Connect with us

    BELTHANGADY

    ಪಂಚಭೂತಗಳಲ್ಲಿ ಲೀನವಾದ ಜನ ಮೆಚ್ಚಿದ ನಾಯಕ…!

    Published

    on

    ಮಂಗಳೂರು : ಮೇಲ್ನೋಟಕ್ಕೆ ಕೋಪಿಷ್ಟನಂತೆ ಕಂಡರೂ ಒಳಗಡೆ ಮಗುವಿನಂತಹ ಮನಸ್ಸು…ಅಧಿಕಾರಿಗಳ ಪಾಲಿಗೆ ಸಿಂಹಸ್ವಪ್ನವಾದ್ರೆ ಬಡವರ ಪಾಲಿಗೆ ಇವರು ಬಂಗಾರದ ವ್ಯಕ್ತಿ. ಇದ್ದಿದ್ದು ಇದ್ದ ಹಾಗೆ ಖಡಕ್ ಆಗಿ ಮಾತನಾಡೋ ಕಾರಣ ಸಾಕಷ್ಟು ಜನರ ವಿರೋಧಿಯಾದ್ರೂ, ಒಳಗೊಳಗೆ ಅವರಿಂದಲೇ ಪ್ರೀತಿಯನ್ನು ಕೂಡಾ ಪಡಿತಾ ಇದ್ದ ಜನಪ್ರೀಯ ಜನನಾಯಕ. ಜನರನ್ನು ತನ್ನವರೆಂದೇ ಒಬ್ಬ ಜನಪ್ರತಿನಿಧಿಯಾಗಿ ಜನರ ಸಂಕಷ್ಟಕ್ಕೆ ಸ್ಪಂದಿಸ್ತಾ ಇದ್ದ ವಸಂತ ಬಂಗೇರ ಇನ್ನು ನೆನಪು ಮಾತ್ರ…

    ಸದಾ ತನ್ನ ಮಾತಿನ ಮೂಲಕವೇ ಸುದ್ದಿಯಾಗುತ್ತಿದ್ದ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಶಾಶ್ವತವಾಗಿ ಮಾತು ಮುಗಿಸಿ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ತನ್ನ ಕ್ಷೇತ್ರದ ಜನರ ಸೇವೆಗಾಗಿ ತನ್ನ ಜೀವನ ಮುಡಿಪಾಗಿಟ್ಟ ವಸಂತ ಬಂಗೇರ ನಿಜವಾಗಿಯೂ ಒಬ್ಬ ಜನನಾಯಕರಾಗಿದ್ದರು. ತನ್ನ ಬಳಿ ಕಷ್ಟ ಹೇಳಿಕೊಂಡು ಯಾರೇ ಬಂದ್ರೂ ಹಿಂದೂ ಮುಂದು ನೋಡದೆ ಸಹಾಯ ಮಾಡ್ತಾ ಇದ್ರು. ತನ್ನ ಕೈ ಖಾಲಿ ಮಾಡಿ ಮತ್ತೊಬ್ಬರಿಗೆ ಕೈ ಎತ್ತಿ ದಾನ ಮಾಡ್ತಾ ಇದ್ದ ವಸಂತ ಬಂಗೇರ ಇದೇ ಕಾರಣಕ್ಕೆ ಜನಾನುರಾಗಿಯಾಗಿದ್ದರು.


    ಇದೀಗ ಅವರಿಲ್ಲಾ ಅನ್ನೋ ಸುದ್ದಿ ಅವರ ಅಭಿಮಾನಿಗಳನ್ನ ಕಣ್ಣೀರಿನ ಕಡಲಿನಲ್ಲಿ ಮುಳುಗಿಸಿದೆ. ಅವರ ಪಾರ್ಥಿವ ಶರೀರ ಬೆಳ್ತಂಗಡಿಗೆ ಆಗಮಿಸುತ್ತಿದ್ದಂತೆ ಅವರ ಮನೆಗೆ ಅಭಿಮಾನಿಗಳ ದಂಡೇ ಹರಿದು ಬಂದಿದೆ. ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದ ತಾಲೂಕು ಕ್ರೀಡಾಂಗಣಕ್ಕೂ ಸಾವಿರಾರು ಅಭಿಮಾನಿಗಳು ಆಗಮಿಸಿ ಅವರಿಗೆ ಅಂತಿನ ನಮನ ಸಲ್ಲಿಸಿದ್ದಾರೆ. ನೇರವಾಗಿ ನಿಷ್ಠೂರವಾಗಿ ತಪ್ಪುಗಳನ್ನು ಖಂಡಿಸುತ್ತಿದ್ದ ತಮ್ಮ ಪರ ಧ್ವನಿಯಾಗಿದ್ದ ನಾಯಕ ಇನ್ನಿಲ್ಲ ಅನ್ನೋದನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾದ್ಯವಾಗಿಲ್ಲ. ಬಡವರಿಗೆ ಅನ್ಯಾಯ ಆಗ್ತಾ ಇದೆ ಅಂತ ಗೊತ್ತಾದ್ರೆ ಮುಲಾಜಿಲ್ಲದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ತಾ ಇದ್ದ ವಸಂತ ಬಂಗೇರ ಅವರ ಆ ಸ್ಟೈಲ್‌ ಯಾವತ್ತೂ ಮರೆಯಲು ಸಾದ್ಯವಿಲ್ಲ.


    ರಾಜ್ಯ ರಾಜಕಾರಣದಲ್ಲಿ ಸರಿಸುಮಾರು 40 ವರ್ಷಗಳ ಕಾಲ ಚಾಲ್ತಿಯಲ್ಲಿದ್ದ ಹೆಸರು ವಸಂತ ಬಂಗೇರ. ಬೆಳ್ತಂಗಡಿ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದ ಶಾಸಕರಾಗಿದ್ದ ವಸಂತ ಬಂಗೇರ ಕೊನೆಯಲ್ಲಿ ಕಾಂಗ್ರೆಸ್‌ ಪಕ್ಷದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಬಿಜೆಪಿಯಿಂದ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದ ವಸಂತ ಬಂಗೇರ ಬಳಿಕ ನಡೆದ ರಾಜಕೀಯ ದ್ರುವೀಕರಣದಲ್ಲಿ ಜೆಡಿಎಸ್‌ ಮತ್ತು ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಜಾತ್ಯಾತೀತ ನಾಯಕನಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಒಡನಾಡಿಯಾಗಿ ರಾಜ್ಯದ ಅಪಾರ ರಾಜಕೀಯ ನಾಯಕರು ಮೆಚ್ಚಿಕೊಂಡಿದ್ದ ವ್ಯಕ್ತಿ ಇವರು. ವಿಪರ್ಯಾಸ ಅಂದ್ರೆ ರಾಜಕೀಯದ ಉತ್ತುಂಗಕ್ಕೆ ಏರಿದ್ರೂ ಸಚಿವರಾಗುವ ಅವಕಾಶ ವಸಂತ ಬಂಗೇರ ಅವರಿಗೆ ಸಿಗಲೇ ಇಲ್ಲ ಅನ್ನೋದು. 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತದಲ್ಲಿ ಅಧಿಕಾರಕ್ಕೆ ಬಂದಿದ್ರೂ ವಸಂತ ಬಂಗೇರ ಅವರಿಗೆ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದ್ರೆ ಯಾವೊಬ್ಬ ಸಚಿವನಿಗೂ ಸಾದ್ಯವಾಗದ ಕೆಲಸವನ್ನು ಸಿಎಂ ಆಗಿದ್ದ ಸಿದ್ಧರಾಮಯ್ಯ ಮೂಲಕ ಮಾಡಿಸೋ ತಾಕತ್ತು ಇದ್ದಿದ್ದು ವಸಂತ ಬಂಗೇರ ಅವರಿಗೆ ಮಾತ್ರ ಅನ್ನೋದನ್ನ ಮರೆಯುವ ಹಾಗಿಲ್ಲ.


    ಮನಸ್ಸಿನಲ್ಲಿ ಏನನ್ನೂ ಇಟ್ಟುಕೊಳ್ಳದೆ ಇದ್ದಿದ್ದು ಇದ್ದಹಾಗೇ ಹೇಳೋ … ಬಡವರು ಅಂದ್ರೆ ನನ್ನವರು ಎಂದು ಪ್ರೀತಿ ಮಾಡೋ ಜನ ನಾಯಕ ಇಂದು ಎಲ್ಲರ ಪ್ರೀತಿಗೆ ವಿದಾಯ ಹೇಳಿ ಮೌನವಾಗಿದ್ದಾರೆ. ” ನನ್ನನ್ನು ಆರಿಸಿದವರು ನೀವು .. ನೀವು ನನ್ನನ್ನು ಆಯ್ಕೆ ಮಾಡಿದ್ದಕ್ಕೆ ನಾನು ಮೋಸ ಮಾಡಿಲ್ಲ. ಹಣ ಮಾಡದೆ ಸ್ವಚ್ಚವಾಗಿ ಜನ ಸೇವೆ ಮಾಡಿದ ತೃಪ್ತಿ ಇದೆ” ಅಂತಲೇ ರಾಜಕೀಯಕ್ಕೆ ವಿದಾಯ ಹೇಳಿದ್ದ ವಸಂತ ಬಂಗೇರ ಇಂದು ಎಲ್ಲವನ್ನೂ ಬಿಟ್ಟು ತಮ್ಮ ಅಂತಿಮಯಾತ್ರೆ ಮುಗಿಸಿದ್ದಾರೆ.


    ವಸಂತ ಬಂಗೇರ ಅವರ ಅಂತ್ಯಕ್ರೀಯೆ ಅವರ ಕುವೆಟ್ಟು ಕೇದೆ ಮನೆಯಲ್ಲಿ ನಡೆಸಲಾಗಿದೆ. ತಂದೆಯ ಚಿತೆಗೆ ಮಗಳು ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತಿಮ ವಿಧಿಯನ್ನು ಪೂರೈಸಿದ್ದಾರೆ. ಪಂಚಭೂತಗಳಲ್ಲಿ ಲೀನವಾಗಿರುವ ಮಾಜಿ ಶಾಸಕ ವಸಂತ ಬಂಗೇರ ಇನ್ನು ನೆನಪು ಮಾತ್ರ. ಆದ್ರೆ ವಸಂತ ಬಂಗೇರ ಅವರು ಅವರ ಅಭಿಮಾನಿಗಳ ಹೃದಯದಲ್ಲಿ ಎಂದಿಗೂ ಜನನಾಯಕರಾಗಿರುತ್ತಾರೆ.

    ವಿಡಿಯೋ ನೋಡಿ : ವಸಂತ ಬಂಗೇರ ಅವರ ರಾಜಕೀಯ ಜೀವನ ಕುರಿತಾದ ಸ್ಟೋರಿ

    BELTHANGADY

    ಅಂತರಾಷ್ಟ್ರೀಯ ಟಾರ್ಗೆಟ್ ಬಾಲ್ ಪಂದ್ಯಾಟದಲ್ಲಿ ಸೇಕ್ರೆಡ್ ಹಾರ್ಟ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆ

    Published

    on

    ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ಕಲಾ ವಿಭಾಗದ ಸಿದ್ದಾರ್ಥ್ ಎಂ.ಸಿ ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಫ್ಲಾಯ್ಡ್ ಮಿಸ್ಕಿತ್ ರಾಷ್ಟ್ರಮಟ್ಟದ ಟಾರ್ಗೆಟ್ ಬಾಲ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನೇಪಾಳದ ಕಠ್ಮಂಡುವಿನಲ್ಲಿ ಜುಲೈ 8 ರಿಂದ ಜರುಗಿದ ಅಂತರಾಷ್ಟ್ರೀಯ ಮಟ್ಟದ ದಕ್ಷಿಣ ಏಷ್ಯಾ ಟಾರ್ಗೆಟ್ ಬಾಲ್ ಚಾಂಪಿಯನ್ ಶಿಪ್ ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

    ಫ್ಲಾಯ್ಡ್ ಮಿಸ್ಕಿತ್ ಮಡಂತ್ಯಾರು ನಿವಾಸಿ ಬೇಬಿ ಡಯಾನ ಮಿಸ್ಕಿತ್ ಹಾಗೂ ಕ್ಲೌಡಿ ಫ್ರಾನ್ಸಿಸ್ ಮಿಸ್ಕಿತ್ ದಂಪತಿಗಳ ಪುತ್ರರಾಗಿದ್ದು, ಸಿದ್ಧಾರ್ಥ್ ಎಂ.ಸಿ ಮಂಗಳೂರಿನ ಕಪಿತಾನಿಯೊ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಮಮಿತಾ ಹಾಗೂ ಬಿ.ಸಿ.ರೋಡ್ ನ ನ್ಯಾಯವಾದಿ ಪಿ.ಚೆನ್ನಪ್ಪ ಸಾಲಿಯಾನ್ ದಂಪತಿಗಳ ಪುತ್ರರಾಗಿದ್ದಾರೆ.

    ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕ ರಾಘವೇಂದ್ರ ವಿಟ್ಲ ತರಬೇತಿ ನೀಡಿರುತ್ತಾರೆ.

    Continue Reading

    BELTHANGADY

    ಬೆಳ್ತಂಗಡಿ: ವಿದ್ಯುತ್‌ ತಗುಲಿ ಯುವಕ ಮೃ*ತ್ಯು

    Published

    on

    ಉಪ್ಪಿನಂಗಡಿ: ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾ*ತಕ್ಕೆ ಬ*ಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ.

    ಹರೀಶ (32) ಮೃ*ತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃ*ತಪಟ್ಟಿದ್ದಾರೆ.

    Continue Reading

    BELTHANGADY

    ವಿಧಾನಸಭಾ ಅಧಿವೇಶನ: ಫಝಲ್ ಕೋಯಮ್ಮ ತಂಙಳ್, ನಿರೂಪಕಿ ಅಪರ್ಣಾ ಸಹಿತ ಅಗಲಿದ ಗಣ್ಯರಿಗೆ ಸಂತಾಪ

    Published

    on

    ಬೆಂಗಳೂರು: ವಿಧಾನ ಮಂಡಲ ಉಭಯ ಸದನಗಳ ಮುಂಗಾರು ಅಧಿವೇಶನ ಇಂದು ಪೂರ್ವಾಹ್ನ 11 ಗಂಟೆಗೆ ಆರಂಭಗೊಂಡಿತು.

    ಸದನ ಆರಂಭಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌ ಅವರು ಸಂತಾಪ ಸೂಚಿಸುವ ನಿರ್ಣಯವನ್ನು ಮಂಡಿಸಿ, ಅಗಲಿದ ಗಣ್ಯರ ಕೊಡುಗೆಗಳನ್ನು ಸ್ಮರಿಸಿದರು.

    ಅಗಲಿದ ಗಣ್ಯರಾದ ಧಾರ್ಮಿಕ ಮುಖಂಡ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ (ಕೂರತ್ ತಂಙಳ್), ನಿರೂಪಕಿ ಅಪರ್ಣಾ, ಸಾಹಿತಿ ಕಮಲಾ ಹಂಪನಾ, ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಸದನಗಳ ಸದಸ್ಯರು ಸಂತಾಪ ಅರ್ಪಿಸಿದರು.

    Continue Reading

    LATEST NEWS

    Trending