Connect with us

LATEST NEWS

ಸಾ*ವಿನಲ್ಲೂ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

Published

on

ಕೊಪ್ಪಳ: ಒಂದೇ ದಿನದಲ್ಲಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ. ತಂದೆಯ ಸಾವಿನ ನೋವಿನಲ್ಲಿ ಮಗ ಕೂಡಾ ಸಾವನ್ನಪ್ಪಿದ್ದಾರೆ. ಮೃ*ತರನ್ನು ರಾಮರೆಡ್ಡಿ (70) ಮತ್ತು ಆದಿನಾರಾಯಣ ರೆಡ್ಡಿ (42) ಎಂದು ಗುರುತಿಸಲಾಗಿದೆ.

death

ಮುಂದೆ ಓದಿ..; ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

ರಾಮರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ(ಎ.28) ಬೆಳಿಗ್ಗೆ ಮೃತಪಟ್ಟಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಮಗ ಆದಿನಾರಾಯಣ ರೆಡ್ಡಿ ಕೂಡ ಪ್ರಾಣ ಬಿಟ್ಟಿದ್ದಾರೆ. ಆದಿನಾರಾಯಣ ತಂದೆಯನ್ನು ಬಹಳ ಪ್ರೀತಿಸುತ್ತಿದ್ದು, ತಂದೆಯ ಸಾವಿನ ದುಃಖದಲ್ಲಿ ಕುಳಿತಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆದಿನಾರಾಯಣ ರೆಡ್ಡಿ, ಪತ್ನಿ ಹಾಗೂ ತನ್ನೆರಡು ಮಕ್ಕಳನ್ನು ಅಗಲಿದ್ದಾರೆ.

FILM

ಕನ್ನಡ ಸಿನೆಮಾ ನಟನ ಮೇಲೆ ಮಾರಣಾಂತಿಕ ಹಲ್ಲೆ..! ‘ನ್ಯಾಯ ಬೇಕು’ ಎಂದು ವೀಡಿಯೋ ಮಾಡಿದ ನಟ

Published

on

ಬೆಂಗಳೂರು: ಕನ್ನಡದ ಹಲವು ಸಿನೆಮಾಗಳಲ್ಲಿ ನಟಿಸಿರುವ ಚೇತನ್ ರವರ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದೆ.  ಬೆಂಗಳೂರಿನ ಕಗ್ಗಲಿಪುರದಲ್ಲಿ ಈ ಕೃತ್ಯ ನಡೆದಿದೆ.  ಸುಮಾರು 20 ಜನರ ತಂಡದಿಂದ ಚೇತನ್ ರವರ ಮೇಲೆ ಅಟ್ಯಾಕ್‌ ಆಗಿದ್ದು ರಕ್ತ ಸುರಿಯುವ ಹಾಗೆ ಹಲ್ಲೆ ನಡೆಸಿದ್ದಾರೆ. ತಾಯಂದಿರ ದಿನದಂದೆ ಈ ಘಟನೆ ನಡದಿದ್ದು ಚೇನತ ಬೇಸರ ವ್ಯಕ್ತಪಡಿಸಿದ್ದಾರೆ.

chethan halle

ನಿನ್ನೆ ತಾಯಂದಿರ ದಿನವಾಗಿದ್ದರಿಂದ ಚೇತನ್ ತಾಯಿ ಜೊತೆ ದೇವಸ್ಥಾನಕ್ಕೆ ಹೋಗಿ ಮರಳಿ ಬರುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಕಾರು ಅಡ್ಡ ಗಟ್ಟಿ ಸುಮಾರು 20 ಜನರ ಕಿಡಿಗೇಡಿಗಳ ತಂಡ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ‘ನನ್ನ ಕಾರಿಗೂ ಹಾನಿ ಮಾಡಿದ್ದಾರೆ. ಕಿಡಿಗೇಡಿಗಳು ಮದ್ಯ ಸೇವನೆ ಮಾಡಿದ್ದರು. ಇದು ನನ್ನ ಜೀವನದಲ್ಲಿ ನಡೆದಿರುವ ಅತೀ ಕೆಟ್ಟ ಘಟನೆ. ನನಗೆ ನ್ಯಾಯ ಸಿಗಬೇಕು ಎಂದು ನಟ ಚೇತನ್ ಹೇಳಿದ್ದಾರೆ.  ಸುಮಾರು 20 ಜನ ಸೇರಿಕೊಂಡು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅದರ ವಿಡಿಯೋ ಇದೆ. ಮೂಗು ಮುರಿದು ಹಾಕಿದ್ದಾರೆ. ಕಗ್ಗಲಿಪುರ ಪೊಲೀಸ್​ ಠಾಣೆ ಪಕ್ಕದಲ್ಲಿ ಪ್ರಥಮ ಚಿಕಿತ್ಸೆ ಪಡೆಯಲು ಬಂದಿದ್ದೇನೆ. ಈಗ ಮತ್ತೆ ಬಂದು ಕಾರು ಒಡೆದು ಹಾಕಿದ್ದಾರೆ. ಅವರು ತುಂಬ ಕೆಟ್ಟ ಜನ ಎಂದು ಚೇತನ್​ ಚಂದ್ರ ಹೇಳಿದ್ದಾರೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಇನ್ನು ಹಲ್ಲೆಗೊಳಗಾದ ಚೇತನ್ ಪ್ರಥಮ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದು ಅಲ್ಲಿchetan_chanddrra ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ವೀಡಿಯೋ ಮಾಡಿ ತಮ್ಮ ಮೇಲೆ ನಡೆದಿರುವ ಹಲ್ಲೆಯ ಬಗ್ಗೆ ತಿಳಿಸಿದ್ದಾರೆ.

Continue Reading

LATEST NEWS

ಈ ನಾಲ್ಕು ತಿಂಗಳ ಮಗುವಿನ ಸಾಧನೆ ಕೇಳಿದ್ರೆ ಶಾಕ್ ಆಗ್ತೀರಾ..!

Published

on

ಬೆಂಗಳೂರು: ಹುಟ್ಟಿದ ನಾಲ್ಕು ತಿಂಗಳಿನಲ್ಲಿ ಮಗುವೊಂದು ವಿಶ್ವದಾಖಲೆಯನ್ನು ನಿರ್ಮಿಸಿದೆ. ಬೆಂಗಳೂರಿನ ಪ್ರಜ್ವಲ್ ಹಾಗೂ ಸ್ನೇಹಾ ದಂಪತಿ ಪುತ್ರಿ ಇಶಾನ್ವಿ.ಪಿ ಹೆಸರಿನ ನಾಲ್ಕು ತಿಂಗಳ ಮಗು ವಿಶ್ವ ದಾಖಲೆಯನ್ನು ನಿರ್ಮಿಸಿದೆ. ಈ ಪುಟ್ಟ ಕಂದಮ್ಮ ಎರಡು ತಿಂಗಳಿದ್ದಾಗಲೇ ಪೋಷಕರು ಎರಡು ಫ್ಲಾಶ್ ಕಾರ್ಡ್‌ ಇಟ್ಟು ಒಂದನ್ನು ಗುರುತಿಸುವಂತೆ ಹೇಳಿದರೆ, ಅದಕ್ಕೆ ಸರಿಯಾದ ಕಾರ್ಡ್‌ ಸೆಲೆಕ್ಟ್ ಮಾಡುತ್ತಿದ್ದಳು. ಇದನ್ನು ತಾಯಿ ಸ್ನೇಹಾ ಗಮನಿಸಿದ್ದಾರೆ.

world record

125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುತ್ತಾಳೆ ಇಶಾನ್ವಿ:

ಇಶಾನ್ವಿ ಸುಮಾರು 125 ವಿವಿಧ ರೀತಿಯ ವಸ್ತುಗಳು, ಪ್ರಾಣಿ-ಪಕ್ಷಿಗಳು, ತರಕಾರಿ ಫೊಟೋಗಳನ್ನು ಗುರುತಿಸುತ್ತಾಳೆ. ಅದರಲ್ಲಿ 10 ಹಕ್ಕಿಗಳು, 15 ತರಕಾರಿಗಳು, 10 ಕಾಡು ಪ್ರಾಣಿಗಳು, 10 ಸಾಕು ಪ್ರಾಣಿಗಳು, 11 ಕಲರ್ಸ್, 10 ವಿವಿಧ ದೇಶದ ಧ್ವಜಗಳು, 10 ವಾಹನಗಳು, 14 ಹಣ್ಣುಗಳು, 13 ಜನರಲ್ ಇಮೇಜ್, 12 ಶೇಪ್ಸ್‌ಗಳನ್ನು ಗುರತಿಸುವ ಸಾಮರ್ಥ್ಯ ಹೊಂದಿದ್ದಾಳೆ ಈ ಪುಟ್ಟ ಪೋರಿ. 125 ಫ್ಲಾಶ್ ಕಾರ್ಡ್‌ಗಳನ್ನು ಗುರುತಿಸುವ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದ್ದಾಳೆ.

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

world record

ಇನ್ನು ಮಗುವಿನ ಸಾಮರ್ಥ್ಯವನ್ನು ಅರಿತ ಮಗುವಿನ ತಾಯಿ ಸ್ನೇಹಾ ತನ್ನ ಕುಟುಂಬದವರ ಸಹಾಯದಿಂದ ವೀಡಿಯೋ ರೆಕಾರ್ಡ್‌ ಮಾಡಿ ನೋಬಲ್ ವರ್ಲ್ಡ್‌ ರೆಕಾರ್ಡ್‌ಗೆ ಕಳುಹಿಸಿಕೊಟ್ಟಿದ್ದರು. ಅಲ್ಲಿ ಮಗುವಿನ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗೆ ಆಯ್ಕೆ ಮಾಡಿದೆ. ಆಂಧ್ರಪ್ರದೇಶದ ನಾಲ್ಕು ತಿಂಗಳ ಮಗು ಕೈವಲ್ಯ ಮಾಡಿದ್ದ ಸಾಧನೆಯನ್ನು ಇಶಾನ್ವಿ ಹಿಂದಿಕ್ಕಿದ್ದಾಳೆ. ಕೈವಲ್ಯ 120 ಫ್ಲಾಶ್‌ಗಳನ್ನು ಗುರುತಿಸಿದ್ರೆ, ಇಶಾನ್ವಿ 125 ಫ್ಲಾಶ್‌ಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆಯಲ್ಲಿ ಅಗ್ರಸ್ಥಾನ ಪಡೆದುಕೊಂಡಿದ್ದಾಳೆ.

Continue Reading

DAKSHINA KANNADA

ಮುಲ್ಕಿ: ಚಿಪ್ಪು ಹೆಕ್ಕಲು ಹೋಗಿ ನೀರಲ್ಲಿ ಕಣ್ಮರೆಯಾದ ಯುವಕ.! ಪತ್ತೆಗೆ ಶೋಧ

Published

on

ಮಂಗಳೂರು: ಮುಲ್ಕಿ  ಕೊಳಚಿ ಕಂಬಳ ಬೀಚ್ ಬಳಿಯಿಂದ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಸಮುದ್ರದ ಅಳಿವೆ ಬಾಗಿಲಿನಲ್ಲಿ  ಬಜಪೆಯ ಅದ್ಯಪಾಡಿಯಿಂದ ಬಂದ ಯುವಕರ ತಂಡ ಚಿಪ್ಪು ಹೆಕ್ಕಲು ಹೋಗಿದ್ದು ಓರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾನೆ. ನಾಪತ್ತೆಯಾದ ಯುವಕನನ್ನು ಬಜಪೆಯ ಅದ್ಯಪಾಡಿಯ ಹಳೆ ವಿಮಾನ ನಿಲ್ದಾಣ ಬಳಿಯ ನಿವಾಸಿ ಅಭಿಲಾಶ್ (24) ಎಂದು ಗುರುತಿಸಲಾಗಿದೆ.

abhilash

ಬಜಪೆ ಸಮೀಪದ ಆದ್ಯಪಾಡಿಯ ಸುಮಾರು ಹತ್ತು ಮಂದಿಯ ಯುವಕರ ತಂಡ ಚಿಪ್ಪು ಮತ್ತು ಏಡಿ ಹಿಡಿಯಲು ಮುಲ್ಕಿಯ ಕೊಳಚಿ ಕಂಬಳ ಬೀಚ್ ಬಳಿಗೆ ಬಂದಿದ್ದಾರೆ. ಶಾಂಭವಿ ನದಿಯಲ್ಲಿ ನೀರಿನ ಇಳಿತ ವಿದ್ದ ಕಾರಣ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಈ ಸಂದರ್ಭ ಸಸಿಹಿತ್ಲು ಮುಂಡಾ ಬೀಚ್ ಅಳಿವೆ ಬಾಗಿಲು ಬಳಿ ನೀರಿನ ಆಳ ಗೊತ್ತಾಗದೆ ಈಜು ಬಾರದ ಧನುಷ್ ಮತ್ತು ಜೀವನ್ ಎಂಬವರು ನೀರಿನಲ್ಲಿ ಮುಳುಗಿದ್ದಾರೆ.   ಈಜು ಅರಿತಿದ್ದ  ಅಭಿಲಾಶ್ ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಅವರನ್ನು ರಕ್ಷಿಸುವ ಯತ್ನದಲ್ಲಿ ಉಳಿದವರ ಕಣ್ಣೆದುರೇ ನೀರಿನ ರಭಸಕ್ಕೆ ತಾನು ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಅಪಘಾತದಲ್ಲಿ ಕನ್ನಡದ ನಟಿಯ ದುರಂತ ಸಾ*ವು..!

ಈ ಸಂದರ್ಭ ಉಳಿದವರ ಬೊಬ್ಬೆ ಕೇಳಿ ಸ್ಥಳಕ್ಕೆ ಹೆಜಮಾಡಿ ಮೀನುಗಾರರ ತಂಡದ ಸದಾಶಿವ ಕೋಟ್ಯಾನ್  ಧಾವಿಸಿ ಧನುಷ್ ಮತ್ತು ಜೀವನ್ ರವರ ನ್ನು ರಕ್ಷಿಸಿದ್ದಾರೆ. ಆದರೆ ನೀರಿನಲ್ಲಿ ಮುಳುಗಿದ ಅಭಿಲಾಶ್ ಪತ್ತೆಯಾಗಿಲ್ಲ. ಅಭಿಲಾಶ್ ಅವಿವಾಹಿತನಾಗಿದ್ದು ಮಂಗಳೂರು ರೈಲ್ವೇ ಯಲ್ಲಿ ಗುತ್ತಿಗೆದಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಭಾನುವಾರ ರಜಾ ದಿನವಾದ ಕಾರಣ ಚಿಪ್ಪು ಹೆಕ್ಕಲು ಬಂದಿದ್ದ ಎಂದು ಮಿತ್ರರು ಹೇಳಿದ್ದಾರೆ. ಅಭಿಲಾಶ್ ಪತ್ತೆಗೆ ಎಸ್ ಡಿ ಆರ್ ಎಫ್ ತಂಡ,ಕರಾವಳಿ  ಕಾವಲು ಪಡೆಯ ಹೆಜ್ಮಾಡಿ, ಮುಲ್ಕಿ ಹಾಗೂ ಸುರತ್ಕಲ್ ಪೊಲೀಸರ ತಂಡ ಶ್ರಮಿಸುತ್ತಿದ್ದಾರೆ.

Continue Reading

LATEST NEWS

Trending