Connect with us

DAKSHINA KANNADA

“ಜೆಇಇ ಮೈನ್ಸ್: ಎಕ್ಸ್‌ಪರ್ಟ್ ಕಾಲೇಜಿನ 63 ವಿದ್ಯಾರ್ಥಿಗಳಿಗೆ 95 ಪರ್ಸೆಂಟೈಲ್‍”

Published

on

ಮಂಗಳೂರು: ಎಂಜಿನಿಯರಿಂಗ್ ಪದವಿ ಪ್ರವೇಶಾತಿಗಾಗಿ ರಾಷ್ಟ್ರಮಟ್ಟದಲ್ಲಿ ನಡೆಯು ಜಂಟಿ ಪ್ರವೇಶ ಪರೀಕ್ಷೆಯಲ್ಲಿ (ಜೆಇಇ) ಮುಖ್ಯ ಪರೀಕ್ಷೆಯ ಪ್ರಥಮ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಮತ್ತು ಕೊಡಿಯಾಲ್‍ಬೈಲ್‌ನ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜುಗಳ 63 ವಿದ್ಯಾರ್ಥಿಗಳು 95 ಪರ್ಸೆಂಟೈಲ್‍ಗಿಂತ ಅಧಿಕ ಫಲಿತಾಂಶವನ್ನು ಪಡೆದಿದ್ದಾರೆ.


ಸಂಸ್ಥೆಯ ಐವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‍ಗಿಂತ ಅಧಿಕ, 18 ವಿದ್ಯಾರ್ಥಿಗಳು 98 ಪರ್ಸೆಂಟೈಲ್‍ಗಿಂತ ಅಧಿಕ, 36 ವಿದ್ಯಾರ್ಥಿಗಳು 97 ಪರ್ಸೆಂಟೈಲ್‍ಗಿಂತ ಅಧಿಕ ಅಂಕ ಪಡೆದಿದ್ದಾರೆ. 136 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿವೆ.
ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳು: ಸಂಕೇತ್ ಎನ್.ಎಸ್ (99.66 ಪರ್ಸೆಂಟೈಲ್‌), ಆಕಾಶ್ ಜಿ.ಮೇಸ್ತ (99.28) ಮುಹಮ್ಮದ್ ರುಮೈಜ್ (99.24), ಅರ್ಹನ್ ವಿಲಾಸ್ ಕೆ. (99.03), ವಿವೇಕರಾಜ್ ಎಂ.ದಂಡು (99.02), ಸ್ಕಂದ ಶಾನಭಾಗ್ (98.97), ಗೌರವ್ ನಾಯಕ್ ಎಚ್. (98.97), ಅಜಯ್ ಎಸ್.ಹೆಗ್ಡೆ (98.969809), ವೃಷಭ್ ವಿ.ಜವಳಿ (98.86), ಜೆರಿನ್ ಪಿ. ಐಸಾಕ್ (98.81), ಸಾತ್ವಿಕ್‌ ಎ.ಎಸ್. (98.57), ಶಲಾಂಕ್ ಎನ್. ಕುಲಕರ್ಣಿ (98.55), ತುಬಚಿ ಕೃತಿಕ್ ಚನ್ನಗೌಡ (98.55), ಅಭಿ ಎಸ್.ಕುಮಾರ್ (98.54), ತೇಜಸ್ ಕೆ. ರೈಸಾದ್ (98.25), ಯಶಸ್ವಿನಿ ಎಸ್.ಬಾಳಪ್ಪನವರ್ (98.20), ಅಭಿಷೇಕ ಪ್ರಕಾಶ್ ಕಲ್ಯಾಣಶೆಟ್ಟಿ (98.10), ಪ್ರಜ್ಞಾ ಬಿ.ಶೆಟ್ಟಿಗಾರ್ (98.02), ಮದನ್ ಕುಮಾರ್ ಎಸ್.ವಿ. (97.88), ವಿಶಾಲ್ ಎಸ್. (97.72), ಮೋನಿಶ್ ಎಸ್. (97.72), ಸ್ನೇಹಲ್ ಮಹಿಮಾ ಕ್ಯಾಸ್ಟೆಲಿನೊ (97.67), ಪ್ರಣವ್ ಎಸ್. (97.65), ಗಗನ್ ಗೌಡ ಎಸ್.ಆರ್. (97.62), ಅನುಜ್ಞಾ ಕೆ. (97.58), ಕೃಷ್ಣಮೂರ್ತಿ ವಿಜಯಕುಮಾರ್ ಪೂಜಾರ್ (97.57), ಆದಿತ್ಯ ಮಲ್ಯ (97.50), ಪವನ್ ಎಸ್. ಧೂಳಶೆಟ್ಟಿ (97.50), ಜಿ. ಸಾಯಿಚರಣ್ (97.49), ಇಶಾನ್ಯಾ ಬಿ.ಯು. (97.46), ಅಭಿನವ್ ಎನ್. (97.43), ದಿಶಾಂತ್ ಕೆ. (97.36), ಅಭಿಷೇಕ್ ವೆಂಕಟೇಶ್ ನಾಯಕ್ (97.32), ಹಿಮಾಂಶು ಎಲ್. (97.29), ಶ್ರೀಹರಿ ಮಂಕಣಿ (97.14), ಕನ್ನಿಕಾ ಜಿ. ಭಟ್ (97.05), ದಿಶಾ ಎನ್. (96.99), ಸಂದೀಪ್ ಎಚ್.ಎಸ್. (96.99), ಸುಹಾಸ್ ರಾಜೇಶ್ (96.82), ಭೂಮಿಕಾ ದನದಮನಿ (96.80), ಜಯಂತ್ ಎಂ. (96.78), ಆಕಾಶ್ ಬಿ.ಎ. (96.73), ಶ್ರೀರಂಗ ಎಸ್.ಎಚ್. (96.64), ಅರುಣ್ ದೇವ್ ಕೆ.ಎಚ್. (96.64), ಕಾರ್ತಿಕ್ ಎಚ್. ಶೆಣೈ (96.55), ಅದ್ವಿತ್ ಎಸ್. ಸೇರ್ವೆಗಾರ್ (96.48), ಶಶಾಂಕ್ ಶಿವನಗೌಡ ಪಾಟೀಲ (96.2972171), ಭರತ್ ಕುಮಾರ್ ವೈ. ರೇವದಕುಂಡಿ (96.2881483), ನಾಗಭೂಷಣ ಪಿ. (96.1735571), ಮೋಕ್ಷ ಧಾಯಿನಿ ಎಂ.ಎ. (96.07), ಯತೀಂದ್ರ ಪಿ.ಎಂ. (96.06), ಸುಧಾನ್ ಪಿ. (95.92), ರಾಕೇಶ್ ವಿ.ಶೆಟ್ಟಿ (95.92), ವಿವೇಕ್ ವಿ.ಎಂ. (95.85), ಯಶಸ್ ವಿನಾಯಕ ಎಂ. (95.80), ಅಖಿಲ್ ರಾಜಶೇಖರ್ ದೊಡ್ಡಣ್ಣವರ್ (95.77 ), ದೇವ್ ಹರಿ ಕೌಶಿಕ್ (95.38), ಎ.ಅಕ್ಷಯ್ ರೆಡ್ಡಿ (95.37), ಮುರುಗೇಶ್ ಪಟೇಲ ಕೆ.ಆರ್. (95.35), ಆದರ್ಶ ನಾಗಪ್ಪ ಕುಕನೂರು (95.09), ದೇವಿಪ್ರಸಾದ್ ವಿ.ಕೆ. (95.07), ಪ್ರಜ್ವಲ್ ಗುರವ್ (95.07).

DAKSHINA KANNADA

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ನಿಧನದ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ

Published

on

ಸುಳ್ಯ :  ಸಹೋದರರಿಬ್ಬರು ಸಾ*ವಿನಲ್ಲೂ ಒಂದಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ 82 ವರ್ಷದ ಎಸ್. ಇ. ಅಬ್ದುಲ್ಲಾ ಹಾಗೂ ಮಹಮ್ಮದ್ ಎಸ್. ಇ  ಮೃ*ತ ಸಹೋದರರು.

ಅಬ್ದುಲ್ಲಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧ*ನರಾಗಿದ್ದಾರೆ. ಈ ವಿಚಾರ ತಿಳಿದ ಅವರ ಸಹೋದರ ಮಹಮ್ಮದ್ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

ಇಬ್ಬರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Continue Reading

DAKSHINA KANNADA

ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

Published

on

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದ ಪ್ರತೀ ವರ್ಷ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ 2000 ರೂ. ನೇರವಾಗಿ ಕೃಷಿಗರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದೀಗ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದು, ಮೇ.2024ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.

16ನೇ ಕಂತನ್ನು ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್‌ ನಿಧಿ ಯೋಜನೆಯ ಕಂತನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 17ನೇ ಕಂತಿಗಾಗಿ ಕಾದು ನೋಡಬೇಕಿದೆ. ಈ ಯೋಜನೆಯ ಕಂತುಗಳನ್ನು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮೊದಲನೆಯ ಕಂತು ಏಪ್ರಿಲ್-ಜುಲೈನಲ್ಲಿ, ಎರಡನೆಯದು ಆಗಸ್ಟ್-ನವೆಂಬರ್ ನಲ್ಲಿ ಮತ್ತು ಮೂರನೆಯದು ಡಿಸೆಂಬರ್-ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಈಗಾಗಲೇ 16ನೇ ಕಂತನ್ನು ಫೆಬ್ರವರಿಯಲ್ಲಿ ನೀಡಿದ್ದು, 17 ನೇ ಕಂತು ಮೇ ತಿಂಗಳಿನಲ್ಲಿ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮಾತ್ರ ನಿಗದಿಯಾಗಿಲ್ಲ.

 

 

Continue Reading

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

LATEST NEWS

Trending