Connect with us

FILM

ಡಿ ಬಾಸ್ ಪತ್ನಿ ವಿಜಯಲಕ್ಷ್ಮೀ ಖರೀದಿಸಿದ ಕಾರು ಅಂತಿಂಥ ಕಾರಲ್ಲ; ಏನಿದರ ವಿಶೇಷತೆ ನೋಡಿ!

Published

on

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಂದನವನದ ಬಹುಬೇಡಿಕೆಯ ನಟ. ಸದ್ಯ ಕಾಟೇರಾ ಸಿನಿಮಾ ಯಶಸ್ಸಿನ ಬಳಿಕ ಪ್ರಕಾಶ್ ವೀರ್ ನಿರ್ದೇಶನದ ಡೆವಿಲ್ – ದಿ ಹೀರೋ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಪ್ರತಿಭಾವಂತ ನಟ ದರ್ಶನ್ ಸಿನಿಮಾಗಳ ಜೊತೆ, ಪ್ರಾಣಿ ಪ್ರಿಯ ಅಲ್ಲದೇ ಕಾರುಗಳೆಂದರೂ ಅಚ್ಚುಮೆಚ್ಚು. ದರ್ಶನ್ ಬಳಿ ಹಲವಾರು ಐಷಾರಾಮಿಕಾರುಗಳಿವೆ.

ಲ್ಯಾಂಡ್ ರೋವರ್ ಡಿಫೆಂಡರ್, ಜಾಗ್ವಾರ್, ಪೋರ್ಶೆ, ಆಡಿ ಕ್ಯೂ 7, ರೇಂಜ್ ರೋವರ್, ಮಿನಿ ಕೂಪರ್, ಹಮ್ಮರ್, ಲಂಬೋರ್ಗಿನಿ, ಫಾರ್ಚೂನರ್ , ಜೀಪ್ ಮತ್ತು ಬಿಎಂಡಬ್ಲ್ಯೂ ಕಾರುಗಳನ್ನು ದರ್ಶನ್ ಹೊಂದಿದ್ದಾರೆ. ಇದೀಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀಅವರು ಹೊಸ ಐಷಾರಾಮಿ ರೇಂಜ್ ರೋವರ್ ಇವೊಕ್ ಕಾರನ್ನು ಖರೀದಿಸಿದ್ದಾರೆ. ಈ ಫೋಟೋ ಸದ್ಯ ವೈರಲ್ ಆಗುತ್ತಿದೆ.

ವಿಜಯಲಕ್ಷ್ಮೀ ಅವರು ಹೊಸ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಕಾರನ್ನು ವಿತರಣೆ ಪಡೆಯುವ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರ್ಯಾಟ್ಸ್ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಬಗ್ಗೆ ಎಲ್ಲರೂ ಕಣ್ಣಾಡಿಸುತ್ತಿದ್ದಾರೆ

ಕಾರಲ್ಲಿ ಏನಿದೆ?

JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ – ವೀಲ್ ಡ್ರೈವ್ ಸ್ಟ್ಯಾಂಡರ್ಡ್ ಆಗಿದೆ. ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು – ದೊಡ್ಡ ರೇಂಜ್ ರೋವರ್‌ಗಳಂತೆಯೇ ವಿವರವಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಮರುವಿನ್ಯಾಸಗೊಳಿಸಲಾದ LED ರನ್ನಿಂಗ್ ಲ್ಯಾಂಪ್ ಸಿಗ್ನೇಚರ್‌ಗಳೊಂದಿಗೆ ಹೊಸ ಸೂಪರ್ – ಸ್ಲಿಮ್ LED ಹೆಡ್‌ಲ್ಯಾಂಪ್‌ಗಳು, ಹೊಸ ರೆಡ್ ಬ್ರೇಕ್ ಕ್ಯಾಲಿಪರ್‌ಗಳು ಮತ್ತು ಅಲಾಯ್ ವೀಲ್‌ಗಳಿಗೆ ಹೊಸ ಟ್ವಿನ್ 10 ಸ್ಪೋಕ್ ವಿನ್ಯಾಸವಿದೆ.
ರೇಂಜ್ ರೋವರ್ ಇವೊಕ್ ಇಂಟೀರಿಯರ್‌ನಲ್ಲಿ ವಿಂಡ್ಸರ್ ಲೆದರ್ ಸೀಟುಗಳು, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್‌ಗಳು, ಕಸ್ಟಮೈಸ್ ಕ್ಯಾಬಿನ್ ಲೈಟಿಂಗ್ ಮತ್ತು ವಿಸ್ತರಿತ ಆಂತರಿಕ ಸ್ಥಳವನ್ನು ಹೊಂದಿದೆ.

ಐದು ಸೀಟುಗಳ ಎಸ್‌ಯುವಿಯು ಹೊಸ ಫ್ಲೋಟಿಂಗ್ 11.4 – ಇಂಚಿನ ಕರ್ವ್ಡ್ ಗ್ಲಾಸ್ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಡಿಸ್ಪ್ಲೇಯನ್ನು ಇತ್ತೀಚಿನ ಪಿವಿ ಪ್ರೊ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ. ಇನ್ನು ಡ್ಯುಯಲ್ – ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್‌ರೂಫ್, 360 – ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ವೈರ್‌ಲೆಸ್ Apple CarPlay ಮತ್ತು Android Auto, OTA ಸಾಫ್ಟ್‌ವೇರ್ ಅಪ್‌ಡೇಟ್‌ಗಳು ಮತ್ತು ಹೊಸ PM2.5 ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸುಧಾರಿತ ಸುರಕ್ಷತೆಗಾಗಿ ಕ್ಲಿಯರ್‌ಸೈಟ್ ಗ್ರೌಂಡ್ ವ್ಯೂ ತಂತ್ರಜ್ಞಾನವನ್ನು ಸಹ ಅನ್ನು ಹೊಂದಿದೆ.

ಬೆಲೆ ಎಷ್ಟು?
ಈ ಐಷಾರಾಮಿ ಎಸ್‍ಯುವಿ ಲೋಡ್ ಡೈನಾಮಿಕ್ SE ಟ್ರಿಮ್‌ನಲ್ಲಿ ಮಾತ್ರ ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.0 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕವು 247hp ಪವರ್ ಮತ್ತು 365Nm ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನೊಂದು ಆಯ್ಕೆಯಲ್ಲಿ 2.0 – ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 201hp ಪವರ್ ಮತ್ತು 430Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್‌ಗಳು 48V ಮೈಲ್ಡ್ – ಹೈಬ್ರಿಡ್ ವ್ಯವಸ್ಥೆಯನ್ನು ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್‌ನೊಂದಿಗೆ ಪಡೆಯುತ್ತವೆ. ಇದನ್ನು 9 – ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ಎಸ್‍ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.67 ಲಕ್ಷವಾಗಿದೆ.

FILM

ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

Published

on

ನವದೆಹಲಿ : ಖ್ಯಾತ ಕಿರುತೆರೆ ನಟ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಜನಪ್ರಿಯ ಕಾರ್ಯಕ್ರಮ ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಮೂಲಕ ಗಮನ ಸೆಳೆದಿರುವ ನಟ ಗುರುಚರಣ್ ಸಿಂಗ್ ಅವರು ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ನಟನ ತಂದೆ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


ದೂರಿನಲ್ಲಿ ಏನಿದೆ?

ದೆಹಲಿ ಪೊಲೀಸರಿಗೆ ತಂದೆ ನೀಡಿರುವ ದೂರಿನ ಪ್ರಕಾರ, 50ರ ಹರೆಯದ ನಟ ಏಪ್ರಿಲ್ 22 ರಂದು ದೆಹಲಿಯ ತಮ್ಮ ನಿವಾಸದಿಂದ ಮುಂಬೈಗೆ ತೆರಳಿದ್ದಾರೆ. ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ. ಅವರು ಮುಂಬೈಗೆ ಬಂದಿಳಿಯಬೇಕಿತ್ತು, ಆದರೆ ಮುಂಬೈ ತಲುಪಿಲ್ಲ. ಮನೆಗೂ ವಾಪಸಾಗಲಿಲ್ಲ. ಫೋನ್ ಸಂಪರ್ಕಕ್ಕೂ ಸಿಗಲಿಲ್ಲ. ಈ ಹಿನ್ನೆಲೆ ಪೊಲೀಸ್​ ಠಾಣಾ ಮೆಟ್ಟಿಲೇರಬೇಕಾಯಿತು ಎಂದು ತಿಳಿಸಲಾಗಿದೆ.

“ಅವರು ಮಾನಸಿಕವಾಗಿ ಸ್ಥಿರವಾಗಿದ್ದು, ನಾವು ಅವರನ್ನು ಹುಡುಕಿದ್ದೇವೆ. ಆದರೆ, ಈಗ ಅವರು ಕಾಣೆಯಾಗಿದ್ದಾರೆ” ಎಂದು ಗುರುಚರಣ್ ಸಿಂಗ್​​ ತಂದೆ ಪೊಲೀಸರಲ್ಲಿ ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಈ ನಾಪತ್ತೆ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಾವು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಗುರುಚರಣ್ ಸಿಂಗ್ ಕೊನೆಯದಾಗಿ ಏಪ್ರಿಲ್ 22 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಅವರು ಮುಂಬೈಗೆ ತೆರಳಿದ್ದರು ಎನ್ನಲಾಗಿದೆ. ಆದರೆ, ಅವರು ಮುಂಬೈಗೆ ತಾವು ತಲುಪಬೇಕಾಗಿದ್ದ ಸ್ಥಳಕ್ಕೆ ತಲುಪಿಲ್ಲ. ಮನೆಗೂ ಹಿಂತಿರುಗಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ ಎಂದು ತಿಳಿದು ಬಂದಿದೆ. ನಟನ ದಿಢೀರ್ ಕಣ್ಮರೆ ಪ್ರಕರಣ ಆತಂಕ ಸೃಷ್ಟಿಸಿದೆ.

ಇದನ್ನೂ ಓದಿ : ಕೊನೆಗೂ ಪ್ರಭಾಸ್ ‘ಕಲ್ಕಿ 2898AD’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್! ಯಾವಾಗ ತೆರೆಗೆ?

ಶೋ ತೊರೆದಿದ್ದ ನಟ :

ಗುರುಚರಣ್ ಅವರು ‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಚಿತ್ರದಲ್ಲಿ ಸೋಧಿ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಜನಪ್ರಿಯತೆ ಸಂಪಾದಿಸಿದ್ದರು. ಅದಾಗ್ಯೂ, ಅವರು ಕೆಲ ವರ್ಷಗಳ ಹಿಂದೆ ಕಾರ್ಯಕ್ರಮವನ್ನು ತೊರೆದರು. ತಂದೆಯ ಅನಾರೋಗ್ಯ ಹಿನ್ನೆಲೆ ಶೋ ಬಿಡಬೇಕಾಯಿತು.

ಇದೀಗ ಅವರ ನಾಪತ್ತೆ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅಲ್ಲದೇ, ಅವರ ಅಭಿಮಾನಿಗಳಲ್ಲಿ ಆತಂಕ ಹುಟ್ಟು ಹಾಕಿದೆ.

Continue Reading

FILM

ಕೊನೆಗೂ ಪ್ರಭಾಸ್ ‘ಕಲ್ಕಿ 2898AD’ ಚಿತ್ರ ಬಿಡುಗಡೆಗೆ ಡೇಟ್ ಫಿಕ್ಸ್! ಯಾವಾಗ ತೆರೆಗೆ?

Published

on

ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಕಲ್ಕಿ 2898AD’ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾನಿ ಸೇರಿದಂತೆ ಮೊದಲಾದ ಖ್ಯಾತ ನಟ – ನಟಿಯರ ದಂಡೇ ಚಿತ್ರದಲ್ಲಿದೆ.
‘ಮಹಾನಟಿ’ ಚಿತ್ರದ ಮೂಲಕ ಭಾರೀ ಯಶಸ್ಸು ತನ್ನದಾಗಿಸಿಕೊಂಡಿದ್ದ, ನಾಗ್‌ ಅಶ್ವಿನ್ ಕಲ್ಕಿ ಮೂಲಕ ಮತ್ತೆ ಹವಾ ಸೃಷ್ಟಿಸಲು ಹೊರಟಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ‘ಕಲ್ಕಿ’ ಭಾರತೀಯ ಚಿತ್ರರಂಗದಲ್ಲೇ ಅತಿ ದೊಡ್ಡ ಬಜೆಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.


ಈಗಾಗಲೇ ‘ಕಲ್ಕಿ 2898AD’ ಚಿತ್ರದ ಪೋಸ್ಟರ್ಸ್, ಟೀಸರ್ ಭಾರೀ ಕತೂಹಲ ಹೆಚ್ಚಿಸಿದೆ. ಚಿತ್ರದಲ್ಲಿ ವಿಭಿನ್ನ ಗೆಟಪ್‌ಗಳಲ್ಲಿ ಪ್ರಭಾಸ್ ಕಾಣಿಸಿಕೊಳ್ಳಲಿದ್ದಾರೆ. ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್, ಕಲಿಯಾಗಿ ಕಮಲ್ ಹಾಸನ್ ನಟಿಸುತ್ತಿದ್ದಾರೆ.

ಚುನಾವಣಾ ಲೆಕ್ಕಾಚಾರ :

‘ಕಲ್ಕಿ 2898AD’ ಸಿನಿಮಾ ರಿಲೀಸ್ ಡೇಟ್ ಪದೇ ಪದೆ ಬದಲಾಗುತ್ತಲೇ ಇದೆ. ಚುನಾವಣೆ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಮತ್ತೆ ಚುನಾವಣಾ ದಿನಾಂಕ ಮುಂದೂಡಿದೆ. ಚುನಾವಣೆ ಪ್ರಚಾರ, ಮತದಾನ, ಫಲಿತಾಂಶದ ಸಮಯದಲ್ಲಿ ಸಿನಿಮಾಗಳು ಬಿಡುಗಡೆಯಾದರೆ ಹಿನ್ನಡೆಯಾಗುತ್ತದೆ. ಇದೇ ಕಾರಣಕ್ಕೆ ಚುನಾವಣೆಗಳ ಸಮಯದಲ್ಲಿ ಸಿನಿಮಾ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಮೇ 9ರಂದು ‘ಕಲ್ಕಿ 2898AD’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಮೇ 13 ರಂದು ಕೂಡ ಕೆಲವೆಡೆ ಮತದಾನ ನಡೆಯಲಿದೆ. ಇಂತಹ ಸಮಯದಲ್ಲಿ ಸಿನಿಮಾ ತೆರೆಗಪ್ಪಳಿಸಿದರೆ ಕಲೆಕ್ಷನ್ ಮೇಲೆ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಾಚಾರ ನಡೆದು ಚಿತ್ರದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

ಈ ವರ್ಷ ಜನವರಿಯಲ್ಲಿ ಚಿತ್ರವನ್ನು ರಿಲೀಸ್ ಪ್ಲ್ಯಾನ್ ಮಾಡಲಾಗಿತ್ತು. ಬಳಿಕ ಮೇ 9ಕ್ಕೆ ಮುಂದೂಡಲಾಗಿತ್ತು. ಇದೀಗ ಮತ್ತೆ ಚಿತ್ರ ತೆರೆಗೆ ಬರುವ ದಿನಾಂಕ ಮುಂದೆ ಹೋಗಿದೆ.

ಯಾವಾಗ ಬಿಡುಗಡೆ?


‘ಕಲ್ಕಿ 2898AD’ ಚಿತ್ರ ತೆರೆಗೆ ಯಾವಾಗ ಬರುತ್ತೆ? ಎಂದು ಕಾಯುತ್ತಿದ್ದ ಪ್ರಭಾಸ್ ಅಭಿಮಾನಿಗಳಿಗೆ ಖುಷಿಯ ವಿಚಾರವನ್ನು ಕೊನೆಗೂ ಚಿತ್ರತಂಡ ನೀಡಿದೆ. ದಿನಾಂಕ ಮುಂದೂಡುತ್ತಿದ್ದುದರಿಂದ ನಿರಾಸೆಗೊಂಡಿದ್ದ ಅಭಿಮಾನಿಗಳು ಕೊನೆಗೂ ನಿರಾಳರಾಗಿದ್ದಾರೆ.
ಹೌದು, ಮೇ 9 ರಂದು ಚಿತ್ರ ತೆರೆಗೆ ಬರಬೇಕಿತ್ತು. ಚುನಾವಣೆ ಹಿನ್ನೆಲೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಜೂನ್ 27 ರಂದು ಚಿತ್ರ ತೆರೆಗೆ ಬರಲಿದೆ. ವಿಶ್ವದಾದ್ಯಂತ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರುವ ಸಿದ್ಧತೆಯಲ್ಲಿದೆ ಚಿತ್ರತಂಡ.

ಇದನ್ನೂ ಓದಿ : “ಗಬ್ಬರ್ ಸಿಂಗ್” ಮೇ 3 ರಂದು ತೆರೆಗೆ ; ಇಂದು ವಿಡಿಯೋ ಸಾಂಗ್ ರಿಲೀಸ್..!

ಯಾವುದೇ ತೆಲುಗು ಸಿನಿಮಾ ಬಿಡುಗಡೆಯಾದರೂ, ಒಂದು ದಿನ ಮುಂಚಿತವಾಗಿ ಅಮೆರಿಕದಲ್ಲಿ ಪ್ರೀಮಿಯರ್ ನಡೆಯುತ್ತೆ. ‘ಕಲ್ಕಿ 2898 AD’ ಬಹುಕೋಟಿ ವೆಚ್ಚದ ಸಿನಿಮಾ ಆಗಿರುವುದರಿಂದ ಒಂದು ದಿನ ಮುಂಚಿತವಾಗಿ, ಅಂದರೆ, ಜೂನ್ 26ರಂದು ಅಮೆರಿಕದಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.

ವಿಷ್ಣುಪುರಾಣ, ಕಲ್ಕಿ ಪುರಾಣ, ಭಾಗವತ ಪುರಾಣಗಳನ್ನು ಆಧರಿಸಿ ‘ಕಲ್ಕಿ 2898AD’ ಸಿನಿಮಾ ಕಟ್ಟಿಕೊಡಲಾಗುತ್ತಿದೆ. 5 ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಸಂತೋಷ್ ನಾರಾಯಣ್ ಸಂಗೀತ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ ಚಿತ್ರಕ್ಕಿದೆ. ಎಎ ಫಿಲ್ಮ್ಸ್ ಉತ್ತರ ಭಾರತದಲ್ಲಿ ಸಿನಿಮಾ ವಿತರಣೆ ಹಕ್ಕು ಖರೀದಿಸಿದೆ.

Continue Reading

DAKSHINA KANNADA

“ಗಬ್ಬರ್ ಸಿಂಗ್” ಮೇ 3 ರಂದು ತೆರೆಗೆ ; ಇಂದು ವಿಡಿಯೋ ಸಾಂಗ್ ರಿಲೀಸ್..!

Published

on

ಮುತ್ತು ಗೋಪಾಲ್ ಫಿಲ್ಮ್ಸ್ ಬಾರ್ಕೂರು ಲಾಂಛನದಲ್ಲಿ ತಯಾರಾದ ‘ಗಬ್ಬರ್ ಸಿಂಗ್’ ತುಳು ಚಲನ ಚಿತ್ರ ಮೇ 3 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ. ಇದೀಗ ಈ ಸಿನೆಮಾದ ವಿಡಿಯೋ ಸಾಂಗ್‌ ರಿಲೀಸ್ ಆಗಿದ್ದು, ಜಸ್ಟ್‌ ರೋಲ್‌ ಫಿಲಂಸ್‌ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸೂಜಿ ಕಣ್‌ದ ಮೋನಾಲಿಸಾ ಎಂಬ ಉತ್ತಮ ಸಾಹಿತ್ಯವನ್ನು ಹೊಂದಿರುವ ಹಾಡನ್ನು ರಿಲೀಸ್ ಮಾಡಲಾಗಿದೆ. ಹಾಡಿಗೆ ಉಮೇಶ್ ಮಿಜಾರ್ ಸಾಹಿತ್ಯ ಬರೆದಿದ್ದರೆ, ಬೋಜರಾಜ ವಾಮಂಜೂರು, ವಿಸ್ಮಯ ವಿನಾಯಕ ಹಾಗೂ ಸ್ವತಹ ಉಮೇಶ್ ಮಿಜಾರ್ ಹಾಡುಗಳನ್ನು ಹಾಡಿದ್ದಾರೆ.


‘ಗಬ್ಬರ್ ಸಿಂಗ್’ ತುಳು ಸಿನಿಮಾ ವಿಭಿನ್ನ ಕತೆಯನ್ನೊಳಗೊಂಡಿದ್ದು, ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದನ್ನು ಆಧರಿಸಿ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಕತೆಯನ್ನು ಹೆಣೆಯಲಾಗಿದೆ. ಉತ್ತಮ‌ ಕತೆ, ನವಿರಾದ ಹಾಸ್ಯದೊಂದಿಗೆ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದಲ್ಲಿ ಆರು ಹಾಡು, ನಾಲ್ಕು ಫೈಟ್ಸ್ ಇದೆ. ಸಿನಿಮಾಕ್ಕೆ ಸುರತ್ಕಲ್, ಚಿತ್ರಾಪುರ, ಬೈಕಂಪಾಡಿ ಮೊದಲಾದ ಪ್ರದೇಶಗಳಲ್ಲಿ ಮೂರು ಹಂತಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಾಯಕ ನಟನಾಗಿ ಶರಣ್ ಶೆಟ್ಟಿ ನಾಯಕಿಯಾಗಿ ವೆನ್ಸಿಟಾ ಅಭಿನಯಿಸಿದ್ದಾರೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಯಾದಾಗ ಮತ್ತೆ ಶಾಂತಿ ನೆಲೆಸುವಂತೆ ಮಾಡುವ ಖಡಕ್ ಅಧಿಕಾರಿ ಪಾತ್ರದಲ್ಲಿ ಶರಣ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

‘ಗಬ್ಬರ್ ಸಿಂಗ್’ ಸಿನಿಮಾ ಮೇ 3 ರಂದು ಕರಾವಳಿ ಜಿ,ಲ್ಲೆಯಾದ್ಯಂತ ತೆರೆ ಕಾಣಲಿದೆ.  ಆ್ಯಕ್ಷನ್ ಥ್ರಿಲ್ಲರ್ ಫ್ಯಾಮಿಲಿ ಓರಿಯೆಂಟೆಡ್ ಫಿಲ್ಮ್ ಆಗಿದ್ದು,  ಈಗಾಗಲೇ ಮಸ್ಕತ್ ಮತ್ತು ಉಡುಪಿಯಲ್ಲಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಾಂಸಾರಿಕ ಕತೆಯ ಜೊತೆ ಇಲ್ಲಿ ಹಾಸ್ಯವೂ ಚೆನ್ನಾಗಿ ವಕ್೯ಹೌಟ್ ಆಗಿದೆ. ನವೀನ್ ಪಡೀಲ್, ಬೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸಾಯಿಕೃಷ್ಣ, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ರವಿರಾಮ ಕುಂಜ ಇವರ ಹಾಸ್ಯ ಸಕ್ಕತ್ತಾಗಿದೆ. ಜೊತೆಗೆ ಗಿರೀಶ್ ಶೆಟ್ಟಿ ಕಟೀಲು, ವೀಣಾ ಶೆಟ್ಟಿ ಉಡುಪಿ, ಅಥರ್ವ ಪ್ರಕಾಶ್ ಮೊದಲಾದವರ ಪಾತ್ರಗಳೂ ಕೂಡಾ ಇಲ್ಲಿ ಪ್ರಾಮುಖ್ಯತೆಯನ್ನು ಪಡೆದಿದೆ. ಸಿನಿಮಾ ಮೇ 3 ರಂದು ತೆರೆ ಕಾಣಲಿದೆ ಎಂದು ನಿರ್ಮಾಪಕ ಸತೀಶ್ ಬಾರ್ಕೂರು ತಿಳಿಸಿದ್ದಾರೆ.

ಛಾಯಾಗ್ರಹಣ: ರವಿ ಸುವರ್ಣ, ಸಂಕಲನ: ಪ್ರಜ್ವಲ್ ಸುವರ್ಣ, ಕಲೆ: ವೆಂಕಟೇಶ್ ಬೆಂಗಳೂರು, ಸಂಗೀತ: ಡೊಲ್ಪಿನ್ ಕೊಳಲಗಿರಿ. ಹಿನ್ನಲೆ ಸಂಗೀತ: ಕಾರ್ತಿಕ್ ಮುಲ್ಕಿ, ಸಾಹಸ: ಅಲ್ಟಿಮೆಟ್ ಶಿವ್ ನೃತ್ಯ: ಅವಿನಾಶ್ ಬಂಗೇರ, ಶುಭಕಿರಣ್, ಮೇಕಪ್ ಪ್ರದೀಪ್, ವಸ್ತ್ರಾಲಂಕಾರ : ಶರತ್ ಬರ್ಕೆ, ಸಹ ನಿರ್ದೇಶನ: ಪುಷ್ಪರಾಜ ರೈ, ಜಯರಾಜ್, ಸಹಾಯ: ಭಾಗ್ಯರಾಜ್.

 

 

Continue Reading

LATEST NEWS

Trending