ಕರಾವಳಿ ಕರ್ನಾಟಕದ ಮುಂಚೂಣಿಯ ಆರೋಗ್ಯ ಸೇವೆ ಪೂರೈಕೆದಾರರಾದ ಕೆಎಂಸಿ ಆಸ್ಪತ್ರೆ, ದೀರ್ಘಕಾಲದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಮಗ್ರ ಅಗತ್ಯಗಳನ್ನು ಪೂರೈಸಲು ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ (ಎಂಸಿಎಲ್ಸಿ) ಅನ್ನು ಪ್ರಾರಂಭಿಸಿದೆ.
ಮಂಗಳೂರು : ಕರಾವಳಿ ಕರ್ನಾಟಕದ ಮುಂಚೂಣಿಯ ಆರೋಗ್ಯ ಸೇವೆ ಪೂರೈಕೆದಾರರಾದ ಕೆಎಂಸಿ ಆಸ್ಪತ್ರೆ, ದೀರ್ಘಕಾಲದ ಲಿವರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಸಮಗ್ರ ಅಗತ್ಯಗಳನ್ನು ಪೂರೈಸಲು ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ (ಎಂಸಿಎಲ್ಸಿ) ಅನ್ನು ಪ್ರಾರಂಭಿಸಿದೆ.
ಲಿವರ್ ಮಾನವ ದೇಹದಲ್ಲಿನ ಅತಿದೊಡ್ಡ ಅಂಗವಾಗಿದೆ, ದುರದೃಷ್ಟವಶಾತ್, ಇದನ್ನು ಸಾಮಾನ್ಯವಾಗಿ ನಿರ್ಲಕ್ಷಿಸಲಾಗುತ್ತದೆ ಮತ್ತು ದೀರ್ಘಕಾಲದ ಲಿವರ್ ಕಾಯಿಲೆಯಿಂದ ಕಾಲ ಕಳೆದಂತೆ ಹಂತಹoತವಾಗಿ ಲಿವರ್ ಕಾರ್ಯಗಳು ಕೆಡುವುದಕ್ಕೆ ದಾರಿಯಾಗಬಹುದು.
ಕನ್ಸಲ್ಟೆಂಟ್ ಗ್ಯಾಸ್ಟ್ರೋಎಂಟರಾಲಜಿಸ್ಟ್(ಪಚನಾoಗರೋಗಶಾಸ್ತ್ರ ಸಲಹಾತಜ್ಞರು) ಡಾ. ಅನುರಾಗ್ ಶೆಟ್ಟಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, “1,000 ರೂ. +ಜಿಎಸ್ಟಿಗಳಷ್ಟು ಕಡಿಮೆ ಶುಲ್ಕ ಪಾವತಿಸುವ ಮೂಲಕ ಕ್ಲಿನಿಕ್ ಅಡಿಯಲ್ಲಿ ನೋಂದಾಯಿಸಲಾದ ರೋಗಿಗಳು ಹೊರರೋಗಿ(ಒಪಿ) ಸಲಹಾಸೇವೆ, ಹೊರರೋಗಿ(ಒಪಿ) ವೈದ್ಯಕೀಯ ಕಾರ್ಯವಿಧಾನಗಳು, ಪ್ರಯೋಗಾಲಯ ಮತ್ತು ವಿಕಿರಣಶಾಸ್ತ್ರದ ತನಿಖೆಗಳು, ವಿಶೇಷ ವಾರ್ಡ್ಗಳು ಮತ್ತು ಶಸ್ತ್ರಚಿಕಿತ್ಸೆಗಳು ಸೇರಿದಂತೆ ರೋಗಿಗಳ ದಾಖಲಾತಿಗಳಲ್ಲಿ ರಿಯಾಯಿತಿಗಳು ಒಳಗೊಂಡಿರುವ ಬಹು ಲಾಭ ಒದಗಿಸುವ ಎಂಸಿಎಲ್ಸಿ ಕಾರ್ಡ್ ಸ್ವೀಕರಿಸುತ್ತಾರೆ” ಎಂದರು.
ಕೆಎಂಸಿ ಇಡೀ ಜಿಲ್ಲೆಯಲ್ಲಿ ಪಿಒಇಎಂ, ಇಎಸ್‌ಡಿ ಮತ್ತು ಲಿವರ್ ಕಸಿ ಸೌಲಭ್ಯಗಳನ್ನು ಪೂರೈಸುವ ಏಕೈಕ ಆಸ್ಪತ್ರೆಯಾಗಿದೆ.
ವಿಭಾಗವು ಅಂತರರಾಷ್ಟ್ರೀಯ ವೈದ್ಯಕೀಯ ಪ್ರಯೋಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ನ್ಯಾಷನಲ್ ಬೋರ್ಡ್(ರಾಷ್ಟ್ರೀಯ ಮಂಡಳಿ), ನವದೆಹಲಿಯಿಂದ ಮಾನ್ಯತೆ ಪಡೆದ ಕರಾವಳಿ ಕರ್ನಾಟಕದ ಏಕೈಕ ಗ್ಯಾಸ್ಟ್ರೋಎಂಟರಾಲಜಿ ವಿಭಾಗವಾಗಿದೆ.
ಕ್ಲಿನಿಕ್ ಆರಂಭ ಕುರಿತು ಮುಖ್ಯ ಲಿವರ್ ಕಸಿ ಶಸ್ತ್ರಚಿಕಿತ್ಸಕ ಡಾ. ರಾಜೀವ್ ಲೋಚನ್ ಪ್ರತಿಕ್ರಿಯಿಸಿ, “ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ನೆರೆಹೊರೆಯ ವಲಯದಲ್ಲಿನ ದೀರ್ಘಕಾಲದ ಲಿವರ್ ಕಾಯಿಲೆಗಳು ಮತ್ತು ನಿರ್ಣಾಯಕ ಪಿತ್ತಜನಕಾಂಗಕ್ಕೆ ಸಂಬoಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಮತ್ತು ಆರೋಗ್ಯ ಸೇವೆಗಳನ್ನು ಒದಗಿಸುವ ಪ್ರಾಥಮಿಕ ಉದ್ದೇಶದಿಂದ ಮಣಿಪಾಲ್ ಸಮಗ್ರ ಲಿವರ್ ಕ್ಲಿನಿಕ್ ಅನ್ನು ಸ್ಥಾಪಿಸಲಾಗಿದೆ” ಎಂದರು.
ಕೆಎಂಸಿ ಆಸ್ಪತ್ರೆಯ ವೈದ್ಯಕೀಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಬಿ ವಿ ತಂತ್ರಿ ಅವರು ಮಾತನಾಡಿ, “ಈ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ಪರಿಚಯಿಸುವುದರೊಂದಿಗೆ, ವಿವಿಧ ಲಿವರ್ ಕಾಯಿಲೆಗಳ ರೋಗಿಗಳಿಗೆ ನಮ್ಮ ಸೇವೆಗಳನ್ನು ಮತ್ತಷ್ಟು ಹೆಚ್ಚಿಸುವ ಗುರಿ ನಮ್ಮದು. ಇದು ನಮ್ಮ ಸಮುದಾಯದ ಆರೋಗ್ಯದ ಫಲಿತಾಂಶಗಳನ್ನು ಗಣನೀಯವಾಗಿ ಸುಧಾರಿಸುತ್ತದೆ ಎಂಬ ಭರವಸೆಯನ್ನು ನಾವು ಹೊಂದಿದ್ದೇವೆ” ಎಂದರು.
ಮoಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಗೀರ್ ಸಿದ್ದಿಕಿ ಅವರು ಮಾತನಾಡಿ, “ಮಣಿಪಾಲ್ ಕಾಂಪ್ರೆಹೆನ್ಸಿವ್ ಲಿವರ್ ಕ್ಲಿನಿಕ್ ನಮ್ಮ ಸಮುದಾಯದ ಅದರಲ್ಲೂ ವಿಶೇಷವಾಗಿ ದೀರ್ಘಕಾಲದ ಲಿವರ್ ಕಾಯಿಲೆಗಳು ಮತ್ತು ಗಂಭೀರವಾದ ಲಿವರ್ ಸಂಬoಧಿತ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರೋಗ್ಯದ ಫಲಿತಾಂಶ ಸುಧಾರಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು