Connect with us

    LATEST NEWS

    ಇನ್ಮುಂದೆ ಕೈಗೆಟಕುವ ದರದಲ್ಲೂ ಸಿಗಲಿದೆಯಂತೆ “ವಜ್ರ” ..! ಏನಿದು ಸಂಶೋಧನೆ?

    Published

    on

    ದಕ್ಷಿಣ ಕೊರಿಯಾ/ಮಂಗಳೂರು: ವಜ್ರವು ಅತ್ಯಂತ ದುಬಾರಿ ನವರತ್ನಗಳಲ್ಲಿ ಒಂದಾಗಿದೆ. ವಜ್ರವು ಭೂಮಿಯ ಮೇಲೆ ನೈಸರ್ಗಿಕವಾಗಿ ಕಂಡುಬರುವ ಅತ್ಯಂತ ಕಠಿಣ ವಸ್ತುವಾಗಿದೆ. ಹಲವಾರು ಮಿಲಿಯನ್ ವರ್ಷಗಳಲ್ಲಿ ಹೆಚ್ಚಿನ ತಾಪಮಾನ ಮತ್ತು ಒತ್ತಡದ ಅಡಿಯಲ್ಲಿ ಭೂಮಿಯ ಹೊರಪದರದಲ್ಲಿ ಇಂಗಾಲದ ಪರಮಾಣುಗಳ ಘನೀಕರಣದಿಂದ ಇದು ರೂಪುಗೊಳ್ಳುತ್ತದೆ. ಫ್ಯಾಷನ್ ಮಾರುಕಟ್ಟೆಯಲ್ಲಿ ವಜ್ರಗಳಿಗೆ ಬೇಡಿಕೆ ಹೆಚ್ಚಿದೆ.

    diamond

    15 ನಿಮಿಷಗಳಲ್ಲಿ ತಯಾರುತ್ತೆ “ವಜ್ರ”:

    ನೈಸರ್ಗಿಕ ವಜ್ರಗಳನ್ನು ಹೊರತೆಗೆಯಲು ಮತ್ತು ಪಾಲಿಶ್ ಮಾಡಲು ಬಹಳ ಸಮಯ ತೆಗೆದುಕೊಳ್ಳುವುದರಿಂದ, ಕೃತಕ ವಜ್ರ ತಯಾರಿಕೆಯು ವೇಗವನ್ನು ಪಡೆಯುತ್ತಿದೆ.ಆದರೆ ಇದು ಕೆಲವು ವಾರಗಳನ್ನು ತೆಗೆದುಕೊಳ್ಳುತ್ತದೆ.

    diamond

    ಆದ್ದರಿಂದ, ದಕ್ಷಿಣ ಕೊರಿಯಾದ ಸಂಶೋಧಕರು ಹೊಸ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷ ದ್ರವ ಲೋಹದ ಮಿಶ್ರಣವನ್ನು ಬಳಸಿ ಕೇವಲ 15 ನಿಮಿಷಗಳಲ್ಲಿ ವಜ್ರಗಳನ್ನು ತಯಾರಿಸುವ ವಿಧಾನವನ್ನು ರೂಪಿಸಲಾಗಿದೆ. ಅದೂ ಸಹ ಅವುಗಳನ್ನು ಸಾಮಾನ್ಯ ವಾತಾವರಣದ ಒತ್ತಡದಲ್ಲಿ ತಯಾರಿಸಲಾಗುತ್ತದೆ. ಈ ಹೊಸ ವಿಧಾನವು ಇಲ್ಲಿಯವರೆಗೆ ಅಗತ್ಯವಿರುವ ಭಾರೀ ಒತ್ತುವ ಪ್ರಕ್ರಿಯೆಯನ್ನು ತಪ್ಪಿಸುತ್ತದೆ. ಕೈಗಾರಿಕಾ ಉದ್ದೇಶಗಳಿಗಾಗಿ ವಜ್ರಗಳ ಉತ್ಪಾದನೆಯನ್ನು ಹೆಚ್ಚಿಸಲು ಈ ವಿಧಾನವನ್ನು ಬಳಸಬಹುದು ಎಂದು ದಕ್ಷಿಣ ಕೊರಿಯಾದ ಇನ್ಸ್ಟಿಟ್ಯೂಟ್ ಫಾರ್ ಬೇಸಿಕ್ ಸೈನ್ಸ್‌ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ದ್ರವ ಲೋಹದಲ್ಲಿ ಇಂಗಾಲದ ಪರಮಾಣುಗಳನ್ನು ಸಂಯೋಜಿಸುವುದು ಹೊಸ ಪ್ರಕ್ರಿಯೆಯಲ್ಲ, ಆದರೆ ಇಲ್ಲಿಯವರೆಗೆ ಇದಕ್ಕೆ ಅಗಾಧವಾದ ಒತ್ತಡದ ಬಳಕೆಯ ಅಗತ್ಯವಿತ್ತು.

    ಮುಂದೆ ಓದಿ..; “ನಿವೇದಿತಾಜೈನ್”ಗೆ ಸಾವಿನ ಸುಳಿವು ಮೊದಲೇ ಇತ್ತಾ.!? ಈಬಗ್ಗೆ ನಿವೇದಿತಾ ತಾಯಿ ಹೇಳಿದ್ದೇನು ಗೊತ್ತಾ?

    diamond

    ಗೇಲಿಯಂ, ಐರನ್, ನಿಕ್ಕಲ್, ಸಿಲಿಕಾನ್ ಮಿಥೇಲ್ , ಹೈಡ್ರೋಜನ್ ಗಳನ್ನು ಸೇರಿಸಿ ವ್ಯಾಕ್ಯೂಮ್‌ ವ್ಯವಸ್ಥೆಯ ಮೂಲಕ ವೇಗವಾಗಿ ಈ ಪ್ರೊಸೆಸ್ ಮಾಡಲಾಗುತ್ತಿದೆ. ಇದರಿಂದ ಕೇವಲ ಹದಿನೈದು ನಿಮಿಷಗಳಲ್ಲಿ ವಜ್ರವನ್ನು ತಯಾರಿ ಮಾಡುವ ಆವಿಷ್ಕಾರ ಮಾಡಲಾಗಿದೆ. ಈ ಎಲ್ಲಾ ಪ್ರೊಸೆಸ್ ನಡೆಯಲು ಕೇವಲ ನೂರ ಐವತ್ತು ನಿಮಿಷಗಳು ಸಾಕಾಗುತ್ತದೆ.

    ಶಾಲೆಗೆ 100% ಫಲಿತಾಂಶ ತಂದುಕೊಟ್ಟ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯ ಭೀಕರ ಹ*ತ್ಯೆ

    ಈ ಕೃತಕ ವಜ್ರ ಭೂಗರ್ಭದಲ್ಲಿ ಸಿಗುವ ಅಸಲಿ ವಜ್ರದಂತೆ ಇದ್ರೂ ಅದಕ್ಕೂ ಇದಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆದ್ರೆ ಸದ್ಯ ಈ ಹೊಸ ಆವಿಷ್ಕಾರದಿಂದ ಮುಂದಿನ ದಿನಗಳಲ್ಲಿ ವಜ್ರದ ಬೆಲೆ ಕಡಿಮೆಯಾಗುವುದರ ಜೊತೆಗೆ ಹೊಸ ವಿನ್ಯಾಸದ ವಜ್ರಗಳೂ ಮಾರುಕಟ್ಟೆಗೆ ಲಗ್ಗೆ ಇಡುವ ಸಾದ್ಯತೆ ಇದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

    Published

    on

    ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


    ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

    ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

    Published

    on

    ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

    ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

    Continue Reading

    FILM

    ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

    Published

    on

    ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


    ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

    ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

    Continue Reading

    LATEST NEWS

    Trending