LATEST NEWS
ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?
ಎಲ್ಲರಿಗೂ ಒಂದು ಆಸೆ ಇರುತ್ತೆ. ಯಾವುದೇ ಒತ್ತಡದ ಕೆಲಸ ಇಲ್ಲದೆ ಆರಾಮದ ಕೆಲಸ ಸಿಗಬೇಕು. ಕುಳಿತಲ್ಲೇ ಹಣ ಗಳಿಸಬೇಕು ಅನ್ನುವ ಆಸೆ. ಆದರೆ ಅದೆಲ್ಲಾ ವಾಸ್ತವದಲ್ಲಿ ಕಷ್ಟನೇ ಸರಿ. ಆದ್ರೆ ಇಲ್ಲೊಂದು ಮಹಿಳೆ ಕೇವಲ ತನ್ನ ಕೈ ಬೆರಳಗಳನ್ನು ತೋರಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರಂತೆ. ಹೌದು, ಅಮೆರಿಕಾದಲ್ಲಿರುವ 37 ವರ್ಷದ ಈ ಮಹಿಳೆ ಕೇವಲ ಕೈ ಬೆರಳುಗಳನ್ನು ತೋರಿಸಿ ವರ್ಷಕ್ಕೆ 25ಲಕ್ಷ ರೂ. ಗಳಿಸುತ್ತಾರಂತೆ.
ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಅಮೆರಕಾದ ನ್ಯಾಯಾರ್ಕ್‌ನಲ್ಲಿ ವಾಸವಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆ ವೃತ್ತಿಯಲ್ಲಿ ‘ಹ್ಯಾಂಡ ಮಾಡೆಲ್’ ಆಗಿದ್ದಾರೆ. ಹಾಗಾಗಿ ತನ್ನ ಮುಖ ಸೌಂದರ್ಯ ತೋರಿಸದೆ ಬರೀಕೈ ಗಳಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಪ್ರತಿಷ್ಠಿತ ಕಂಪೆನಿಗಳ ಆ್ಯಡ್‌ಗಳಲ್ಲಿ ತಮ್ಮ ಕೈ ಚಳಕ ತೋರಿಸುತ್ತಾರೆ. ಉಗುರಿಗೆ ಹಾಕುವ ನೇಯಿಲ್ ಫಾಲಿಶ್, ಕಾಫಿ ಯನ್ನು ಪಕ್‌ಗೆ ಸುರಿಯುವುದು, ಹಿಟ್ಟನ್ನು ಬೆರೆಸುವವುದು, ಪರ್ಫ್ಯೂಮ್‌ಗಳನ್ನು ತನ್ನ ಮಾದಕ ಕೈ ಬೆರಳುಗಳಿಂದ ಹಿಡಿದು ಹೀಗೆ ಅನೇಕ ಜಾಹಿರಾತುಗಳ ಶೂಟ್‌ನಲ್ಲಿ ಭಾಗವಹಿಸುತ್ತಾರೆ.
ಅಲೆಕ್ಸಾಂಡ್ರಾ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸ್ನೇಹಿತರ ಜೊತೆ ಹಂಚಿಕೊಂಡಾಗ ಎಲ್ಲರೂ ಒಮ್ಮೆ ಅಚ್ಚರಿಗೊಳಗಾಗಿದ್ದರಂತೆ. ಕೈ ತೋರಿಸಿದಕ್ಕೆ ಲಕ್ಷ ಗಟ್ಟಲೆ ಹಣ ಕೊಡುತ್ತಾರೆ ಎಂದರೆ ನಂಬಲು ಸಾದ್ಯವಿಲ್ಲ ಎಂದು ಹೇಳಿದ್ದರಂತೆ. 2019 ರಲ್ಲಿ ಮಾಡಲಿಂಗ್ ಆರಂಭಿಸಿದ್ದು YSL, ಮೈಕ್ರೋಸಾಫ್ಟ್, ಬ್ರಾಂಡನ್ ಬ್ಲಾಕ್‌ವುಡ್, ಕಿಸ್ ನೈಲ್ಸ್, ಸೆರೆನಾ ವಿಲಿಯಮ್ಸ್ ಜ್ಯುವೆಲರಿಯಂತಹ ಬ್ರಾಂಡ್‌ಗಳಿಂಗೆ ಹ್ಯಾಂಡ್ ಮಾಡಲಿಂಗ್ ಮಾಡುತ್ತಿದ್ದಾರೆ.
ಮುಂದೆ ಓದಿ..;ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!
ವಾರ್ಷಿಕ ಆದಾಯ 25 ಲಕ್ಷ ರೂ…!
ಇವರು ಈ ಮಾಡಲಿಂಗ್ ಕ್ಷೇತ್ರಕ್ಕೆ ಕೇವಲ 10 ನಿಮಿಷಗಳಲ್ಲಿ ಆಯ್ಕೆ ಅಗಿದ್ದಾರಂತೆ. ಅವರ ಕೈಗಳ ಆಕಾರ, ಬಣ್ಣ, ನಯವಾದ ಉಗುರುಗಳಿಂದಾಗಿ ಈ ಕೆಲಸವನ್ನು ಪಡೆದುಕೊಂಡಿದ್ದಾರಂತೆ. ಅವರ ಕೈ ಗಳು ಪುಟ್ಟದಾಗಿದ್ದು ಇದು ಅವರ ಕೆಲಸಕ್ಕೆ ಸಹಾಯವಾಗಿದೆಯಂತೆ. ಐಟಮ್‌ಗಳನ್ನು ಕೈಯಲ್ಲಿ ಹಿಡಿದಾಗ ಬ್ರ್ಯಾಂಡ್‌ಗಳು ದೊಡ್ಡದಾಗಿ ಕಾಣುತ್ತದೆ ಎಂದು ಹೇಳುತ್ತಾರೆ ಬೆರೊಕಲ್. ಇನ್ನು ಮನೆಯಲ್ಲಿ ಕೆಲಸಗಳನ್ನು ಮಾಡುವಾಗ ಕೈಗೆ ಗ್ಲೌಸ್‌ಗಳನ್ನು ಧರಿಸುತ್ತಾರೆಂತೆ. ಕೈ ತೊಳೆದ ಕೂಡಲೇ ಲೋಷನ್‌ಗಳಿಂದ ಮಸಾಜ್ ಮಾಡ್ತಾರಂತೆ. ಇನ್ನು ಈ ಕೆಲಸಕ್ಕೆ ಇವರು ಪಡೆಯುವ ಸಂಭಾವನೆ ಬರೋಬ್ಬರಿ 25 ಲಕ್ಷ ರೂ. ಹೌದು ವಾರ್ಷಿಕವಾಗಿ 25 ಲಕ್ಷ ಪಡೆದರೆ ಮಾಸಿಕವಾಗಿ 2 ಲಕ್ಷ ರೂ. ಸಂಪಾದನೆ ಮಾಡುತ್ತಾರಂತೆ.
LATEST NEWS
ಅ*ನೈತಿಕ ಸಂಬಂಧಕ್ಕೆ ಬ*ಲಿಯಾದ ತಾಯಿ; ಕತ್ತು ಹಿಸುಕಿ ಕೊಂ*ದ ಮಗಳು
ಮಂಗಳೂರು/ಬೆಂಗಳೂರು : ಇತ್ತೀಚೆಗೆ ಕೊ*ಲೆ ಪ್ರಕರಣಗಳು ಹೆಚ್ಚುತ್ತಿವೆ. ಯಾರು ಯಾರನ್ನೂ ಸಾ*ಯಿಸಲು ಹೇಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೊಬ್ಬಳು ಹೆತ್ತ ತಾಯಿಯನ್ನೇ ಹ*ತ್ಯೆ ಮಾಡಿರುವ ಘಟನೆ ನಡೆದಿದೆ. ಬಾಡಿಗೆದಾರನೊಂದಿಗಿನ ಅ*ಕ್ರಮ ಸಂಬಂ*ಧ ಹೊಂದಿದ್ದ ವಿಚಾರ ತಿಳಿದು ಜಗಳ ಮಾಡಿದ ಹೆತ್ತ ತಾಯಿಯನ್ನೇ ಮಗಳು ಕೊಂ*ದಿದ್ದಾಳೆ. ಈ ಘಟನೆ ಹೊಂಗಸಂದ್ರದಲ್ಲಿ ನಡೆದಿದೆ.
ಜಯಲಕ್ಷ್ಮಿ( 46) ಮೃ*ತಪಟ್ಟ ಮಹಿಳೆ. ಪವಿತ್ರಾ (29) ಹಾಗೂ ಲವಣೇಶ್ ಕೊ*ಲೆಗೈದ ಆರೋಪಿಗಳು.
ಅಕ್ರಮ ಸಂಬಂಧಕ್ಕೆ ತಾಯಿ ಬ*ಲಿ :
ಪವಿತ್ರ ಹಾಗೂ ಜಯಲಕ್ಷ್ಮಿ ಅವರ ಕಟ್ಟಡದಲ್ಲಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದ ಆರೋಪಿ ಹಾಗೂ ಅದೇ ಕಟ್ಟಡದಲ್ಲಿ ಬಾಡಿಗೆದಾರನಾಗಿದ್ದ ಲವಣೇಶ್ ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪವಿತ್ರಾ ಮತ್ತು ಆಕೆಯ ಆಪ್ತ ಲವಣೇಶ್ ಕೊ*ಲೆಯನ್ನು ಅಪಘಾ*ತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಮ*ರಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಹ*ತ್ಯೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಮದುವೆ-ಮಕ್ಕಳು-ಅಕ್ರ*ಮ ಸಂಬಂ*ಧ :
ಪವಿತ್ರಾ 11 ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಮದುವೆಯಾಗಿದ್ದಳು. ಇವರಿಗೆ 10 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ. ಆದರೆ, ಇತ್ತೀಚೆಗಷ್ಟೇ ಲವಣೇಶ್ ಎಂಬಾತನೊಂದಿಗೆ ಅಕ್ರ*ಮ ಸಂಬಂ*ಧ ಹೊಂದಿದ್ದಳು. ಇದಕ್ಕೆ ತಾಯಿ ಒಪ್ಪಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ
ಬುಧವಾರ(ಸೆ.11) ಮಧ್ಯಾಹ್ನ 3 ಗಂಟೆಗೆ ತನ್ನ ತಾಯಿ ಬಿದ್ದು ಸಾ*ವನ್ನಪ್ಪಿದ್ದಾಳೆ ಎಂದು ಪವಿತ್ರಾ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಮತ್ತು ಆಕೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಅದನ್ನು ಅಸಹಜ ಸಾ*ವು ಎಂದು ಭಾವಿಸಿದ್ದರು. ಆದರೆ, ಶುಕ್ರವಾರ ಮರ*ಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಕೊ*ಲೆ ಮಾಡಿರುವುದು ದೃಢಪಟ್ಟಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.
LATEST NEWS
ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ
ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಸಪ್ಟೆಂಬರ್ 11 ರಂದು ಈ ಘಟನೆ ನಡೆದಿದ್ದು, ಮಾಂಗಲ್ಯ ಸರ ಖರೀದಿಯ ನೆಪದಲ್ಲಿ ಆರೋಪಿ ಅಂಗಡಿಗೆ ಬಂದಿದ್ದ. ಉಡುಪಿ ಜಿಲ್ಲೆಯ ಕಾರ್ಕಳದ ಉಷಾ ಜ್ಯುವೆಲ್ಲರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಎಂಟ್ರಿಕೊಟ್ಟಿದ್ದ. ಅಲ್ಲಿದ್ದ ಸಿಬ್ಬಂದಿ ಯುವತಿಯ ಬಳಿ ಮಾಂಗಲ್ಯ ಸರ ತೋರಿಸುವಂತೆ ಕೇಳಿ ಬಳಿಕ ಅದರ ರೇಟ್ ಕೂಡಾ ಕೇಳಿದ್ದ. ಸೇಲ್ಸ್ ಗರ್ಲ್ ಮಾಂಗಲ್ಯ ಸರಕ್ಕೆ 1 ಲಕ್ಷದ 37 ಸಾವಿರ ರೂಪಾಯಿಗಳಾಗುತ್ತವೆ ಎಂದು ಹೇಳಿದಾಗ ನಗುತ್ತಲೇ ಸರ ಕೈಗೆತ್ತಿಕೊಂಡ ಆರೋಪಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.
ಸೇಲ್ಸ್ ಗರ್ಲ್ ತಕ್ಷಣ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆದು ಹೊರಗಿದ್ದ ಜನರನ್ನು ಎಚ್ಚರಿಸಿದ್ದಾಳೆ. ಈ ವೇಳೆ ಸಾರ್ವಜನಿಕರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹೆರ್ಮುಂಡೆ ಗ್ರಾಮದ ನಿವಾಸಿ ಜಯರಾಮ್ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರಣ ಮಾಂಗಲ್ಯ ಸರವನ್ನು ಜ್ಯುವೆಲ್ಲರಿ ಮಾಲಕರಿಗೆ ಒಪ್ಪಿಸಲಾಗಿದೆ.
LATEST NEWS
ದೈತ್ಯಾಕಾರದ ಬಾಡಿ ಬಿಲ್ಡರ್ ಇನ್ನಿಲ್ಲ
ಮಂಗಳೂರು/ಹೊಸದಿಲ್ಲಿ: ಜಗತ್ತಿನ ಫೇಮಸ್ ಆಂಡ್ ಫೇವರೇಟ್ ಬಾಡಿ ಬಿಲ್ಡರ್ ಇಲಿಯಾ ಗೋಲೆಮ್ ಯಾಫೆಮ್‌ಚೆಕ್(36) ಹೃದಯಘಾತದಿಂದ ನಿಧನರಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಿ ಬಿಲ್ಡರ್ :
ಸೆ.6 ರಂದು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಅಡಿ ಎತ್ತರ ಹಾಗೂ 154 ಕೆ.ಜಿ ತೂಕದವನ್ನು ಹೊಂದಿದ್ದರು. ದಿ ಮ್ಯೂಟಂಟ್ ಎಂದು ಪ್ರಸಿದ್ಧಿಯಾಗಿದ್ದ ಇಲಿಯಾ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋಮಾಗೆ ಹೋಗಿದ್ದರು. ಕೊನೆಗೆ ಸೆ.11ರಂದು ಕೊನೆಯುಸಿರೆಳೆದರು ಎಂಬುವುದಾಗಿ ವರದಿಯಾಗಿದೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!