Connect with us

    LATEST NEWS

    70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

    Published

    on

    ಇತ್ತೀಚೆಗೆ ಯುವಕರು ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ ಎಂದು ಗೋಳಾಡುವುದನ್ನು ಕಾಣುತ್ತೇವೆ ಹುಡುಗಿಯರು ಸಿಗುತ್ತಿಲ್ಲವೆಂದು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಇತ್ತೀಚೆಗೆ ಆಟೋ ಮೂಲಕ ಪ್ರಚಾರ, ವೀಡಿಯೋ ಮೂಲಕ ಪ್ರಚಾರ ಹೀಗೆ ನಾನಾ ರೀತಿಯಲ್ಲಿ ‘ವಧು ಬೇಕಾಗಿದ್ದಾಳೆ’ ಎಂದು ಜಾಹೀರಾತು ನೀಡುತ್ತಾರೆ. ಅದೇನೋ ಯುವಕರು ಬಿಡಿ…ಆದರೆ, ಇಲ್ಲಿ 70 ರ ಹರೆಯದ ವೃದ್ಧನೂ ಜಾಹೀರಾತು ಕೊಟ್ಟಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ!

    ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು?

    ವಯಸಾಗುತ್ತಿದ್ದಂತೆ ಸಂಗಾತಿಯ ಆಸರೆ ಬೇಕಾಗುತ್ತದೆ. ಒಂಟಿಯಾಗಿರುವುದು ಕಷ್ಟ ಎಂದೆನಿಸುತ್ತದೆ. ಈಗ ಈ ಅಜ್ಜನಿಗೂ ಮದುವೆಯಾಗಲು ಮನಸ್ಸಾಗಿದೆ. ಸಂಗಾತಿಯ ಸಂಗಡ ಬೇಕೆನಿಸಿ ಆತ ಗೆಳತಿಯ ಅರಸುತ್ತಿದ್ದಾರೆ. ಆತನ ವಯಸ್ಸು 70 ವರ್ಷ…ತನಗೆ ಜೊತೆಗಾರ್ತಿ ಬೇಕೆಂಬ ಹಂಬಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ.

    ಜಾಹೀರಾತಿಗಾಗಿ ಆತ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತಾ!? 30 ಸಾವಿರ ರೂಪಾಯಿ. ಆತ ವಾರಕ್ಕೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆಯಂತೆ.

    ಆಕೆ ಕರೆದಲ್ಲಿ ಹೋಗಲು ಸಿದ್ಧ!

    ಅಂದಹಾಗೆ ವೃದ್ಧನ ಹೆಸರು ಗಿಲ್ಬರ್ಟ್. ಆತ ಅಮೆರಿಕಾದ ಟೆಕ್ಸಾಸ್ ನ ಸ್ವೀಟ್ ವಾಟರ್ ಸಿಟಿಯಲ್ಲಿ ವಾಸವಿದ್ದಾನೆ. 20 ಅಡಿ ಬಿಲ್ ಬೋರ್ಡ್ ಹಾಕಿಸಿ ಪ್ರತಿವಾರ $400 ನೀಡುತ್ತಿದ್ದಾನೆ. ಒಂಟಿಯಾಗಿರುವ ತನಗೆ ಸಂಗಾತಿ ಹುಡುಕುತ್ತಿರುವುದಾಗಿ ಆತ ಜಾಹೀರಾತು ಮೂಲಕ ತಿಳಿಸಿದ್ದಾನೆ. ಜೊತೆಗೆ ಆತ. ಆಕೆ ಕರೆದ ಕಡೆ ರಿಲೊಕೇಟ್ ಆಗಲು ಸಹ ಸಿದ್ಧನಿದ್ದಂತೆ. ಆಕೆಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ, ಎಲ್ಲಿ ಬೇಕಾದರೂ ರಿ ಲೊಕೇಟ್ ಆಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

    ನಾನು ಬಿಲ್‌ಬೋರ್ಡ್‌ ಜಾಹೀರಾತು ಹಾಕಿಸಿದ್ದು ಕಂಡು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಬಹುತೇಕರು ಹಣ ಮಾತ್ರ ಕೇಳುತ್ತಿದ್ದಾರೆ. ನಾನು ಜಾಹೀರಾತು ನೀಡಿದ್ದು ಕಂಡು ಅವರು ನಾನು ಶ್ರೀಮಂತ ಎಂದುಕೊಂಡಿದ್ದಾರೆ. ಹೀಗಾಗಿ ನನಗೆ ಬರುವ ಕರೆಗಳನ್ನು ಪರಿಶೀಲಿಸಲು ನಾನು ನನ್ನ ಸ್ನೇಹಿತರಿಗೆ ವರ್ಗಾಯಿಸುತ್ತೇನೆ ಅವರು ವಿಚಾರಣೆ ನಡೆಸುತ್ತಾರೆ ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.

    ನನಗೆ ಸರಿಯಾದ ವ್ಯಕ್ತಿ ಸಿಕ್ಕರೆ ನಾನು ಎಲ್ಲಿಗೆ ಬೇಕಾದರು ಪ್ರಯಾಣಿಸುತ್ತೇನೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಅವರ ಕಣ್ಣುಗಳನ್ನು ನೋಡಲು ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಯಾರನ್ನಾದರೂ ಭೇಟಿಯಾಗಲು ಯುರೋಪಿಗೆ ಬೇಕಾದರು ನಾನು ಹೋಗುತ್ತೇನೆ ಎಂದಿದ್ದಾರೆ.

    ಇದನ್ನೂ ಓದಿ : ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

    ಹಲವರಿಂದ ಕರೆ !

    ಗಿಲ್ಬರ್ಟ್ 2015 ರಿಂದ ಒಂಟಿಯಾಗಿ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತ ಜಾಹೀರಾತು ನೋಡಿ ಕರೆ ಮಾಡುವವರು ಮೊದಲಿಗೆ ಹಣ ಮತ್ತು ಆಸ್ತಿ ಕುರಿತು ವಿಚಾರಣೆ ನಡೆಸುತ್ತಿದ್ದಾರಂತೆ. ಅಲ್ಲದೆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಆತನ ಜೊತೆ ಇರಲು ಬಯಸಿರುವುದಾಗಿಯೂ ಹೇಳಿದ್ದಾರಂತೆ. ಆದರೆ ತಾನು ಆಸ್ತಿ, ಹಣದ ಹಿಂದೆ ಬಿದ್ದು ಈ ರೀತಿ ಜಾಹೀರಾತು ನೀಡಿಲ್ಲ, ಕೊನೆಯ ದಿನಗಳಲ್ಲಿ ನನ್ನ ಜೊತೆ ಇರುವವರು ಬೇಕಾಗಿದ್ದಾರೆ. ಅಂತವರು ಸಿಗುವವರೆಗೆ ಹುಡುಕುತ್ತೇವೆ ಎಂದಿದ್ದಾರೆ.

    ಅಲ್ಲದೆ ಜಾಹೀರಾತು ನೋಡಿ ಆ ಮೂಲಕ ಸಂಪರ್ಕಿಸುವವರು ಹೆಚ್ಚಿನವರು ಕುಟುಂಬ, ಮದುವೆಯಾಗಿ ಮಕ್ಕಳು ಇದ್ದವರು ಆಗಿದ್ದಾರಂತೆ. ಅವರಲ್ಲಿ ಕೆಲವರು ಹಣ ನೀಡಿದರೆ ಅವರ ಜೊತೆ ಮನೆಯಲ್ಲಿ ಬಿಟ್ಟುಕೊಳ್ಳುವುದಾಗಿಯೂ ಆಫರ್ ನೀಡಿದ್ದರಂತೆ. ಇದನ್ನು ತಿರಸ್ಕರಿಸಿರುವುದಾಗಿ ಗಿಲ್ಬರ್ಟ್ ತಿಳಿಸಿದ್ದಾರೆ.

    ನನ್ನ ಬಳಿ ಯಾವ ಆಸ್ತಿ ಇಲ್ಲ ಎಂದಿರುವ ಗಿಲ್ಬರ್ಟ್, ವಯಸ್ಸಿನಲ್ಲಿ ದುಡಿದ ಹಣ, ಒಂದು ಮನೆ ಇದೆ, ಹಣ ಮಾಡುವ ವಯಸ್ಸು ಸಹ ನನಗಿಲ್ಲ. ನಾನು ಶ್ರೀಮಂತನಲ್ಲ. ಜಾಹೀರಾತು ನೀಡಿದ್ದು ನೋಡಿ ಎಲ್ಲರು ನಾನು ಶ್ರೀಮಂತ ಕರೆ ಮಾಡುತ್ತಾರೆ. ನನ್ನ ಬಳಿ ಹಣವಿಲ್ಲವೆಂದಾಗ ಕರೆ ಕಟ್ ಮಾಡುತ್ತಿದ್ದಾರೆ ಎಂದು ಗಿಲ್ಬರ್ಟ್ ಅಳಲು ತೋಡಿಕೊಂಡಿದ್ದಾರೆ.

    1 Comment

    Leave a Reply

    Your email address will not be published. Required fields are marked *

    DAKSHINA KANNADA

    ಹರೇಕಳ ಹಾಜಬ್ಬ ಶಾಲೆಯ ಕಂಪೌಂಡ್ ಕುಸಿತ..! ವಿದ್ಯಾರ್ಥಿನಿ ಸಾ*ವು..!

    Published

    on

    ಮಂಗಳೂರು : ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ನ್ಯೂಪಡ್ಪು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಂಪೌಂಡ್‌ ವಾಲ್ ಕುಸಿತಗೊಂಡಿದೆ. ಕುಸಿತಗೊಂಡ ವಾಲ್‌ ಅಡಿಗೆ ಸಿಲುಕಿದ 3 ನೇ ತರಗತಿ ವಿದ್ಯಾರ್ಥಿನಿ ಅಸುನೀಗಿದ್ದಾಳೆ. ಹರೇಕಳ ಗ್ರಾ.ಪಂ ವ್ಯಾಪ್ತಿಯ ನ್ಯೂಪಡ್ಪುವಿನಲ್ಲಿ ಮೇ 20ರ ಸಂಜೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂಜೆ ವೇಳೆ ಸುರಿದ ಧಾರಕಾರ ಮಳೆಯಿಂದಾಗಿ ದುರ್ಘಟನೆ ಸಂಭವಿಸಿದೆ.


    ನ್ಯೂಪಡ್ಪು ನಿವಾಸಿ ಸಿದ್ದೀಖ್ – ಜಮೀಲಾ ದಂಪತಿ ಪುತ್ರಿ ಶಾಝಿಯಾ ಬಾನು (7) ಮೃತ ಬಾಲಕಿ. ಹರೇಕಳ ಹಾಜಬ್ಬರ ಶಾಲೆಯಲ್ಲಿ ಕಳೆದ ಎರಡು ದಿನಗಳಿಂದ ಮುಡಿಪು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಶಿಬಿರ ನಡೆಯುತ್ತಿದೆ. ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳು ಇದ್ದ ಹಿನ್ನೆಲೆಯಲ್ಲಿ ಶಾಲೆಯ ಸಮೀಪದಲ್ಲೇ ಇರುವ ವಿದ್ಯಾರ್ಥಿನಿ ಶಾಝಿಯಾ ಭಾನು ಭಾಗವಹಿಸಿದ್ದಳು.

    ಸಂಜೆ ವೇಳೆ ಮನೆಗೆ ಹಿಂತಿರುಗುವ ಸಂದರ್ಭ ಶಾಲಾ ಕಂಪೌಂಡ್ ಗೇಟಿನಲ್ಲಿ ಆಟವಾಡುವ ಸಂದರ್ಭ ಕಂಪೌಂಡ್ ಬಾಲಕಿ ಶಾಝಿಯಾ ಮೇಲೆ ಕುಸಿದುಬಿದ್ದಿದೆ. ತಕ್ಷಣ ಸ್ಥಳೀಯರು ರಕ್ಷಣೆಗೆ ಧಾವಿಸಿದರೂ, ಬಾಲಕಿ ಪ್ರಾಣಪಕ್ಷಿ ಹಾರಿಹೋಗಿತ್ತು. ಬೆಳಿಗ್ಗೆಯಿಂದ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿ ಆಗಾಗ್ಗ ಮಳೆಯಾಗುತ್ತಿದ್ದು, ಇದರಿಂದಾಗಿ ಕಂಪೌಂಡ್ ಶಿಥಿಲಗೊಂಡು ಬಿದ್ದಿದೆ. ಘಟನಾ ಸ್ಥಳಕ್ಕೆ ಹರೇಕಳ ಗ್ರಾ.ಪಂ ಅಧಿಕಾರಿಗಳು, ಕೊಣಾಜೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Continue Reading

    LATEST NEWS

    ಗುಜರಾತ್‌ ಎಟಿಎಸ್‌ನಿಂದ ನಾಲ್ವರು ಐಸಿಸ್ ಉಗ್ರರ ಸೆರೆ..!

    Published

    on

    ಮಂಗಳೂರು ( ಗುಜರಾತ್) :   ಗುಜಾರಾತ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಗುಜರಾತ್ ಎಟಿಸಿ ಅಧಿಕಾರಿಗಳು ಬಂಧಿಸಿದ್ದಾರೆ.  ಅಹಮ್ಮದಾ ಬಾದ್ ವಿಮಾನ ನಿಲ್ದಾಣದಲ್ಲಿ ಈ ನಾಲ್ವರು ಉಗ್ರರನ್ನು ಎಟಿಎಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಚೆನೈ ಮೂಲಕ ಅಹಮ್ಮದಾಬಾದ್ ತಲುಪಿದ್ದ ಈ ನಾಲ್ವರೂ ಮೂಲತಃ ಶ್ರೀಲಂಕದವರು ಎಂದು ಮಾಹಿತಿ ಲಭ್ಯವಾಗಿದೆ.

    ಎರಡು ವಾರಗಳ ಹಿಂದೆ ಅಹ್ಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್‌ ಸ್ಫೋಟದ ಈ ಮೇಲ್‌ ಸಂದೇಶ ಬಂದಿತ್ತು. ಈ ವಿಚಾರವಾಗಿ ಎಟಿಎಸ್ ಅದಿಕಾರಿಗಳು ಹಲವು ಆಯಾಮಗಳಲ್ಲಿ ತನಿಕೆಯನ್ನು ನಡೆಸಿದ್ದರು. ಈ ತನಿಕೆಯ ಮುಂದುವರೆದ ಭಾಗವಾಗಿ ಈ ನಾಲ್ವರು ಐಸಿಸ್ ಉಗ್ರರರನ್ನು ಬಂಧಿಸಲಾಗಿದೆ. ಬಂದಿತರು ದೇಶದಲ್ಲಿ ವಿದ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರು ಎಂಬ ಮಾಹಿತಿ ಎಟಿಎಸ್‌ಗೆ ಲಭ್ಯವಾಗಿದೆ. ಅಲ್ಲದೆ ಇವರಿಗೆ ಪಾಕಿಸ್ತಾನದ ಉಗ್ರ ಸಂಘಟನೆಗಳ ಜೊತೆ ನಂಟು ಇದೆ ಅನ್ನೋ ಅಂಶ ಕೂಡಾ ಬೆಳಕಿಗೆ ಬಂದಿದೆ. ಆರೋಪಿಗಳ ಮೊಬೈಲ್‌ ಪರಿಶೀಲನೆ ನಡೆಸಿದ ವೇಳೆ ಈ ವಿಚಾರ ಗೊತ್ತಾಗಿದೆ ಎಂದು ಎಟಿಎಸ್ ಮೂಲಗಳು ಬಹಿರಂಗಪಡಿಸಿದೆ.

    Continue Reading

    FILM

    ಐಶ್ವರ್ಯಾ ರೈ ಜೊತೆಗೂಡಿ ಬಿಗ್‌ ಬಿ ಫ್ಯಾಮಿಲಿ ಮತದಾನ…!

    Published

    on

    ಮಂಗಳೂರು ( ಮಹಾರಾಷ್ಟ್ರ ) : ಚುನಾವಣೆಯಲ್ಲಿ ಮತ ಚಲಾಯಿಸಿರುವ ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಜೊತೆ ಮತಕೇಂದ್ರಕ್ಕೆ ಆಗಮಿಸಿದ್ದಾರೆ. ಅಮಿತಾಬಚ್ಚನ್‌, ಜಯಾಬಚ್ಚನ್ ಜೊತೆಯಲ್ಲಿ ಒಂದೇ ಕಾರಿನಲ್ಲಿ ಮತಗಟ್ಟೆಗೆ ಆಗಮಿಸಿದ್ದಾರೆ. ಈ ಮೂಲಕ ಹಲವು ಸಮಯದಿಂದ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಶೇಕ್‌ ಬಚ್ಚನ್‌ ದಾಂಪತ್ಯ ವಿಚಾರವಾಗಿ ಇದ್ದ ಗಾಸಿಪ್‌ಗೆ ತೆರೆ ಎಳೆದಿದ್ದಾರೆ.


    ಐದನೇ ಹಂತದ ಮತದಾನದಲ್ಲಿ ಅನೇಖ ಸೆಲಬ್ರಿಟಿಗಳು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಮತದಾನವಾಗಿದ್ದು, ಬಾಲಿವುಡ್ ನಟ ನಟಿಯರು ಮತದನಾ ಕೇಂದ್ರಕ್ಕೆ ಆಗಮಿಸಿ ಮತ ಚಲಾಯಿಸಿದ್ದಾರೆ. ನಟ ಅಕ್ಷಯ್ ಕುಮಾರ್ ಬೆಳಗ್ಗೆ 7 ಗಂಟೆಗೆ ಮತದಾನ ಕೇಂದ್ರಕ್ಕೆ ಹಾಜರಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಭಾರತೀಯ ಪೌರತ್ವ ಪಡೆದ ನಂತರ ಅಕ್ಷಯ್ ಕುಮಾರ್ ಮೊದಲ ಬಾರಿಗೆ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ.

    ಪಿಂಕ್ ಡ್ರೆಸ್ನಲ್ಲಿ ಆಗಮಿಸಿದ ಜಾನ್ವಿ ಸರತಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ತೆರಳಿ ಮತಯಾಚನೆ ಮಾಡಿದರು. ಮತದಾನ ಕೇಂದ್ರದಲ್ಲಿ ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದರು. ವಿಶೇಷ ಮಹಿಳಾ ಪೊಲೀಸರು ನಟಿ ಜಾನ್ವಿಗೆ ಭದ್ರತೆ ಒದಗಿಸಿದರು.

    ಅದೇ ರೀತಿ ಶಾರುಖ್ ಖಾನ್ ಅವರು ತಮ್ಮ ಕುಟುಂಬದೊಂದಿಗೆ ಮತದಾನ ಮಾಡುತ್ತಿರುವುದು ಕಂಡುಬಂದಿದೆ. ಹೀಗೆ ಹೃತಿಕ್ ರೋಷನ್, ರಾಕೇಶ್ ರೋಷನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತದಾನ ಮಾಡಿದರು. ಇನ್ನು ವರುಣ್ ಧವನ್ ಜೊತೆಗೆ ತಂದೆ ಡೇವಿಡ್ ಧವನ್, ಧರ್ಮೇಂದ್ರ, ಆಶಾ ಭೋಂಸ್ಲೆ ಮತ್ತು ಇತರರು ಬೂತ್‌ನಲ್ಲಿ ಮತದಾನ ಮಾಡಿದರು.

    Continue Reading

    LATEST NEWS

    Trending