Connect with us

    chikkamagaluru

    ಎಟಿಎಂ ಮೆಷಿನ್‌ಗೆ ಬೆಂಕಿ ಅವಘಡ..! ಸುಟ್ಟು ಕರಕಲಾದ ಲಕ್ಷಾಂತರ ರೂಪಾಯಿ..!!

    Published

    on

    ಚಿಕ್ಕಮಗಳೂರು: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎಟಿಎಂ ಮೆಷಿನ್‌ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಸುಟ್ಟು ಕರಕಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.  ನಗರದ ಐ.ಜಿ ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್ ನ ಎಟಿಎಂ ಗೆ ಭಾನುವಾರ(ಎ.21) ಮಧ್ಯರಾತ್ರಿ ಬೆಂಕಿ ತಗುಲಿದೆ.

    ಎಟಿಎಂ ಕೊಠಡಿಯಲ್ಲಿ ಅಳವಡಿಸಿದ್ದ ಎಸಿಯಲಲ್ಲಿ ವಿದ್ಯುತ್ ಸರ್ಕ್ಯೂಟ್‌ ಸಂಭವಿಸಿ ಈ ಘಟನೆ ನಡೆದಿದೆ ಎನ್ನಲಾಗಿದೆ.  ಇದರಿಂದ ಎಟಿಎಂ ಮೆಷಿನ್ ಹಾಗೂ ಹಣ ತುಂಬಿಸುವ ಮೆಷಿನ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಮೆಷಿನ್‌ನಲ್ಲಿದ್ದ 5.ಲಕ್ಷ ರೂಪಾಯಿ ಸುಟ್ಟು ಕರಕಲಾಗಿ  ಹೋಗಿದೆ. ಎಟಿಎಂ ಮೆಷಿನ್ ಮೇಲಿನ ಭಾಗದಲ್ಲಿ ಕರ್ನಾಟಕ ಬ್ಯಾಂಕ್ ಇದ್ದು ಅದೃಷ್ಟವಶಾತ್ ಭಾರೀ ಅಪಾಯ ತಪ್ಪಿದಂತಾಗಿದೆ.

    READ MORE..; ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

    ಎಟಿಎಂಗೆ ಬೆಂಕಿ ಹೊತ್ತಿಕೊಂಡ ವಿಚಾರವನ್ನು ಹೈದರಾಬಾದ್ ಬ್ಯಾಂಕ್ ಕಂಟ್ರೋಲ್ ರೂಮ್​ ಅಗ್ನಿಶಾಮಕ ದಳಕ್ಕೆ ತಿಳಿಸಿದೆ. ಮಾಹಿತಿ ಬಂದ ಕೂಡಲೆ ಸ್ಥಳಕ್ಕೆ ಧಾವಿಸಿದ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

     

    chikkamagaluru

    ಶೃಂಗೇರಿ ದೇವಸ್ಥಾನದಲ್ಲಿಯೂ ವಸ್ತ್ರ ಸಂಹಿತೆ ಜಾರಿ; ಈ ಉಡುಪು ಧರಿಸಿದವರಿಗೆ ಮಾತ್ರ ಪ್ರವೇಶ

    Published

    on

    ಚಿಕ್ಕಮಗಳೂರು: ದೇಶದ ಅನೇಕ ಹಿಂದೂ ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಅದೇ ರೀತಿ ಇದೀಗ ಶೃಂಗೇರಿ ಶಾರದಾಂಬ ದೇವಾಲಯದಲ್ಲಿಯೂ ವಸ್ತ್ರ ಸಂಹಿತೆ ಜಾರಿಗೆ ತರಲಾಗಿದೆ. ಪುರುಷ ಹಾಗೂ ಮಹಿಳೆಯರು ನಿರ್ದಿಷ್ಟ ಬಟ್ಟೆಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲಾಗುವುದು. ಆದರೆ ವಸ್ತ್ರ ಸಂಹಿತೆಯು ಒಳ ಪ್ರಕಾರಕ್ಕೆ ಮಾತ್ರ ಅನ್ವಯವಾಗಲಿದ್ದು ದೇವಸ್ಥಾನದ ಒಳ ಆವರಣಕ್ಕೆ ಯಾವುದೇ ನಿರ್ಬಂಧವಿಲ್ಲ.

    ಶ್ರೀ ಶಾರದಾ ಪೀಠದ ಒಳ ಪ್ರಾಕಾರಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಶ್ರೀಮಠ ರೂಪಿಸಿದ್ದು ಆಗಸ್ಟ್ 15ರಿಂದ ಜಾರಿಗೆ ಬರಲಿದೆ. ಪುರುಷರು ಧೋತಿ, ಶಲ್ಯ ಹಾಗೂ ಮಹಿಳೆಯರು ಸೀರೆ, ಸೆಲ್ವಾರ್‌ ಕಮೀಜ್‌, ದುಪ್ಪಟ್ಟ, ಲಂಗ ದಾವಣಿ, ಲೆಹಂಗ ಧರಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

    ಮೈಸೂರು ದಸರಾ 2024: ಈ ಬಾರಿಯೂ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲಿಗೆ

    “ಅಗಸ್ಟ್ 15, 2024ನೇ ಗುರುವಾರದಿಂದ ಶ್ರೀ ಶಾರದಾಮ್ಮನವರ ದರ್ಶನಕ್ಕಾಗಿ ಬರುವ ಭಕ್ತಾದಿಗಳು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಲು ವಿನಂತಿಸಲಾಗಿದೆ ಭಾರತೀಯ ಸಾಂಪ್ರದಾಯಿಕವಲ್ಲದ ಉಡುಗೆಯನ್ನು ತೊಟ್ಟುಬಂದವರಿಗೆ ಅರ್ಧಮಂಟಪದ ಒಳಗೆ ಪ್ರವೇಶವಿರುವುದಿಲ್ಲ, ಹೊರಗಿನ ಪ್ರಾಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ” ಎಂದು ಪ್ರಕಟಣೆ ಹೇಳಿದೆ. ಜಗದ್ಗುರುಗಳ ಚಾತುರ್ಮಾಸ ವ್ರತ ಚಾಲ್ತಿಯಲ್ಲಿ ಇರುವ ಮಧ್ಯೆಯೇ ಈ ವಸ್ತ್ರಸಂಹಿತೆ ನಿಯಮ ಜಾರಿಗೆ ಬರಲಿದೆ.

    Continue Reading

    chikkamagaluru

    ಚಿಕ್ಕಮಗಳೂರು: ಮುಳ್ಳಯ್ಯನಗಿರಿಗೆ ಪ್ರವಾಸಿಗರಿಗೆ ನಿರ್ಬಂಧ..! ಜಿಲ್ಲಾಧಿಕಾರಿ ಆದೇಶ

    Published

    on

    ಚಿಕ್ಕಮಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉಡುಪಿ, ಕೊಡಗು ಜಿಲ್ಲೆ ಸೇರಿದಂತೆ ಹಲವು ಕಡೆಯ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಸಮುದ್ರದ ತೀರದ ಜನರಿಗೆ ಜಿಲ್ಲಾಡಳಿತ ಕಟ್ಟೆಚ್ಚರ ನೀಡಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಿದ್ದು, ಬೀಚ್‌ನತ್ತ ಬರುವ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.

    ಮಲೆನಾಡು ಪ್ರದೇಶಗಳಲ್ಲಿ ಮಳೆ ಮುಂದುವರಿಯುತ್ತಿದೆ. ಈ ಪ್ರದೇಶಗಳಲ್ಲಿ ಗುಡ್ಡ, ಬೆಟ್ಟಗಳು ಹೆಚ್ಚಿರುವುದರಿಂದ ಆತಂಕ ಹೆಚ್ಚಾಗಿದೆ. ಗಾಳಿ ಮಳೆಗೆ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಶೃಂಗೇರಿ, ಕಳಸ, ನರಸಿಂಹರಾಜಪುರ, ಮೂಡಿಗೆರೆ, ಕುದುರೆಮುಖ ಭಾಗಗಳಲ್ಲಿ ತೀವ್ರ ಮಳೆಯಾಗುತ್ತಿದ್ದು ಗುಡ್ಡೆ, ಬೆಟ್ಟಗಳಲ್ಲಿ ನಿರ್ಮಾಣವಾಗಿರುವ ಸಣ್ಣ ಜಲಪಾತಗಳು ತುಂಬಿ ಹರಿಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಹಲವು ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿದ್ದು, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಗೆ ಜು.22 ರವರೆಗೆ ಪ್ರವಾಸ ನಿರ್ಬಂಧವನ್ನು ಹೇರಿದೆ.

    ನೆರೆಯಿಂದ ಜಲಾವೃತಗೊಂಡ ಮನೆ..! ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಹೋಗಲಾಗದೆ ಪರದಾಟ..!

    ಮುಳ್ಳಯ್ಯನಗಿರಿ ಪ್ರದೇಶಕ್ಕೆ ಹೋಗುವ ದಾರಿ ಕಿರಿದಾಗಿದ್ದು ಬೆಟ್ಟ ಗುಡ್ಡಗಳ ನಡುವೆಯೇ ಹಾದು ಹೋಗಬೇಕಿದೆ. ಹಾಗಾಗಿ ಈ ಪ್ರದೇಶದಲ್ಲಿ ಅಪಾಯ ಸಂಭವಿಸುವ ಸಾದ್ಯತೆ ಹೆಚ್ಚಿದೆ. ಈ ಪ್ರದೇಶದಲ್ಲಿ ಈಗಾಗಲೇ ಸಣ್ಣ ಪ್ರಮಾಣದ ಗುಡ್ಡ ಕುಸಿತ ಗೊಂಡಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.  ಸ್ಥಳೀಯ ವಾಹನಗಳನ್ನು ಹೊರತುಪಡಿಸಿ ಹೊರಗಿನ ಯಾವುದೇ ವಾಹನಗಳಿಗೆ ಈ ಪ್ರದೇಶಗಳಲ್ಲಿ ಜು.22ವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ.

    Continue Reading

    chikkamagaluru

    ವೀಕೆಂಡ್ ಮಸ್ತಿಯಲ್ಲಿ ಯುವಕರು..! ದೇವರಮನೆಯಲ್ಲಿ ಯುವಕರ ಡ್ಯಾನ್ಸ್..!!

    Published

    on

    ಚಿಕ್ಕಮಗಳೂರು: ಚಿಕ್ಕಮಗಳೂರು ಪ್ರವಾಸಿ ತಾಣಕ್ಕೆ ಹೆಸರುವಾಸಿ. ಇನ್ನು ಮಳೆಗಾಲದಲ್ಲಿ ಹೇಳಲೇಬೇಕಿಲ್ಲ. ಹಚ್ಚ ಹಸಿರ ವಾತಾವರಣ.. ಝಳಝಳಿಸುವ ಪುಟ್ಟ ಪುಟ್ಟ ಜಲಪಾತಗಳು ಕಣ್ಮನ ಸೆಳೆಯುತ್ತದೆ. ಮೂಡಿಗೆರೆ ತಾಲೂಕಿನ ಪ್ರವಾಸಿ ತಾಣ ದೇವರಮನೆಗೆ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಹೊಯ್ಸಳರ ಕಾಲದ ಇತಿಹಾಸವನ್ನು ಹೊಂದಿರುವ ದೇವರಮನೆ ಕಾಲಭೈರವೇಶ್ವರನ ಕ್ಷೇತ್ರಕ್ಕೆ ಪ್ರವಾಸಿಗರು ಅಂತರ್‌ರಾಜ್ಯದಿಂದಲೂ ಬರುತ್ತಾರೆ.

    ಇದೀಗ ಶ್ರೀ ಕ್ಷೇತ್ರ ಕಾಲಭೈರವೇಶ್ವರನ ಕ್ಷೇತ್ರ ಮೋಜು ಮಸ್ತಿಯ ಅಡ್ಡವಾಗಿ ಕಂಡುಬರುತ್ತಿದೆ. ರಸ್ತೆಗೆ ಅಡ್ಡವಾಗಿ ವಾಹನಗಳನ್ನು ನಿಲ್ಲಿಸಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆವುಂಟು ಮಾಡಿದ್ದಾರೆ. ಮೋಜು, ಮಸ್ತಿ, ಡ್ಯಾನ್ಸ್‌ ಮಾಡಿ ವಾಹನಗಳನ್ನು ಬೇಕಾಬಿಟ್ಟಿ ಪಾರ್ಕ್‌ ಮಾಡಿದ್ದರು. ಕಾರನ್ನು ರಸ್ತೆಯಲ್ಲಿ ನಿಲ್ಲಿಸಿ ಕುಣಿದು ಕುಪ್ಪಳಿಸಿರವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಪೊಲೀಸರ ಭಯ ಹೇಗೂ ಇಲ್ಲ.. ಸ್ಥಳೀಯರ ಮಾತಿಗೆ ಕಿಮ್ಮತ್ತಿಲ್ಲ ಅನ್ನುವಂತಾಗಿದೆ.

    ನಿವೃತ್ತಿಗೊಂಡ ಪೊಲೀಸ್ ಅಧಿಕಾರಿಗೆ ವಿಶೇಷ ಗೌರವ..! ಪುಷ್ಪಾರ್ಚಣೆ ಸಲ್ಲಿಸಿದ ಪೊಲೀಸ್ ಅಧಿಕಾರಿಗಳು..!

    ಚಾರ್ಮಾಡಿ ಘಾಟಿಯಲ್ಲೂ ಇದೇ ಪರಿಸ್ಥಿತಿ

    ಇನ್ನು ಚಾರ್ಮಾಡಿ ಘಾಟಿಯಲ್ಲೂ ಇಂಥದ್ದೇ ಪರಿಸ್ಥಿತಿ. ಪ್ರವಾಸಿಗರು ಅಲ್ಲಿನ ಬಂಡೆಕಲ್ಲಿನ ಮೇಲೆ ನಿಂತು ಸೆಲ್ಫಿಗೆ ಪೋಸ್ ಕೊಡುತ್ತಿದ್ದಾರೆ. ಜಲಪಾತಕ್ಕೆ ಇಳಿದು ಮೋಜು ಮಸ್ತಿ ಮಾಡುತ್ತಿದ್ದಾರೆ. ಇನ್ನು ಜಾರುವ ಬಂಡೆಗಳಲ್ಲಿ ನಿಂತು ಮೋಜು, ಮಸ್ತಿ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡುವಂತಿದೆ.

    Continue Reading

    LATEST NEWS

    Trending