Connect with us

LATEST NEWS

Chikkaballapur: ಬಸ್ ಡಿಪೋ ಮ್ಯಾನೇಜರ್ ಕಚೇರಿ ಎದುರು ಚಾಲಕ ಆತ್ಮಹತ್ಯೆ..!

Published

on

ಚಾಲಕ ಕಂ ನಿರ್ವಾಹಕರೊಬ್ಬರು  ಬಿಎಂಟಿಸಿ ಬಸ್ ಡಿಪೋದಲ್ಲಿ ಮ್ಯಾನೇಜರ್ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಚಾಲಕ ಕಂ ನಿರ್ವಾಹಕರೊಬ್ಬರು  ಬಿಎಂಟಿಸಿ ಬಸ್ ಡಿಪೋದಲ್ಲಿ ಮ್ಯಾನೇಜರ್ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.

ಆವತಿ ಗ್ರಾಮದ ನಿವಾಸಿ ನಾಗೇಶ್ (45) ಆತ್ಮಹತ್ಯೆಗೆ ಶರಣಾದ ನೌಕರ ಎಂದು ಗುರುತಿಸಲಾಗಿದೆ.

ನಾಗೇಶ್ ಅವರು ಕಳೆದ ರಾತ್ರಿ ಡಿಪೋಗೆ ಆಗಮಿಸಿ ಮ್ಯಾನೇಜರ್ ಕಚೇರಿ ಎದುರು ನೇಣಿಗೆ ಶರಣಾಗಿದ್ದಾರೆ.

ಬೆಳಿಗ್ಗಿನ ಜಾವ  ಸಿಬ್ಬಂದಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡ  ಘಟನೆ ಬೆಳಕಿಗೆ ಬಂದಿದೆ.

ನಾಗೇಶ್  ಅವರು ಕೆಲಸಕ್ಕೆ ಪದೇ ಪದೇ ರಜೆ ಹಾಕುತ್ತಿದ್ದ ಎನ್ನಲಾಗಿದ್ದು, ಈ ಕಾರಣಕ್ಕೆ ಕಳೆದ 15 ದಿನಗಳಿಂದ ಕೆಲಸಕ್ಕೆ ಹಾಜರಾದರೂ ನಾಗೇಶ್‌ಗೆ ಕೆಲಸ ಕೊಟ್ಟಿರಲಿಲ್ಲ.

ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಗೇಶ್ ಸಹೋದ್ಯೋಗಿಗಳು ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ನಿಧನದ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ

Published

on

ಸುಳ್ಯ :  ಸಹೋದರರಿಬ್ಬರು ಸಾ*ವಿನಲ್ಲೂ ಒಂದಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ 82 ವರ್ಷದ ಎಸ್. ಇ. ಅಬ್ದುಲ್ಲಾ ಹಾಗೂ ಮಹಮ್ಮದ್ ಎಸ್. ಇ  ಮೃ*ತ ಸಹೋದರರು.

ಅಬ್ದುಲ್ಲಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧ*ನರಾಗಿದ್ದಾರೆ. ಈ ವಿಚಾರ ತಿಳಿದ ಅವರ ಸಹೋದರ ಮಹಮ್ಮದ್ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

ಇಬ್ಬರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Continue Reading

LATEST NEWS

ಮಕ್ಕಳ ಮುಂದೆಯೇ ದಾಂಪತ್ಯಕ್ಕೆ ಕಾಲಿಟ್ಟ ವೃದ್ದರು..!! ಅಚ್ಚರಿಯಾದ್ರು ಇದು ಸತ್ಯ..!!

Published

on

ಇತ್ತೀಚೆಗೆ ಹದಿ ಹರೆಯದ ಯುವತಿಯರು ಐವತ್ತು ಮೇಲ್ಪಟ್ಟ ವಯಸ್ಸಿನವರನ್ನು ವರಿಸೋದನ್ನ ಕೇಳಿದ್ದೇವೆ. ಇನ್ನೂ ಅದೆಷ್ಟೋ ಜೋಡಿಗಳು ಪ್ರೀತಿಯಲ್ಲಿದ್ದು ಮದುವೆಯಾಗಲು ಸಾಧ್ಯವಾಗದೆ ನರಕಯಾತನೆಯನ್ನೂ ಅನುಭವಿಸ್ತಾರೆ. ಆದರೆ ಇಲ್ಲೊಂದು ವೃದ್ಧ ಜೋಡಿ  60 ವರ್ಷಗಳಿಂದ ಪ್ರೀತಿಯಲ್ಲಿದ್ದು ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಇದು ಅಚ್ಚರಿಯಾದ್ರು ಸತ್ಯ. ಈ ಅಪರೂಪದ ಘಟನೆ ಮಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ.

80 ವರ್ಷದ ಸಮೀದಾ ನಾಯ್ಕ,  70 ವರ್ಷದ ಗೋಗುಲೋತ್ ಲಾಲಿ ಎಂಬ ತನ್ನಗೆಳತಿಯನ್ನು ಮದುವೆಯಾಗಿದ್ದಾರೆ. ಅಷ್ಟಕ್ಕೂ ಇವರಿಬ್ಬರು ಒಟ್ಟಿಗೆ ಜೀವನ ನಡೆಸ್ತಾ ಇದ್ರು. ಆದರೆ ಅಗ್ನಿಸಾಕ್ಷಿಯಾಗಿ ಮದುವೆ ಆಗಿರಲಿಲ್ಲ. ಅಲ್ಲದೆ ಇವರಿಬ್ಬರಿಗೂ ಮಕ್ಕಳು ಕೂಡಾ ಇದ್ದಾರೆ.  ಇಬ್ಬರೂ ಪ್ರೀತಿಸಿ ಹಿಂದಿನ ಕಾಲದಲ್ಲಿ ಆಗುವ ಹಾಗೆ ಗಂಧರ್ವ ವಿವಾಹವಾಗಿದ್ದಾರೆ. ಕೇವಲ ಹಾರ ಮಾತ್ರ ಬದಲಾಯಿಸಿಕೊಂಡಿದ್ದಾರೆ. ಹಿಂದಿನ ಕಾಲದಲ್ಲಿ ತಾಳಿ ಕಟ್ಟುವ ಸಂಪ್ರದಾಯ ಇರಲಿಲ್ಲ. ಹಾಗಾಗಿ ಹಾರ ಮಾತ್ರ ಬದಲಾಯಿಸಿಕೊಂಡು ಸಂಸಾರ ನಡೆಸಿದ್ದಾರೆ. ಇವರಿಗೆ ನಾಲ್ಕು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳಿದ್ದಾಳೆ.

ಮುಂದೆ ಓದಿ..; ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?

ಮದುವೆಯಾಗದೆ ಒಟ್ಟಿಗೆ ಜೀವನ ನಡೆಸುತ್ತಿದ್ದ ಇವರಿಬ್ಬರಿಗೆ ಮಕ್ಕಳು ಮೊಮ್ಮಕ್ಕಳು ಸೇರಿ ಮದುವೆ ಮಾಡಿಸಿದ್ದಾರೆ. ತಾಯಿಯ ಕೊರಳಲ್ಲಿ ತಾಳಿ ಇರಲಿಲ್ಲ. ಈ ನೋವನ್ನು ಅರ್ಥ ಮಾಡಿಕೊಂಡ ಈ ಕಾರ್ಯವನ್ನು ಮಾಡಿದ್ದಾರೆ. ಈ ವೃದ್ಧ ದಂಪತಿಗೆ ಸಂಪ್ರದಾಯದಂತೆ ಕುಟುಂಬದವರು ಸೆರಿಕೊಂಡು ಮದುವೆ ಮಾಡಿಸಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಾ ಇದೆ.

 

Continue Reading

LATEST NEWS

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

Published

on

ನವದೆಹಲಿ : ಕೋವಿಡ್ 19 ವೈರಸ್ ಪ್ರತಿರೋಧಕ ಲಸಿಕೆ ಕೋವಿಶೀಲ್ಡ್ ಅಡ್ಡ ಪರಿಣಾಮ ಬೀರಬಲ್ಲದು ಎಂದು ತಯಾರಿಕಾ ಕಂಪೆನಿ ಆಕ್ಸ್ ಫರ್ಡ್ ಆಸ್ಟ್ರಾ ಜೆನಿಕಾ ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ, ತನ್ನ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂಬ ಅಪರೂಪದ ಅಡ್ಡ ಪರಿಣಾಮವನ್ನು ಉಂಟುಮಾಡಬಹುದು ಎಂದು ಒಪ್ಪಿಕೊಂಡಿದೆ. ಕಂಪನಿಯ ವಿರುದ್ಧ ದಾಖಲಾಗಿರುವ ಒಂದು ಮೊಕದ್ದಮೆಯ ಸಂದರ್ಭದಲ್ಲಿ ಇದನ್ನು ಒಪ್ಪಿಕೊಂಡಿದೆ.


ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಆಸ್ಟ್ರಾಜೆನಿಕಾ ಕಂಪನಿ ಕೋವಿಶೀಲ್ಡ್ ಲಸಿಕೆಯನ್ನು ಅಭಿವೃದ್ಧಿಪಡಿಸಿತ್ತು. ಲಸಿಕೆ ಪಡೆದ ಹಲವರು ಕಂಪೆನಿ ವಿರುದ್ಧ ಬ್ರಿಟನ್ ಕೋರ್ಟ್ ನಲ್ಲಿ ದಾವೆ ಹೂಡಿದ್ದರು.

ರಕ್ತ ಹೆಪ್ಪುಗಟ್ಟುವಿಕೆಗೆ ಕಾರಣವಾಗಲಿದೆ ಕೋವಿಶೀಲ್ಡ್ :

ಪ್ರಕರಣದ ವಿಚಾರಣೆ ನಡೆಸಿದ ಕಂಪೆನಿಯು ಕೆಲವು ಅಪರೂಪದ ಪ್ರಕರಣಗಳಲ್ಲಿ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ರಕ್ತ ಹೆಪ್ಪುಗಟ್ಟುವಿಕೆ, ಪ್ಲೇಟ್ ಲೆಟ್ ಗಳ ಸಂಖ್ಯೆ ಕಡಿಮೆಯಾಗುವ ಥ್ರಂಬೋಸಿಸ್ ವಿತ್ ಥ್ರಂಬೋ ಸೈಟೋಪೆನಿಯಾ ಸಿಂಡ್ರೋಮ್(ಟಿಟಿಎಸ್) ಎಂಬ ಅಡ್ಡ ಪರಿಣಾಮದ ತೀವ್ರತೆಗೆ ಕಾರಣವಾಗುದೆಂದು ಕಂಪೆನಿಯು ಒಪ್ಪಿಕೊಂಡಿದೆ.

ಇದನ್ನೂ ಓದಿ : ಪತಂಜಲಿಯ 14 ಉತ್ಪನ್ನಗಳ ಲೈಸನ್ಸ್ ರದ್ದು..!

ಕಂಪೆನಿ ವಿರುದ್ಧ ಹಲವು ಪ್ರಕರಣ :

ಆ್ಯಸ್ಟ್ರಾಜೆನಿಕಾ ಕಂಪನಿಯ ವಿರುದ್ಧ ಲಂಡನ್ ಹೈಕೋರ್ಟ್ ನಲ್ಲಿ 51 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹಲವಾರು ಮಂದಿ ಕಂಪನಿಯಿಂದ ತಮಗೆ ಅಥವಾ ತಮ್ಮ ಸಂಬಂಧಿಕರಿಗೆ ಆಗಿರುವ ಪ್ರಾಣ ಹಾನಿ, ಅಂಗಾಂಗ ಹಾನಿ, ಆರೋಗ್ಯ ಹಾನಿಗೆ ಪ್ರತಿಯಾಗಿ ಪರಿಹಾರವನ್ನು ಆಕ್ಸ್ ಫರ್ಡ್ ಆ್ಯಸ್ಟ್ರಾಜೆನಿಕಾ ಕಂಪನಿಯಿಂದ ಕೊಡಿಸಬೇಕು ಎಂದು ಕೋರಿದ್ದಾರೆ. ಆ ದಾವೆಗಳ ಒಟ್ಟಾರೆ ಪರಿಹಾರ ಮೊತ್ತ 100 ದಶಲಕ್ಷ ಪೌಂಡ್ (1047.32 ಕೋಟಿ ರೂಪಾಯಿ) ಆಗಿದೆ.

Continue Reading

LATEST NEWS

Trending