Connect with us

LATEST NEWS

ಅರ್ಜುನ್‌ ಸರ್ಜಾ ದೇವಸ್ಥಾನದಲ್ಲಿ ಪೇಜಾವರ ಶ್ರೀ ಪೂಜೆ

Published

on

ಉಡುಪಿ: ಬಹುಭಾಷಾ ನಟ ಅರ್ಜುನ್ ಸರ್ಜಾ ತಮಿಳುನಾಡಿನ ಚೆನ್ನೈನಲ್ಲಿ ರಾಮ ಮತ್ತು ಆಂಜನೇಯನ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ದೇಗುಲದ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕ ಪ್ರಕ್ರಿಯೆಯಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾಗಿಯಾಗಿದ್ದಾರೆ.

ಅಯೋಧ್ಯೆ ಪ್ರವಾಸದಲ್ಲಿದ್ದ ಪೇಜಾವರ ಶ್ರೀಗಳನ್ನು ಅರ್ಜುನ್ ಸರ್ಜಾ ತಮಿಳುನಾಡಿಗೆ ಕರೆಸಿ ದೇವರಿಗೆ ಕುಂಬಾಭಿಷೇಕ ಮಾಡಿಸಿದ್ದಾರೆ. ಎರಡು ದಿನಗಳ ಕಾಲ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ಅವಧೂತ ವಿನಯ್ ಗುರೂಜಿ ಸಹ ಪಾಲ್ಗೊಂಡಿದ್ದರು.

ಪೇಜಾವರ ಸ್ವಾಮೀಜಿ ಭಗವಾನ್ ಆಂಜನೇಯ ದೇವರ ಬೃಹತ್ ವಿಗ್ರಹಕ್ಕೆ ಜೇನು, ತುಪ್ಪ, ಸಕ್ಕರೆ ಹಾಗೂ ಹೂವಿನ ಅಭಿಷೇಕ ಮಾಡಿದರು. ಚೆನ್ನೈನಲ್ಲಿ ಪೇಜಾವರ ಮಠದ ಶಾಖೆ ಇದೆ. ಸರ್ಜಾ ಕುಟುಂಬ ವಿಶ್ವೇಶ ತೀರ್ಥರ ಕಾಲದಿಂದಲೂ ಪೇಜಾವರ ಮಠದ ಜೊತೆ ಸಂಬಂಧ ಹೊಂದಿದೆ.

 

LATEST NEWS

ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

Published

on

ಬೆಂಗಳೂರು : ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ. ಮೃ*ತ ಪ್ರಯಾಣಿಕರ ಕುಟುಂಬಕ್ಕೆ ರೈಲ್ವೇ ಇಲಾಖೆಯೇ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.


ಏನಿದು ಪ್ರಕರಣ ?

ಜಯಮ್ಮ ಎಂಬವರು ರೈಲಿನಿಂದ ಬಿದ್ದು ಇಹಲೋಕ ತ್ಯಜಿಸಿದ್ದರು. ಜಯಮ್ಮ ತನ್ನ ಸಹೋದರಿಯೊಂದಿಗೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಆಕೆ ಕೆಳಗಿಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾ*ಯಗೊಂಡು ಸ್ಥಳದಲ್ಲೇ ಮೃ*ತಪಟ್ಟಿದ್ದರು. ಇದನ್ನು ಪರಿಗಣಿಸಿ ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ನಿರ್ದೇಶಿಸುವಂತೆ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲ ಮನವಿ ಮಾಡಿದರು.

ರೈಲು ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಮೃ*ತಪಟ್ಟ ಜಯಮ್ಮ ಎಂಬವರ ಸಾ*ವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ತೀರ್ಪನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

ರೈಲ್ವೆ ಇಲಾಖೆ ವಾದ ಏನಾಗಿತ್ತು?

ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಹೇಳಿದರೂ ಅದಕ್ಕೆ ಸಾಕ್ಷ್ಯಾಧಾರ ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ತಳ್ಳಿಹಾಕುವಂತೆ ಅರ್ಜಿದಾರರು ವಾದಿಸಿದ್ದರು.

ಮೃ*ತ ಮಹಿಳೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಆಗ ಅವರು ಒಂದೋ ಪ್ರಯಾಣ ಮುಂದುವರಿಸಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವೇ ಅಲಾರ್ಮ್ ಚೈನ್ ಎಳೆಯಬೇಕು. ಅದೆರಡನ್ನೂ ಮಾಡದೆ ರೈಲಿನಿಂದ ಇಳಿಯಲು ಪ್ರಯತ್ನಿಸಿ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ.

ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎನ್ನಲಾಗದು. ಆದ್ದರಿಂದ ರೈಲ್ವೆ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಪ್ರತಿವಾದ ಮಂಡಿಸಿತ್ತು.

ಇದನ್ನೂ ಓದಿ : ಊಟಿಗೆ ಪ್ರಯಾಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಈ ಆದೇಶ ಪಾಲಿಸೋದು ಕಡ್ಡಾಯ!

ಪರಿಹಾರ ಎಷ್ಟು?

ಜಯಮ್ಮ ಸಾ*ವಿಗೆ ರೈಲ್ವೆಯಿಂದ 8 ಲಕ್ಷ ರೂ. ಪರಿಹಾರ ಕೋರಿದ್ದರು. ಆದೇಶದಲ್ಲಿ ಪೀಠವು ಪ್ರತಿವಾದಿಗಳು 4 ಲಕ್ಷ ರೂ. ವಾರ್ಷಿಕ ಶೇ.7 ಬಡ್ಡಿಯೊಂದಿಗೆ ಪಾವತಿಸುವಂತೆ ಹೇಳಿದೆ. ಇದಕ್ಕೆ ತಪ್ಪಿದ್ದಲ್ಲಿ ಪ್ರತಿವಾದಿಗಳು ಅರ್ಜಿದಾರರ ಮನವಿಯಂತೆ 8 ಲಕ್ಷ ರೂ. ಪಾವತಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಘಟನೆ ನಡೆದಿದ್ದು ಹೇಗೆ ?

2014ರ ಫೆ.22 ರಂದು ಜಯಮ್ಮ ತನ್ನ ಸಹೋದರಿ ರತ್ನಮ್ಮ ಅವರೊಂದಿಗೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ಹೋಗಲು ‘ತಿರುಪತಿ ಪ್ಯಾಸೆಂಜರ್’ ರೈಲಿಗಾಗಿ ಕಾಯುತ್ತಿದ್ದರು. ಆಗ ‘ಟುಟಿಕೋರಿನ್ ಎಕ್ಸ್‌ಪ್ರೆಸ್’ ರೈಲು ಬಂದಿದೆ. ಇಬ್ಬರೂ ಆ ರೈಲು ಹತ್ತಿದ್ದರು.

ಆಮೇಲೆ ಅವರಿಗೆ ಗೊತ್ತಾಗಿದೆ, ರೈಲು ಅಶೋಕಪುರಂಗೆ ಹೋಗುವುದಿಲ್ಲ ಎಂಬುದು. ಹಾಗಾಗಿ ರೈಲಿನಿಂದ ಜಯಮ್ಮ ಇಳಿಯಲು ತೊಡಗಿದ್ದಾರೆ. ಆ ವೇಳೆ ರೈಲು ಚಲಿಸಲಾರಂಭಿಸಿತು, ಪರಿಣಾಮ ಸಮತೋಲನ ತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾ*ವಿಗೀಡಾದರು. ಘಟನೆಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃ*ತರ ಕುಟಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

Continue Reading

LATEST NEWS

ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?

Published

on

ಎಲ್ಲರಿಗೂ ಒಂದು ಆಸೆ ಇರುತ್ತೆ. ಯಾವುದೇ ಒತ್ತಡದ ಕೆಲಸ ಇಲ್ಲದೆ ಆರಾಮದ ಕೆಲಸ ಸಿಗಬೇಕು. ಕುಳಿತಲ್ಲೇ ಹಣ ಗಳಿಸಬೇಕು ಅನ್ನುವ ಆಸೆ. ಆದರೆ ಅದೆಲ್ಲಾ ವಾಸ್ತವದಲ್ಲಿ ಕಷ್ಟನೇ ಸರಿ. ಆದ್ರೆ ಇಲ್ಲೊಂದು ಮಹಿಳೆ ಕೇವಲ ತನ್ನ ಕೈ ಬೆರಳಗಳನ್ನು ತೋರಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರಂತೆ. ಹೌದು, ಅಮೆರಿಕಾದಲ್ಲಿರುವ 37 ವರ್ಷದ ಈ ಮಹಿಳೆ ಕೇವಲ ಕೈ ಬೆರಳುಗಳನ್ನು ತೋರಿಸಿ ವರ್ಷಕ್ಕೆ 25ಲಕ್ಷ ರೂ. ಗಳಿಸುತ್ತಾರಂತೆ.

alexandra

 

ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಅಮೆರಕಾದ ನ್ಯಾಯಾರ್ಕ್‌ನಲ್ಲಿ ವಾಸವಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆ ವೃತ್ತಿಯಲ್ಲಿ ‘ಹ್ಯಾಂಡ ಮಾಡೆಲ್’ ಆಗಿದ್ದಾರೆ. ಹಾಗಾಗಿ ತನ್ನ ಮುಖ ಸೌಂದರ್ಯ ತೋರಿಸದೆ ಬರೀಕೈ ಗಳಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಪ್ರತಿಷ್ಠಿತ ಕಂಪೆನಿಗಳ ಆ್ಯಡ್‌ಗಳಲ್ಲಿ ತಮ್ಮ ಕೈ ಚಳಕ ತೋರಿಸುತ್ತಾರೆ. ಉಗುರಿಗೆ ಹಾಕುವ ನೇಯಿಲ್ ಫಾಲಿಶ್, ಕಾಫಿ ಯನ್ನು ಪಕ್‌ಗೆ ಸುರಿಯುವುದು, ಹಿಟ್ಟನ್ನು ಬೆರೆಸುವವುದು, ಪರ್ಫ್ಯೂಮ್‌ಗಳನ್ನು ತನ್ನ ಮಾದಕ ಕೈ ಬೆರಳುಗಳಿಂದ ಹಿಡಿದು ಹೀಗೆ ಅನೇಕ ಜಾಹಿರಾತುಗಳ ಶೂಟ್‌ನಲ್ಲಿ ಭಾಗವಹಿಸುತ್ತಾರೆ.

add2

 

ಅಲೆಕ್ಸಾಂಡ್ರಾ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸ್ನೇಹಿತರ ಜೊತೆ ಹಂಚಿಕೊಂಡಾಗ ಎಲ್ಲರೂ ಒಮ್ಮೆ ಅಚ್ಚರಿಗೊಳಗಾಗಿದ್ದರಂತೆ. ಕೈ ತೋರಿಸಿದಕ್ಕೆ ಲಕ್ಷ ಗಟ್ಟಲೆ ಹಣ ಕೊಡುತ್ತಾರೆ ಎಂದರೆ ನಂಬಲು ಸಾದ್ಯವಿಲ್ಲ ಎಂದು ಹೇಳಿದ್ದರಂತೆ. 2019 ರಲ್ಲಿ ಮಾಡಲಿಂಗ್ ಆರಂಭಿಸಿದ್ದು YSL, ಮೈಕ್ರೋಸಾಫ್ಟ್, ಬ್ರಾಂಡನ್ ಬ್ಲಾಕ್‌ವುಡ್, ಕಿಸ್ ನೈಲ್ಸ್, ಸೆರೆನಾ ವಿಲಿಯಮ್ಸ್ ಜ್ಯುವೆಲರಿಯಂತಹ ಬ್ರಾಂಡ್‌ಗಳಿಂಗೆ ಹ್ಯಾಂಡ್ ಮಾಡಲಿಂಗ್ ಮಾಡುತ್ತಿದ್ದಾರೆ.

ಮುಂದೆ ಓದಿ..;ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ವಾರ್ಷಿಕ ಆದಾಯ 25 ಲಕ್ಷ ರೂ…!

add

ಇವರು ಈ ಮಾಡಲಿಂಗ್ ಕ್ಷೇತ್ರಕ್ಕೆ ಕೇವಲ 10 ನಿಮಿಷಗಳಲ್ಲಿ ಆಯ್ಕೆ ಅಗಿದ್ದಾರಂತೆ. ಅವರ ಕೈಗಳ ಆಕಾರ, ಬಣ್ಣ, ನಯವಾದ ಉಗುರುಗಳಿಂದಾಗಿ ಈ ಕೆಲಸವನ್ನು ಪಡೆದುಕೊಂಡಿದ್ದಾರಂತೆ. ಅವರ ಕೈ ಗಳು ಪುಟ್ಟದಾಗಿದ್ದು ಇದು ಅವರ ಕೆಲಸಕ್ಕೆ ಸಹಾಯವಾಗಿದೆಯಂತೆ. ಐಟಮ್‌ಗಳನ್ನು ಕೈಯಲ್ಲಿ ಹಿಡಿದಾಗ ಬ್ರ್ಯಾಂಡ್‌ಗಳು ದೊಡ್ಡದಾಗಿ ಕಾಣುತ್ತದೆ ಎಂದು ಹೇಳುತ್ತಾರೆ ಬೆರೊಕಲ್. ಇನ್ನು ಮನೆಯಲ್ಲಿ ಕೆಲಸಗಳನ್ನು ಮಾಡುವಾಗ ಕೈಗೆ ಗ್ಲೌಸ್‌ಗಳನ್ನು ಧರಿಸುತ್ತಾರೆಂತೆ. ಕೈ ತೊಳೆದ ಕೂಡಲೇ ಲೋಷನ್‌ಗಳಿಂದ ಮಸಾಜ್ ಮಾಡ್ತಾರಂತೆ. ಇನ್ನು ಈ ಕೆಲಸಕ್ಕೆ ಇವರು ಪಡೆಯುವ ಸಂಭಾವನೆ ಬರೋಬ್ಬರಿ 25 ಲಕ್ಷ ರೂ. ಹೌದು ವಾರ್ಷಿಕವಾಗಿ 25 ಲಕ್ಷ ಪಡೆದರೆ ಮಾಸಿಕವಾಗಿ 2 ಲಕ್ಷ ರೂ. ಸಂಪಾದನೆ ಮಾಡುತ್ತಾರಂತೆ.

 

 

Continue Reading

LATEST NEWS

ಊಟಿಗೆ ಪ್ರಯಾಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಈ ಆದೇಶ ಪಾಲಿಸೋದು ಕಡ್ಡಾಯ!

Published

on

ಮಂಗಳೂರು / ಚೆನ್ನೈ : ಮಕ್ಕಳಿಗೆ ರಜೆ ಇದೆ ಈ ಬೇಸಿಗೆ ರಜೆಗೆ ಎಲ್ಲಾದರೂ ಸುತ್ತಾಡೋಣ ಅನ್ನೋ ಯೋಚನೆ ಬರುವುದು ಸಾಮಾನ್ಯ. ಬಿಸಿಲಿನ ತಾಪದಿಂದ ತಂಪಾಗಲು ಊಟಿ, ಕೊಡೈಕನಾಲ್ ನತ್ತ ಪಯಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದರೆ ಅಲ್ಲಿಗೆ ಭೇಟಿ ನೀಡಲು ಹೊಸ ನಿಯಮ ಜಾರಿ ಆಗಿದೆ.

ಹೌದು, ಜಿಲ್ಲಾಡಳಿತ ಹೊಸ ಕ್ರಮ ಕೈಗೊಂಡಿದೆ. ಇಲ್ಲಿಗೆ ಭೇಟಿ ನೀಡಲು ಇ – ಪಾಸ್ ಕಡ್ಡಾಯ ಎಂದು ಆದೇಶಿಸಿದೆ. ಪ್ರಸ್ತುತ ಇರುವ ವಿವಿಧ ವಾಹನಗಳು ಮತ್ತು ಬೇಸಿಗೆಯ ತಿಂಗಳುಗಳಲ್ಲಿ ಈ ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಗೆ ಸಂಬಂಧಿಸಿದಂತೆ ಡೇಟಾ ಸಂಗ್ರಹಿಸಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.


ಹೈಕೋರ್ಟ್ ಆದೇಶ :

ಮೇ 7 ಮತ್ತು ಜೂನ್ 30 ರ ನಡುವೆ ನೀಲಗಿರಿ ಮತ್ತು ಕೊಡೈಕೆನಾಲ್‌ಗೆ ಪ್ರವೇಶಿಸಲು ಬಯಸುವ ಎಲ್ಲಾ ಮೋಟಾರು ವಾಹನಗಳು ಎಲೆಕ್ಟ್ರಾನಿಕ್ ಪಾಸ್‌ಗಳನ್ನು (ಇ-ಪಾಸ್‌ಗಳು) ಪಡೆಯಬೇಕು. ಎರಡು ಗಿರಿಧಾಮಗಳಿಗೆ ಪ್ರವೇಶಿಸುವ ವಾಹನಗಳ ಸಂಖ್ಯೆ ಸೇರಿ ಎಲ್ಲಾ ಡೇಟಾವನ್ನು ಸಂಗ್ರಹ ಮಾಡಲು ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿದೆ.

ಮೇ 7 ರಿಂದ ಜೂನ್ 30 ರವರೆಗೆ ಊಟಿ ಮತ್ತು ಕೊಡೈಕೆನಾಲ್‌ಗೆ ಭೇಟಿ ನೀಡುವ ಪ್ರವಾಸಿಗರು ಕಡ್ಡಾಯವಾಗಿ ಇ-ಪಾಸ್ ಪಡೆಯಬೇಕು ಎಂದು ನ್ಯಾಯಮೂರ್ತಿಗಳಾದ ಎನ್.ಸತೀಶ್ ಕುಮಾರ್ ಮತ್ತು ಡಿ.ಭರತ ಚಕ್ರವರ್ತಿ ಅವರನ್ನೊಳಗೊಂಡ ವಿಶೇಷ ವಿಭಾಗೀಯ ಪೀಠ ಆದೇಶಿಸಿದೆ.

ಇದರ ಜೊತೆಗೆ ವಿಶೇಷ ವಿಭಾಗೀಯ ಪೀಠವು ನೀಲಗಿರಿ ಮತ್ತು ದಿಂಡುಗಲ್ ಕಲೆಕ್ಟರೇಟ್‌ಗಳಿಂದ ಇ-ಪಾಸ್‌ಗಳ ವಿತರಣೆಗೆ ಯಾವುದೇ ಮಿತಿಯಿಲ್ಲ ಎಂದು ಹೇಳಿದೆ. ಅಲ್ಲದೇ, ಈ ಪಾಸ್‌ಗಳನ್ನು ಪಡೆದುಕೊಳ್ಳುವುದರಿಂದ ಸ್ಥಳೀಯ ನಿವಾಸಿಗಳಿಗೆ ವಿನಾಯಿತಿ ನೀಡಲಾಗಿದೆ. ಇ-ಪಾಸ್ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ.
ಇಬ್ಬರು ಜಿಲ್ಲಾಧಿಕಾರಿಗಳು ಮಾಹಿತಿ ತಂತ್ರಜ್ಞಾನ ಇಲಾಖೆಯ ಜೊತೆಗೆ ಇ-ಪಾಸ್ ವ್ಯವಸ್ಥೆಯಲ್ಲಿ ಪಾವತಿ ಗೇಟ್‌ವೇ ಅನ್ನು ತರುವ ಬಗ್ಗೆ ಚರ್ಚೆ ಮಾಡಲು ನ್ಯಾಯಾಧೀಶರು ತಿಳಿಸಿದ್ದಾರೆ.

ಇದನ್ನೂ ಓದು : ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ಯಾಕೆ ಈ ನಿರ್ಧಾರ ?

ಇದು ಅರ್ಜಿದಾರರಿಗೆ ಆನ್‌ಲೈನ್‌ನಲ್ಲಿ ಟೋಲ್ ಶುಲ್ಕವನ್ನು ಪಾವತಿಸಲು, ಚೆಕ್‌ಪೋಸ್ಟ್‌ಗಳ ಬಳಿ ದಟ್ಟಣೆಯನ್ನು ಕಡಿಮೆ ಮಾಡಲು, ಇಂಧನವನ್ನು ಉಳಿಸಲು ಮತ್ತು ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ಅನುವು ಮಾಡಿಕೊಡುತ್ತದೆ. ಈ ಹಿಂದೆ, ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕುವ ಹೈಕೋರ್ಟ್‌ನ ಚಿಂತನೆಗೆ ಪ್ರತಿಕ್ರಿಯೆಯಾಗಿ ನೀಲಗಿರಿ ಮತ್ತು ದಿಂಡುಗಲ್ ಜಿಲ್ಲಾಧಿಕಾರಿಗಳು ವಾಹನ ಸಂಚಾರವನ್ನು ನಿರ್ಬಂಧಿಸಲು ಪ್ರಸ್ತಾಪಿಸಿದರು. ಪೀಕ್ ಸೀಸನ್‌ಗಳಲ್ಲಿ, ವಾಹನಗಳ ಒಳಹರಿವು ದಿನಕ್ಕೆ 2,000 ರಿಂದ 20,000 ಕ್ಕೆ ಏರುತ್ತದೆ, ಇದು ದಟ್ಟಣೆ ಮತ್ತು ಪರಿಸರ ಹಾನಿಗೆ ಕಾರಣವಾಗುತ್ತದೆ.

ಈ ವಿಷಯವನ್ನು ಅಂಗೀಕರಿಸಿದ ನ್ಯಾಯಮೂರ್ತಿಗಳ ವಿಶೇಷ ವಿಭಾಗೀಯ ಪೀಠವು ಈ ವಿಷಯದ ಬಗ್ಗೆ ಚರ್ಚಿಸಿತು. ಘಾಟ್ ರಸ್ತೆಗಳ ಮೇಲಿನ ಒತ್ತಡ ಮತ್ತು ಬೇಸಿಗೆಯಲ್ಲಿ ಅತಿಯಾದ ಪ್ರವಾಸಿ ಚಟುವಟಿಕೆಯಿಂದ ಉಂಟಾಗುವ ಪರಿಸರ ನಾಶವನ್ನು ವಕೀಲರು ಎತ್ತಿ ತೋರಿಸಿದ್ದರು.

ಒಂಭತ್ತು ಚೆಕ್ ಪೋಸ್ಟ್‌ಗಳ ಮೂಲಕ ಪ್ರತಿದಿನ ಸರಿಸುಮಾರು 20 ಸಾವಿರ ವಾಹನಗಳು ಅಂದರೆ 11,500 ಕಾರುಗಳು, 1,300 ವ್ಯಾನ್‌ಗಳು, 600 ಬಸ್‌ಗಳು ಮತ್ತು 6,500 ಬೈಕುಗಳು ನೀಲಗಿರಿ ಪ್ರವೇಶಿಸುತ್ತವೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿದೆ.

Continue Reading

LATEST NEWS

Trending