Connect with us

FILM

ಐಶು @ 50 – ಹುಟ್ಟು ಹಬ್ಬದ ಸಂಭ್ರಮದಲ್ಲಿ ಮಾಜಿ ವಿಶ್ವ ಸುಂದರಿ

Published

on

ಇಂದು ಕರ್ನಾಟಕ ಮೂಲದ ಬಾಲಿವುಡ್‌ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರು ತನ್ನ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಮುಂಬೈ : ಇಂದು ಅಂದರೆ ನವೆಂಬರ್‌ 1ರಂದು ಕರ್ನಾಟಕ ಮೂಲದ ಬಾಲಿವುಡ್‌ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಅವರು ತನ್ನ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

ಐಶ್ವರ್ಯಾ ರೈ ಜನಿಸಿದ್ದು 1973ರ ನವೆಂಬರ್ 1ರಂದು. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ನಂತರ ಇವರ ಕುಟುಂಬ ಮುಂಬೈಗೆ ಶಿಫ್ಟ್ ಆಯಿತು.

ಹೀಗಾಗಿ, ಐಶ್ವರ್ಯಾ ರೈ ಅವರು ಅಲ್ಲಿಯೇ ಬೆಳೆದರು ಮತ್ತು ಶಿಕ್ಷಣ ಪಡೆದರು.

ಐಶ್ವರ್ಯಾ ರೈ ಮಾಡೆಲ್ ಆಗಿದ್ದರು. 1994ರಲ್ಲಿ ಐಶ್ವರ್ಯಾ ‘ಮಿಸ್ ವರ್ಲ್ಡ್​ 1994’ ಆದರು. ಇದಾದ ಬಳಿಕ ಅವರಿಗೆ ಚಿತ್ರರಂಗದಿಂದ ಸಾಕಷ್ಟು ಆಫರ್ ಬಂತು.

ಆದರೆ, ಸಿನಿಮಾ ಒಪ್ಪಿಕೊಳ್ಳುವಲ್ಲಿ ಅವರು ಅವಸರ ತೋರಲಿಲ್ಲ. 1997ರಲ್ಲಿ ಅವರ ನಟನೆಯ ಮೊದಲ ಸಿನಿಮಾ ‘ಇರುವರ್’ ರಿಲೀಸ್ ಆಯಿತು.

ನಟಿ ಐಶ್ವರ್ಯ ಸಿನಿಮಾ ಬದುಕಿನಂತೆಯೇ ಅವರ ಪ್ರೇಮ ಪ್ರಕರಣಗಳಿಂದಲೂ ಹೆಚ್ಚಿನ ಸುದ್ದಿಯಲ್ಲಿರೋ ನಟಿ, ಅದು ಇಂದಿಗೂ ಚರ್ಚಿತವೇ.

ಸಲ್ಮಾನ್ ಖಾನ್ ಜತೆಗಿನ ವಿವಾದಾತ್ಮಕ ಸಂಬಂಧದಿಂದ ಹಿಡಿದು ಅಭಿಷೇಕ್ ಬಚ್ಚನ್ ಮದುವೆಯವರೆಗೂ ಐಶ್ವರ್ಯಾ ಅವರ ಖಾಸಗಿ ಬದುಕಿನ ವಿಷಯ ಸದಾ ಚರ್ಚೆಯಲ್ಲಿ ಇರುವಂಥದ್ದು.

ಇವರು ಕೈಕೊಟ್ಟಿದ್ದರಿಂದಲೇ ಕೊನೆಯವರೆಗೂ ಸಲ್ಮಾನ್‌ ಖಾನ್‌ ಒಂಟಿಯಾಗಿಯೇ ಉಳಿದರು ಎಂದೂ ಹೇಳಲಾಗುತ್ತದೆ.

ಈ ಪ್ರೇಮಕಥೆಯ ಜೊತೆಗೆ ಐಶ್ವರ್ಯ ಹೆಸರು ವಿವೇಕ್ ಒಬೆರಾಯ್ ಅವರ ಜೊತೆಯೂ ಸೇರಿಕೊಂಡಿದೆ.

ಐಶ್ವರ್ಯಾ-ಸಲ್ಮಾನ್ ಪ್ರೇಮ ಸಂಬಂಧದಂತೆಯೇ ಕುತೂಹಲ ಕೆರಳಿಸಿದ್ದು, ಐಶ್ವರ್ಯಾ-ವಿವೇಕ್ ಒಬೆರಾಯ್ ಪ್ರೇಮ ಸಲ್ಲಾಪ. ಇದು ಅಲ್ಪ ಕಾಲದ್ದಾಗಿದ್ದರೂ ಆ ಕಾಲದಲ್ಲಿ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು.

ಈಗೇನೆ ಇದ್ರೂ ಐಶು ಅಭಿಷೇಕ್ ಜೊತೆ ಸುಖವಾಗಿ ಬಾಳುತ್ತಿದ್ದು, ಸುಂದರವಾದ ಜೀವನವನ್ನು ಸಾಗಿಸುತ್ತಿದ್ದಾರೆ.

Click to comment

Leave a Reply

Your email address will not be published. Required fields are marked *

bangalore

ಬಿಗ್ ಬಾಸ್ ಮನೆಯಲ್ಲಿ ನಮ್ರತಾ-ಸ್ನೇಹಿತ್ ಲವ್ವಿ-ಡವ್ವಿ

Published

on

Bigboss: ಬಿಗ್ ಬಾಸ್ ಮನೆಯಲ್ಲಿ ಕಾರ್ತಿಕ್- ಸಂಗೀತಾ ಇಬ್ಬರ ಒಂದು ಜೋಡಿ ಆದರೆ ಇತ್ತ ಸ್ನೇಹಿತ್ ಮತ್ತು ನಮ್ರತಾ ಇವರಿಬ್ಬರ ಪ್ರೇಮ ಕತೆ ಶುರುವಾಗಿದೆ.

ಕ್ಯಾಪ್ಟೆನ್ಸಿ ವಿಚಾರದಲ್ಲಿ ನಮ್ರತಾ ಹಾಗೂ ಸ್ನೇಹಿತ್ ಮುನಿಸಿಕೊಂಡಿದ್ದು, ಇದೀಗ ಮತ್ತೇ ಅವರ ಫ್ರೆಂಡ್‌ಶಿಪ್‌ ಶುರುವಾಗಿದೆ. ‘ ನಾನು ನಿಮ್ಮ ಪ್ರೀತಿನ ಒಪ್ಪಿಕೊಂಡ್ರೆ ಏನು ಮಾಡ್ತೀರಾ ಎಂದು ಸ್ನೇಹಿತ್ ಗೆ ನಮ್ರತಾ ಹೇಳಿದ್ದಾರೆ. ಅವರ ಮಾತಿಗೆ ಸ್ನೇಹಿತ್ ನಾಚಿ ನೀರಾಗಿದ್ದಾರೆ. ಇದೀಗ ಇವರಿಬ್ಬರ ಲವ್ವಿ-ಡವ್ವಿಯಲ್ಲಿ ಹೊಸ ಟ್ವಿಸ್ಟ್‌ ಸಿಕ್ಕಿದೆ. ಸ್ನೇಹಿತ್ ಕ್ಯಾಪ್ಟನ್ ಆಗಿದ್ದಾಗ ಟಾಸ್ಕ್‌ನಿಂದ ನಮ್ರತಾ ಅವರನ್ನು ಹೊರಗೆ ಹಾಕಿದ್ದರು. ಬಳಿಕ ನಮ್ರತಾ ಅವರ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದರು.


ಕಳೆದ 60 ದಿನಗಳಿಂದ ನಡೆಯುತ್ತಿರೋ ಸೀನ್ ಅಂದರೆ ನಮ್ರತಾ ಹಿಂದೆ ಹೋಗೋದನ್ನ ಸ್ನೇಹಿತ್ ಬಿಟ್ಟಿಲ್ಲ. ನಮ್ರತಾಗೆ ಆಗಾಗ ಪ್ರೇಮ ನಿವೇದನೆ ಮಾಡುತ್ತಲೇ ಬಂದಿದ್ದಾರೆ. ನಮ್ರತಾ ಬೀಳಲ್ಲ, ಸ್ನೇಹಿತ್ ಬಿಡಲ್ಲ. ಇದೀಗ ಇದೆನ್ನೆಲ್ಲಾ ಗಮನಿಸಿ ನಮ್ರತಾ, ಸರಿ ನಾನು ನಿಮ್ಮ ಪ್ರೀತಿಯನ್ನ ಒಪ್ಪಿಕೊಂಡರೆ ಮುಂದೇನು? ಫ್ಯೂಚರ್ ಪ್ಲ್ಯಾನ್ ಏನು ಎಂದು ಕೇಳಿದ್ದಾರೆ. ಹೇಳಿ ಈಗ ನಾನು ಪ್ರೀತಿ ಮಾಡ್ತೀನಿ ಅಂದ್ರೆ ಏನು ಮಾಡ್ತೀರಿ ಎಂದು ನೇರವಾಗಿ ಪ್ರಶ್ನೆ ಎಸೆದರು.

ಆದರೆ, ಈ ಪ್ರಶ್ನೆಗೆ ಏನು ಉತ್ತರಿಸಬೇಕು ಎಂಬುದೇ ಸ್ನೇಹಿತ್‌ಗೆ ತಿಳಿಯಲಿಲ್ಲ. ಅವರು ನಕ್ಕು ಸುಮ್ಮನಾದರು. ಹೇಳಿ ಈಗ ನಾನು ಪ್ರೀತಿಸುತ್ತೇನೆ ಎಂದರೆ ಏನು ಮಾಡ್ತೀರಾ. ಇಷ್ಟು ದಿನ ಸುಮ್ಮನೆ ಕಾಳು ಹಾಕಿದ್ರಾ ಎಂದು ಮರು ಪ್ರಶ್ನೆ ಹಾಕಿದರು. ಬಿಗ್ ಬಾಸ್‌ನಿಂದ ಹೊರಗೆ ಹೋದ ಬಳಿಕ ಮನೆಯವರ ಜೊತೆ ಮಾತನಾಡೋಣ.

ಒಂದು ವರ್ಷ ಮದುವೆ ಆಗೋದು ಬೇಡ. ನಿಮ್ಮಿಷ್ಟದ ಜಾಗಕ್ಕೆ ಹೊಗೋಣ. ಸ್ವಿಜರ್‌ಲೆಂಡ್‌ಗೆ ಮೊದಲು ಹೋಗೋಣ ಎಂದರು ಸ್ನೇಹಿತ್. ಅವರ ಮಾತನ್ನು ಕೇಳಿ ನಮ್ರತಾ ನಕ್ಕರು. ನಮ್ರತಾ ನಗುತ್ತಲೇ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರಾ? ಈ ಬಗ್ಗೆ ಕ್ಲ್ಯಾರಿಟಿ ಇಲ್ಲ. ಆದರೆ ನಮ್ರತಾ ನಗುವಿಗೆ ಸ್ನೇಹಿತ್ ಮಾತ್ರ ನಾಚಿ ನೀರಾಗಿದ್ದಾರೆ. ಅಂತೂ ಇಂತೂ ಕೋಪ ಮಾತನಾಡುತ್ತಿದ್ದಲ್ಲಾ ಅಂತ ಸಮಾಧಾನದಲ್ಲಿದ್ದಾರೆ ಸ್ನೇಹಿತ್.

Continue Reading

FILM

ಬದುಕಿನ ಕೊನೆಯವರೆಗೂ ನೋವು, ತಾತ್ಸಾರ, ಅಪವಾದಗಳೇ ಹೆಚ್ಚು-ಸ್ವರ್ಗದಲ್ಲಾದರೂ ನೆಮ್ಮದಿ ಸಿಗಲಿ ಅಮ್ಮಾ…

Published

on

ಬೆಂಗಳೂರು : ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಯೋಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ಇಂದು ನೆಲಮಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಲೀಲಾವತಿ ಕಲಿತದ್ದು ಕೇವಲ ಎರಡನೇ ತರಗತಿವರೆಗು ಮಾತ್ರ. 9ನೇ ವಯಸ್ಸಿಗೆ ತಂದೆ ಹಾಗೂ ತಾಯಿಯನ್ನು ಕಳೆದುಕೊಳ್ಳುತ್ತಾರೆ..

ಅವರನ್ನು ಕ್ರೈಸ್ತ ಕುಟುಂಬವೊಂದು ಆರೈಕೆ ಮಾಡಿದ್ದರು.
ತುತ್ತು ಅನ್ನಕ್ಕಾಗಿ ಬೇರೆಯವರ ಮನೆಯಲ್ಲಿ ಮುಸುರೆ ತಿಕ್ಕಿ, ಚಾಕರಿ ಮಾಡಿ ಆಕೆ ತನ್ನ ಬಾಲ್ಯವನ್ನು ಕಳೆದರು.
ತುಳು ಚಿತ್ರರಂಗದಲ್ಲಿ ಅಂದಿಗೆ ತುಳು ಸಿನಿಮಾಗಳು ಆರಂಭ ಆದವು. ಹೊಟ್ಟೆ ಹಸಿವನ್ನು ನೀಗಿಸಲು ಚಂದದ ಹೆಣ್ಣು ಮಗಳೋರ್ವಳು ಸಿನಿಮಾದಲ್ಲಿ ಅವಕಾಶ ಕೊಡುವಂತೆ ಅಂಗಲಾಚುತ್ತಾಳೆ. ಅವಳೇ ಮುದ್ದು ಮುದ್ದು ಲೀಲಾ ಕಿರಣ್ ಅಲಿಯಾಸ್ ಇಂದಿನ ಲೆಜೆಂಡೆರಿ ಆಕ್ಟ್ರೆಸ್ ಲೀಲಾವತಿ ಅಮ್ಮ. ಇದರ ಪರಿಣಾಮವಾಗಿ ‘ಸಾವಿರೊಡೊರ್ತಿ ಸಾವಿತ್ರಿ, ದಾರೆದ ಬುಡೆದಿ, ಬಿಸತ್ತಿ ಬಾಬು ಮೊದಲಾದ ತುಳು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಬಣ್ಣದ ಬದುಕಿ ಕಟ್ಟಿಕೊಂಡು ಅವಕಾಶ ಪಡೆದು ಜೀವನ ಸಾಗಿಸಬಹುದು ಎಂಬ ಕನಸಿನೊಂದಿಗೆ ಬೆಂಗಳೂರಿಗೆ  ಹೋದ ಲೀಲಮ್ಮ ಅಲ್ಲಿ ಬರಬಾರದ ಕಷ್ಟಗಳನ್ನು ಅನುಭವಿಸಿದ್ರು.

ಆಗ ಆಸರೆಯಾಗಿದ್ದೇ ಮಹಾನ್ ಕಲಾವಿದ ಆಗಿದ್ದ ಮಹಾಲಿಂಗ ಭಾಗವತರ್ ಅವರ ಪ್ರಸಿದ್ಧ ‘ಶ್ರೀ ಸಾಹಿತ್ಯ ಸಾಮ್ರಾಜ್ಯ ಡ್ರಾಮ ಕಂಪೆನಿ. ಯಾವ ಪಾತ್ರ ಕೊಟ್ಟರೂ ಲೀಲಾಜಾಲವಾಗಿ ಅವರು ಅಭಿನಯ ಮಾಡುತ್ತಿದ್ದರು ಲೀಲಾವತಿ ಅಮ್ಮ. ಸುಬ್ಬಯ್ಯ ನಾಯ್ಡು ಅವರ ಪರಿಚಯ ಆಗಿ ‘ಭಕ್ತ ಪ್ರಹ್ಲಾದ’ ಸಿನಿಮಾದಲ್ಲಿ ಒಂದು ಪಾತ್ರವನ್ನು ಗಿಟ್ಟಿಸಿಕೊಂಡರು.

ಅದೇ ಸಂದರ್ಭದಲ್ಲಿ ಮಹಾಲಿಂಗ ಭಾಗವತರ್ ಅವರನ್ನು ಮದುವೆ ಆದ ಲೀಲಾವತಿ ಆ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆಗ ಹೆಚ್ಚಿನ ನಟಿಯರು ತಮ್ಮ ಬೇಡಿಕೆ ಉಳಿಸಿಕೊಳ್ಳಲು ಮದುವೆಯನ್ನು ಬಹಿರಂಗ ಮಾಡುತ್ತಿರಲಿಲ್ಲ. ಮುಂದೆ ಲೀಲಾವತಿ ಜೀವನದಲ್ಲಿ ಮಹಾಲಿಂಗ ಭಾಗವತರ್ ಅವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದರು.

ಡಾ. ರಾಜ್ ಕುಮಾರ್ ಹಾಗೂ ಲೀಲಾವತಿ ಅವರದ್ದು ಸೂಪರ್ ಡೂಪರ್ ಕಾಂಬಿನೇಷನ್. ಇವರಿಬ್ಬರ ಅದ್ಭುತ ಅಭಿನಯವನ್ನು ಕಂಡು ರಾಜ್ – ಲೀಲಾವತಿ ಅವರನ್ನು ಗಂಡ ಹೆಂಡತಿ ಎಂದೇ ಕರೆಯಲು ಆರಂಭಿಸಿದರು.

ಆದ್ರೆ ಲೀಲಾವತಿ ಅಮ್ಮ ರಾಜ್ ಅವರನ್ನು ಭಕ್ತಿಯಿಂದ ‘ದೊಡ್ಡೋರು’ ಎಂದೇ ಭಕ್ತಿಯಿಂದ ಕರೆಯುತ್ತಿದ್ದರು. ಡಾ. ರಾಜ್ ಅವರಿಗೆ ಮಾತ್ರ ಲೀಲಾವತಿ ಅಂದರೆ ಬಹಳ ಪ್ರೀತಿ..ಅವರೇ ಲೀಲಾವತಿಯವರಿಗರ  ಬರೆದ ಪತ್ರಗಳು ವೈರಲ್ ಆಗಿದ್ದವು.ಇದೀಗ ಲೀಲಾವತಿ ಅಮ್ಮ ನಮ್ಮನೆಲ್ಲಾ ಬಿಟ್ಟು ಬಾರದ ಊರಿಗೆ ತೆರಳಿದ್ದಾರೆ. ಇಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆದಿದೆ. ಬದುಕಿದ್ದಾಗ ಅಷ್ಟೇನೂ ಸುಖ  ಕಾಣದ ಲೀಲಾವತಿ ಅಮ್ಮನವರಿಗೆ ಸ್ವರ್ಗದಲ್ಲಾದರೂ ಸುಖ ನೆಮ್ಮದಿ ಸಿಗಲಿ.

Continue Reading

bangalore

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅಮ್ಮ ನಿಧನ..!

Published

on

ಕನ್ನಡ ಚಿತ್ರರಂಗದ ಹೆಸರಾಂತ ನಟಿ ಲೀಲಾವತಿ ಅಮ್ಮ ವಯೋಸಹಜದ ಕಾಯಿಲೆಯಿಂದ ಇಂದು ನಿಧನ ಹೊಂದಿದರು.

ಲೀಲಾವತಿ ಅವರು ಕೆಲವು ಸಮಯದ ಹಿಂದೆ ಆರೋಗ್ಯ ಸಮಸ್ಯೆಯಿಂದ ಬಳಳುತ್ತಿದ್ದರು. ಅವರ ಆರೋಗ್ಯದಲ್ಲಿ ಮತ್ತೆ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿತ್ತು. ಇಂದು ಮಧ್ಯಾಹ್ನ ದಿಢೀರ್ ಲೋ ಬಿಪಿ ಸಮಸ್ಯೆ ಶುರುವಾಗಿದೆ. ತಕ್ಷಣವೇ ಅವರನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ನಿಧನರಾಗಿದ್ದಾರೆ.

ಲೀಲಾವತಿ ಅವರು ಕೆಲವು ದಿನಗಳಿಂದ ಅನಾರೋಗ್ಯ ಕಾರಣದಿಂದಾಗಿ ಹಾಸಿಗೆ ಹಿಡಿದಿದ್ದರು. ಅವರ ಆರೋಗ್ಯ ಯೋಗ ಕ್ಷೇಮ ವಿಚಾರಿಸಲು ಖುದ್ದು ಸಿಎಂ ಸಿದ್ದರಾಮಯ್ಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ್ದರು.

ಸಿನಿಮಾ ರಂಗಕ್ಕೆ ಕಾಲಿಟ್ಟ ಲೀಲಾವತಿ ಅಮ್ಮ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಸೇರಿದಂತೆ 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಹುಟ್ಟಿದ್ದ ಅವರು ಕಿರಿಯ ವಯಸ್ಸಿನಲ್ಲೇ ಸಿನಿಮಾ ರಂಗಕ್ಕೆ ಕಾಲಿಟ್ಟು ಸುಮಾರು ಸಾಧನೆ ಮಾಡಿದ್ದಾರೆ. ಅವರ ಸಾಧನೆಗೆ ಹಲವಾರು ಪುರಸ್ಕಾರಗಳೂ ಸಂದಿವೆ. ಕರ್ನಾಟಕ ಸರಕಾರ ಕೊಡಮಾಡುವ ಜೀವಮಾನ ಸಾಧನೆಗಾಗಿ ಡಾ. ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ತುಮಕೂರ ವಿಶ್ವವಿದ್ಯಾಲಯ ಇವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

 

Continue Reading

LATEST NEWS

Trending