Connect with us

DAKSHINA KANNADA

ಪುತ್ತೂರು: ಮಳೆಗಾಗಿ ಶ್ರೀ‌ಮಹಾಲಿಂಗೇಶ್ವರ ದೇವಸ್ಥಾನದಲ್ಲಿ‌ಪರ್ಜನ್ಯ ಜಪ; ಶಾಸಕರು ಭಾಗಿ

Published

on

ಪುತ್ತೂರು: ಮಳೆ ಇಲ್ಲದೆ ಕರಾವಳಿ ಬಿಸಿ ತಾಪದಿಂದ ಕೂಡಿದ್ದು ಜನ‌ಸಂಕಷ್ಡ ಎದುರಿಸುವಂತಾಗಿದೆ. ಇದೀಗ ಶೀಘ್ರ ಮಳೆ ಪ್ರಾಪ್ತಿಗಾಗಿ ಪುತ್ತೂರಿನ ಶ್ರೀ‌ಮಹಾಲಿಂಗೇಶ್ವರ ದೇವಳದಲ್ಲಿ‌ಪುತ್ತೂರು ಶಾಸಕ ಅಶೋಕ್ ರೈರವರ ಸೂಚನೆಯಂತೆ ಪರ್ಜನ್ಯ ಜ‌ಪ ನೆರವೇರಿತು.

mahalingeshwara temple

ಮುಂದೆ ಓದಿ..; ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ

ಜಪ ಕಾರ್ಯಕ್ರಮದಲ್ಲಿ‌ಶಾಸಕರಾದ ಅಶೋಕ್ ರೈಭಾಗವಹಿಸಿ ಮಳೆಗಾಗಿ ದೇವರಲ್ಲಿ‌ಪ್ರಾರ್ಥನೆ ಮಾಡಿದರು. ಈ‌ ಸಂದರ್ಭದಲ್ಲಿ ಪಂಜಿಗುಡ್ಡೆ ಈಶ್ವರ್ ಭಟ್, ನ್ಯಾಯವಾದಿ ಜಗನ್ನಿವಾಸ್ ರಾವ್ , ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್ ,ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

DAKSHINA KANNADA

ಸಿಬಿಎಸ್‌ಸಿ ಫಲಿತಾಂಶ ಪ್ರಕಟ: ಸಾಧನೆ ಮೆರೆದ ಆಳ್ವಾಸ್ ಶಾಲಾ ವಿದ್ಯಾರ್ಥಿಗಳು

Published

on

ಮೂಡುಬಿದಿರೆ : ಸಿಬಿಎಸ್‌ಸಿ ಮಂಡಳಿಯು ಈ ಬಾರಿಯ ಸಿಬಿಎಸ್‌ಸಿ ಹತ್ತನೇ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಮೂಡುಬಿದಿರೆ ಆಳ್ವಾಸ್ ಸೆಂಟ್ರಲ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 17 ವಿದ್ಯಾರ್ಥಿಗಳು 95% ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ವಿಶಿಷ್ಟ ಸಾಧನೆ ಮೆರೆದಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು.

ಮನ್ವಿತ್ ಎಸ್ ಪದ್ಮಶಾಲಿ, ಮೆಲ್ವಿನ್ ಜಾನ್ ಡಿ, ಪೂರ್ವಿಕ ಜಿ ರಾವ್ 98%, ನಿಧಿ ಜೆ ಶೆಟ್ಟಿ, ಹರ್ಷದಾ ಬಿ ಎಚ್ 97%, ಸಮೀಕ್ಷ ಎಂ, ನಿಧಿ ಬೆಡೆಕರ್, ಎಮ್ ಎಸ್ ಪಲ್ಲವಿ, ಕ್ರಿಷ್ ಮಂಜುನಾಥ್ ಶೆಟ್ಟಿ, ಚೇತನ್ ಎಸ್ ವಿ, ದರ್ಶನ್ ಹೆಚ್ ಜೆ 96%, ಶ್ರವಣ್ ಬೆಳಿರಾಯ, ಮಾನಸೀ ವೆಂಕಟೇಶ್ ದಂಬಾಲ್, ಅನುಶ್ರೀ ಹೆಚ್, ತರಂಗ್ ಸಿ, ಅದೀಶ ಸಿ, ಅಭಯ್‌ಕಿರಣ 95% ಅಂಕಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. 73 ವಿದ್ಯಾರ್ಥಿಗಳು 90% ಗಿಂತ ಹೆಚ್ಚು ಅಂಕ ಗಳಿಸಿದ್ದು 10 ವಿದ್ಯಾರ್ಥಿಗಳು 94%, 10 ವಿದ್ಯಾರ್ಥಿಗಳು 93%, 8 ವಿದ್ಯಾರ್ಥಿಗಳು 92%, 15 ವಿದ್ಯಾರ್ಥಿಗಳು 91%, 13 ವಿದ್ಯಾರ್ಥಿಗಳು 90% ಅಂಕಗಳನ್ನು ಗಳಿಸಿದ್ದಾರೆ.

ಇದನ್ನೂ ಓದಿ : ಪಶುವೈದ್ಯರಿಂದ ಹ*ಲ್ಲೆ ಆರೋಪ; ರೀಲ್ಸ್ ಮೂಲಕ ಫೇಮಸ್ ಆಗಿದ್ದ ವ್ಯಕ್ತಿ ಸಾ*ವು

ಸಂಸ್ಕೃತದಲ್ಲಿ 3 ವಿದ್ಯಾರ್ಥಿಗಳು, ಗಣಿತದಲ್ಲಿ 1 ವಿದ್ಯಾರ್ಥಿ, ಸಮಾಜ ವಿಜ್ಞಾನದಲ್ಲಿ 1 ವಿದ್ಯಾರ್ಥಿ ಶೇಕಡಾ 100 ಅಂಕ ಪಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಸಿ.ಬಿ.ಎಸ್‌.ಸಿ ಶಾಲೆಯ ಮುಖ್ಯ ಶಿಕ್ಷಕ ಮೊಹಮ್ಮದ್ ಶಫಿ ಶೇಖ್, ಆಡಳಿತಾಧಿಕಾರಿ ಪ್ರೀತಂ ಕುಂದರ್ ಉಪಸ್ಥಿತರಿದ್ದರು.

Continue Reading

BELTHANGADY

ಪಶುವೈದ್ಯರಿಂದ ಹ*ಲ್ಲೆ ಆರೋಪ; ರೀಲ್ಸ್ ಮೂಲಕ ಫೇಮಸ್ ಆಗಿದ್ದ ವ್ಯಕ್ತಿ ಸಾ*ವು

Published

on

ಕೊಕ್ಕಡ  : ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಹ*ಲ್ಲೆ ನಡೆಸಿ ಆತನ ಸಾ*ವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಪಶುವೈದ್ಯರೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, 58 ವರ್ಷ ಪ್ರಾಯದ ಕಿಟ್ಟಿ ಯಾನೆ ಕೃಷ್ಣ ಮೃ*ತ ವ್ಯಕ್ತಿಯಾಗಿದ್ದಾರೆ.

ಕೊಕ್ಕಡ ಪಶುವೈದ್ಯಾಧಿಕಾರಿ ಕುಮಾರ್ ಅವರ ಮೇಲೆ ಕೊ*ಲೆ ಆರೋಪ ಕೇಳಿ ಬಂದಿದ್ದು, ಅವರನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

ಪತ್ನಿಯಿಂದ ದೂರು ದಾಖಲು :

ವಿಪರೀತ ಕುಡಿತದ ಚಟ ಹೊಂದಿದ್ದ ಕೃಷ್ಣ ಇತ್ತೀಚೆಗೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಸುಧಾರಿಸುವ ಮೊದಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ನಿನ್ನೆ ಕೊಕ್ಕಡಕ್ಕೆ ಬಂದು ಇಳಿದಿದ್ದರು. ಈ ವೇಳೆ ಕೃಷ್ಣರ ಪರಿಚಿತ ವ್ಯಕ್ತಿ ಹಾಗೂ ಸ್ಥಳೀಯ ಪಶುವೈದ್ಯಾಧಿಕಾರಿ ಕುಮಾರ್ ಅವರು ಆತನ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಇಷ್ಟು ಬೇಗ ಯಾಕೆ ಡಿಸ್ಚಾರ್ಜ್ ಆಗಿ ಬಂದಿದ್ದು? ಎಂದು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಮಾತುಕತೆ ನಡೆಯುತ್ತಿದ್ದಾಗ ಕೃಷ್ಣ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಆದರೆ ಮಾತನಾಡುತ್ತಿದ್ದ ಪಶು ವೈದ್ಯಾಧಿಕಾರಿ ಕುಮಾರ್ ಅವರು ತನ್ನ ಪತಿಗೆ ಹ*ಲ್ಲೆ ನಡೆಸಿದ್ದಾರೆ ಎಂದು ಪತ್ನಿ ಭಾರತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ : ಕಳ್ಳತನ ಮಾಡಲೆಂದೇ ವರ್ಷದಲ್ಲಿ ಸುಮಾರು 200 ಬಾರಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ

ಈ ಹಿನ್ನಲೆಯಲ್ಲಿ ಪೊಲೀಸರು ಪಶುವೈದ್ಯಾಧಿಕಾರಿಯನ್ನು ಬಂಧಿಸಿದ್ದಾರೆ. ಆದ್ರೆ, ಕೃಷ್ಣ ಸಾ*ವಿನ ಬಗ್ಗೆ ಅನುಮಾನ ಮೂಡಿರುವ ಹಿನ್ನಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃ*ತದೇಹವನ್ನು ಕೆ.ಎಸ್‌.ಹೆಗ್ಡೆ ಆಸ್ಪತ್ರೆಗೆ ರವಾನಿಸಲಾಗಿದೆ. ವರದಿ ಬಂದ ಬಳಿಕ ಕೃಷ್ಣ ಸಾ*ವಿನ ನಿಖರ ಕಾರಣ ತಿಳಿದು ಬರಲಿದೆ.

ಮೃ*ತ ಕೃಷ್ಣ ಅವರು ಕೊಕ್ಕಡ ಭಾಗದಲ್ಲಿ ರೀಲ್ಸ್ ನಲ್ಲಿ ಹೆಚ್ಚಾಗಿ ಜನಜನಿತರಾಗಿದ್ದರು. ಇತ್ತೀಚೆಗೂ ಒಂದು ಕನ್ನಡ ಸಿನೆಮಾದ ಡೈಲಾಗ್ ನ್ನ ರೀಲ್ಸ್ ಮಾಡಿದ್ದರು.

Continue Reading

DAKSHINA KANNADA

ಹರೇಕಳದಲ್ಲಿ ಪದವಿಪೂರ್ವ ಶಿಕ್ಷಣ ಆರಂಭ: ಹಾಜಬ್ಬರ ಕನಸು ನನಸು

Published

on

ಕೊಣಾಜೆ: ತಾನು ವಿದ್ಯಾವಂತನಲ್ಲದಿದ್ದರೂ ತನ್ನ ಊರಿನ ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಪದ್ಮಶ್ರೀ ಪುರಸ್ಕ್ಋತರಾದ ಹರೇಕಳ ಹಾಜಬ್ಬರು ಕಿತ್ತಲೆ ಹಣ್ಣು ಮಾರಾಟ ಮಾಡಿ ಅದರಲ್ಲಿ ಬಂದ ಹಣದಲ್ಲಿ ಹರೇಕಳದ ನ್ಯೂಪಡ್ಪು ಎನ್ನುವಲ್ಲಿ ಶಾಲೆಯೊಂದನ್ನು ಆರಂಭಿಸಿದರು.

ಬಳಿಕ ಫ್ರೌಡಶಾಲೆಯ ಕನಸು ಕೂಡ ನನಸಾಗಿದ್ದು, ಇದೀಗ ಅವರ ಮತ್ತೊಂದು ಮಹಾದಾಸೆ ಆಗಿದ್ದ ಪದವಿ ಪೂರ್ವ ಕಾಲೇಜಿನ ಕನಸೂ ಕೂಡ ನೆರವೇರಿದೆ. ಈ ವರ್ಷದಿಂದ ಅಂದರೆ ಜೂನ್ 1 ರಿಂದ ಪದವಿ ಪೂರ್ವ ತರಗತಿಗಳು ಆರಂಭವಾಗಲಿದೆ.

ಕಲಾ ಹಾಗೂ ವಾಣಿಜ್ಯ ವಿಭಾಗದಲ್ಲಿ ತರಗತಿಗಳು ನಡೆಯಲಿದ್ದು, ಪ್ರಾಂಶುಪಾಲರಾಗಿ ನಾಯಿಲಪದವು ಸರಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕ ಅಬ್ದುಲ್ ರಝಾಕ್ ನಿಯೋಜನೆಗೊಂಡಿದ್ದಾರೆ. ಈಗಾಗಲೇ ಪಿಯುಸಿ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.

ನ್ಯೂಪಡ್ಪು ಶಾಲೆಯಿಂದ ಸಮೀಪದ ಹರೇಕಳ ದಗನೆಪಡ್ಪು ಬಳಿ ಕಾಲೇಜಿಗೆ 1.3 ಎಕ್ರೆ ಜಾಗ ಮೀಸಲಿಟ್ಟಿದ್ದು, ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ನೊಂದಾವಣೆಯಾಗಿದೆ.

Continue Reading

LATEST NEWS

Trending