Connect with us

LATEST NEWS

‘ತಮ್ಮದೂ ಸಿ.ಡಿ ಇದೆ ಎಂದು ಗೌಡರು ಒಪ್ಪಿಕೊಂಡಂತಾಗಿದೆ’ ಕಾಂಗ್ರೆಸ್‌ ಟ್ವೀಟ್‌

Published

on

ಬೆಂಗಳೂರು: ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬುದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ.  ಎಂದು ತಮ್ಮ ವಿರುದ್ದ ಯಾವುದೇ ಮಾನಹಾನಿಕರ ವರದಿ ಮಾಡದಂತೆ ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ತಂದ ನಿರ್ಬಂಧಕಾಜ್ಞೆ ಕುರಿತು ರಾಜ್ಯ ಕಾಂಗ್ರೆಸ್  ಟ್ವಿಟ್ಟರ್‌ನಲ್ಲಿ ವ್ಯಂಗ್ಯವಾಡಿದೆ.

ಈ ಕುರಿತು ಟ್ವಿಟರ್ ನಲ್ಲಿ ಟ್ಟೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್, ತಮ್ಮವರಿಂದಲೇ ಬ್ಲ್ಯಾಕ್‌ ಮೇಲ್‌ ಜನತಾ ಪಾರ್ಟಿ ಎಂದು ಕರೆಸಿಕೊಂಡ ಬಿಜೆಪಿಯಲ್ಲಿ ಬ್ಲಾಕ್‌ಮೇಲ್ ಭರ್ಜರಿಯಾಗಿ ನಡೆಯುತ್ತಿರುವಂತಿದೆ. ಕಂಡವರ ಬೆಡ್ ರೂಮಲ್ಲಿ ಕ್ಯಾಮೆರಾ ಇಡುವ ಚಾಳಿ ಹೊಂದಿರುವ ಕರ್ನಾಟಕದ ಬಿಜೆಪಿ ನಾಯಕರು ಡಿವಿ ಸದಾನಂದ ಗೌಡ ಅವರನ್ನೂ ಬ್ಲಾಕ್‌ಮೇಲ್ ಮಾಡುತ್ತಿರುವಂತಿದೆ. ಬಿಜೆಪಿಯಲ್ಲಿ ಸ್ವಚ್ಛ ಚಾರಿತ್ರ್ಯ ಹೊಂದಿದವರು ಒಬ್ಬರೂ ಇಲ್ಲ ಎಂದು ಹೇಳಿದೆ.

ಮತ್ತೊಂದು ಟ್ವೀಡಲ್ ನಲ್ಲಿ ಸದಾನಂದಗೌಡ ಅವರನ್ನು ಲೇವಡಿ ಮಾಡಿರುವ ಕಾಂಗ್ರೆಸ್, ಕಳ್ಳನ ಮನಸು ಹುಳ್ಳುಳ್ಳಗೆ ಎಂಬಂತೆ ಕೇಂದ್ರ ಸಚಿವ ಸದಾನಂದ ಗೌಡ ಅವರು ಸಿಡಿ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದಿದ್ದಾರೆ, ತಡೆಯಾಜ್ಞೆ ತಂದ ಬಿಜೆಪಿಗರಲ್ಲಿ ಇವರು ಏಳನೆಯವರು! ಬಿಜೆಪಿಯವರಿಗೇ ಏಕೆ ಈ ಪರಿ ಸಿಡಿ ಭಯ ಕಾಡುವುದು ಎಂಬುದೇ ಯಕ್ಷಪ್ರಶ್ನೆ. ತಡೆಯಾಜ್ಞೆ ತರುವ ಮೂಲಕ ತಮ್ಮದೂ ಸಿಡಿ ಇದೆ ಎಂದು ಗೌಡರು ಸ್ವಯಂ ಒಪ್ಪಿಕೊಂಡಂತಾಗಿದೆ ಎಂದು ಹೇಳಿ ಅಪಹಾಸ್ಯಕ್ಕೆ ಗುರಿ ಮಾಡಿದೆ.

LATEST NEWS

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

Published

on

ನವದೆಹಲಿ : ಕೋವಿಡ್ 19 ವೈರಸ್ ಪ್ರತಿರೋಧಕ ಲಸಿಕೆ ಕೋವಿಶೀಲ್ಡ್ ಅಡ್ಡ ಪರಿಣಾಮ ಬೀರಬಲ್ಲದು ಎಂದು ತಯಾರಿಕಾ ಕಂಪೆನಿ ಆಕ್ಸ್ ಫರ್ಡ್ ಆಸ್ಟ್ರಾ ಜೆನಿಕಾ ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ, ತನ್ನ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಂಡಿದೆ.


ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಲಸಿಕೆ ಪಡೆದ ಹಲವರು ಕಂಪೆನಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಲಿದೆ ಕೋವಿಶೀಲ್ಡ್ :

ಪ್ರಕರಣದ ವಿಚಾರಣೆ ನಡೆಸಿದ ಕಂಪೆನಿಯು ಕೆಲವು ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್ ವಿತ್ ಥ್ರಂಬೋ ಸೈಟೋಪೆನಿಯಾ ಸಿಂಡ್ರೋಮ್(ಟಿಟಿಎಸ್) ಎಂಬ ಅಡ್ಡ ಪರಿಣಾಮದ ತೀವ್ರತೆಗೆ ಕಾರಣವಾಗುದೆಂದು ಕಂಪೆನಿಯು ಒಪ್ಪಿಕೊಂಡಿದೆ.

ಇದನ್ನೂ ಓದಿ : ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದು..!

ಕಂಪೆನಿ ವಿರುದ್ಧ ಹಲವು ಪ್ರಕರಣ :

ಆ್ಯಸ್ಟ್ರಾಜೆನಿಕಾ ಕಂಪನಿಯ ವಿರುದ್ಧ ಲಂಡನ್ ಹೈಕೋರ್ಟ್ ನಲ್ಲಿ 51 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹಲವಾರು ಮಂದಿ ಕಂಪನಿಯಿಂದ ತಮಗೆ ಅಥವಾ ತಮ್ಮ ಸಂಬಂಧಿಕರಿಗೆ ಆಗಿರುವ ಪ್ರಾಣ ಹಾನಿ, ಅಂಗಾಂಗ ಹಾನಿ, ಆರೋಗ್ಯ ಹಾನಿಗೆ ಪ್ರತಿಯಾಗಿ ಪರಿಹಾರವನ್ನು ಆಕ್ಸ್ ಫರ್ಡ್ ಆ್ಯಸ್ಟ್ರಾಜೆನಿಕಾ ಕಂಪನಿಯಿಂದ ಕೊಡಿಸಬೇಕು ಎಂದು ಕೋರಿದ್ದಾರೆ. ಆ ದಾವೆಗಳ ಒಟ್ಟಾರೆ ಪರಿಹಾರ ಮೊತ್ತ 100 ದಶಲಕ್ಷ ಪೌಂಡ್ (1047.32 ಕೋಟಿ ರೂಪಾಯಿ) ಆಗಿದೆ.

Continue Reading

LATEST NEWS

ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದು..!

Published

on

ದೆಹಲಿ: ಸುಪ್ರೀಂಕೋರ್ಟ್ ನಲ್ಲಿ ಪ್ರತೀ ಬಾರಿಯೂ  ಛೀಮಾರಿ ಹಾಕಿಸಿಕೊಳ್ಳುತ್ತಿರುವ ಯೋಗಗುರು ಬಾಬಾರಾಮದೇವ್ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇದೀಗ ಉತ್ತರಾಖಂಡ ಸರಕಾರ ಬಾಬಾರಾಮದೇವ್‌ ವಿರುದ್ಧ ಖಡಕ್ ನಿರ್ಧಾರ ತೆಗೆದುಕೊಂಡಿದೆ.

pathanjali

ಆರ್ಯುವೇದ ಉತ್ಪನ್ನಗಳ ಕುರಿತು ವಿವಾದಾ ತ್ಮಕ ಜಾಹೀರಾತು ನೀಡಿದ ಎದುರಿಸುತ್ತಿರುವ ಯೋಗ ಗುರು ಬಾಬಾ ರಾಮ್‌ದೇವ್ ಅವರ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್ ಅನ್ನು ರದ್ದು ಮಾಡಿ ಉತ್ತರಾಖಂಡ ಸರ್ಕಾರ ನಿರ್ಧಾರ ಕೈಗೊಂಡಿದೆ.

ಮುಂದೆ ಓದಿ..; ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?

ಈ ಕುರಿತು ಅದು ಸೋಮವಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆ ಮಾಡಿದೆ. ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯಾ ಫಾರ್ಮಸಿ ಉತ್ಪಾದಿಸುವ ‘ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್‌ಸ್ಟ್ರಾ ಪವರ್‌’, ‘ಲಿಪಿ ಡೋಮ್ “, ‘ಮಧುಗ್ರಿಟ್’, ‘ಮಧುನಾ ಶಿನಿ ವಟಿ ಎಕ್ಷಾ ಪವರ್’, ‘ಲಿವಾಮೃತ್‌ ಅಡ್ವಾನ್ಸ್’, ‘ಲಿವೋ ಗ್ರಿಟ್’, ‘ಐಗ್ರಿಟ್ ಗೋಲ್ಡ್’ ಉತ್ಪನ್ನಗಳ ಲೈಸೆನ್ಸ್‌ ರದ್ದು ಮಾಡಲಾಗಿದೆ.

 

Continue Reading

LATEST NEWS

70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

Published

on

ಇತ್ತೀಚೆಗೆ ಯುವಕರು ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ ಎಂದು ಗೋಳಾಡುವುದನ್ನು ಕಾಣುತ್ತೇವೆ ಹುಡುಗಿಯರು ಸಿಗುತ್ತಿಲ್ಲವೆಂದು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಇತ್ತೀಚೆಗೆ ಆಟೋ ಮೂಲಕ ಪ್ರಚಾರ, ವೀಡಿಯೋ ಮೂಲಕ ಪ್ರಚಾರ ಹೀಗೆ ನಾನಾ ರೀತಿಯಲ್ಲಿ ‘ವಧು ಬೇಕಾಗಿದ್ದಾಳೆ’ ಎಂದು ಜಾಹೀರಾತು ನೀಡುತ್ತಾರೆ. ಅದೇನೋ ಯುವಕರು ಬಿಡಿ…ಆದರೆ, ಇಲ್ಲಿ 70 ರ ಹರೆಯದ ವೃದ್ಧನೂ ಜಾಹೀರಾತು ಕೊಟ್ಟಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ!

ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು?

ವಯಸಾಗುತ್ತಿದ್ದಂತೆ ಸಂಗಾತಿಯ ಆಸರೆ ಬೇಕಾಗುತ್ತದೆ. ಒಂಟಿಯಾಗಿರುವುದು ಕಷ್ಟ ಎಂದೆನಿಸುತ್ತದೆ. ಈಗ ಈ ಅಜ್ಜನಿಗೂ ಮದುವೆಯಾಗಲು ಮನಸ್ಸಾಗಿದೆ. ಸಂಗಾತಿಯ ಸಂಗಡ ಬೇಕೆನಿಸಿ ಆತ ಗೆಳತಿಯ ಅರಸುತ್ತಿದ್ದಾರೆ. ಆತನ ವಯಸ್ಸು 70 ವರ್ಷ…ತನಗೆ ಜೊತೆಗಾರ್ತಿ ಬೇಕೆಂಬ ಹಂಬಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ.

ಜಾಹೀರಾತಿಗಾಗಿ ಆತ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತಾ!? 30 ಸಾವಿರ ರೂಪಾಯಿ. ಆತ ವಾರಕ್ಕೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆಯಂತೆ.

ಆಕೆ ಕರೆದಲ್ಲಿ ಹೋಗಲು ಸಿದ್ಧ!

ಅಂದಹಾಗೆ ವೃದ್ಧನ ಹೆಸರು ಗಿಲ್ಬರ್ಟ್. ಆತ ಅಮೆರಿಕಾದ ಟೆಕ್ಸಾಸ್ ನ ಸ್ವೀಟ್ ವಾಟರ್ ಸಿಟಿಯಲ್ಲಿ ವಾಸವಿದ್ದಾನೆ. 20 ಅಡಿ ಬಿಲ್ ಬೋರ್ಡ್ ಹಾಕಿಸಿ ಪ್ರತಿವಾರ $400 ನೀಡುತ್ತಿದ್ದಾನೆ. ಒಂಟಿಯಾಗಿರುವ ತನಗೆ ಸಂಗಾತಿ ಹುಡುಕುತ್ತಿರುವುದಾಗಿ ಆತ ಜಾಹೀರಾತು ಮೂಲಕ ತಿಳಿಸಿದ್ದಾನೆ. ಜೊತೆಗೆ ಆತ. ಆಕೆ ಕರೆದ ಕಡೆ ರಿಲೊಕೇಟ್ ಆಗಲು ಸಹ ಸಿದ್ಧನಿದ್ದಂತೆ. ಆಕೆಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ, ಎಲ್ಲಿ ಬೇಕಾದರೂ ರಿ ಲೊಕೇಟ್ ಆಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

ನಾನು ಬಿಲ್‌ಬೋರ್ಡ್‌ ಜಾಹೀರಾತು ಹಾಕಿಸಿದ್ದು ಕಂಡು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಬಹುತೇಕರು ಹಣ ಮಾತ್ರ ಕೇಳುತ್ತಿದ್ದಾರೆ. ನಾನು ಜಾಹೀರಾತು ನೀಡಿದ್ದು ಕಂಡು ಅವರು ನಾನು ಶ್ರೀಮಂತ ಎಂದುಕೊಂಡಿದ್ದಾರೆ. ಹೀಗಾಗಿ ನನಗೆ ಬರುವ ಕರೆಗಳನ್ನು ಪರಿಶೀಲಿಸಲು ನಾನು ನನ್ನ ಸ್ನೇಹಿತರಿಗೆ ವರ್ಗಾಯಿಸುತ್ತೇನೆ ಅವರು ವಿಚಾರಣೆ ನಡೆಸುತ್ತಾರೆ ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.

ನನಗೆ ಸರಿಯಾದ ವ್ಯಕ್ತಿ ಸಿಕ್ಕರೆ ನಾನು ಎಲ್ಲಿಗೆ ಬೇಕಾದರು ಪ್ರಯಾಣಿಸುತ್ತೇನೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಅವರ ಕಣ್ಣುಗಳನ್ನು ನೋಡಲು ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಯಾರನ್ನಾದರೂ ಭೇಟಿಯಾಗಲು ಯುರೋಪಿಗೆ ಬೇಕಾದರು ನಾನು ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

ಹಲವರಿಂದ ಕರೆ !

ಗಿಲ್ಬರ್ಟ್ 2015 ರಿಂದ ಒಂಟಿಯಾಗಿ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತ ಜಾಹೀರಾತು ನೋಡಿ ಕರೆ ಮಾಡುವವರು ಮೊದಲಿಗೆ ಹಣ ಮತ್ತು ಆಸ್ತಿ ಕುರಿತು ವಿಚಾರಣೆ ನಡೆಸುತ್ತಿದ್ದಾರಂತೆ. ಅಲ್ಲದೆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಆತನ ಜೊತೆ ಇರಲು ಬಯಸಿರುವುದಾಗಿಯೂ ಹೇಳಿದ್ದಾರಂತೆ. ಆದರೆ ತಾನು ಆಸ್ತಿ, ಹಣದ ಹಿಂದೆ ಬಿದ್ದು ಈ ರೀತಿ ಜಾಹೀರಾತು ನೀಡಿಲ್ಲ, ಕೊನೆಯ ದಿನಗಳಲ್ಲಿ ನನ್ನ ಜೊತೆ ಇರುವವರು ಬೇಕಾಗಿದ್ದಾರೆ. ಅಂತವರು ಸಿಗುವವರೆಗೆ ಹುಡುಕುತ್ತೇವೆ ಎಂದಿದ್ದಾರೆ.

ಅಲ್ಲದೆ ಜಾಹೀರಾತು ನೋಡಿ ಆ ಮೂಲಕ ಸಂಪರ್ಕಿಸುವವರು ಹೆಚ್ಚಿನವರು ಕುಟುಂಬ, ಮದುವೆಯಾಗಿ ಮಕ್ಕಳು ಇದ್ದವರು ಆಗಿದ್ದಾರಂತೆ. ಅವರಲ್ಲಿ ಕೆಲವರು ಹಣ ನೀಡಿದರೆ ಅವರ ಜೊತೆ ಮನೆಯಲ್ಲಿ ಬಿಟ್ಟುಕೊಳ್ಳುವುದಾಗಿಯೂ ಆಫರ್ ನೀಡಿದ್ದರಂತೆ. ಇದನ್ನು ತಿರಸ್ಕರಿಸಿರುವುದಾಗಿ ಗಿಲ್ಬರ್ಟ್ ತಿಳಿಸಿದ್ದಾರೆ.

ನನ್ನ ಬಳಿ ಯಾವ ಆಸ್ತಿ ಇಲ್ಲ ಎಂದಿರುವ ಗಿಲ್ಬರ್ಟ್, ವಯಸ್ಸಿನಲ್ಲಿ ದುಡಿದ ಹಣ, ಒಂದು ಮನೆ ಇದೆ, ಹಣ ಮಾಡುವ ವಯಸ್ಸು ಸಹ ನನಗಿಲ್ಲ. ನಾನು ಶ್ರೀಮಂತನಲ್ಲ. ಜಾಹೀರಾತು ನೀಡಿದ್ದು ನೋಡಿ ಎಲ್ಲರು ನಾನು ಶ್ರೀಮಂತ ಕರೆ ಮಾಡುತ್ತಾರೆ. ನನ್ನ ಬಳಿ ಹಣವಿಲ್ಲವೆಂದಾಗ ಕರೆ ಕಟ್ ಮಾಡುತ್ತಿದ್ದಾರೆ ಎಂದು ಗಿಲ್ಬರ್ಟ್ ಅಳಲು ತೋಡಿಕೊಂಡಿದ್ದಾರೆ.

Continue Reading

LATEST NEWS

Trending