Connect with us

FILM

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೆಮ್ಮೆಯ ಗರಿ; ಜಪಾನ್ ನತ್ತ 777 ಚಾರ್ಲಿ!

Published

on

777 ಚಾರ್ಲಿ ಭಾರೀ ಸದ್ದು ಮಾಡಿದ್ದ ಸಿನಿಮಾ. ಈ ಚಿತ್ರ ನೆಚ್ಚಿಕೊಳ್ಳದವರೇ ಇಲ್ಲ. ನಾಯಿ ಹಾಗೂ ಮನುಷ್ಯನ ನಡುವಿನ ಬಂಧವನ್ನು ಸಾರಿದ ಈ ಚಿತ್ರ ಭಾರೀ ಯಶಸನ್ನು ಬಾಚಿಕೊಂಡಿತ್ತು. ಇದೀಗ ಈ ಚಿತ್ರ ಜಪಾನ್ ನತ್ತ ಪಯಣ ಬೆಳೆಸಿದೆ.

ಜಪಾನ್ ನಲ್ಲಿ 777 ಚಾರ್ಲಿ :

ಪರಂವಃ ಸ್ಟುಡಿಯೋಸ್ ನಿರ್ಮಾಣದಲ್ಲಿ ಮೂಡಿ ಬಂದ 777 ಚಾರ್ಲಿ ಈಗಾಗಲೇ 5 ಭಾಷೆಗಳಲ್ಲಿ ರಿಲೀಸ್ ಆಗಿತ್ತು. ಇದೀಗ ಜಪಾನ್ ಸರದಿ. ಜಪಾನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಜೂ.28 ರಂದು ಜಪಾನ್ ನಗರಗಳಲ್ಲಿ 777 ಚಾರ್ಲಿ ಬಿಡುಗಡೆ ಆಗಲಿದೆ. ಬಾಲಿವುಡ್ ಹಾಗೂ ಟಾಲಿವುಡ್ ಸಿನಿಮಾಗಳು ಈಗಾಗಲೇ ಜಪಾನ್ ನಲ್ಲಿ ಸದ್ದು ಮಾಡಿವೆ. ಇದೀಗ ಚಾರ್ಲಿ ಸರದಿ. ಚಂದನವನದ(Sandalwood) ಪಾಲಿಗಿದು ಹೆಮ್ಮೆಯ ವಿಚಾರವೇ ಸರಿ.

ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ ‘ಶೋಚಿಕೋ ಮೂವೀ’ ‘777 ಚಾರ್ಲಿ’ ಚಿತ್ರವನ್ನು ಜಪಾನಿನಲ್ಲಿ ವಿತರಣೆ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಸಂಸ್ಥೆ ‘Hachi: A Dog’s Tale’ ಸಿನಿಮಾವನ್ನು ಜಪಾನಿನಲ್ಲಿ ವಿತರಣೆ ಮಾಡಿ ಯಶಸ್ಸು ಕಂಡಿತ್ತು.

2023ರಲ್ಲಿ ‘777 ಚಾರ್ಲಿ’ ಸಿನಿಮಾ ಥೈಲ್ಯಾಂಡ್​ನಲ್ಲಿ ಡಬ್ ಆಗಿ ಬಿಡುಗಡೆಗೊಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್ ಅಮೆರಿಕ, ಜರ್ಮನಿ, ತೈವಾನ್ ಮುಂತಾದ ದೇಶಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಇದನ್ನೂ ಓದಿ : PHOTOS : ಗೀತಾ ‘ವಿಜಯ್’ ಅದ್ದೂರಿ ಮದುವೆ; ಮೆಚ್ಚುಗೆ ಪಡೆದ ಧನುಷ್ ಮಾಡಿದ ಆ ಒಂದು ಕಾರ್ಯ!

ಕಿರಣ್​ ರಾಜ್​ ನಿರ್ದೇಶನದ 2022ರ ಜೂನ್ 10ರಂದು ಭಾರತದ 5 ಭಾಷೆಗಳಲ್ಲಿ ಬಿಡುಗಡೆಯಾಗಿ ಜನಮನಸೂರೆಗೊಂಡಿತ್ತು. ಚಾರ್ಲಿಯಾಗಿ ನಾಯಿಯ ಅಭಿನಯ ಅದ್ಭುತ ಎನಿಸಿತ್ತು. ರಕ್ಷಿತ್ ಶೆಟ್ಟಿ ಮನೋಜ್ಞವಾಗಿ ನಟಿಸಿದ್ದರು. ಚಿತ್ರದಲ್ಲಿ ಸಂಗೀತಾ ಶೃಂಗೇರಿ ಗಮನ ಸೆಳೆದಿದ್ದರು.

FILM

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

Published

on

ಅಂಧ್ರಪ್ರದೇಶ:  ಕಿರುತೆರೆ ನಟಿ ಪವಿತ್ರಾ ಜಯರಾಂ(35 ವರ್ಷ) ಅಪಘಾತದಲ್ಲಿ ಸಾ*ವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲು ಸಮೀಪದಲ್ಲಿ ಅಪಘಾತ ಸಂಭವಿಸಿದ್ದು ಪವಿತ್ರ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ. ಮೂಲತಃ ಕನ್ನಡಿಗರಾದ ಪವಿತ್ರ ಜಯರಾಂ, ತೆಲುಗಿನ ‘ತ್ರಿನಯನಿ’ ಧಾರವಾಹಿಯಲ್ಲಿ ಜನಪ್ರಿಯರಾಗಿದ್ದರು. ಕನ್ನಡದ ‘ರೋಬೋ ಫ್ಯಾಮಿಲಿ’ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದರು. ಪವಿತ್ರ ಮೂಲತಃ ಮಂಡ್ಯ ತಾಲೂಕಿನ ಹನಕೆರೆಯವರು.

pavithra jayaram

ನಟಿ ಪವಿತ್ರಾ ಅವರು ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಧಾರವಾಹಿಯಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಇನ್ನು ತೆಲುಗಿನ ‘ತ್ರಿನಯನಿ’ ಧಾರಾವಾಹಿ ಮೂಲಕ ತೆಲುಗರ ಮನೆಮಾತಾಗಿದ್ದರು.  ಈ ಧಾರಾವಾಹಿ ಕನ್ನಡದಲ್ಲೂ ಪ್ರಸಾರಗೊಳ್ಳುತ್ತಿದ್ದು ಇಲ್ಲಿಯೂ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದ್ದರು.

ಪುಷ್ಟಾ-2 ರಿಲೀಸ್ ಕ್ರೇಜ್‌ನಲ್ಲಿರುವಾಗಲೇ ‘ಅಲ್ಲು ಅರ್ಜುನ್’ ವಿರುದ್ಧ ಪೊಲೀಸ್ ಕೇಸ್.!

ಪವಿತ್ರ ಜಯರಾಂ ಇಂದು(ಮೇ.12) ಮುಂಜಾನೆ ಕಾರು ಅಪಘಾತದಲ್ಲಿ ಸಾ*ವಿಗೀಡಾಗಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಸಮೀಪ ಮೆಹಬೂಬ್ ನಗರದಲ್ಲಿ ನಡೆದ ಕಾರು ಅಪಘಾತದಲ್ಲಿ ನಟಿ ಪವಿತ್ರಾ ಸ್ಥಳದಲ್ಲೇ ಮ*ರಣ ಹೊಂದಿದ್ದಾರೆ. ಪವಿತ್ರ ಪ್ರಯಾಣಿಸುತ್ತಿದ್ದ ಕಾರು ಹಾಗೂ ಬಸ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಪವಿತ್ರ ಸ್ಥಳದಲ್ಲೇ ಅಸುನೀಗಿದ್ದಾರೆ. ಶೂಟಿಂಗ್‌ ಎಂದು ಹೋಗಿದ್ದವರು ಮರಳಿ ಬಾರದ ಲೋಕ್ಕಕೆ ಹೊರಟಿದ್ದು ಇವರ ದುರಂತ ಸಾವಿಗೆ ಎಲ್ಲರೂ ಕಂಬನಿ ಮಿಡಿದಿದ್ದಾರೆ.

ನಟಿ ಪವಿತ್ರಾ ಜಯರಾಂ ಸಾವಿಗೆ ಕನ್ನಡ ಹಾಗೂ ತೆಲುಗಿನ ಕಿರುತೆರೆಯವರು ಸಂತಾಪ ಸೂಚಿಸಿದ್ದಾರೆ. ಈ ಅನಿರೀಕ್ಷಿತ ಸಾವಿನಿಂದ ಕಂಗಾಲಾಗಿರುವ ಕುಟುಂಬದ ಸದಸ್ಯರನ್ನು ನೆನೆದು ಹಲವರು ಕಂಬನಿ ಮಿಡಿದಿದ್ದಾರೆ.

Continue Reading

FILM

‘ಪುಷ್ಪ-2 ‘ರಿಲೀಸ್ ಕ್ರೇಜ್‌ನಲ್ಲಿರುವಾಗಲೇ ‘ಅಲ್ಲು ಅರ್ಜುನ್’ ವಿರುದ್ಧ ಪೊಲೀಸ್ ಕೇಸ್.!

Published

on

ಆಂಧ್ರಪ್ರದೇಶ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ‘ಪುಷ್ಪ-2 ದಿ ರೂಲ್’ ರಿಲೀಸ್‌ ಜೋಶ್‌ನಲ್ಲಿ ಇದ್ದಾರೆ. ಆದ್ರೆ ಇದೀಗ ಅವರಿಗೊಂದು ಬಿಗ್‌ ಶಾಕ್ ಎದುರಾಗಿದೆ. ಆಂಧ್ರ ಪೊಲೀಸರು ಅಲ್ಲು ಅರ್ಜುನ್ ವಿರುದ್ಧ ಕೇಸ್ ದಾಖಲು ಮಾಡಿದ್ದಾರೆ.

allu arjun

ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅಲ್ಲು ಅರ್ಜುನ್ ತಮ್ಮ ಸ್ನೇಹಿತರ ಮನೆಗೆ ಭೇಟಿ ನೀಡಿದ್ದಾರೆ. ಪೊಲೀಸರ ಅನಮತಿ ಪಡೆಯದೆ ಸ್ನೇಹಿತ, ವೈಎಸ್​​ಆರ್​​ಸಿಪಿ ಶಾಸಕ ಶಿಲ್ಪಾ ರವಿಯವರ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲು ಅರ್ಜುನ್ ನೋಡಲು ಭಾರೀ ಮಟ್ಟದಲ್ಲಿ ಅಭಿಮಾನಿಗಳು ಸೇರಿದ್ದರು. ಇದರಿಂದ ಕಂಪ್ಲೀಟ್ ಟ್ರಾಫಿಕ್ ಜಾಮ್‌ ಉಂಟಾಗಿದ್ದು ಕೆಲಸಕ್ಕೆ ತೆರಳುವವರಿಗೆ ತೊಂದರೆ ಉಂಟಾಗಿದೆ ಎನ್ನಲಾಗಿದೆ.

ಟರ್ಕಿಯಲ್ಲಿ ‘ಬಿಗ್ ಬಾಸ್’ ಖ್ಯಾತಿಯ ದೀಪಿಕಾ ದಾಸ್

ಇನ್ನು ಮೇ.13ರಂದು ಚುನಾವಣೆ ನಡೆಯಲಿದೆ. ಇನ್ನೂ ಚುನಾವಣೆಗೆ ಒಂದೇ ದಿನ ಇರುವುದರಿಂದ ಚುನಾವಣೆ ಪ್ರಚಾರಕ್ಕಾಗಿ ನಂದ್ಯಾಳದಲ್ಲಿರುವ ಸ್ನೇಹಿತನ ಮನೆಗೆ ಬಂದಿದ್ದರು. ಆದರೆ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅನುಮತಿ ಪಡೆಯದೆ ಮನೆಗೆ ಭೇಟಿ ನೀಡಿದ್ದಾರೆ. ಈ ಕುರಿತು ಅಲ್ಲು ಅರ್ಜುನ್ ಹಾಗೂ ಶಾಸಕ ಶಿಲ್ಪಾ ರವಿ ವಿರುದ್ಧ  ಟೂಟೌನ್ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ರಿಲೀಸ್‌ಗೆ ಸಿದ್ಧವಾಗಿರುವ ‘ಪುಷ್ಪ-2’ 

ಇನ್ನು ಅಲ್ಲು ಅರ್ಜುನ್, ರಶ್ಮಿಕಾ ಮಂದಣ ಅಭಿನಯದ ಪುಷ್ಪ ಪಾರ್ಟ್-2 ಬಿಡುಗಡೆಗೆ ಸಿಧ್ದವಾಗಿದೆ. ಆಗಸ್ಟ್ 15, 2024 ರ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ. ಪುಷ್ಪ ಭಾಗ 1 ಬಾಕ್ಸ್‌ ಆಫೀಸ್‌ನಲ್ಲಿ ಭಾರೀ ಸದ್ದು ಮಾಡಿತ್ತು. ಇದೀಗ ಪಾರ್ಟ್‌ 2 ಜನರ ನಿರೀಕ್ಷೆಯನ್ನು ಹೆಚ್ಚಿಸಿದೆ.

 

Continue Reading

FILM

ಸೀರಿಯಲ್‌ನಲ್ಲಿ ಹೆಲ್ಮೆಟ್ ಇಲ್ಲದೆ ಸಂಚಾರ..ನಟಿಗೆ ದಂಡ ವಿಧಿಸಿದ ಸಂಚಾರಿ ಪೊಲೀಸರು..!

Published

on

ಮಂಗಳೂರು: ಧಾರವಾಹಿ ಕಾಲ್ಪನಿಕವಾಗಿದ್ರು ಕೂಡಾ ಅದು ಜನರ ಮೇಲೆ ಎಷ್ಟು ಪ್ರಭಾರ ಬೀರುತ್ತದೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಧಾರವಾಹಿಯಲ್ಲಿ ಬರುವ ಪಾತ್ರಗಳು ಪ್ರತೀಯೊಬ್ಬ ಜೀವನದಲ್ಲಿ ನಡೆದಿರುವ ಘಟನೆಯನ್ನು ಹೋಲುತ್ತದೆ. ಹಾಗಾಗಿ ವೀಕ್ಷಕರಿಗೂ ಅದು ನಿಜ ಘಟನೆಯಂತೆ ಗೋಚರಿಸುತ್ತದೆ.

seetharama

ಇನ್ನೂ ಧಾರಾವಾಹಿಗಳಲ್ಲಿ ಬರುವ ಸನ್ನಿವೇಶಗಳನ್ನು ಎಷ್ಟೋ ಜನ ತಮ್ಮ ವೈಯಕ್ತಿಕ ಜೀವನದಲ್ಲೂ ಅಳವಡಿಸುತ್ತಾರೆ. ಹೀಗಿರುವಾಗ ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾರಾಮ ಸೀರಿಯಲ್‌ನಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿದ್ದಾರೆ.  ಇದಕ್ಕೆ ಸಂಚಾರ ಪೊಲೀಸರು ನಟಿ ಹಾಗೂ ವಾಹನ ಮಾಲಕಿಯ ಮೇಲೆ ದಂಡ ವಿಧಿಸಿರುವ ಘಟನೆ ನಡೆದಿದೆ.

ಸೀತಾರಾಮ ಧಾರವಾಹಿಯ ದೃಶ್ಯವೊಂದರಲ್ಲಿ ನಟಿಯೊಬ್ಬರು ಹೆಲ್ಮೆಟ್ ಇಲ್ಲದೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದಕ್ಕಾಗಿ ಪೊಲೀಸರು 500ರೂ. ದಂಡ ವಿಧಿಸಿರುವ ಅಪರೂಪದ ಘಟನೆ ನಡೆದಿದೆ. ಈ ಧಾರಾವಾಹಿಯಲ್ಲಿ 14ನೇ ಸಂಚಿಕೆಯ ದೃಶ್ಯದಲ್ಲಿ ಸ್ಕೂಟರ್‌ನಲ್ಲಿ ಇಬ್ಬರು ಸಂಚರಿಸುವ ದೃಶ್ಯವಿತ್ತು. ಅದರಲ್ಲಿ ಸವಾರೆ ಹೆಲ್ಲೆಟ್ ಧರಿಸಿದ್ದರೆ ಹಿಂಬದಿ ಕುಳಿತಾಕೆ ಹಲ್ಲೆಟ್ ಧರಿಸಿರಲಿಲ್ಲ.

ಮಂಗಳೂರಿನವರಿಂದ ಪೊಲೀಸರಿಗೆ ದೂರು:

ಟಿವಿಯಲ್ಲಿ ಪ್ರಸಾರವಾದ ಧಾರಾವಾಹಿಯ ದೃಶ್ಯವನ್ನು ವೀಕ್ಷಿಸಿದ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಎಂಬವರು, ಮಂಗಳೂರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಧಾರಾವಾಹಿಯಲ್ಲಿ ಸಂಚಾರ ನಿಯಮದ ಉಲ್ಲಂಘನೆಯಾಗಿದೆ. ನಟ-ನಟಿಯರು ಸಂಚಾರ ನಿಯಮ ಉಲ್ಲಂಘಿಸುವುದು ಪ್ರೇಕ್ಷಕರಿಗೆ ತಪ್ಪು ಸಂದೇಶ ನೀಡಿದಂತಾಗುತ್ತದೆ. ಹಾಗಾಗಿ ಧಾರಾವಾಹಿಯ ನಟಿ, ನಿರ್ದೇಶಕ ಮತ್ತು ಪ್ರಸಾರ ಮಾಡಿದ ವಾಹಿನಿ ವಿರುದ್ಧ ಸೂಕ್ತ ಕಾನೂನು ಪೊಲೀಸ್ ಆಯುಕ್ತರು ಮಂಗಳೂರು ಸಂಚಾರ ಪೂರ್ವ ಠಾಣೆಗೆ ಪ್ರಕರಣವನ್ನು ವಹಿಸಿದ್ದರು. ಅದರಂತೆ ಜಯಪ್ರಕಾಶ್ ಅವರಿಗೆ ಠಾಣೆಯಿಂದ ಹಿಂಬರಹ ನೀಡಿ, ದ್ವಿಚಕ್ರ ವಾಹನದ ಮಾಲಕರಿಗೆ ಮತ್ತು ಧಾರಾವಾಹಿಯ ನಿರ್ದೇಶಕರಿಗೆ ಮಾಹಿತಿ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು. ಇನ್ನು ಈ ಧಾರಾವಾಹಿಯ ಪ್ರೊಡಕ್ಷನ್ ಮ್ಯಾನೇಜರ್‌ ನಿಂದ ಇನ್ನುಮುಂದೆ ಈ ಧಾರಾವಾಹಿಯಲ್ಲಿ ಸಂಚಾರ ನಿಯಮ ಉಲ್ಲಂಘಟನೆ ಮಾಡದಂತೆ ಹಿಂಬರಹ ಪಡೆದುಕೊಂಡಿದ್ದಾರೆ.

ಮಲತಂದೆಯಿಂದ ಹತ್ಯೆಯಾದ ಜಗ್ಗೇಶ್ ಸಿನೆಮಾ ನಟಿ..! 13 ವರ್ಷದ ಬಳಿಕ ಮಹತ್ವದ ತೀರ್ಪು

ಧಾರಾವಾಹಿಯ ದೃಶ್ಯವನ್ನು ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ಚಿತ್ರೀಕರಿಸಿದ್ದು ಮುಂದಿನ ವಿಚಾರಣೆಗೆ ಅಲ್ಲಿನ ಪೊಲೀಸ್ ಠಾಣೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಲಾಗಿತ್ತು. ಅರ್ಜಿಯ ಬಗ್ಗೆ ಪರಿಶೀಲನೆ ನಡೆಸಿದ ರಾಜಾಜಿನಗರ ಠಾಣಾ ಪೊಲೀಸರು ಸಂಬಂಧಪಟ್ಟ ನಟಿಗೆ ಮತ್ತು ಮಾಲಕಿಗೆ ಮೇ 10ರಂದು 500 ರೂ. ದಂಡ ವಿಧಿಸಿದ್ದಾರೆ.

ಧಾರಾವಾಹಿಯಲ್ಲಿ ನಟಿಯೊಬ್ಬರು ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಸವಾರ ಮಾಡುತ್ತಿರುವುದನ್ನು ಗಮನಿಸಿದ್ದೆ. ಈ ಕುರಿತಾಗಿ ಆಯುಕ್ತರಿಗೆ ದೂರು ಕೂಡಾ ನೀಡಿದ್ದೆ. ಇದಕ್ಕೆ ಪೊಲೀಸರು ಉತ್ತಮ ಸ್ಪಂದನೆ ನೀಡಿದ್ದಾರೆ. ಈ ರೀತಿ ದಂಡ ವಿಧಿಸಿರುವುದು ಬೇರೆಯವರಿಗೂ ಉತ್ತಮ ಪಾಠವಾಗಲಿದ್ದು, ಜಾಗೃತಿಇ ಮೂಡಿಸುವ ಕೆಲಸವೂ ಆಗಿದೆ ಎಂದು ದೂರುದಾರ ಮಂಗಳೂರಿನ ಜಯಪ್ರಕಾಶ್ ಎಕ್ಕೂರು ಹೇಳಿದ್ದಾರೆ.

 

 

 

Continue Reading

LATEST NEWS

Trending