Connect with us

    LATEST NEWS

    ಚೈತ್ರಾ ಕುಂದಾಪುರ ವಂಚನೆ ಪ್ರಕರಣ: ಇನ್ನೋರ್ವ ಪ್ರಮುಖ ಆರೋಪಿ ಹಾಲಶ್ರೀ ಬಂಧನ

    Published

    on

    ಎಂಎಲ್​ಎ ಟಿಕೆಟ್​ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಪ್ರಮುಖ ಆರೋಪಿ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಮಂಗಳೂರು: ಬಿಜೆಪಿ ಟಿಕೆಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ಸ್ವಾಮೀಜಿ ಒಡಿಶಾದಲ್ಲಿ ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

    ಬಿಜೆಪಿ ಟಿಕೆಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿ ಹೊಸಪೇಟೆಯ ಹಿರೇಹಡಗಲಿಯ ಅಭಿನವ ಹಾಲಶ್ರೀ ಮಠದ ಹಾಲವೀರಪ್ಪ ಸ್ವಾಮೀಜಿ ಒಡಿಶಾದಲ್ಲಿ ಪತ್ತೆಯಾಗಿದ್ದು, ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ಬೆಂಗಳೂರಿಗೆ ಕರೆ ತರುತ್ತಿದ್ದಾರೆ.

    ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಬಿಜೆಪಿ ಟಿಕೆಟ್ ಕೊಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿದ್ದ ಪ್ರಕರಣದ ತನಿಖೆ ಕೈಗೊಂಡಿರುವ ಸಿಸಿಬಿ ಪೊಲೀಸರು, ಆರೋಪಿ ಚೈತ್ರಾ ಕುಂದಾಪುರ ಮತ್ತು ಇತರರನ್ನು ಈಗಾಗಲೇ ಬಂಧಿಸಿದ್ದಾರೆ.

    ಆರೋಪಿ ಹಾಲವೀರಪ್ಪ ಸ್ವಾಮೀಜಿ ಕೂಡಾ ದೂರುದಾರ ಗೋವಿಂದ ಬಾಬು ಪೂಜಾರಿ ಅವರಿಂದ 1.50 ಕೋಟಿ ರೂಪಾಯಿ ಪಡೆದಿರುವ ಆರೋಪವಿದೆ.

    ಪ್ರಕರಣ ದಾಖಲಾಗುತ್ತಿದ್ದಂತೆ ಸ್ವಾಮೀಜಿ ತಲೆಮರೆಸಿಕೊಂಡಿದ್ದರು. ‘ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ, ಅಲ್ಲಿಂದ ಒಡಿಶಾಗೆ ಪ್ರಯಾಣ ಬೆಳೆಸಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ವಿಶೇಷ ತಂಡ ಒಡಿಶಾಗೆ ತೆರಳಿತ್ತು.

    ಅದು ಗೊತ್ತಾಗುತ್ತಿದ್ದಂತೆ, ಸ್ವಾಮೀಜಿ ಭುವನೇಶ್ವರದಿಂದ ಭೋದ್ ಗಯಾಗೆ ರೈಲಿನಲ್ಲಿ ತೆರಳುತ್ತಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ರೈಲು ಪ್ರಯಾಣದ ವೇಳೆಯಲ್ಲೇ ಸ್ವಾಮೀಜಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

    ವಿಶೇಷ ತಂಡದ ಸಿಬಂದಿ ಸ್ವಾಮೀಜಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಅವರು ತಲುಪಿದ ಬಳಿಕ ಮುಂದಿನ ಕಾನೂನು ಪ್ರಕ್ರಿಯೆ ನಡೆಸಲಾಗುವುದು’ ಸಿಸಿಬಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    DAKSHINA KANNADA

    ತುಳುನಾಡಿನಲ್ಲಿ ಪತ್ತನಾಜೆ ಆರಂಭ..! ಇನ್ನು ನಡೆಯುವುದಿಲ್ಲ ಶುಭಕಾರ್ಯ…!

    Published

    on

    ಮಂಗಳೂರು: ತುಳುನಾಡಿನ ಸಂಪ್ರದಾಯದ ಪ್ರಕಾರ ವೃಷಭ ಮಾಸದ ಹತ್ತನೇ ದಿನ ಪತ್ತನಾಜೆ ಮಹತ್ವದ ದಿನ. ಈ ವರ್ಷ ಮೇ 24 ರಂದು ಪತ್ತನಾಜೆ ಬರುತ್ತಿದ್ದು, ಅಂದಿನಿಂದ ಮಳೆಗಾಲ ಮುಗಿಯುವವರೆಗೆ ಯಾವುದೇ ಉತ್ಸವಗಳು ನಡೆಯುದಿಲ್ಲ. ಯಕ್ಷಗಾನ ಮೇಳಗಳ ಕಲಾವಿದರು ಪ್ರದರ್ಶನ ಮುಗಿಸಿ ಕಾಲಗೆಜ್ಜೆಯನ್ನು ವಿಧಿವತ್ತಾಗಿ ಬಿಚ್ಚುವುದು ಪತ್ತನಾಜೆಯಂದು.

     

    ಸೀಮೆಯ ಪ್ರಧಾನ ದೇವಸ್ಥಾನಗಳ ಕೊಡಿಮರ ಇಳಿಸುವ ಕಾರ್ಯಕ್ರಮವೂ ಪತ್ತನಾಜೆಯ ದಿನವೇ ನಡೆಯುತ್ತದೆ. ಮಳೆಗಾಲದಲ್ಲಿ ಯಾವೂದೇ ಜಾತ್ರೆ, ಅಂಕ ಆಯನ, ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದ ಕಾರಣ ಹಾಗೂ ಕೃಷಿ ಸಂಸ್ಕೃತಿ ಮೂಲವಾಗಿರುವ ತುಳುನಾಡಿನಲ್ಲಿ ಮಳೆಗಾಲ ಪ್ರಾರಂಭಕ್ಕೆ ಮುನ್ನ ಉತ್ಸವಾದಿಗಳನ್ನು ಪೂರೈಸಿ ಕೃಷಿ ಚಟುವಟಿಕೆಗಳಿಗೆ ತಯಾರಿ ಮಾಡಲು ಪತ್ತನಾಜೆ ದಿನವನ್ನು ಉತ್ಸವಗಳ ಕೊನೆಯ ದಿನವನ್ನಾಗಿ ಆಯ್ಕೆ ಮಾಡಲಾಗಿತ್ತು. ಆ ಸಂಪ್ರದಾಯ ಈಗಲೂ ಮುಂದುವರಿದಿದೆ.

    ಯಕ್ಷಗಾನ ಮೇಳಗಳ ಒಡ್ಡೋಲಗಕ್ಕೆ ಮಂಗಳ   

    ಕರಾವಳಿ ಜಿಲ್ಲೆಗಳಲ್ಲಿ ಈ ವರ್ಷ ಸುಮಾರು 40 ಕ್ಕೂ ಅಧಿಕ ಮೇಳಗಳು ಈ ವರ್ಷ ತಿರುಗಾಟ ನಡೆಸಿವೆ. ಸಾವಿರಾರು ಕಲಾವಿದರು ಹಾಗೂ ಇತರರು ಇಲ್ಲಿ ತೊಡಗಿಸಿಕೊಂಡಿದ್ದಾರೆ. ಹೆಚ್ಚಿನ ಮೇಳಗಳು ಈಗಾಗಲೇ ತಮ್ಮ ತಿರುಗಾಟ ನಿಲ್ಲಿಸಿದ್ದರೆ, ಧರ್ಮಸ್ಥಳ, ಕಟೀಲು, ಸಾಲಿಗ್ರಾಮ, ಮಂದಾರ್ತಿ, ಪಾವಂಜೆ, ಹನುಮಗಿರಿ, ಮಾರಣಕಟ್ಟೆ, ಹಾಲಾಡಿ, ಬಪ್ಪನಾಡು ಸಹಿತ ವಿವಿಧ ಮೇಳಗಳ ಆಟ ಇಂದು-ನಾಳೆ ಮುಕ್ತಾಯವಾಗಲಿದೆ.

    ಮಳೆಗಾಲದ ಸಂದರ್ಭ ಮೇಳ ತಿರುಗಾಟ ಇಲ್ಲದಿದ್ದರೂ ಕಲಾವಿದರ ಕೂಡುವಿಕೆಯೊಂದಿಗೆ ಯಕ್ಷಗಾನ ಪ್ರದರ್ಶನ ಕರಾವಳಿಯ ವಿವಿಧ ಕಡೆಗಳಲ್ಲಿ ನಡೆಯುತ್ತವೆ. ಚಿಕ್ಕ ಮೇಳದ ತಿರುಗಾಟ ಮನೆ ಮನೆ ವ್ಯಾಪ್ತಿಗೆ ಬರಲಿದೆ.

    Continue Reading

    DAKSHINA KANNADA

    ತಮ್ಮನ ಅಗಲಿಕೆಯ ಬಗ್ಗೆ ಅಣ್ಣನಿಗೆ ಅನುಮಾನ..! ದಫನ ಭೂಮಿಯಿಂದ ಹೊರ ಬಂತು ಮೃ*ತದೇಹ…!

    Published

    on

    ಸುಳ್ಯ : ತಮ್ಮನ ಸಾ*ವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅಣ್ಣನ ದೂರಿನಂತೆ ಪೊಲೀಸರು ಪ್ರಕರಣದ ಮರು ತನಿಖೆಗೆ ಮುಂದಾಗಿದ್ದಾರೆ. ಹೀಗಾಗಿ ಆರೋಗ್ಯ ಅಧಿಕಾರಿಗಳ ಸಮ್ಮುಖದಲ್ಲಿ ದಫನ ಭೂಮಿಯಲ್ಲಿ ಹೂಳಲಾಗಿದ್ದ ಮೃತ ದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇಂತಹ ಒಂದು ವಿಚಿತ್ರ ಸನ್ನಿವೇಶ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಎಂಬಲ್ಲಿ ನಡೆದಿದೆ.

    ಊಟ ಮಾಡಿ ಮಲಗಿದ್ದ ವ್ಯಕ್ತಿ ಸಾ*ವು :

    ನ್ಯಾಯಾಲಯದ ಆದೇಶದಂತೆ ವಿಟ್ಲ ಹಾಗೂ ಪೊಲೀಸರ ನೇತೃತ್ವದಲ್ಲಿ ಆರೋಗ್ಯ ಅಧಿಕಾರಿಗಳು ಮೃ*ತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನ ನಿವಾಸಿ 44 ವರ್ಷ ಪ್ರಾಯದ ಅಶ್ರಫ್‌ ಎಂಬವರು ಮೇ 5 ರಂದು ಊಟ ಮಾಡಿ ಮಲಗಿದವರು ಮರುದಿನ ಮೃ*ತಪಟ್ಟಿದ್ದರು. ಆದ್ರೆ ಸಾ*ವಿನ ಬಳಿಕ ತರಾತುರಿಯಲ್ಲಿ ಅಶ್ರಫ್ ಪತ್ನಿ ಕಡೆಯವರು ಮೃ*ತದೇಹವನ್ನು ಕನ್ಯಾನದ ಬಂಡಿಯ ರೆಹ್ಮಾನಿಯ ಜುಮ್ಮಾ ಮಸೀದಿಯಲ್ಲಿ ದಫನ ಮಾಡಿದ್ದರು.
    ಆದ್ರೆ, ಮುಂಬೈನಲ್ಲಿದ್ದ ಅಶ್ರಫ್ ಅವರ ಅಣ್ಣ ಇಬ್ರಾಹಿಂ ಅವರು ಇದೊಂದು ಅಸಹಜ ಸಾ*ವು ಎಂದು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು.

    ಇದನ್ನೂ ಓದಿ : ಕಂಟೆಂಟ್‌ ಸ್ಟಾರ್ ನಿಹಾರಿಕಾಗೆ ಒಲಿದು ಬಂತು ಅದೃಷ್ಟ..! ‘ಯಶ್’ ಜೊತೆ ವೀಡಿಯೋ ಮಾಡಿ ಹಿಟ್‌ ಆದ ನಿಹಾರಿಕಾ..

    ಈ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಮಂಗಳೂರು ಯೆನಪೋಯ ಆಸ್ಪತ್ರೆಯ ಫಾರೆನ್ಸ್‌ ತಜ್ಞರು, ಬಂಟ್ವಾಳ ತಹಶೀಲ್ದಾರ್ ಹಾಗೂ ವಿಟ್ಲ ಪೊಲೀಸರ ಸಹಕಾರದೊಂದಿಗೆ ಮೃ*ತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಪ್ರಕರಣದ ಸತ್ಯಾಂಶ ಬಯಲಿಗೆ ಬರಲಿದೆ.

    Continue Reading

    DAKSHINA KANNADA

    ಊಟವಾದ ನಂತರ ನಿದ್ರೆ ಬರುತ್ತದೆಯೇ..? ಈ ರೀತಿ ಮಾಡಿ ನೋಡಿ

    Published

    on

    ಮಂಗಳೂರು: ಊಟವಾದ ನಂತರ ತೂಕಡಿಕೆ ಸಾಮಾನ್ಯ. ಮಧ್ಯಾಹ್ನ ಹೊಟ್ಟೆ ತುಂಬಿದ ನಂತರ ನಿದ್ರೆ ಬಂದಂತಾಗಿ ಕೆಲಸದಲ್ಲಿ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ಹೋಗುವವರಿಗೆ ಇದರಿಂದ ಬಹಳ ಸಮಸ್ಯೆ, ಕಿರಿಕಿರಿ ಉಂಟಾಗುತ್ತದೆ. ಊಟದ ನಂತರದ ಆಲಸ್ಯವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ. ಊಟವಾದ ನಂತರ ನಾವು ಆ್ಯಕ್ಟಿವ್ ಆಗಿರಬೇಕೆಂದರೆ ನಮ್ಮ ದಿನಚರಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

    ಸಾಕಷ್ಟು ನೀರು ಕುಡಿಯಿರಿ:

    ಹೈಡ್ರೇಟೆಡ್ ಆಗಿರಲು ಮತ್ತು ನಿರ್ಜಲೀಕರಣವನ್ನು ಎದುರಿಸಲು ಊಟದ ನಂತರ ಸಾಕಷ್ಟು ನೀರು ಕುಡಿಯಿರಿ. ಇದು ಆಯಾಸದ ಭಾವನೆಗಳಿಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿದರೆ ಊಟದ ನಂತರ ನಿದ್ದೆ ಬರುವುದಿಲ್ಲ.

    ತಿಂಡಿ ತಿನ್ನಿ:

    ಊಟದ ನಡುವೆ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸಲು ತಾಜಾ ಹಣ್ಣುಗಳು, ನಟ್ಸ್ ಅಥವಾ ಪೌಷ್ಟಿಕಾಂಶದ ತಿಂಡಿಗಳನ್ನು ಸೇವಿಸಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಕುಸಿತವನ್ನು ತಡೆಯಲು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಹೆಚ್ಚಿನ ತಿಂಡಿಗಳನ್ನು ಆರಿಸಿ.

    ಸಮತೋಲಿತ ಆಹಾರವನ್ನು ಸೇವಿಸಿ:

    ನಿರಂತರ ಶಕ್ತಿಯನ್ನು ಒದಗಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆ ತಡೆಗಟ್ಟಲು ನೇರ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಆರಿಸಿಕೊಳ್ಳಿ. ತರಕಾರಿಗಳು, ಧಾನ್ಯಗಳು ಮತ್ತು ನೇರ ಮಾಂಸಗಳು ಅಥವಾ ಸಸ್ಯ ಆಧಾರಿತ ಪ್ರೋಟೀನ್‌ಗಳಂತಹ ಪೌಷ್ಟಿಕಾಂಶ ದಟ್ಟವಾದ ಆಹಾರಗಳನ್ನು ಸೇರಿಸಿ.

    ಊಟದ ನಂತರ ಸ್ವಲ್ಪ ನಡೆಯಿರಿ:

    ಪರಿಚಲನೆಯನ್ನು ಉತ್ತೇಜಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಚೇರಿ ಅಥವಾ ಹೊರಾಂಗಣದಲ್ಲಿ ಸ್ವಲ್ಪ ನಡೆಯುವ ಅಭ್ಯಾಸ ಇಟ್ಟುಕೊಳ್ಳಿ. ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದು ಆಲಸ್ಯದ ಭಾವನೆಗಳನ್ನು ನಿವಾರಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Continue Reading

    LATEST NEWS

    Trending