Connect with us

LATEST NEWS

ಇದು ಡಿವೋರ್ಸ್‌ ಟೆಂಪಲ್ ಅಂತೆ! ಮಹಿಳೆಯರಿಗೆ ಸಿಗುತ್ತೆ ವಿಚ್ಛೇದನ

Published

on

ಮಂಗಳೂರು : ಈ ಜಗತ್ತಿನಲ್ಲಿ ಅನೇಕ ರೀತಿಯ ದೇವಸ್ಥಾನಗಳಿವೆ. ಕೆಲವು ದೇಗುಲ ದರ್ಶನ ಮಾಡಿದಾಗ ಮಾತ್ರ ಆ ದೇವಾಲಯದ ವಿಶೇಷತೆ ತಿಳಿಯುವುದು. ಅಂತಹ ಒಂದು ದೇವಸ್ಥಾನಗಳಲ್ಲಿ ಇದೂ ಒಂದು. ಈ ದೇವಾಲಯದ ಇತಿಹಾಸ ಸುಮಾರು 600 ವರ್ಷಗಳಷ್ಟು ಹಳೆಯದು. ಈ ದೇವಾಲಯ ಜಪಾನ್‌ನ ಕಾಮಕುರಾ ನಗರದಲ್ಲಿದೆ. ಈ ದೇವಸ್ಥಾನ ಕೌಟುಂಬಿಕ ಕಲಹಕ್ಕೆ ಒಳಗಾದ ಮಹಿಳೆಯರಿಗೆ ನ್ಯಾಯ ಒದಗಿಸುವ ಸ್ಥಳವಾಗಿದೆ.

ಶತಮಾನಗಳ ಹಿಂದೆ ಮಹಿಳೆಯರು ತನಗೆ ಇಷ್ಟ ಇಲ್ಲದ ಪತಿಯಿಂದ ದೂರವಾಗಲು ಈ ದೇವಾಲಯಕ್ಕೆ ಬರುತ್ತಿದ್ದರು. ಜಪಾನ್‌ನಲ್ಲಿರುವ ಈ ದೇವಾಲಯದ ಹೆಸರು ಮಾಟ್ಸುಗೋಕಾ ಟೋಕಿ-ಜಿ.

ಮಹಿಳೆಯರಿಗಾಗಿ ಇದೆ ಈ ದೇವಾಲಯ :

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಈ ದೇವಾಲಯವನ್ನು ಜಪಾನಿನ ಕಾಮಕುರ ಯುಗದಲ್ಲಿ ಕಕುಸನ್-ನಿ ಎಂಬ ಸನ್ಯಾಸಿ ನಿರ್ಮಿಸಿದರು. ಆಕೆ ತನ್ನ ಗಂಡನೊಂದಿಗೆ ಎಂದಿಗೂ ಸಂತೋಷದಿಂದ ಬದುಕಲಿಲ್ಲ. 1285 ರಲ್ಲಿ, ಬೌದ್ಧ ಸನ್ಯಾಸಿನಿ ಕಾಕುಸನ್ ಶಿದ್-ನಿ ಕಾಮಕುರಾ ನಗರದಲ್ಲಿ ಮತ್ಸುಗಾವೊಕಾ ಟೋಕಿಜಿ ದೇವಾಲಯವನ್ನು ನಿರ್ಮಿಸಿದರು.

ಪತಿಯ ದಬ್ಬಾಳಿಕೆಯಿಂದ ಸಂರಕ್ಷಣೆ ಪಡೆಯಲು ಈ ದೇವಾಲಯ ಮಹಿಳೆಯರಿಗೆ ರಕ್ಷಾ ಕವಚದಂತೆ ಆಶ್ರಯ ನೀಡಿತು. ಈ ದೇವಾಲಯವನ್ನು ‘ವಿಚ್ಛೇದನ ದೇವಾಲಯ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದ್ದು, ಮಾತ್ಸುಗೋಕಾ ಟೋಕಿಜಿ ದೇವಾಲಯವು ಡಿವೋರ್ಸ್‌ ಆದ ಮಹಿಳೆಯರಿಗೆ ಆಶ್ರಯತಾಣವಾಗಿ ಪ್ರಸಿದ್ಧಿ ಪಡೆಯಿತು.

ದಿನ ಕಳೆದಂತೆ ಈ ದೇವಾಲಯ ತಮ್ಮ ಸಂಗಾತಿಯನ್ನು ಶಾಶ್ವತವಾಗಿ ತೊರೆಯಲು ಬಯಸುವ ಮಹಿಳೆಯರಿಗಾಗಿ ಅಧಿಕೃತ ವಿಚ್ಛೇದನ ಪ್ರಮಾಣಪತ್ರಗಳನ್ನು ಒದಗಿಸಲು ಕಾರ್ಯಾಚರಣೆಯನ್ನು ನಡೆಸಲು ಪ್ರಾರಂಭಿಸಿತು. ಈ ರೀತಿಯ ವಿಚ್ಛೇದನ ಪತ್ರಕ್ಕೆ ಟ್ಸುಯಿಫುಕು-ಜಿ ಎಂದು ಕರೆಯಲಾಗುತ್ತಿತ್ತು. ಪ್ರಮಾಣಪತ್ರವು ಈ ಮಹಿಳೆಯರಿಗೆ ತಮ್ಮ ಗಂಡನಿಂದ ಕಾನೂನುಬದ್ಧವಾದ ಪ್ರತ್ಯೇಕತೆಯನ್ನು ಪಡೆಯಲು ಸಹಾಯ ಮಾಡಿತು.

ಸಸಿ ನೆಟ್ಟರೆ ವಿಚ್ಛೇದನ ಸಿಗುತ್ತದೆ :

1902ರ ವರೆಗೆ ದೇವಾಲಯಕ್ಕೆ ಪುರುಷರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆದರೆ 1902ರಲ್ಲಿ ಎಂಗಾಕು-ಜಿ ಈ ದೇವಾಲಯದ ಉಸ್ತುವಾರಿ ವಹಿಸಿಕೊಂಡಾಗ, ಅವರು ದೇವಾಲಯದ ನಿರ್ವಹಣೆಗೆ ಪುರುಷ ಮಠಾಧೀಶರನ್ನು ನೇಮಿಸಿದರು. ಆ ನಂತರ ಈ ದೇವಸ್ಥಾನದಲ್ಲಿ ಸಸಿ ನೆಟ್ಟರೆ ವಿಚ್ಛೇದನ ಸಿಗುತ್ತದೆ ಎಂದು ಸ್ಥಳೀಯರು ನಂಬಿದ್ದರು. ಇದರಿಂದಾಗಿ ವಿಚ್ಛೇದನ ಪಡೆಯಲು ಬಯಸುವ ಅನೇಕರು ಇಲ್ಲಿ ಬರುತ್ತಿದ್ದರಂತೆ.

LATEST NEWS

ಕಟ್ಟಡದ ಬೆಂಕಿ ನಂದಿಸುವಾಗ ನೀರು ಖಾಲಿ; ಅಗ್ನಿಗೆ ಆಹುತಿಯಾದ ಅಗ್ನಿಶಾಮಕ ಸಿಬ್ಬಂದಿ

Published

on

ಬಿಹಾರ : ಸಾಮಾನ್ಯವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯಿಂದ ಜನರನ್ನು ರಕ್ಷಿಸುತ್ತಾರೆ. ಬೆಂಕಿ ಅನಾಹುತಗಳು ಇನ್ನಷ್ಟು ಬಿಗಡಾಯಿಸದಂತೆ ಎಚ್ಚರ ವಹಿಸುತ್ತಾರೆ. ಆದ್ರೆ, ಇಲ್ಲಿ ಆಗಿದ್ದು ಬೇರೆ. ಹೌದು,  ಮನೆಯೊಂದರಲ್ಲಿ ಅಗ್ನಿ ಅವಘ*ಡ ಸಂಭವಿಸಿತ್ತು. ಇಡೀ ಮನೆಯನ್ನು ಆವರಿಸುತ್ತಿದ್ದ ಬೆಂಕಿಯನ್ನು ನಂದಿಸುವ ಸಲುವಾಗಿ ಅಗ್ನಿಶಾಮಕ ದಳ ಕಾರ್ಯಪ್ರವೃತ್ತವಾಗಿತ್ತು. ಆಗ ಏಕಾಏಕಿ ಅಗ್ನಿಶಾಮಕ ವಾಹನದಲ್ಲಿದ್ದ ನೀರು ಖಾಲಿಯಾಗಿದೆ. ಪರಿಣಾಮ ಬೆಂ*ಕಿ ನಂದಿಸಲು ತೆರಳಿದ್ದ ಅಧಿಕಾರಿ ಅಗ್ನಿಯಲ್ಲಿ ಬೆಂದು ಹೋದ ಘಟನೆ ನಡೆದಿದೆ. ಈ ದುರಂ*ತ ಸಂಭವಿಸಿದ್ದು ಬಿಹಾರದ ಸಿವಾನ್​ನಲ್ಲಿ.


ಭಾಗಲ್ಪುರ ನಿವಾಸಿ ರವಿಕಾಂತ್ ಮಂಡಲ್ (40) ಮೃ*ತ ಅಗ್ನಿಶಾಮಕ ದಳದ ಸಿಬ್ಬಂದಿ. ಮನೆಯಲ್ಲಿದ್ದ ಯಂತ್ರಕ್ಕೆ ಬೆಂ*ಕಿ ತಗುಲಿ ಸ್ವಲ್ಪ ಸಮಯದಲ್ಲೇ ಮನೆಯೆಲ್ಲಾ ವ್ಯಾಪಿಸಿದೆ. ರವಿಕಾಂತ್ ಮನೆಯ ಮೇಲ್ಛಾವಣಿಯ ಮೇಲೆ ಹತ್ತಿ ಬೆಂ*ಕಿ ನಂದಿಸಲು ಆರಂಭಿಸಿದ್ದರು. ಭಾರೀ ಬೆಂ*ಕಿಯಿಂದಾಗಿ ಛಾವಣಿ ಕುಸಿದಿದೆ. ರವಿಕಾಂತನಿಗೆ ಪ್ರಜ್ಞೆ ಬರುವಷ್ಟರಲ್ಲಿ ಅವರೂ ಉರಿಯುವ ಬೆಂಕಿಗೆ ಬಿದ್ದಿದ್ದರು. ಪರಿಣಾಮ ಅವರು ಬೆಂಕಿಗೆ ಆಹುತಿಯಾದರು.

ನೀರು ಖಾಲಿ…ಸಿಬ್ಬಂದಿ ಪ್ರಾ*ಣ ಹೋಯ್ತು :

ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸುತ್ತಿತ್ತು. ಇದ್ದಕ್ಕಿದ್ದಂತೆ ಅಗ್ನಿಶಾಮಕ ವಾಹನದಲ್ಲಿ ನೀರು ಖಾಲಿಯಾಯಿತು. ಈ ವೇಳೆ ಬೆಂಕಿಯ ಕೆನ್ನಾಲೆಗೆ ಸಿಲುಕಿದ ರವಿಕಾಂತ್ ರನ್ನು ರಕ್ಷಿಸಲಾಗಿಲ್ಲ. ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಕೊ*ಲೆ; ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಯುವತಿಯ ಹ*ತ್ಯೆಗೈದ ಪಾಪಿ!

ಇದರಿಂದ ಲಕ್ಷಾಂತರ ಮೌಲ್ಯದ ಆಸ್ತಿ ಸುಟ್ಟು ಭಸ್ಮವಾಗಿದೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮವಹಿಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ.

Continue Reading

DAKSHINA KANNADA

ಒಂದು ರೇಷ್ಮೆ ಸೀರೆ ತಯಾರಿಸಲು ಎಷ್ಟು ರೇಷ್ಮೆ ಹುಳುಗಳು ಬೇಕು ಗೊತ್ತೇ..?

Published

on

ಮಂಗಳೂರು: ಹೆಣ್ಮಕ್ಕಳಿಗೆ ರೇಷ್ಮೆ ಸೀರೆ ಅಂದರೆ ಭಾರೀ ಇಷ್ಟ. ಯಾವೂದೇ ಒಂದು ಶುಭ ಕಾರ್ಯಕ್ರಮಕ್ಕೆ ಹೋಗಬೇಕಾದರೆ ಹೆಣ್ಮಕ್ಕಳಿಗೆ ರೇಷ್ಮೆ ಸಾರಿ ಬೇಕೇ ಬೇಕು. ಅಮ್ಮನ ರೇಷ್ಮೆ ಸೀರೆಯನ್ನು ಕಂಡರಂತೂ ಎಲ್ಲಿಲ್ಲದ ಪ್ರೀತಿ. ರೇಷ್ಮೆ ಸೀರೆಯ ಬೆಲೆ ಜಾಸ್ತಿ ಆದರೂ ಹಣ ಹೊಂದಿಸಿಕೊಂಡು ಹೋಗಿ ಅದನ್ನು ಖರೀದಿ ಮಾಡುತ್ತಾರೆ. ಹಬ್ಬ, ಹರಿದಿನ, ಪೂಜೆ, ದೇವಸ್ಥಾನ, ಮದುವೆ ಹೀಗೆ ಯಾವೂದೇ ಸಮಾರಂಭಕ್ಕೆ ರೇಷ್ಮೆ ಸೀರೆ ಬೇಕೇ ಬೇಕು.

ಸಾಮಾನ್ಯವಾಗಿ ಮಹಿಳೆಯರ ರೇಷ್ಮೆ ಸೀರೆ ತುಂಬಾನೇ ದುಬಾರಿ ಇರುತ್ತೆ. ಯಾಕೆಂದರೆ ಇದನ್ನು ತಯಾರಿಸುವುದು ಅಷ್ಟು ಸುಲಭದ ಕೆಲಸವಲ್ಲ. ನಯವಾದ, ಮೃದುವಾದ ಸೀರೆಯನ್ನು ತಯಾರಿಸಬೇಕೆಂದರೆ ಬಹಳಷ್ಟು ಕಷ್ಟ ಪಡಬೇಕಾಗುತ್ತದೆ. ಈ ರೇಷ್ಮೆ ಸೀರೆಯನ್ನು ಹೇಗೆ ತಯಾರಿಸುತ್ತಾರೆ ಎನ್ನುವುದನ್ನು ತಿಳಿಯೋಣ.

ರೇಷ್ಮೆ ಸೀರೆ ತಯಾರಿಸುವುದು ಹೇಗೆ ?

ರೇಷ್ಮೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ. ಪ್ರತಿಯೊಬ್ಬ ಹೆಂಗಳೆಯರ ಬಳಿ ಒಂದಾದರೂ ರೇಷ್ಮೆ ಸೀರೆ ಇದ್ದೇ ಇರುತ್ತದೆ. ಒಂದು ವೇಳೆ ಇಲ್ಲದಿದ್ದರೆ ಖರೀದಿಸಲೇ ಬೇಕು ಎನ್ನುವ ಆಸೆ ಇದ್ದೇ ಇರುತ್ತದೆ.

ರೇಷ್ಮೆ ಸೀರೆಯನ್ನು ತಯಾರಿಸುವುದು ರೇಷ್ಮೆ ನೂಲಿನಿಂದ. ಒಂದು ಹೆಣ್ಣು ಹುಳು ಒಮ್ಮೆಗೆ 300-500 ಮೊಟ್ಟೆಗಳನ್ನು ಇಡುತ್ತದೆ. ಈ ಎಲ್ಲಾ ಮೊಟ್ಟೆಗಳನ್ನು ಒಂದೇ ಸ್ಥಳದಲ್ಲಿ ಇರಿಸಬೇಕಾಗುತ್ತದೆ. ಇದರಿಂದ ಲಾರ್ವಾಗಳು ಹೊರಹೊಮ್ಮುತ್ತವೆ. ಅದರ ಸಹಾಯದಿಂದ ರೇಷ್ಮೆ ನೂಲು ತಯಾರಿಸಿ ಸೀರೆ ಮಾಡಲಾಗುತ್ತದೆ.

ಮೊದಲಿಗೆ ರೇಷ್ಮೆ ಹುಳುವಿನ ಕೃಷಿ ಮಾಡಬೇಕು. ಈ ಕೃಷಿಗೆ ತುಂಬಾ ಕಷ್ಟಪಡಬೇಕಾಗುತ್ತದೆ. ಪರಿಶ್ರಮ ಹಾಕಿದರೆ ಇದು ಬಂಗಾರದ ಕೃಷಿ. ಇನ್ನು ಪ್ರತಿಯೊಂದು ರೇಷ್ಮೆ ಹುಳುವನ್ನು ಕೈಯಿಂದಲೇ ತೆಗೆದು ಅವುಗಳನ್ನು ಸಣ್ಣ ವಿಭಾಗಗಳಲ್ಲಿ ಚಂದ್ರಿಕೆಯಲ್ಲಿ ಇರಿಸಲಾಗುತ್ತದೆ. ಬಳಿಕ ಅವುಗಳ ಮೇಲೆ ಮಲ್ಬೆರಿ ಎಲೆಗಳನ್ನು ಹೊಂದಿಸಲಾಗುತ್ತೆ. ರೇಷ್ಮೆ ಹುಳುಗಳು ಈ ಎಲೆಗಳನ್ನು ತಿನ್ನುತ್ತವೆ. ಆಹಾರ ಸೇವನೆ ನಿಂತಾಗ, ಅವು ನೂಲನ್ನು ಬಿಡಲು ಆರಂಭಿಸುತ್ತದೆ.

ಈ ಸಂಪೂರ್ಣ ಪ್ರಕ್ರಿಯೆಯು 3ರಿಂದ 8 ದಿನಗಳನ್ನು ತೆಗೆದುಕೊಳ್ಳುತ್ತದೆ. ರೇಷ್ಮೆ ಹುಳು 100 ಮೀಟರ್ ಉದ್ದದ ರೇಷ್ಮೆಯ ಒಂದೇ ದಾರವನ್ನು ಮಾಡುತ್ತದೆ. ಈ ದಾರವು ಅವುಗಳ ಪಕ್ಕದಲ್ಲಿರುವ ನೈಸರ್ಗಿಕ ಅಂಟಿಗೆ ಅಂಟಿಕೊಂಡಿರುತ್ತದೆ. ಅರ್ಧ ಕಿಲೋ ರೇಷ್ಮೆ ಮಾಡಲು 2600 ರಿಂದ 3000 ರೇಷ್ಮೆ ಹುಳುಗಳ ಪರಿಶ್ರಮ ಇರುತ್ತದೆ. ಒಂದು ಸುಂದರವಾದ ಸೀರೆ ತಯಾರಾಗಲು ಸುಮಾರು 1700-2500 ರೇಷ್ಮೆ ಹುಳುಗಳು ಸಾಯುತ್ತವೆ.

ರೇಷ್ಮೆಗೆ ಬಣ್ಣ ಹಾಕೋದು ಹೇಗೆ?

ದಾರವನ್ನು ಬ್ಲೀಚಿಂಗ್ ಮಾಡಿದ ನಂತರ ಒಣಗಿಸಿ ನಂತರ ರೇಷ್ಮೆಗೆ ಬಣ್ಣ ಹಾಕಲಾಗುತ್ತೆ. ರೇಷ್ಮೆ ಗುಣಮಟ್ಟದ ಮೇಲೆ ಪರಿಣಾಮ ಬೀರದಂತೆ ಬಣ್ಣವನ್ನು ಸಹ ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಹಲವಾರು ದಿನಗಳವರೆಗೆ ಪದೇ ಪದೇ ಬಣ್ಣ ಹಾಕಿ ಒಣಗಿಸಲಾಗುತ್ತೆ.

ಸೀರೆ ಹೇಗೆ ತಯಾರಿಸಲಾಗುತ್ತದೆ?

ಕೊನೆಗೆ ದಾರ ಸಿದ್ದವಾದ ಬಳಿಕ ಆ ಎಳೆಗಳು ಮಗ್ಗಕ್ಕೆ ಹೋಗುತ್ತವೆ. ಪವರ್ ಲೂಮ್ ಮತ್ತು ಹ್ಯಾಂಡ್ ಲೂಮ್‌ನಲ್ಲಿ ರೇಷ್ಮೆ ಸೀರೆಗಳನ್ನು ತಯಾರಿಸಬಹುದು. ಈ ಎಳೆಗಳನ್ನು ಸ್ಥಿರ ಮಾದರಿಯಲ್ಲಿ ನೇಯಲಾಗುತ್ತದೆ. ಈ ಪ್ರಕ್ರಿಯೆಯಿಂದ ಬಟ್ಟೆಯನ್ನು ತಯಾರಿಸಲಾಗುತ್ತದೆ. ಒಂದು ಸೀರೆಯನ್ನು ತಯಾರಿಸಲು 4-5 ದಿನಗಳಿಂದ 2-3 ತಿಂಗಳವರೆಗೆ ತೆಗೆದುಕೊಳ್ಳುತ್ತದೆ.

 

ಸಿಲ್ಕ್ ಮಾರ್ಕ್ ನೋಡಿ ರೇಷ್ಮೆ ಸೀರೆ ಖರೀದಿಸಿ

ನಾವು ಚಿನ್ನ ಖರೀದಿಸುವಾಗ ಹಾಲ್‌ಮಾರ್ಕ್ ನೋಡಿ ಖರೀದಿಸುತ್ತೇವೆ. ಅದೇ ರೀತಿ ರೇಷ್ಮೆ ಸೀರೆ ಖರೀದಿಸುವಾಗ ಸಿಲ್ಕ್ ಮಾರ್ಕ್ ನೋಡುವುದು ಕೂಡ ಮುಖ್ಯ. ಈ ಬಗ್ಗೆ ಹಲವಾರು ವರ್ಷಗಳಿಂದ ಸಿಲ್ಕ್ ಮಾರ್ಕ್ ಆರ್ಗನೈಜೇಷನ್ ಆಫ್ ಇಂಡಿಯಾ ಜಾಗೃತಿ ಮೂಡಿಸುತ್ತಾ ಬಂದಿದೆ.

Continue Reading

LATEST NEWS

WATCH VIDEO : ಫ್ರೀ ಬಸ್‌ನಲ್ಲಿ ಮಹಿಳೆಯರ ‘ಶಕ್ತಿ’ ಪ್ರದರ್ಶನ…ರಣರಂಗವಾದ ಬಸ್‌..!

Published

on

ಬೀದರ್ : ಫ್ರೀ…ಫ್ರೀ…ಫ್ರೀ…ರಾಜ್ಯ ಸರ್ಕಾರದ ಫ್ರೀ ಯೋಜನೆಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ಉಚಿತ ಪ್ರಯಾಣವೂ ಒಂದು. ಹೀಗಾಗಿ ಕೆ ಎಸ್ ಆರ್ ಟಿಸಿ ಬಸ್ ನಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿ ಕಾಣಬಹುದು. ಬಸ್ ನಲ್ಲಿ ಮಹಿಳೆಯರಿಂದ ಸೀಟ್ ಭರ್ತಿ ಆಗಿರುತ್ತದೆ. ಸೀಟ್ ಗಾಗಿ ಜಗಳ ಮಾಮೂಲಿ. ಆದ್ರೆ, ಇಲ್ಲಿ ಜಗಳ ಮಾತ್ರವಲ್ಲ, ಹೊಡೆದಾಟ ನಡೆದಿದೆ. ಹಾಗಂತ ಕೈನಲ್ಲಿ ಹೊಡೆದಾಡಿಕೊಂಡಿದ್ದು, ಮಾತ್ರವಲ್ಲ. ಚಪ್ಪಲಿಯಲ್ಲೇ ಹೊಡೆದಾಡಿಕೊಂಡಿದ್ದಾರೆ.


ಸೀಟು ನನ್ನನ್ನು…ನನ್ನದು :

ಬಸ್ ರಣರಂಗವಾಗಿ ಬದಲಾದ ಘಟನೆ ನಡೆದಿರುವುದು ಬೀದರ್ ಜಿಲ್ಲೆಯಲ್ಲಿ. ಬಸ್ ಸೀಟಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ, ಬಟ್ಟೆ ಎಳೆದು ಹೊಡೆದಾಡಿಕೊಂಡಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಬೀದರ್‌ನಿಂದ ಕಲಬುರಗಿಗೆ ಹೋಗುವ ಬಸ್ಸಿನಲ್ಲಿ ಈ ಅವಾಂತರ ನಡೆದಿದೆ.

ಇದನ್ನೂ ಓದಿ : ಅಯ್ಯೋ! ರಾಖಿ ಸಾವಂತ್ ಗೆ ಏನಾಯ್ತು? ಆಸ್ಪತ್ರೆಗೆ ದಾಖಲಾದ ಬಾಲಿವುಡ್ ಡ್ರಾಮಾ ಕ್ವೀನ್

ಸರ್ಕಾರದ ಶಕ್ತಿ ಯೋಜನೆ ಅಡಿ ಉಚಿತ ಟಿಕೆಟ್ ಪಡೆದಿದ್ದ ಇಬ್ಬರು ಮಹಿಳೆಯರು ಈ ರಣರಂಗದ ಪ್ರಮುಖ ಪಾತ್ರಧಾರಿಗಳು. ಮಕ್ಕಳು, ಮಹಿಳೆಯರು, ಗಂಡಸರು ಪ್ರೇಕ್ಷಕರಾಗಿದ್ದರು. ಯಾರಿದ್ದರೋ ಇಲ್ವೋ ಅದು ಖ್ಯವಲ್ಲ. ಸೀಟ್ ಮುಖ್ಯ ಎನ್ನುತ್ತಾ, ಕೆಟ್ಟ ಕೆಟ್ಟ ಮಾತುಗಳಲ್ಲಿ ಬೈದಾಡಿಕೊಂಡಿದ್ದಾರೆ. ಪಾಪ! ಮಕ್ಕಳು ಭಯದಿಂದ ಮೂಕ ಪ್ರೇಕ್ಷರಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸೀಟಿನ ಮೇಲೆ ಕುಳಿತಿದ್ದ ಯುವತಿ ಬಳಿ ‘ಸೀಟು ನನ್ನದು’ ಎಂದು ಮತ್ತೊಬ್ಬ ಮಹಿಳೆ ಜಗಳಕ್ಕೆ ನಿಂತಿದ್ದಾರೆ. ನಾನು ಸೀಟು ಬಿಡಲ್ಲ ಎಂದು ಹೇಳಿದ್ದಾಳೆ ಆಕೆ. ಅಲ್ಲಿಗೆ ಶುರು…ಮಾತಿಗೆ ಮಾತು ಬೆಳೆದು ಬಳಿಕ ಚಪ್ಪಲಿ ಹೊಡೆದಾಟದವರೆಗೆ ಸೀಟ್ ಗಾಗಿ ಯುದ್ಧ ನಡೆದಿದೆ.

Continue Reading

LATEST NEWS

Trending