Connect with us

    LATEST NEWS

    8 ಜನರ ಆಹುತಿ ಪಡೆದ ಪಟಾಕಿ ಸ್ಪೋಟ…! 9 ಜನ ಗಂಭೀರ

    Published

    on

    ಮಂಗಳೂರು (ಶಿವಕಾಶಿ) : ಪಟಾಕಿ ಫ್ಯಾಕ್ಟರಿಯಲ್ಲಿ ನಡೆದ ಭೀಕರ ಸ್ಫೋಟದಿಂದ 8 ಜನರು ಇಹಲೋಕ ತ್ಯಜಿಸಿದ್ದು, 9 ಜನ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಮೇ9 ರ ಮದ್ಯಾಹ್ನ ಊಟದ ವಿರಾಮದಲ್ಲಿ ಈ ಸ್ಫೋಟ ನಡೆದಿರುವ ಕಾರಣ ಹಲವು ಕಾರ್ಮಿಕರು ಬದುಕಿ ಉಳಿದಿದ್ದಾರೆ.

    ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿಯಲ್ಲಿ ಈ ಭೀಕರ ಸ್ಪೋಟ ಸಂಭವಿಸಿದೆ. ಶ್ರೀ ಸುಧರ್ಶನ್ ಫೈರ್‌ ವರ್ಕ್ಸ್‌ ಅನ್ನೋ ಫ್ಯಾಕ್ಟರಿ ಇದಾಗಿದ್ದು, ಮದ್ಯಾಹ್ನ ಊಟದ ವೇಳೆಯಲ್ಲಿ ಈ ಸ್ಫೋಟ ಸಂಭವಿಸಿದೆ. ಫ್ಯಾಕ್ಟರಿಯಲ್ಲಿ ಸುಮಾರು 50 ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಹುತೇಕರು ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗ ಈ ಸ್ಫೋಟ ನಡೆದಿದೆ. ವಿಪರೀತವಾಗಿ ಏರಿದ್ದ ತಾಪಮಾನದಿಂದ ಪಟಾಕಿ ಸ್ಫೋಟಗೊಂಡಿದೆ ಎನ್ನಲಾಗಿದೆ.

    ವೃದುನಗರ ಜಿಲ್ಲೆಯಲ್ಲಿರುವ ಶಿವಕಾಶಿಯ ಸೆಂಗಮಲೆಪೆಟ್ಟಿ ಎಂಬಲ್ಲಿ ಈ ಅವಘಡ ಸಂಭವಿಸಿದೆ. ಇದೊಂದು ದೊಡ್ಡ ಪ್ರಮಾಣದಲ್ಲಿ ಪಟಾಕಿ ತಯಾರಿಸುವ ಫ್ಯಾಕ್ಟರಿಯಾಗಿದೆ.  ಸ್ಫೋಟದ ತೀವ್ರತೆಗೆ 7 ಕೊಠಡಿಯ ಕಟ್ಟಡ ಸಂಪೂರ್ಣ ನೆಲಸಮವಾಗಿ ಹೋಗಿದೆ. ಇಲ್ಲಿ ಪೂರ್ಣವಾಗಿ ಸಿದ್ಧಗೊಂಡಿದ್ದ ಪಟಾಕಿಗಳನ್ನು ಶೇಖರಿಸಿ ಇಡಲಾಗಿತ್ತು ಮತ್ತು ಪಕ್ಕದಲ್ಲೇ ಅರ್ಧ ತಯಾರಿಸಿದ್ದ ಪಟಾಕಿಗಳೂ ಕೂಡಾ ಇಡಲಾಗಿತ್ತು. ಪಟಾಕಿ ತಯಾರಿಸಲು ಇಟ್ಟಿದ ಮದ್ದಿಗೆ ಬೆಂಕಿ ತಗುಲಿ ಭಾರಿ ಸ್ಫೋಟ ಸಂಭವಿಸಿದೆ.  8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂಭತ್ತು ಜನ ಗಂಭೀರ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 9 ಜನರಲ್ಲಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಊಟಕ್ಕೆ ರೆಸ್ಟ್‌ ಇದ್ದ ಕಾರಣ ಇನ್ನಷ್ಟು ಜೀವ ಹಾನಿಯಾಗುವುದು ತಪ್ಪಿದ್ದು , ಘಟನೆ ನಡೆಯುವ ಸಮಯದಲ್ಲಿ ಕಟ್ಟಡದ ಸಮೀಪ ಕೇವಲ 17 ಜನ ಮಾತ್ರ ಇದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಪಟಾಕಿ ಸ್ಫೋಟವಾಗುತ್ತಿದ್ದಂತೆ ಸ್ಥಳದಿಂದ ಓಡಿ ರಕ್ಷಿಸಿಕೊಳ್ಳುವ ವೇಳೆ ಕಟ್ಟಡ ಉರುಳಿ ಅದರ ಅಡಿಗೆ ಬಿದ್ದು 8 ಜನ ಮೃತ ಪಟ್ಟಿದ್ದಾರೆ ಎಂದು ಮಾಹಿತಿ ಲಭಿಸಿದೆ. ಘಟನೆ ನಡೆಯುತ್ತಿದ್ದಂತೆ ರಕ್ಷಣೆಗೆ ಉಳಿದ ಕಾರ್ಮಿಕರು ಧಾವಿಸಿದ್ರೂ ಯಾರನ್ನೂ ರಕ್ಷಣೆ ಮಾಡುವ ಪರಿಸ್ಥಿತಿ ಅಲ್ಲಿ ಇರಲಿಲ್ಲ . ಹೀಗಾಗಿ ಸುಮಾರು 1 ಗಂಟೆಯ ಬಳಿಕ ಅಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದ್ದು, ಆ ವೇಳೆಗಾಗಲೇ 8 ಜನ ಮೃತ ಪಟ್ಟಿದ್ದಾರೆ.

    DAKSHINA KANNADA

    ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    Published

    on

    ಮಂಗಳೂರು: ನಿಮ್ಮ ಸ್ಮಾರ್ಟ್‌ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅದನ್ನು ಹುಡುಕುವುದು ದೊಡ್ಡ ಕಷ್ಟ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

    ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

    ಗೂಗಲ್ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

    ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ.

    Continue Reading

    LATEST NEWS

    ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ; ಡ್ರ*ಗ್ಸ್ ಪತ್ತೆ! ಪಾರ್ಟಿಯಲ್ಲಿದ್ದರು ನಟ – ನಟಿಯರು,.!

    Published

    on

    ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿ ಬಳಿಯ ಜಿ.ಆರ್.ಫಾರ್ಮ್​​​ ಹೌಸ್​​ನಲ್ಲಿ ನಡೆಯುತ್ತಿದ್ದ ರೇವ್ ​​ಪಾರ್ಟಿ ಮೇಲೆ ಸಿಸಿಬಿ ತಂಡ ದಾಳಿ ನಡೆಸಿದೆ. ಬೆಳಗಿನ ಜಾವ 3 ಗಂಟೆಗೆ ದಾಳಿ ನಡೆಸಲಾಗಿದೆ. ಈ ವೇಳೆ ಪಾರ್ಟಿಯಲ್ಲಿ ಡ್ರ*ಗ್ಸ್ ಪತ್ತೆಯಾಗಿದೆ. ಅಲ್ಲದೇ, ಕೆಲ ತೆಲುಗು ನಟಿಯರು ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.


    ತಡರಾತ್ರಿವರೆಗೂ ಪಾರ್ಟಿ…ಸಿಸಿಬಿ ದಾಳಿ!

    ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬುವವರ ಮಾಲಿಕತ್ವದ ಜಿ.ಆರ್. ಫಾರ್ಮ್​​​ಹೌಸ್​​ನಲ್ಲಿ ಹೈದ್ರಾಬಾದ್ ಮೂಲದ ವಾಸು ಎಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಬರ್ತ್ ಡೇ ಪಾರ್ಟಿ ಎಂದು ಹೇಳಲಾಗಿತ್ತಾದರೂ, ಈ ಪಾರ್ಟಿ ತಡರಾತ್ರಿ 2 ಗಂಟೆಯಾದ್ರೂ ಮುಗಿದಿರಲಿಲ್ಲ. ಅವಧಿ ಮೀರಿ ಪಾರ್ಟಿ ಮಾಡಲಾಗುತ್ತಿದ್ದ ಹಿನ್ನೆಲೆ ಸಿಸಿಬಿಯ ಆಂಟಿ ನಾರ್ಕೊಟಿಕ್ಸ್ ವಿಭಾಗದ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಪಾರ್ಟಿಯಲ್ಲಿ ಡ್ರಗ್ಸ್ ಪತ್ತೆಯಾಗಿದೆ.

    ದಾಳಿ ವೇಳೆ 17 ಎಂಡಿಎಂಎ ಮಾತ್ರೆ, ಕೊಕೇನ್ ಪತ್ತೆಯಾಗಿದೆ. ಆಂಧ್ರ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನ ಮತ್ತು 25ಕ್ಕೂ ಹೆಚ್ಚು ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದು ತಿಳಿದುಬಂದಿದೆ. ಆಯೋಜಕರ ಪಾರ್ಟಿಗಾಗಿಯೇ ಆಂಧ್ರದಿಂದ ಫ್ಲೈಟ್ ನಲ್ಲಿ ಜನರನ್ನು ಕರೆಸಿಕೊಂಡಿದ್ದ ಎಂದು ತಿಳಿದು ಬಂದಿದೆ.

    ಪಾರ್ಟಿಗೆ ಬರೋರಿಗೆ ಪಾಸ್ ವರ್ಡ್ :

    3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಬಂಧಿಸಲಾಗಿದೆ. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

    ವಾಸು, ತಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೆ ಎಂದು ಸುಳ್ಳು ಹೇಳಿಕೆ ನೀಡಿದ್ದ. ಆದರೆ ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ.

    ಇದನ್ನೂ ಓದಿ : ಮುಲ್ಕಿ : ಪ್ರೀತಿಸಿದ ಹುಡುಗಿ ಆತ್ಮಹ*ತ್ಯೆ ಬೆನ್ನಲ್ಲೇ ರೈಲಿಗೆ ತಲೆಕೊಟ್ಟು ಇಹಲೋಕ ತ್ಯಜಿಸಿದ ಯುವಕ!

    ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರಾದರೂ ಬರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.

    ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ! ಆಕೆ ಹೇಳೋದೇ ಬೇರೆ :

    ರೇವ್ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೂಡಾ ಭಾಗಿಯಾಗಿದ್ದರು ಎಂದು ಹೇಳಲಾಗಿದೆ. ಪೊಲೀಸ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಆಕೆ ವೀಡಿಯೋವೊಂದನ್ನು ಹರಿಬಿಟ್ಟಿದ್ದು, ತಾನು ಹೈದರಾಬಾದ್ ನಲ್ಲೇ ಇದ್ದೇನೆ ಎಂದಿದ್ದಾರೆ.

    ಆದರೆ, ಅವರು ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಹೇಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    Continue Reading

    LATEST NEWS

    ರೆಸಾರ್ಟ್ ನಲ್ಲಿ Zipline ಗೇಮ್ ಆಡಲು ಹೋಗಿ ಮಹಿಳೆ ಸಾ*ವು!

    Published

    on

    ರಾಮನಗರ: ಜಿಪ್ ಲೈನ್ ಆಡಲು ಹೋಗಿ ಮಹಿಳೆ ಸಾ*ವನ್ನಪ್ಪಿ, ವ್ಯಕ್ತಿಯೊಬ್ಬ ಗಾಯಗೊಂಡಿರುವ ಘಟನೆ ರಾಮನಗರ ಜಿಲ್ಲೆಯ ಹಾರೋಹಳ್ಳಿ ತಾಲೂಕಿನ ಬೆಟ್ಟಹಳ್ಳಿ ಬಳಿಯ jungle trailz resortನಲ್ಲಿ ನಡೆದಿದೆ.

     

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅತ್ತಿಬೆಲೆ ನಿವಾಸಿ ರಂಜಿನಿ (35) ಮೃ*ತರು. ಗಾಯಾಳು ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ರಂಜಿನಿ ಅವರು ಜೆಪಿ ನಗರದ ಮಿಲನ ನರ್ಸಿಂಗ್‌ ಹೋಂನಲ್ಲಿಕಾರ್ಯ ನಿರ್ವಹಿಸುತ್ತಿದ್ದು, ಸ್ನೇಹಿತರ ಜತೆ ರಂಜಿನಿ ಒಂದು ರಜಾ ದಿನ ಕಳೆಯಲು ಹಾರೋಹಳ್ಳಿ ಬಳಿಯ ಜಂಗಲ್‌ ಟ್ರಯಲ್ಸ್‌ ರೆಸಾರ್ಟ್‌ಗೆ ಬಂದಿದ್ದರು. ಈ ವೇಳೆ ಜಿಪ್‌ಲೈನ್‌ ಆಡುತ್ತಿದ್ದಾಗ ಅದು ಕಟ್‌ ಆಗಿ ಕೆಳಗೆ ಬಿದ್ದಿದ್ದಾರೆ. ತಕ್ಷಣ ಸ್ನೇಹಿತರು ಚಿಕಿತ್ಸೆಗಾಗಿ ದಯಾನಂದ ಸಾಗರ್‌ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಆಸ್ಪತ್ರೆಯಲ್ಲಿ ಕೊ*ನೆಯುಸಿರೆಳೆದಿದ್ದಾಳೆ. ಜೊತೆಯಲ್ಲಿದ್ದ ವ್ಯಕ್ತಿ ಗಾಯಗೊಂಡಿದ್ದಾನೆ.

    ರೆಸಾರ್ಟ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಅವಘ*ಡ ಸಂಭವಿಸಿದೆ ಎಂದು ರಂಜಿನಿ ಸಂಬಂಧಿಕರು ಆರೋಪಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾರೋಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೆಸಾರ್ಟ್‌ ಮಾಲೀಕರ ಅಜಾಗರೂಕತೆ, ನಿರ್ಲಕ್ಷ್ಯ ಮತ್ತು ಕ್ರೀಡಾ ಸುರಕ್ಷತಾ ನಿಯಮ ಪಾಲಿಸದ ಕಾರಣ ಈ ಘಟನೆ ನಡೆದಿದೆ ಎಂದು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹಾರೋಹಳ್ಳಿ ಪೊಲೀಸ್‌ ಠಾಣೆಗೆ ನಿರ್ಮಲ ಎಂಬುವರು ದೂರು ನೀಡಿದ್ದಾರೆ. ಹಾರೋಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಶವದ ಮರ*ಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ.

    Continue Reading

    LATEST NEWS

    Trending