Connect with us

    DAKSHINA KANNADA

    ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

    Published

    on

    ಮಂಗಳೂರು: ಕೇಂದ್ರ ಸರ್ಕಾರ ಕೆಲವು ರೀತಿಯ ವ್ಯಾಪಾರ ಮಾಡುವವರಿಗೆ ರೂ.3 ಲಕ್ಷ ದರದಲ್ಲಿ ಹಣ ನೀಡುತ್ತಿದೆ. ಆ ಯೋಜನೆಯ ಹೆಸರು ಎಂಪ್ಲಾಯಿ ಸ್ಕೀಮ್. ಈ ಬ್ಯುಸಿನೆಸ್‌‌ ಮಾಡುವವರು ಮಹಿಳೆಯರೇ ಆಗಿರಬೇಕು ಎಂಬುದು ಷರತ್ತು. ಇದು ಕೇವಲ ಮಹಿಳೆಯರಿಗಾಗಿ ಮಾತ್ರ ಇರುವ ಸ್ಕೀಂ ಆಗಿದ್ದು ಪುರುಷರು ಇದರ ಲಾಭ ಪಡೆಯಲಾರರು.

     

    ಟೀ ಸ್ಟಾಲ್ ಹಾಕಿಕೊಂಡು ಕೇಂದ್ರ ಸರ್ಕಾರದಿಂದ ರೂ.1 ಲಕ್ಷದಿಂದ ರೂ.3 ಲಕ್ಷ ಸಾಲ ಪಡೆಯಬಹುದು. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಂದರೆ ರೂ.3 ಲಕ್ಷ ಸಾಲ ತೆಗೆದುಕೊಂಡರೆ ರೂ.1.5 ಲಕ್ಷ ಮಾತ್ರ ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ . ಸಾಲ ಪಡೆಯುವ ಮಹಿಳೆ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗದವರಾಗಿದ್ದರೆ, ಸಾಲದ ಮೇಲಿನ ಸಬ್ಸಿಡಿ 305 ಇರಲಿದೆ. ಹೀಗಾಗಿ ಸಾಮಾನ್ಯ ವರ್ಗದ ಮಹಿಳೆಯರು ರೂ.2.1 ಲಕ್ಷವನ್ನು ಹಿಂದಿರುಗಿಸಬೇಕು.

    ಈ ಯೋಜನೆಯಡಿ ಸಾಲ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯ ಮಿತಿ ಇಲ್ಲ. ಈ ಸಾಲ ನೀಡುವಾಗ SC/ST ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬಹುದು. ಸಾಲ ಪಡೆಯಬಯಸುವ ಮಹಿಳೆಯರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.

    ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು:

    ಯೋಜನೆಯಡಿಯಲ್ಲಿ ಸಾಲ ಪಡೆಯಲು ಉದ್ಯೋಗಿಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜನನ ಪ್ರಮಾಣಪತ್ರ, ವಿಳಾಸ ಪುರಾವೆ, ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಬಿಪಿಎಲ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತು ಇತರೆ ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳು ಬೇಕು.

    ಅರ್ಜಿ ಸಲ್ಲಿಸುವುದು ಹೇಗೆ?

    ಉದ್ಯೋಗಿ ಯೋಜನೆಯನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಬ್ಯಾಂಕ್‌ನ್ನು ಸಂಪರ್ಕಿಸಬೇಕಾಗುತ್ತದೆ. ಬಳಿಕ ಬ್ಯಾಂಕ್‌ನವರು ಹೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್‌ನವರು ನೀಡುವ ಅರ್ಜಿ ನಮೂನೆಯನ್ನೂ  ಪೂರ್ಣಗೊಳಿಸಬೇಕು. ಬಳಿಕ ಎಲ್ಲವನ್ನೂ ಪರಿಶೀಲಿಸಿ ಅರ್ಹತೆ ಇದ್ದಲ್ಲಿ ಈ ಸಾಲ ನೀಡಲಾಗುತ್ತದೆ. ಇಲ್ಲವೇ.. ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆನ್‌ಲೈನ್‌ಗಿಂತ ನೇರವಾಗಿ ಹೋಗಿ ಕೇಳುವ ಮೂಲಕ ಕೆಲಸವನ್ನು ವೇಗವಾಗಿ ಮುಗಿಸಬಹುದು.

    DAKSHINA KANNADA

    ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

    Published

    on

    ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


    ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

    ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    DAKSHINA KANNADA

    ಪಡೀಲ್‌ ಕಣ್ಣೂರು ಬಳಿ ಭೀಕರ ವಾಹನ ಅಪಘಾ*ತ; ಕೇಬಲ್ ಟೆಕ್ನಿಷಿಯನ್ ವಿಧಿವ*ಶ

    Published

    on

    ಮಂಗಳೂರು : ಪಡೀಲ್‌ ಕಣ್ಣೂರು ಬಳಿ ನಡೆದ ರಸ್ತೆ ಅಪಘಾ*ತದಲ್ಲಿ ನಮ್ಮ ಕುಡ್ಲ ವಾಹಿನಿಯ ಸಹಸಂಸ್ಥೆ ವಿಝಾರ್ಡ್‌ ಕೇಬಲ್‌ ನೆಟ್ ವರ್ಕ್‌ನ ಸಿಬಂದಿ ಹರೀಶ್ (45) ವಿಧಿವ*ಶರಾಗಿದ್ದಾರೆ. ಕರ್ತವ್ಯ ನಿಮಿತ್ತ ಫರಂಗಿಪೇಟೆಗೆ ತೆರಳಿದ್ದ ಹರೀಶ್ ಪಡೀಲ್‌ ಕಣ್ಣೂರು ಬಳಿ ಬೈಕ್ ನಿಲ್ಲಿಸಿದ್ದ ವೇಳೆ ವೇಗವಾಗಿ ಬಂದ ಡಸ್ಟರ್‌ ಕಾರೊಂದು ಬೈಕ್‌ಗೆ ಡಿ*ಕ್ಕಿ ಹೊಡೆದಿದೆ.


    ಮಹಿಳೆಯೊಬ್ಬರು ಕಾರು ಚಲಾಯಿಸುತ್ತಿದ್ದು, ಬೈಕ್‌ಗೆ ಡಿ*ಕ್ಕಿ ಹೊಡೆದ ಬಳಿಕ ಅಲ್ಪ ದೂರ ಚಲಿಸಿದ ಕಾರಣ ಬೈಕ್ ಸಹಿತ ಹರೀಶ್ ಕಾರಿನ ಅಡಿಗೆ ಸಿಲುಕಿಕೊಂಡಿದ್ದರು. ಈ ಭೀಕರ ಅಪಘಾ*ತದಲ್ಲಿ ಗಂಭೀರ ಗಾಯಗೊಂಡಿದ್ದ ಹರೀಶ್ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

    ಹರೀಶ್ ಕಲ್ಲಾಪು ಅವರು ಹಲವಾರು ವರ್ಷಗಳಿಂದ ವಿಝಾರ್ಡ್‌ ಕೆಬಲ್ ನೆಟ್‌ವರ್ಕ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ : ಕಾರ್ಕಳ : ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿ*ಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾ*ವು

    ಅಗಲಿದ ಸಿಬ್ಬಂದಿಗೆ ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರು ಹಾಗೂ ಸಿಬಂದಿ ಸಂತಾಪ ಸೂಚಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃ*ತ ಹರೀಶ್‌ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

    Continue Reading

    DAKSHINA KANNADA

    ಕದ್ದ ಫೋನ್ ಸ್ವಿಚ್ ಆಫ್ ಆಗಿದ್ರೂ ಸುಲಭದಲ್ಲಿ ಕಂಡುಹಿಡಿಯಬಹುದು.. ಹೇಗೆ ಗೊತ್ತಾ?

    Published

    on

    ಮಂಗಳೂರು: ನಿಮ್ಮ ಸ್ಮಾರ್ಟ್‌ಫೋನ್ ಕದ್ದರೆ ಮತ್ತು ಕಳ್ಳರು ಆ ಫೋನನ್ನು ಸ್ವಿಚ್ ಆಫ್ ಮಾಡಿದರೆ ಅದನ್ನು ಹುಡುಕುವುದು ದೊಡ್ಡ ಕಷ್ಟ. ಆದರೆ ಮುಂಬರುವ ಗೂಗಲ್‌ನ ನವೀಕರಣ, ಆಂಡ್ರಾಯ್ಡ್ ಬಳಕೆದಾರರ ಫೋನ್ ಸ್ವಿಚ್ ಆಫ್ ಆಗಿದ್ದರೂ ಅವರ ಸ್ಮಾರ್ಟ್‌ಫೋನ್ ನಿಖರವಾದ ಸ್ಥಳವನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ.

    ಗೂಗಲ್ ಶೀಘ್ರದಲ್ಲೇ ತನ್ನ ಆಂಡ್ರಾಯ್ಡ್ 15 ಅಪ್ಡೇಟ್ ಅನ್ನು ತರಲಿದೆ. ಇದನ್ನು ಇನ್​ಸ್ಟಾಲ್ ಮಾಡಿದ ನಂತರ ಆಂಡ್ರಾಯ್ಡ್ ಬಳಕೆದಾರರು ಸ್ವಿಚ್ ಆಫ್ ಮಾಡಿದ ನಂತರವೂ ತಮ್ಮ ಫೋನ್ ಅನ್ನು ಸುಲಭವಾಗಿ ಹುಡುಕಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ ಈ ವೈಶಿಷ್ಟ್ಯವು ಆಂಡ್ರಾಯ್ಡ್ ಫೋನ್‌ಗಳಲ್ಲಿ ಲಭ್ಯವಿರಲಿಲ್ಲ.

    ಗೂಗಲ್ ಕಂಪನಿಯು ಆಂಡ್ರಾಯ್ಡ್ 15 ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಗೂಗಲ್‌ನ ಮುಂಬರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಆಗಿದೆ. ಆಂಡ್ರಾಯ್ಡ್ 15 ಓಎಸ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗೂಗಲ್ ಉತ್ತಮ ವೈಶಿಷ್ಟ್ಯವನ್ನು ನೀಡಲಿದೆ. ಇದರಲ್ಲಿ ಬಳಕೆದಾರರಿಗೆ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನು ಪತ್ತೆ ಮಾಡುವ ಆಯ್ಕೆ ಕೂಡ ಒಂದು.

    ಗೂಗಲ್​ನ ಮುಂಬರುವ OS ಆಂಡ್ರಾಯ್ಡ್ 15 ನಲ್ಲಿ ಪಾಸ್‌ವರ್ಡ್ ಮೂಲಕ ಹುಡುಕುವ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ವ್ಯವಸ್ಥೆಯು ಪೂರ್ವ ಕಂಪ್ಯೂಟೆಡ್ ಬ್ಲೂಟೂತ್ ಬೀಕನ್ ಆಗಿರುತ್ತದೆ. ಇದು ಸಾಧನದ ಮೆಮೊರಿಯಿಂದ ನಿಯಂತ್ರಿಸಲ್ಪಡುತ್ತದಂತೆ. ಇದಕ್ಕಾಗಿ ಫೋನ್​ನ ಹಾರ್ಡ್‌ವೇರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ.

    ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಎಕ್ಸ್‌ನಲ್ಲಿ ಆಂಡ್ರಾಯ್ಡ್ ತಜ್ಞ ಮಿಶಾಲ್ ರೆಹಮಾನ್ ಈ ಬಗ್ಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಜೊತೆಗೆ ಗೂಗಲ್‌ನ ಮುಂಬರುವ ಸ್ಮಾರ್ಟ್‌ಫೋನ್‌ಗಳಲ್ಲಿ ಈ ವೈಶಿಷ್ಟ್ಯವನ್ನು ಒದಗಿಸಲಾಗುವುದು ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಆಂಡ್ರಾಯ್ಡ್ 15 ಓಎಸ್ ಬಿಡುಗಡೆಗೆ ಯಾವುದೇ ನಿಖರವಾದ ದಿನಾಂಕವನ್ನು ಗೂಗಲ್ ಬಹಿರಂಗಪಡಿಸಿಲ್ಲ.

    Continue Reading

    LATEST NEWS

    Trending