Connect with us

LATEST NEWS

ಕುಖ್ಯಾತ ಅಂತರ್ ಜಿಲ್ಲಾ ಮನೆಗಳ್ಳತನ ಆರೋಪಿ ಬಂಧನ- 46.67 ಲಕ್ಷ ರೂ. ಮೌಲ್ಯದ ಸೊತ್ತು ವಶ..!

Published

on

ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿ, ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಉತ್ತರಹಳ್ಳಿಯ ಮಂಜುನಾಥ್ ಯಾನೆ ಕಲ್ಕೆರೆ ಮಂಜ (43) ಬಂಧಿತ ಆರೋಪಿ. ಈತ ಅ.8ರಂದು ಕುಂಜಿಬೆಟ್ಟುವಿನ ಅಮ್ಮುಂಜೆ ವಿಠಲ್ದಾಸ್ ನಾಯಕ್ ಅವರ ಮನೆಯ ಬಾಗಿಲು ಮುರಿದು, ಬೆಡ್ ರೂಮ್ ನ ಅಲ್ಮೇರಾದಲ್ಲಿದ್ದ ಸುಮಾರು 66,36,300 ರೂ. ಮೌಲ್ಯದ ಅಂದಾಜು 1882 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,70,500 ರೂ. ಮೌಲ್ಯದ 7,450 ಗ್ರಾಂ ತೂಕದ ಬೆಳ್ಳಿಯ ಸೊತ್ತುಗಳು ಸಹಿತ ಒಟ್ಟು 73,06,800 ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದನು.


ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆಗಾಗಿ ಪಿಎಸ್ ಐ ಪುನೀತ್ ಕುಮಾರ್ ಬಿ.ಇ. ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕಾರ್ಯಾಚರಣೆಗೆ ಇಳಿದ ಪೊಲೀಸರು ಅ.31ರಂದು ಉಡುಪಿ ಬಲಾಯಿಪಾದೆಯ ಜಂಕ್ಷನ್ ಬಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಟ್ಟು 31,55,930 ರೂ. ಮೌಲ್ಯದ 530.909 ಗ್ರಾಪಂ ತೂಕದ ಚಿನ್ನಾಭರಣ ಹಾಗೂ 15,12,000 ರೂ. ಮೌಲ್ಯದ 16.800 ಕೆ.ಜಿ. ತೂಕದ ಬೆಳ್ಳಿಯ ಸೊತ್ತುಗಳು ಮತ್ತು ಕಳ್ಳತನಕ್ಕೆ ಬಳಸಿದ್ದ 2,50,000 ಮೌಲ್ಯದ ಈಕೊ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಬ್ರಹ್ಮಾವರ, ತರೀಕೆರೆ, ಅರಸೀಕೆರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡ ಭಾಗಿಯಾಗಿದ್ದಾನೆ. ಅಲ್ಲದೆ, ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಹೊಸ ಮನೆಗೆ ಸ್ಥಳಾಂತರಿಸುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ

Published

on

ಮಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಮನೆ ಕಟ್ಟುವುದು ಆಗಲಿ ಅಥವಾ ಕೊಂಡುಕೊಳ್ಳುವುದಾಗಲಿ ಅದೇನು ಸುಲಭದ ಮಾತಲ್ಲ. ಬ್ಯಾಂಕ್‌ನಲ್ಲಿ, ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಸಾಲ ಮಾಡಿ ಹೇಗೊ ಮನೆ ಖರೀದಿಸುತ್ತೇವೆ. ಆದರೆ ಕನಸಿನ ಮನೆ ವಾಸ್ತವಕ್ಕೆ ಬಂದಾಗ ಅದರಲ್ಲಿ ಆಗುವ ಕುಷಿಯೇ ಬೇರೆ.

ಮನೆ ಬದಲು ಮಾಡುವಾಗ ಈ ವಿಷಯ ನೆನಪಿಡಿ

ತಮ್ಮ ಹೊಸ ಮನೆಗೆ ಹೋಗುವ ಖುಷಿಯಲ್ಲಿ ಜನರು ಸಾಮಾನ್ಯವಾಗಿ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರಿಗೆ ನಂತರದ ದಿನಗಳಲ್ಲಿ ಸಮಸ್ಯೆ ಆಗಬಹುದು. ನೀವು ಮನೆ ಬದಲು ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ.

ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿ

ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಮೊದಲು ನೀವು ದಿನ ಬಳಕೆಯ ವಿಷಯಗಳತ್ತ ಗಮನ ಕೊಡಬೇಕು. ಆದುದರಿಂದ ನಿಮ್ಮ ಮನೆಯ ಪ್ರತಿಯೊಂದು ನಳ್ಳಿಯಲ್ಲಿ ನೀರು ಬರುತ್ತಿದ್ದೇಯೋ, ವಾಶ್ ರೂಂ ಅನ್ನು ಚೆನ್ನಾಗಿ ಪರಿಶೀಲಿಸಿ, ಮನೆಯ ಫ್ಯಾನ್, ಲೈಟ್ ಸರಿಯಾಗಿ ಇದೆಯೋ ಎಂದು ಗಮನಿಸಿ. ಇದರಿಂದ ಹೊಸ ಮನೆಗೆ ಬಂದ ತಕ್ಷಣ ಯಾವೂದೇ ಸಮಸ್ಯೆ ಎದುರಾಗುವುದಿಲ್ಲ.

ಶುಚಿಗೊಳಿಸುವಿಕೆಯನ್ನು ಮುಂಚಿತವಾಗಿ ಮಾಡಿ

ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಒಮ್ಮೆ ಸ್ವಚ್ಛಗೊಳಿಸಬೇಕು. ಏಕೆಂದರೆ ವಸ್ತುಗಳನ್ನು ಸ್ಥಳಾಂತರಿಸಿದ ನಂತರ ನಿಮಗೆ ಸ್ವಚ್ಛಗೊಳಿಸಲು ಕಷ್ಟವಾಗಬಹುದು. ಮನೆಯನ್ನು ಬದಲಾಯಿಸಿದ ನಂತರವೂ ಕೊಳಕು ಕಾಣುತ್ತದೆ. ಹೀಗಾಗಿ ಹೊಸ ಮನೆಗೆ ಬಂದ ನಂತರ ಮೊದಲ ದಿನದಿಂದಲೇ ಮನೆಯನ್ನು ಶುಚಿಯಾಗಿಡಿ.

ಪ್ಯಾಕಿಂಗ್ ವಿಧಾನ

ಹೊಸ ಮನೆಗೆ ಬದಲಾಯಿಸುವ ಮೊದಲು ಹಳೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಆದ್ಧರಿಂದ ಸರಕುಗಳನ್ನು ಪ್ಯಾಕ್ ಮಾಡುವಾಗ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯಿರಿ. ಇದರಿಂದಾಗಿ ಬಾಕ್ಸ್ ತೆರೆಯುವಾಗ ಯಾವೂದೇ ಗೊಂದಲ ಉಂಟಾಗುವುದಿಲ್ಲ.

ಪೀಠೋಪಕರಣಗಳ ಬಗ್ಗೆಯೂ ಕಾಳಜಿ ವಹಿಸಿ​

ಸ್ಥಳಾಂತರಗೊಳ್ಳುವ ಮೊದಲು, ಮನೆಯ ಪೀಠೋಪಕರಣಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ನಿಮಗೆ ಸರಿಹೊಂದುವ ಸ್ಥಳದಲ್ಲಿ ಹಾಗೂ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸಿ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

Published

on

ಚಿಕ್ಕಮಗಳೂರು : ಸದ್ಯ ಪ್ರಜ್ವಲ್ ಹೆಸರು ದೇಶದಾದ್ಯಂತ ಚಾಲ್ತಿಯಂತಿದೆ. ಆತ ಮಾಡಿರುವ ಕುಕೃತ್ಯಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಬಂಧಿಸಲಾಗಿದೆ.

ಮೂಡುಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದ. ಸದ್ಯ ಪ್ರಜ್ವಲ್ ರೇವಣ್ಣ ಲೈಂ*ಗಿಕ ದೌರ್ಜ*ನ್ಯ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಜರ್ಮನಿಗೆ ಎಸ್ಕೇಪ್ ಆಗಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ.

ಎಚ್ಚರಿಕೆ ನೀಡಿದ್ದ ಬಿ.ಕೆ.ಸಿಂಗ್ :

ಈ ಬಗ್ಗೆ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದರು. ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೇ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ : ಶಾಲಾ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ.! ಹೇಯ ಕೃತ್ಯ ಮೊಬೈಲ್‌ ನಲ್ಲಿ ಸೆರೆ

ಅಶ್ಲೀಲ ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದರು.

 

Continue Reading

LATEST NEWS

ಶಾಲಾ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ.! ಹೇಯ ಕೃ*ತ್ಯ ಮೊಬೈಲ್‌ ನಲ್ಲಿ ಸೆರೆ

Published

on

ನಾಗ್ಪುರ: ಬಾಲಕಿಯನ್ನು ಪ್ರತಿನಿತ್ಯ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ ಆಟೋ ಚಾಲಕನೇ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಾಗ್ಪುರದಲ್ಲಿ ನಡೆದಿದೆ.

nagpura

ಈ ಕುರಿತ ವಿಡಿಯೋ ವೈರಲ್‌ ಆಗಿದೆ. ನಾಗ್ಪುರದ ಓಂಕಾರ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 10ನೇ ತರಗತಿಯ ವಿದ್ಯಾರ್ಥಿನಿಗೆ ಆಟೋ ಚಾಲಕ ಲೈಂಗಿಕ ಕಿರುಕುಳ ನೀಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಶಾಲೆಯಿಂದ ಮನೆಗೆ ಕರೆದುಕೊಂಡು ಬರುತ್ತಿರುವ ಸಮಯದಲ್ಲಿ ಏಕಾಂತ ಸ್ಥಳದಲ್ಲಿ ಆಟೋ ನಿಲ್ಲಿಸಿದ ಚಾಲಕ ಹಿಂದೆ ಕುಳಿತಿದ್ದ ಬಾಲಕಿಗೆ ಕಿರುಕುಳ ಕೊಡಲು ಆರಂಭಿಸಿದ್ದಾನೆ. ಬಾಲಕಿಯ ಮೈ ಕೈ ಮುಟ್ಟಿ ಆಕೆಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ. ಈ ಆಘಾತಕಾರಿ ಘಟನೆಯನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಇದೀಗ ಈ ವೀಡಿಯೋ ವೈರಲ್‌ ಆಗಿದೆ.

ಮುಂದೆ ಓದಿ..; ಇವಿಎಂ ತಿರುಚಲು 2.5 ಕೋಟಿ ಬೇಡಿಕೆ; ಆರೋಪಿ ಅರೆಸ್ಟ್

ವಿಡಿಯೋ ವೈರಲ್‌ ಆಗುತ್ತಿದ್ದಂತೆ ಆಕೆಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಪ್ರಾಪ್ತ ವಯಸ್ಸಿನ ಬಾಲಕಿಗೆ ಕಿರುಕುಳ ನೀಡಿದ ಆಟೋ ಚಾಲಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. ಪೊಲೀಸರು ಚಾಲಕನನ್ನು ಹುಡುಕಿ ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ಆಟೋ ರಿಕ್ಷಾದ ಹೊರಗೆ ನಿಂತಿರುವ ಚಾಲಕ ಮತ್ತು ಅಪ್ರಾಪ್ತ ಬಾಲಕಿ ಕುಳಿತಿದ್ದ ಹಿಂದಿನ ಸೀಟಿನಲ್ಲಿ ನುಸುಳುತ್ತಿರುವ ದೃಶ್ಯವು ಸೆರೆಯಾಗಿದೆ. ಆಟೋ ಚಾಲಕನ ಹೀನಾ ಕೃತ್ಯವನ್ನು ದೂರದಿಂದ ಮೊಬೈಲ್​ನಲ್ಲಿ ಸೆರೆಹಿಡಿಯಲಾಗಿದೆ. ಕೆಲವು ತಿಂಗಳ ಹಿಂದೆ ಮೈಸೂರಿನಲ್ಲೂ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ನಾಲ್ಕನೇ ತರಗತಿಯ ಬಾಲಕಿಗೆ ನ್ಯಾಯಾಲಯದ ಗುಮಾಸ್ತನೊಬ್ಬ ಲೈಂಗಿಕ ಕಿರುಕುಳ ನೀಡಿದ್ದನು. ಆರೋಪಿಯನ್ನು ಪೊಲೀಸರು ಬಳಿಕ ಬಂಧಿಸಿದ್ದರು.

 

 

Continue Reading

LATEST NEWS

Trending