುಳ ಎಂದು ನಟಿ ಆರೋಪಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿವರವಾಗಿ ಹೇಳಿದ್ದಾರೆ. ‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿವೆ. ಆದರೂ ನಾನು ಬರೆಯಲೇಬೇಕು. ನಾನು ಇವರಿಂದ ಖಿನ್ನತೆಗೆ ಒಳಗಾಗಿದ್ದೇನೆ. ನಾವು ನಮ್ಮ ಭಾವನೆಗಳನ್ನು ಹಿಡಿದಿಟ್ಟು, ನಮ್ಮ ಒಳ್ಳೆಯ ಜೀವನವನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತೇವೆ. ಆದರೆ, ಇದು ರಿಯಾಲಿಟಿ’ ಎಂದು ಬರೆದುಕೊಂಡಿದ್ದಾರೆ.
‘ನನಗೆ ಇನ್ನಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಕುಟುಂಬದವರು ಈ ಬಗ್ಗೆ ಪೋಸ್ಟ್ ಮಾಡೋದು ಬೇಡ ಎಂದರು. ನಾನೇಕೆ ಹೆದರಬೇಕು? ನ್ಯಾಯ ಪಡೆಯೋದು ನನ್ನ ಹಕ್ಕು’ ಎಂದು ಬರೆದಿದ್ದಾರೆ. ಅಲ್ಲದೇ, ಕುಂದನ್ ಸಿಂಗ್ ಅವರನ್ನು ಟ್ಯಾಗ್ ಕೂಡಾ ಮಾಡಿದ್ದಾರೆ.
ಮೇಕಪ್ ರೂಂ ಲಾಕ್ ಮಾಡಿದ್ದರು :
ಕಳೆದ ಒಂದೂವರೆ ವರ್ಷ ನನಗೆ ಸುಲಭದ್ದಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೇನೆ. ನಾನು ಒಂಟಿಯಾಗಿದ್ದಾಗ ಅಳುತ್ತಿದ್ದೇನೆ. ದಂಗಲ್ ಟಿವಿಗಾಗಿ ಶುಭ್ ಶಗುನ್ ಧಾರಾವಾಹಿ ಒಪ್ಪಿಕೊಂಡಾಗಿನಿಂದ ಈ ಸಮಸ್ಯೆ ಆಗುತ್ತಿದೆ. ನನ್ನ ಜೀವನದಲ್ಲಿ ಮಾಡಿದ ಅತಿ ಕೆಟ್ಟ ನಿರ್ಧಾರ. ನನಗೆ ಅದನ್ನು ಮಾಡಬೇಕು ಎಂದಿರಲಿಲ್ಲ. ಬೇರೆಯವರ ಮಾತನ್ನು ಕೇಳಿ ಕಾಂಟ್ರ್ಯಾಕ್ಟ್ ಸಹಿ ಮಾಡಿದೆ’ ಎಂದಿದ್ದಾರೆ ಕೃಷ್ಣಾ.
‘ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯವಾಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!
ಕೃಷ್ಣಾ ಪೋಸ್ಟ್ ಗೆ ಹಲವು ಮಂದಿ ಕಮೆಂಟ್ ಮಾಡಿದ್ದು, ನಿಮಗೆ ನ್ಯಾಯ ಸಿಗಲೇಬೇಕು ಎಂದು ಕೆಲವರು ಹೇಳಿದ್ದು, ನಿಮ್ಮ ಜೊತೆ ನಾವಿದ್ದೇವೆ ಎಂದು ಕೆಲವರು ಹೇಳಿದ್ದಾರೆ. ಇದು ಮನಸ್ಸು ಮುರಿಯುವ ವಿಚಾರ ಎಂದು ಕಮೆಂಟ್ ಮಾಡಲಾಗಿದೆ. ಅವರ ಅಭಿಮಾನಿಗಳು ಮಾತ್ರವಲ್ಲದೇ, ಕಲಾವಿದರೂ ಕಮೆಂಟ್ ಗಳನ್ನು ಮಾಡಿ ನಿಮ್ಮ ಜೊತೆಗೆ ನಾವಿದ್ದೇವೆ ಎನ್ನುತ್ತಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ.
FILM
ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಅರೆಸ್ಟ್..!
ಬೆಂಗಳೂರು/ಮಂಗಳೂರು: ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್ ಬಂಧನವಾಗಿದೆ. 21 ವರ್ಷ ಪ್ರಾಯದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಕೊರಿಯೋಗ್ರಾಫರ್ ಬಂಧನವಾಗಿದೆ.
ಇತ್ತೀಚಿಗೆ ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಮಾಸ್ಟರ್ ವಿರುದ್ಧ 21 ವರ್ಷದ ಸಹಾಯಕ ಡ್ಯಾನ್ಸರ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು ಸಿನೆಮಾಗಳಿಗೆ ಮಾತ್ರವಲ್ಲದೆ ಸ್ಟಾರ್ ನಟರಿಗೆ ಕೊರಿಯೋಗ್ರಫಿ ಮಾಡಿರುವ ಕೋರಿಯೋಗ್ರಾಫರ್ ಇದೀಗ ಬಂಧನಕ್ಕೊಳಗಾಗಿದ್ದಾರೆ.
ಏನಿದು ಘಟನೆ?
ಯುವತಿಯ ನೀಡಿದ ದೂರಿನ ಹಿನ್ನೆಲೆಯಲ್ಲಿ ಕೊರಿಯೋಗ್ರಾಫರ್ ಜಾನಿ ಮಾಸ್ಟರ್ ವಿರುದ್ಧ ಜೀರೋ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ನೃತ್ಯ ನಿರ್ದೇಶಕ ತಲೆ ಮರೆಸಿಕೊಂಡಿದ್ದರು. ಮೂರು ದಿನಗಳಿಂದ ಹುಡುಕಾಡುತ್ತಿದ್ದ ಹೈದರಾಬಾದ್‌ನ ಪೊಲೀಸರು ನಾಲ್ಕು ತಂಡಗಳಾಗಿ ಶೋಧ ನಡೆಸಿದ್ದರು. ಇಂದು (ಸೆಪ್ಟೆಂಬರ್ 19) ಬೆಳಗ್ಗೆ ಗೋವಾದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇನ್ನೊಂದು ಕಡೆ ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಪ್ರಕರಣ ಕೂಡ ಇವರ ಮೇಲೆ ದಾಖಲಾಗಿದೆ. ಮಹಿಳಾ ನೃತ್ಯ ನಿರ್ದೇಶಕಿಯೊಬ್ಬರ ಮೇಲೆ ಚಿತ್ರೀಕರಣದ ವೇಳೆ ಜಾನಿ ಮಾಸ್ಟರ್ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿ ದೂರು ನೀಡಿದ್ದರು. ಅಲ್ಲದೆ ಔಟ್ ಡೋರ್ ಶೂಟಿಂಗ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾಗಿ ಆರೋಪ ಮಾಡಿದ್ದಾರೆ.
ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ
ಈ ದೂರಿನ ಬೆನ್ನಲ್ಲೇ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನರಸಿಂಗಿ ಠಾಣೆಯ ಪೊಲೀಸರಿಂದ ತನಿಖೆ ನಡೆಸಲಾಗುತ್ತಿದ್ದು, ಝೀರೊ ಎಫ್‌ಐಆರ್ ಕೂಡ ದಾಖಲಾಗಿತ್ತು. ಜಾನಿ ಮಾಸ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಯುವತಿಯನ್ನು ವಿಚಾರಣೆ ಮಾಡಿದ್ದರು. ಆಕೆಯ ಮನೆಯಲ್ಲಿಯೇ ಸುಮಾರು ಮೂರು ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದರು.
FILM
ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಗೆ ಕೊ*ಲೆ ಬೆದರಿಕೆ ಹಾಕಿದ ಮಹಿಳೆ
ಮಂಗಳೂರು/ಮುಂಬೈ : ನಟ ಸಲ್ಮಾನ್ ಖಾನ್ ತಂದೆ, ಹಿರಿಯ ಸಾಹಿತಿ ಸಲೀಂ ಖಾನ್ ಅವರಿಗೆ ವಾಕಿಂಗ್ ವೇಳೆ ಮಹಿಳೆಯೊಬ್ಬರು ಬೆದರಿ*ಕೆ ಹಾಕಿದ್ದಾರೆ ಎನ್ನಲಾಗಿದೆ. ಮುಂಜಾನೆಯ ವಾಕಿಂಗ್ ಸಮಯದಲ್ಲಿ ಮಹಿಳೆಯೊಬ್ಬಳು ಡಾನ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬೆದರಿ*ಕೆ ಹಾಕಿದ್ದಾಗಿ ವರದಿಯಾಗಿದೆ. ಈ ಬಗ್ಗೆ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಕಿಂಗ್ ವೇಳೆ ಹತ್ತಿರಕ್ಕೆ ಬಂದಿದ್ದ ಮಹಿಳೆ ಸಲೀಂ ಖಾನ್ ಅವರಿಗೆ, ಸರಿಯಾಗಿ ನಡೆದುಕೊಳ್ಳಿ, ಇಲ್ಲದೆ ಇದ್ದರೆ ಸಲ್ಮಾನ್ ಖಾನ್ ಅವರಿಗೆ ಕೊ*ಲೆ ಬೆದರಿ*ಕೆ ಹಾಕಿರುವ ಡಾನ್ ಲಾರೆನ್ಸ್‌ಗೆ ಕರೆ ಮಾಡುವುದಾಗಿ ಹೇಳಿದ್ದಾಗಿ ದೂರು ನೀಡಲಾಗಿದೆ. ಮಹಿಳೆ ಯಾರು? ಎಲ್ಲಿಂದ ಬಂದವಳು ? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸಲ್ಮಾನ್ ಖಾನ್ ನಗರದಿಂದ ಹೊರಟ ಕೆಲವೇ ಗಂಟೆಯಲ್ಲಿ ಈ ಘಟನೆ ನಡೆದಿದೆ
ಎಪ್ರಿಲ್ ತಿಂಗಳಲ್ಲಿ ಸಲ್ಮಾನ್ ಖಾನ್ ಅವರ ಬಾಂದ್ರದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್ ಹೊರಗೆ ಗುಂಡಿನ ದಾ*ಳಿ ನಡೆಸಲಾಗಿತ್ತು. ಇದು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಮಾಡಿರುವುದಾಗಿ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದ. ಸಲ್ಮಾನ್ ಖಾನ್ ವಿಚಾರಣೆಯ ವೇಳೆಯಲ್ಲಿ ತನ್ನ ಕುಟುಂಬಕ್ಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿ*ಕೆ ಇದೆ ಎಂದು ಹೇಳಿಕೆ ನೀಡಿದ್ದರು.
ಇದನ್ನೂ ಓದಿ : ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ಅತ್ಯಾಚಾ*ರ ಕೇಸ್ ದಾಖಲು
ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರಿಗೆ ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಸಲ್ಮಾನ್ ಖಾನ್ ಕುಟುಂಬಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮಹಿಳೆ ಯಾರು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.
FILM
ಮೊದಲ ಬಾರಿಗೆ ದರ್ಶನ್ ಭೇಟಿಗೆ ಬಂದ ತಾಯಿ..! ದರ್ಶನ್‌ಗಾಗಿ ತಾಯಿ ತಂದಿದ್ದೇನು ಗೊತ್ತಾ?
ಮೈಸೂರು/ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ದರ್ಶನ್ ಗೆ ಬಿಡುಗಡೆ ಭಾಗ್ಯ ಇನ್ನೂ ದೊರೆತಿಲ್ಲ. ಇನ್ನು ಜೈಲಲ್ಲಿರುವ ದರ್ಶನ್ ಭೇಟಿಗೆ ಚಿತ್ರರಂಗದ ನಟ ನಟಿಯರು ಭೇಟಿ ನೀಡುತ್ತಿದ್ದಾರೆ. ಕೆಲ ದಿನಗಳ ಹಿಂದ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಅವರಲ್ಲಿ ತಾಯಿಯಯನ್ನು ಕಾಣುವ ಹಂಬಲ ವ್ಯಕ್ತಪಡಿಸಿದ್ದರು. ಈ ಹಿಂದೆಯೇ ತಾಯಿ ಮೀನಾ ಕೂಡಾ ದರ್ಶನ್ ಭೇಟಿ ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ.
ದರ್ಶನ್ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ; ಸೆ.30ರವರೆಗೆ ಜೈಲೇ ಗತಿ
ಇದೀಗ ದರ್ಶನ್ ತಾಯಿ ಮೀನಾ ತೂಗುದೀಪ ಹಾಗೂ ಅಕ್ಕ, ಭಾವ ಮತ್ತು ಅವರ ಮಕ್ಕಳು ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ರನ್ನು ಕಾಣಲು ಮಗ ದಿನಕರ್ ತೂಗುದೀಪ ಜೊತೆ ಬಂದಿದ್ದರು. ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.
ದರ್ಶನ್ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ. ಮಡದಿ ವಿಜಯಲಕ್ಷ್ಮೀ, ಸ್ನೇಹಿತರು ಈಗಾಗಲೇ ದರ್ಶನ್ರನ್ನು ಭೇಟಿ ಮಾಡಿದ್ದಾರೆ. ಆದರೆ ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್ ದರ್ಶನ್ರನ್ನು ಭೇಟಿ ಮಾಡಿರಲಿಲ್ಲ.
- DAKSHINA KANNADA6 days ago
ಫುಟ್ ಬೋರ್ಡ್ನಲ್ಲಿ ನೇತಾಡಿ ಪ್ರಯಾಣಿಸಿದ ವಿದ್ಯಾರ್ಥಿಗಳು; ಬಸ್ ಸೀಝ್
- LATEST NEWS3 days ago
ಆಪಲ್ ಮೊಬೈಲ್ ವಿರುದ್ಧ ಗ್ರಾಹಕರ ಪ್ರತಿಭಟನೆ
- International news3 days ago
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು
- BELTHANGADY6 days ago
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ