Connect with us

BELTHANGADY

ಭಾಸ್ಕರ ನಾಯ್ಕ ಹಲ್ಲೆ ಪ್ರಕರಣ:ತಿಮರೋಡಿ ಮತ್ತವರ ಸಂಗಡಿರನ್ನು ಬಂಧಿಸಲು ಆಗ್ರಹ

Published

on

ಮಂಗಳೂರು : ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಪಾಣಿಯಾಲ್‌ ಎಂಬಲ್ಲಿ ದಲಿತ ಸಮುದಾಯದ ನಿವಾಸಿ ಭಾಸ್ಕರ ನಾಯ್ಕ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಸಂಗಡಿಗರನ್ನು ಕೂಡಲೇ ಬಂಧಿಸ ಬೇಕೆಂದು ಭಾಸ್ಕರ ನಾಯ್ಕ ಅವರ ಪತ್ನಿ ಮಮತಾ, ಮಕ್ಕಳಾದ ವೈಷ್ಣವಿ, ವೈಭವಿ ಅವರು ಒತ್ತಾಯಿಸಿದ್ದಾರೆ.


ಮಮತಾ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ನನ್ನ ಗಂಡ ಭಾಸ್ಕರ ನಾಯ್ಕ ಅವರು ಸೆ. 2 ರಂದು ಖಾಸಗಿ ಮಾಧ್ಯಮವೊಂದರಲ್ಲಿ ವಿವರಣೆ ನೀಡಿ ಮರಳಿ ಹೋಗುತ್ತಿದ್ದಾಗ ಪಾಣಿಯಾಲ್‌ ಬಳಿ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಸಂಗಡಿಗರು ಕಾರನ್ನು ತಡೆದು ಹೊರಕ್ಕೆಳೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದು ನಾನು ಮಕ್ಕಳ ಜತೆ ಸ್ಥಳಕ್ಕೆ ತೆರಳಿ ಬಿಡಿಸಲು ಯತ್ನಿಸಿದಾಗ ನನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ನನ್ನ ಗಂಡನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದೇನೆ ಹಾಗೂ ಮಹೇಶ್‌ ತಿಮರೋಡಿ ಮತ್ತು ತಂಡದ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದೇನೆ. ಈ ಸಂದರ್ಭದಲ್ಲಿ ಆರೋಪಿಗಳನ್ನು ಬಂಧಿಸುವ ಭರವಸೆ ನೀಡಲಾಗಿತ್ತು. ಆದರೆ ಬಂಧಿಸಿರಲಿಲ್ಲ್ಲ. ಬಳಿಕ ಪೆರ್ಮುದೆ ಬಳಿ ಬಹಿರಂಗ ಸಭೆಯಲ್ಲಿ ತಿಮರೋಡಿ ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದಾಗ ನಾನು ಕೂಡಲೇ ಎಸ್.ಪಿ. ಅವರಿಗೆ ಫೋನ್‌ ಮಾಡಿ ಮಾಹಿತಿ ನೀಡಿದ್ದೇನೆ ಎಂದರು.
ಎಸ್.ಪಿ. ಅವರು ಆರೋಪಿಗಳನ್ನು ಬಂಧಿಸುವ ಭರವಸೆ ನೀಡಿದ್ದರು. ಆದರೆ ಬಂಧಿಸಿಲ್ಲ. ಮತ್ತೊಮ್ಮೆ ಎಸ್.ಪಿ. ಆವರಿಗೆ ಮನವಿ ಮಾಡಿದ್ದೇನೆ. ಇದುವರೆಗೆ ಏನೂ ಕ್ರಮ ಆಗಿಲ್ಲ. ಇದೀಗ ನಮಗೆ ಜೀವ ಬೆದರಿಕೆ ಇದ್ದು, ರಕ್ಷಣೆ ಒದಗಿಸ ಬೇಕು. ಗಂಡ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಅವರ ಆರೋಗ್ಯವನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಮಕ್ಕಳು ಕೂಡಾ ಶಾಲೆಗೆ ಹೋಗದೆ ನನ್ನ ಜತೆ ಇದ್ದಾರೆ. ಆದ್ದರಿಂದ ಆರೋಪಿಗಳನ್ನು ಕೂಡಲೇ ಬಂಧಿಸ ಬೇಕು ಎಂದು ಒತ್ತಾಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BELTHANGADY

ಚಾರ್ಮಾಡಿ ಘಾಟ್ ನಲ್ಲಿ ನೂರು ಅಡಿ ಪ್ರಪಾತಕ್ಕೆ ಉರುಳಿದ ಲಾರಿ..!

Published

on

ನೀರಿನ ಬಾಟಲ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ನೂರು ಅಡಿ ಪ್ರಪಾತಕ್ಕೆ ಉರುಳಿದ ಘಟನೆ ಸೆ.15ರಂದು ನಡೆದಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಚಾರ್ಮಾಡಿ: ನೀರಿನ ಬಾಟಲ್ ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾರ್ಮಾಡಿ ಘಾಟಿಯ ಸೋಮನಕಾಡು ಬಳಿ ನೂರು ಅಡಿ ಪ್ರಪಾತಕ್ಕೆ ಉರುಳಿದ ಘಟನೆ ಸೆ.15ರಂದು ನಡೆದಿದ್ದು, ಅದೃಷ್ಟವಶಾತ್ ಲಾರಿ ಚಾಲಕ ಮತ್ತು ಕ್ಲೀನರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಶುಕ್ರವಾರ ರಾತ್ರಿ ಪುತ್ತೂರಿನಿಂದ ಚಿತ್ರದುರ್ಗಕ್ಕೆ ನೀರಿನ ಬಾಟಲ್ ತುಂಬಿದ ಲಾರಿ ಚಾರ್ಮಾಡಿ ಘಾಟಿಯಲ್ಲಿ ಆವರಿಸಿದ ದಟ್ಟ ಮಂಜಿನಿಂದಾಗಿ ಚಾಲಕನಿಗೆ ದಾರಿ ಕಾಣದೆ ಪ್ರಪಾತಕ್ಕೆ ಬಿದ್ದಿದೆ.

ಲಾರಿ ಮೊದಲು ತಡೆಗೋಡೆಗೆ ಢಿಕ್ಕಿ ಹೊಡೆದು ಬಳಿಕ ನೂರು ಅಡಿ ಪ್ರಪಾತಕ್ಕೆ ಉರುಳಿದೆ.

ಈ ಸಂದರ್ಭದಲ್ಲಿ ಅಲ್ಲಿ ಇದ್ದ ಮರವೊಂದಕ್ಕೆ ಲಾರಿ ಸಿಲುಕಿಕೊಂಡ ಪರಿಣಾಮ ಸಂಭವನೀಯ ಅವಘಡ ತಪ್ಪಿದೆ ಹಾಗೂ ಈ ಮರ ಇಬ್ಬರ ಪ್ರಾಣ ಉಳಿಸಿದೆ.

ಒಂದು ವೇಳೆ ಲಾರಿ ಮರಕ್ಕೆ ಸಿಕ್ಕಿಕೊಳ್ಳದಿದ್ದಲ್ಲಿ ಸಾವಿರ ಅಡಿ ಪ್ರಪಾತಕ್ಕೆ ಹೋಗಿ ಬೀಳುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Continue Reading

BELTHANGADY

Belthangady: 27 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬ೦ಧನ..!

Published

on

ಪ್ರಕರಣವೊ೦ದಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬ೦ಧಿಸಿದ್ದಾರೆ.

ಬೆಳ್ತಂಗಡಿ: ಪ್ರಕರಣವೊ೦ದಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬ೦ಧಿಸಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ವರ್ಕಾಡಿ ನಿವಾಸಿ ಎಸ್. ಎ. ಅಶ್ರಫ್ ಬ೦ಧಿತ ಆರೋಪಿ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 1996ರಲ್ಲಿ ದಾಖಲಾಗಿದ್ದ ಶ್ರೀಗಂಧ ಕಳವು ಪ್ರಕರಣದ ಆರೋಪಿಯಾಗಿದ್ದ ಎಸ್. ಎ. ಅಶ್ರಫ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 27 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ಮುಂಬಯಿ ನಗರ ಹಾಗೂ ಸೌದಿ ಅರೇಬಿಯಾದಲ್ಲಿ ತಲೆಮರೆಸಿಕೊಂಡಿದ್ದ.

ಬೆಳ್ತಂಗಡಿ ಠಾಣಾ ಪೊಲೀಸರು ಆ.24 ರಂದು ಕೇರಳ ಪೊಲೀಸರ ಸಹಕಾರದೊಂದಿಗೆ ಆತನನ್ನು ಕೇರಳದಿಂದ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಈತನ ವಿರುದ್ಧ ಕಾಸರಗೋಡು ಪೊಲೀಸ್ ಠಾಣೆಯಲ್ಲಿ ಕರ್ನಾಟಕದ ಉಪ್ಪಿನಂಗಡಿ ಮತ್ತು ಕೋಣಾಜೆ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಕಾಯಿದೆಯಡಿ ದಾಖಲಾಗಿರುವ ಪ್ರಕರಣ ವಿಚಾರಣೆಗೆ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

BELTHANGADY

Belthangady: ವಿದ್ಯುತ್ ತಂತಿ ರ್ಸ್ಪಶ -ಕೃಷಿಕರಿಬ್ಬರು ಸಾವು..!

Published

on

ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರಿಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಬೆಳ್ತಂಗಡಿ: ವಿದ್ಯುತ್ ತಂತಿ ಸ್ಪರ್ಶಿಸಿ ಕೃಷಿಕರಿಬ್ಬರು ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.

ಕಲ್ಮಂಜ ಗಾಮ್ರದ ಮೂಲಾರು ಅಂಬಟೆ ಮನೆ ನಿವಾಸಿ ಶಶಿಧರನ್ ನಾಯರ್ (68) ಹಾಗೂ ಬೆಳಾಲು ಗ್ರಾಮದ ಸುರುಳಿ ಮೂಲದ ಅಂಗಾರ (58) ಮೃತ ಕೃಷಿಕರು.

ಶಶಿಧರನ್ ಅವರು ಶನಿವಾರದಂದು ಮನೆ ಸಮೀಪದ ಸೀಯಾಳ ಕೀಳಲು ಎಂದು ಅಲ್ಯುಮಿನಿಯಂ ದೋಟಿ ಹಿಡಿದು ಸಾಗುತ್ತಿದ್ದಾಗ ವಿದ್ಯುತ್ ತಂತಿಗೆ ದೋಟಿ ತಗುಲಿ ವಿದ್ಯುತ್ ಸ್ಪರ್ಶಿಸಿದೆ.

ಈ ವೇಳೆ ಅವರು ಜೋರಾಗಿ ಬೊಬ್ಬೆ ಹಾಕಿದ್ದರು.

ಈ ಶಬ್ಧ ಕೇಳಿದ ಪತ್ನಿ ಹಾಗೂ ಮನೆ ಸಮೀಪದ ಮಹಿಳೆ ಸ್ಥಳಕ್ಕೆ ಬಂದು ನೋಡಿದಾಗ ಶಶಿಧರನ್ ಪ್ರಜ್ಞೆ ತಪ್ಪಿ ಬಿದ್ದಿದ್ದರು.

ಕೂಡಲೇ ಅವರನ್ನು ಪ್ರಾಥಮಿಕ ಆರೈಕೆ ಮಾಡಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದೊಯ್ದರು.

ಆದರೆ ವೈದ್ಯರು ಪರೀಕ್ಷಿಸಿದಾಗ ಶಶಿಧರನ್ ಅವರು ಮೃತಪಟ್ಟಿದ್ದಾರೆ ಎಂದು ಧೃಡಪಟ್ಟಿದೆ.

ಧರ್ಮಸ್ಥಳ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮೃತ ಶಶಿಧರನ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಇನ್ನೋರ್ವ ವ್ಯಕ್ತಿ ಅಂಗಾರ ಕೃಷಿ ಕೂಲಿ ಕಾರ್ಮಿಕರಾಗಿದ್ದು, ಅವರು ತೋಟದಲ್ಲಿ ಅಲ್ಯುಮಿನಿಯಂ ಏಣಿ ಹಿಡಿದುಕೊಂಡು ಹೋಗುತ್ತಿದ್ದಾಗ ಹೈಟೆನ್ಶನ್ ಲೈನ್ ಗೆ ಏಣಿ ಸ್ಪರ್ಶಿಸಿ ಅಂಗಾರ ಅವರು  ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಮೆಸ್ಕಾಂ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತರ ಅಂಗಾರ ಅವರು  ಪತ್ನಿ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

Continue Reading

LATEST NEWS

Trending