Connect with us

FILM

ಸುದೀಪ್ ಮಗಳು ನಾಯಕಿಯಾಗಿ ಎಂಟ್ರಿ… ಸ್ಮೈಲ್ ಗುರು ರಕ್ಷಿತ್‌ಗೆ ಜೋಡಿಯಾದ ಜೆರುಶಾ

Published

on

ಬೆಂಗಳೂರು: ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಾಗಿಣಿ ದ್ವಿವೇದಿ ನಟನೆಯ ವೀರ ಮದಕರಿ ಸಿನೆಮಾ  ಚಿತ್ರರಂಗದಲ್ಲೇ ಮೋಡಿ ಮಾಡಿತ್ತು. ಸಿನೆಮಾದ ಹೆಸರು ನೆನಪು ಮಾಡಿದ್ರೆ ಸುದೀಪ್, ರಾಗಿಣಿ ಜೊತೆ ಅವರ ಅವರ ಮಗಳ ಪಾತ್ರವನ್ನು ಮಾಡಿದ ಜೆರುಶಾ ಕೂಡಾ ನೆನಪಿಗೆ ಬರ್ತಾಳೆ.

jerusha with rakshith

ಮುದ್ದಾದ ಮುಖದ ಮುದ್ದು ಗೊಂಬೆ, ಗುಂಗುರು ಕೂದಲಿನ ಪುಟಾಣಿ ಸದಾ ಅಮ್ಮನ ಲಾಲಿ ಹಾಡನ್ನು ಟೇಪ್‌ರೆಕಾರ್ಡರ್‌ನಲ್ಲಿ ಕೇಳಿಕೊಂಡು ಅಪ್ಪನ ಹಿಂದೆನೆ ಸುತ್ತುತ್ತಿದ್ದ ಪುಟಾಣಿ ಈಗ ನಾಯಕಿ ನಟಿ.

 READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು

ನಾಯಕಿ ನಟಿಯಾಗಿ ಜೆರುಶಾ

ಈಗ ಪುಟಾಣಿ ಜೆರುಶಾ ಇದೀಗ ವೀರಮದಕರಿ ಸಿನೆಮಾದ ಬಳಿಕ ನಾಯಕಿ ನಟಿಯಾಗಿ ಬೆಳ್ಳಿತೆರೆಗೆ ಬರಲು ಸಿದ್ಧರಾಗಿದ್ದಾರೆ. ಹೌದು, ಮಹೇಶ್ ಬಾಬು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಸಿನೆಮಾದಲ್ಲಿ ಮತ್ತೊಂದು ಯುವ ಪ್ರತಿಭೆಯನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ.  ಕಿರುತೆರೆ ನಟ ಸ್ಮೈಲ್ ಗುರು ರಕ್ಷಿತ್ ಹಾಗೂ  ಜೆರುಶಾರವರನ್ನು ಕಾಣಿಸಲಿದ್ದಾರೆ. ಆಕಾಶ್, ಅರಸು, ಪರಮೇಶ ಪಾನ್ ವಾಲ ಸೇರಿದಂತೆ ಹಲವಾರು ಹಿಟ್ ಸಿನೆಮಾಗಳನ್ನು ನೀಡಿರುವ ಮಹೇಶ್ ಬಾಬು ಇದೀಗ ಹೊಸಮುಖಗಳೊಂದಿಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಸಿನೆಮಾ ಯಾವ ರೀತಿ ಇರಲಿದೆ ಅನ್ನೋದು ಕಾದು ನೋಡಬೇಕಿದೆ.

mahesh babu with rakshith

ಜೆರುಶಾ ಈಗಾಗಲೇ ಬಾಲ ನಟಿಯಾಗಿ ಮಿಂಚಿದ್ದಾರೆ. ಅಲ್ಲದೆ ರಂಗಭೂಮಿಯ ನಟನೆಯಲ್ಲೂ ಪಳಗಿದ್ದಾರೆ. ಇನ್ನು ಸ್ಮೈಲ್ ಗುರು ರಕ್ಷಿತ್ ಡ್ಯಾನ್ಸ್ ರಿಯಾಲಿಟಿ ಶೋ, ಕಿರುತೆರೆ ಧಾರಾವಾಹಿಗಳ ಮೂಲಕ ಪ್ರೇಕ್ಷಕರಿಗೆ ಪರಿಚತರಾಗಿದ್ದಾರೆ. ಈ ಸಿನೆಮಾಗೆ ಹೊಸ ಮುಖದ ಮತ್ತೊಂದು ನಾಯಕಿಗಾಗಿ ಹುಡುಕಾಟದಲ್ಲಿ ಇದ್ದಾರಂತೆ ನಿರ್ದೇಶಕರು.

ಸಿನೆಮಾಗೆ ಇನ್ನೂ ಟೈಟಲ್ ಫೈನಲ್ ಆಗದಿದ್ದರೂ ಮೇಲ್ನೋಟಕ್ಕೆ ಸಿನೆಮಾ ಯೂತ್‌ಫುಲ್ ಕಥೆಯನ್ನ ಹೊಂದಿದೆ ಎನ್ನಬಹುದು. ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದು, ಚೇತನ್ ಹಾಗೂ ಅನುರಾಗ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಸತ್ಯ ಛಾಯಾಗ್ರಾಹಣವಿರಲಿದೆ. ಇದೇ ಮೇ ತಿಂಗಳಿನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ಈ ಹಿಂದೆ ನಟಿ ಜೆರುಶಾ ಲೂಸಿಯಾ ನಿರ್ದೇಶಕ ಪವನ್ ಕುಮಾರ್ ಅವರ ಮಹತ್ವಾಕಾಂಕ್ಷೆಯ ಕನ್ನಡ, ಮಲಯಾಳಂ ದ್ವಿಭಾಷಾ ಪ್ರಾಜೆಕ್ಟ್ ಧೂಮಮ್‌ನಲ್ಲಿ ನಟಿಸಿದ್ದರು. ಮಲಯಾಳಂ ನಟ ಫಹಾದ್ ಫಾಸಿಲ್ ನಟನೆಯ ಸಿನಿಮಾದಲ್ಲಿ ಸಣ್ಣ ಪಾತ್ರವನ್ನು ನಿರ್ವಹಿಸಿದ್ದರು.

FILM

ಬಾಲಿವುಡ್ ಜನಪ್ರಿಯ ನಿರೂಪಕಿ ಭಾರತಿ ಸಿಂಗ್ ಆಸ್ಪತ್ರೆ ದಾಖಲು..!

Published

on

ಮುಂಬೈ: ಬಾಲಿವುಡ್ ನಿರೂಪಕಿ, ಹಾಸ್ಯ ನಟಿ ಭಾರತಿ ಸಿಂಗ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಸ್ತುತ ಡ್ಯಾನ್ಸ್ ದೀವಾನೆ ಸೀಸನ್ 4 ಅನ್ನು ಹೋಸ್ಟ್ ಮಾಡುತ್ತಿರುವ ಖ್ಯಾತ ನಿರೂಪಕಿ ಭಾರತಿ ಸಿಂಗ್  ತೀವ್ರ ಹೊಟ್ಟೆ ನೋವಿನಿಂದ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

bharathi

‘ಕಳೆದ ಮೂರು ದಿನಗಳಿಂದ ತೀವ್ರವಾದ ಹೊಟ್ಟೆ ನೋವನ್ನು ಅನುಭವಿಸುತ್ತಿದ್ದೇನೆ’ ಎಂದು ತನ್ನ ವ್ಲಾಗ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಅದನ್ನು ಗ್ಯಾಸ್ಟ್ರೊನಲ್ ಅಥವಾ ಆಮ್ಲೀಯ ಅಸ್ವಸ್ಥತೆ ಆಗಿರಬಹುದೆಂದು ಭಾವಿಸಿ ನಿರ್ಲಕ್ಷ ಮಾಡಿದ್ದರಂತೆ. ಆದರೆ, ನೋವು ತಡೆದುಕೊಳ್ಳಲಾಗದೆ ವೈದ್ಯಕೀಯ ಚಿಕಿತ್ಸೆ ಪಡೆಯಲು ನಿರ್ಧರಿಸಿ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ವ್ಲಾಗ್‌ನಲ್ಲಿ ಹೇಳಿದ್ದಾರೆ. ಇನ್ನು ವೈದ್ಯಕೀಯ ಪರೀಕ್ಷೆ ಬಳಿಕ ಭಾರತಿಗೆ ಪಿತ್ತಕೋಶದಲ್ಲಿ ಕಲ್ಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಏನೂ ತಿನ್ನಲು ಆಗುತ್ತಿಲ್ಲ ತಿಂದರೂ ವಾಂತಿ ಆಗುತ್ತಿದೆ ಎಂದ ಹೇಳಿದ ಅವರು ಭಾವುಕರಾದರು.

ಮುಂದೆ ಓದಿ..;‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

ಈ ನಡುವೆ ಭಾರತಿ ಆರೋಗ್ಯದಲ್ಲಿ ಏರುಪೇರು ಉಂಟಾಗಿರುವುದಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೇಗ ಚೇತರಿಸಿಕೊಳ್ಳುವಂತೆ ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದು ಕಮೆಂಟ್‌ಗಳನ್ನು ಹಾಕಿದ್ದಾರೆ.

 

Continue Reading

FILM

ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ‘ಗಬ್ಬರ್ ಸಿಂಗ್’ ತುಳು ಚಲನಚಿತ್ರ ಬಿಡುಗಡೆ

Published

on

ಉಡುಪಿ : ಬಹು ನಿರೀಕ್ಷಿತ ತುಳು ಚಿತ್ರ “ಗಬ್ಬರ್ ಸಿಂಗ್” ಕರಾವಳಿ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಉಡುಪಿಯ ಕಲ್ಪನಾ ಚಿತ್ರಮಂದಿರದಲ್ಲಿ ಬಿಡುಗಡೆ ಸಮಾರಂಭವೂ ನಡೆಯಿತು.

ತೊಟ್ಟಂ ಚರ್ಚ್ ನ ಧರ್ಮಗುರು ಫಾದರ್ ಡೆನಿಸ್ ಡೆಸಾ, ಶಂಕರಪುರದ ಸಾಯಿ ಈಶ್ವರ ಗುರೂಜಿ, ಮಿಯಾರ್ ಮಸೀದಿಯ ಮೌಲ್ವಿ  ಅಬುಲ್ ಹಸನ್, ರಾಜಕೀಯ ಮುಖಂಡರಾದ ಗೀತಾಂಜಲಿ ಸುವರ್ಣ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ, ಸರಳಾ ಕಾಂಚನ್, ಶಿಲ್ಪಾ ಭಟ್, ಉಡುಪಿ ಬಿಜೆಪಿ ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕೃಷ್ಣಮೂರ್ತಿ ಆಚಾರ್ಯ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಚಿತ್ರದ ಕಲಾವಿದರಾದ ವೀಣಾ ಎಸ್ ಶೆಟ್ಟಿ, ಸಂದೀಪ್ ಭಕ್ತ, ಆದ್ಯ, ಚಂದ್ರಹಾಸ್ ಕಪ್ಪೆಟ್ಟು, ಕಿಶೂ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ನಿರ್ದೇಶಕರಾದ ಕಿಶೋರ್ ಗೊನ್ಸಾಲ್ವಿಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಇದನ್ನೂ ಓದಿ : ಕೋಸ್ಟಲ್ ವುಡ್ ಅಂಗಳದಲ್ಲಿ ‘ಗಬ್ಬರ್ ಸಿಂಗ್’ ಹವಾ ಶುರು

‘ಗಬ್ಬರ್ ಸಿಂಗ್’ ಚಿತ್ರವು ಕೌಟುಂಬಿಕ ಅಂಶಗಳನ್ನು ಒಳಗೊಂಡಿರುವ ಆಕ್ಷನ್ ಥ್ರಿಲ್ಲರ್ ಆಗಿದೆ. ಕಥೆ ಮತ್ತು ಚಿತ್ರಕಥೆಯನ್ನು ಸತೀಶ್ ಪೂಜಾರಿ ಬಾರ್ಕೂರು ರಚಿಸಿದ್ದು, ಪ್ರದೀಪ್ ನಿರ್ದೇಶನವಿದೆ. ತುಳು ಚಿತ್ರರಂಗದ ಹೆಸರಾಂತ ನಟರುಗಳು ಈ ಚಿತ್ರದಲ್ಲಿ ಪಾತ್ರವಾಗಿದ್ದಾರೆ.

Continue Reading

FILM

‘ಅರ್ಜುನ’ ಆನೆಯನ್ನು ನೆನೆದ ಡಿಬಾಸ್; ದರ್ಶನ್ ಕೋರಿಕೆ ಏನು?

Published

on

ಚಂದನವನ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅದ್ಭುತ ಕಲಾವಿದ ಜೊತೆಗೆ ಪ್ರಾಣಿ ಪ್ರಿಯರೂ ಹೌದು. ಅವರ ಪ್ರಾಣಿ ಪ್ರೇಮದ ಬಗ್ಗೆ ಹೇಳ್ಬೇಕಾ? ಹಲವಾರು ನಿದರ್ಶನಗಳನ್ನು ನಾವು ನೋಡಿದ್ದೇವೆ. ಇದೀಗ ದರ್ಶನ್ ‘ಅರ್ಜುನ’ ನ ಬಗ್ಗೆ ಮಾತನಾಡಿದ್ದಾರೆ.


ಕಾಡಾನೆ ಸೆರೆ ವೇಳೆ ನಡೆದಿದ್ದ ದುರಂ*ತ :

ಹಾಸನದ ಅರಣ್ಯದಲ್ಲಿ ಕಾಡಾನೆ ಸೆರೆ ಹಿಡಿದು, ರೇಡಿಯೋ ಕಾಲರ್ ಅಳವಡಿಸುವ ಕಾರ್ಯಾಚರಣೆ ವೇಳೆ ದಸರಾ ಆನೆ ಅರ್ಜುನ ಮೃ*ತಪಟ್ಟಿದ್ದ. ಅವರಿಗೆ 63 ವರ್ಷ ವಯಸ್ಸಾಗಿತ್ತು. 2023 ರ ಡಿಸೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಅರ್ಜುನ 8 ಬಾರಿ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತಿದ್ದ. ಆತನ ನಿಧ*ನ ಕನ್ನಡಿಗರನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು.

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಯಸಳೂರು ಬಳಿ ಕಾಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡುವ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕಾಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡುವ ಕಾರ್ಯಾಚರಣೆ ವೇಳೆ ಅರ್ಜುನನ ಮೇಲೆ ಒಂಟಿಸಲಗ ಅಟ್ಯಾಕ್ ಮಾಡಿದೆ. ಕಾರ್ಯಾಚರಣೆ ವೇಳೆ ಒಂಟಿಸಲಗ ದಾಳಿ ಮಾಡುತ್ತಿದ್ದಂತೆ, ಉಳಿದ ಮೂರು ಸಾಕಾನೆಗಳು ಓಡಿ ಹೋಗಿವೆ. ಕೊನೆಗೆ ಒಂಟಿಸಲಗದ ಜೊತೆ ಅರ್ಜುನ ಆನೆಯು ಒಂಟಿಯಾಗಿ ಹೋರಾಟ ನಡೆಸಿದೆ. ಈ ಕಾಳಗ ಆರಂಭವಾಗುತ್ತಿದ್ದಂತೆ ಅರ್ಜುನನ ಮೇಲಿನಿಂದ ಮಾವುತ ಇಳಿದು ಓಡಿದ್ದಾರೆ. ಅರ್ಜುನ ಇಹಲೋಕ ತ್ಯಜಿಸಿದ್ದ. ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಜನ ಕಂಬನಿ ಮಿಡಿದಿದ್ದರು.

ಅಂದು ಡಿ ಬಾಸ್ ದರ್ಶನ್ ಕೂಡ ಸಂತಾಪ ಸೂಚಿಸಿದ್ದರು. ಇದೀಗ ಮತ್ತೆ ಡಿ ಬಾಸ್ ‘ಅರ್ಜುನ’ನನ್ನು ಸ್ಮರಿಸಿದ್ದಾರೆ.

ಏನಂದ್ರು ಡಿಬಾಸ್?

ದರ್ಶನ್ ಅರ್ಜುನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅರ್ಜುನನಿಗೆ ಸಲ್ಲಬೇಕಾದ ಗೌರವದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

‘ದಸರಾ ಸಡಗರದ ವೇಳೆ ಬಹಳಷ್ಟು ಬಾರಿ ಅಂಬಾರಿ ಹೊತ್ತು ತನ್ನ ಗಜಗಾಂಭೀರ್ಯಕ್ಕೆ ಹೆಸರುವಾಸಿಯಾಗಿದ್ದ ಅರ್ಜುನ ಕಳೆದ ವರ್ಷ ನಡೆದ ಕಾಡಾನೆ ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿರುವುದು ತಿಳಿದೇ ಇದೆ. ಆತನ ಸಮಾಧಿಗೆ ಯಾರು ದಿಕ್ಕು-ದೆಸೆ ಇಲ್ಲದಂತೆ ಭಾಸವಾಗುತ್ತಿದೆ.

ಇದನ್ನೂ ಓದಿ : ತಿಮ್ಮಪ್ಪನ ಸನ್ನಿಧಾನದಲ್ಲಿ ಮಾಂಗಲ್ಯ ಮಾರಾಟ; ಮಾಂಗಲ್ಯ ಪಡೆಯುವುದು ಹೇಗೆ?

ಆತನಿಗೆ ಸಲ್ಲಬೇಕಾದ ಗೌರವ ಆದಷ್ಟು ಬೇಗ ದೊರೆಯಲಿ. ಇನ್ನೇನು ಮಳೆಗಾಲ ಶುರುವಾಗುವ ಮುನ್ನ ಇದಕ್ಕೊಂದು ಒಳ್ಳೆ ವ್ಯವಸ್ಥೆಯಾಗಲಿ ಎಂಬ ಕೋರಿಕೆ ನಮ್ಮದು ಎಂದು ಅವರು ಬರೆದುಕೊಂಡಿದ್ದಾರೆ.

Continue Reading

LATEST NEWS

Trending