bangalore
ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.
ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ
ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.
bangalore
ವರದಕ್ಷಿಣೆ ಕಿರುಕುಳ; ನೇ*ಣಿಗೆ ಶರಣಾದ ಟೆಕ್ಕಿ
ಮಂಗಳೂರು/ಬೆಂಗಳೂರು : ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ನಡೆದಿದೆ. ಪೂಜಾ (22) ಜೀವಾಂತ್ಯಗೊಳಿಸಿದ ವಿವಾಹಿತೆ. ಪೂಜಾ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಸುನೀಲ್ ಎಂಬಾತನನ್ನು ಪೂಜಾ ಮದುವೆಯಾಗಿದ್ದರು. ಮದುವೆಯಾದ ಬಳಿಕ ವರದಕ್ಷಿಣೆಗಾಗಿ ಪತಿ ಪೀಡಿಸುತ್ತಿದ್ದ. ಇದರಿಂದ ಮನನೊಂದು ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇದನ್ನೂ ಓದಿ : ಸೀಲ್ಡ್ ತಂಪು ಪಾನೀಯ ಬಾಟಲ್ ಒಳಗಿತ್ತು ಜೇಡರ ಹುಳ!
ಮಗಳ ಸಾವಿಗೆ ಪತಿ ಸುನೀಲ್ ಹಾಗೂ ಮೈದುನ ಅನಿಲ್ ಕಾರಣ ಎಂದು ಪೂಜಾ ಪೋಷಕರು ಆರೋಪಿಸಿದ್ದಾರೆ. ಈ ಬಗ್ಗೆ ಗಂಗಮ್ಮನಗುಜಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bangalore
ಈ ಪುಣ್ಯಕ್ಷೇತ್ರಕ್ಕೆ ಹೋಗಲು ರಾಜ್ಯ ಸರ್ಕಾರದಿಂದ ಸಹಾಯಧನ ಸಿಗಲಿದೆ..!
ಬೆಂಗಳೂರು : ಕರ್ನಾಟಕ ರಾಜ್ಯದಿಂದ ಕೈಲಾಸ ಮಾನಸ ಸರೋವರ ಹಾಘೂ ಚಾರ್‌ಧಾಮ್ ಯಾತ್ರಿಗಳಿಗೆ ಅನುದಾನ ನೀಡುವ ಕುರಿತು ಮುಜರಾಯಿ ಇಲಾಖೆ ಮಾರ್ಗಸೂಚಿ ಹೊರಡಿಸಿದೆ. ಮಾನಸ ಸರೋವರ ಯಾತ್ರಿಗಳಿಗೆ ರೂ.30 ಸಾವಿರ, ಚಾರ್‌ಧಾಮ್ ಯಾತ್ರಿಗಳಿಗೆ ರೂ.20 ಸಾವಿರ , ಹಾಗೂ ಈಗಾಗಲೇ ಕಾಶಿ ಯಾತ್ರೆ ಕೈಗೊಂಡ 30 ಸಾವಿರ ಯಾತ್ರಿಗಳಿಗೆ ತಲಾ ರೂ.5 ಸಾವಿರ ಸಹಾಯಧನ ನೀಡಲಾಗುತ್ತದೆ.
ಕೇವಲ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳು ಮಾತ್ರ ಈ ಸಹಾಯಧನ ಪಡೆಯಲು ಅರ್ಹರಾಗಿದ್ದಾರೆ. ಈಗಾಗಲೇ ಈ ತೀರ್ಥ ಕ್ಷೇತ್ರಗಳಿಗೆ ಹೋಗಿ ಬಂದಿರುವವರು ಸಹಾಯಧನವನ್ನು ಪಡೆಯಲು ಅರ್ಹರಾಗಿದ್ದಾರೆ. ಇದಕ್ಕಾಗಿ ರೂ.25 ಪಾವತಿಸಿ ಸಂಬಂಧಿಸಿದ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದಾಗಿದೆ.
ಚಾರ್‌ಧಾಮ್ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕದ ಖಾಯಂ ನಿವಾಸಿಯಾಗಿದ್ದು, ಚುನಾವಣಾ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಅನ್ನು ಅಪ್‌ಲೋಡ್ ಮಾಡುವುದು.
- 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಯಡಿ ಸಹಾಯಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೆ ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಅಪ್‌ಲೋಡ್ ಮಾಡಬೇಕು.
- ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಮತ್ತೊಮ್ಮೆ ಅನುದಾನ ನೀಡಲಾಗುವುದಿಲ್ಲ.
ಕಾಶಿ ಯಾತ್ರೆಯ ಮಾರ್ಗಸೂಚಿಗಳು
- ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 18 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು.
- 18 ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು.
ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ
bangalore
ಗೋಬಿ ಮಂಚೂರಿ ಆಯ್ತು..! ಈಗ ಚಿಕನ್ ಕಬಾಬ್, ಫಿಶ್ ಫುಡ್ ಮೇಲೆ ಕಣ್ಣು…!
ಮಂಗಳೂರು : ಫಿಶ್ ಸೇರಿದಂತೆ ಚಿಕನ್ ಕಬಾಬ್ ಆಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು ಆಹಾರಗಳಲ್ಲಿ ಕೃತಕ ಬಣ್ಣದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನ ನಿಷೇಧಿಸಲಾಗಿತ್ತು.
ಇದೀಗ ಆರೋಗ್ಯ ಸಚಿವರ ಸೂಚನೆಯಂತೆ ಪರಿಶೀಲನೆ ನಡೆಸಿದ ಅಧಿಕಾರಿಗಳು ಚಿಕನ್ ಕಬಾಬ್ ಮತ್ತು ಫಿಶ್ ಫುಡ್ ನಲ್ಲಿ ಕಲರಿಂಗ್ ಇರುವುದು ಪತ್ತೆಯಾಗಿದೆ. ಕೃತಕ ಬಣ್ಣ ಬೆರಸುವಿಕೆಯಿಂದಾಗಿ ಚಿಕನ್ ಕಬಾಬ್ ಕಳಪೆಯಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುವುದು ಕಂಡುಬಂದಿದೆ. ಈ ಹಿನ್ನಲೆಯಲ್ಲಿ ಹಿನ್ನೆಲೆಯಲ್ಲಿ ಚಿಕನ್ ಕಬಾಬ್, ಫಿಶ್ ಆಹಾರಗಳಲ್ಲಿ ಕೃತಕ ಬಣ್ಣ ಬೆರಸುವಿಕೆಯನ್ನ ನಿಷೇಧಿಸಿ ಆಹಾರ ಸುರಕ್ಷತಾ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಕಾನೂನು ಉಲ್ಲಂಘಿಸಿದ್ರೆ 7 ವರ್ಷದಿಂದ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ವರೆಗಿನ ದಂಡ ವಿಧಿಸಲು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಲಾಗಿದೆ.
ರಾಜ್ಯಾದ್ಯಂತ ಮಾರಾಟ ಮಾಡಲಾಗುತ್ತಿರುವ 39 ಕಬಾಬ್‌ಗಳ ಮಾದರಿಗಳನ್ನು ಸಂಗ್ರಹಿಸಿ ರಾಜ್ಯ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. 08 ಕಬಾಬ್‌ನ ಮಾದರಿಗಳು ಕೃತಕ ಬಣ್ಣದಿಂದ ಕೂಡಿರುವುದರಿಂದ ಅಸುರಕ್ಷಿತ ಎಂದು ವಿಶ್ಲೇಷಣಾ ವರದಿಗಳಲ್ಲಿ ಕಂಡುಬಂದಿದೆ.
- DAKSHINA KANNADA7 days ago
ಫುಟ್ ಬೋರ್ಡ್ನಲ್ಲಿ ನೇತಾಡಿ ಪ್ರಯಾಣಿಸಿದ ವಿದ್ಯಾರ್ಥಿಗಳು; ಬಸ್ ಸೀಝ್
- LATEST NEWS3 days ago
ಆಪಲ್ ಮೊಬೈಲ್ ವಿರುದ್ಧ ಗ್ರಾಹಕರ ಪ್ರತಿಭಟನೆ
- International news3 days ago
ಖಾಸಗಿ ಬಾಹ್ಯಾಕಾಶ ನಡಿಗೆ ಯಶಸ್ವಿ; ಸುರಕ್ಷಿತವಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು
- BELTHANGADY6 days ago
ಬೆಳ್ತಂಗಡಿ: ತಂದೆ ತೀರ್ಪುಗಾರ… ಮಗಳಿಗೆ ಪ್ರಥಮ ಸ್ಥಾನ