Connect with us

DAKSHINA KANNADA

Ullala: ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗುವಿಗೆ ನೆರವಾದ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌

Published

on

ಉಡುಪಿಯ ರವಿ ಕಟಪಾಡಿ ಮಾದರಿಯಲ್ಲಿ ಉಳ್ಳಾಲ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌ ನ ಯುವಕರ ತಂಡ ಎರಡರ ಮಗುವಿನ ಚಿಕಿತ್ಸೆಗೆ ವಿಭಿನ್ನ ರೀತಿಯ ವೇಷತೊಟ್ಟು ಸಂಗ್ರಹಿಸಿದ ನಗದನ್ನು ಹೆತ್ತವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಳ್ಳಾಲ: ಉಡುಪಿಯ ರವಿ ಕಟಪಾಡಿ ಮಾದರಿಯಲ್ಲಿ ಉಳ್ಳಾಲ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌ ನ ಯುವಕರ ತಂಡ ಎರಡರ ಮಗುವಿನ ಚಿಕಿತ್ಸೆಗೆ ವಿಭಿನ್ನ ರೀತಿಯ ವೇಷತೊಟ್ಟು ಸಂಗ್ರಹಿಸಿದ ನಗದನ್ನು ಹೆತ್ತವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಉಳ್ಳಾಲ ತೆಂಗಿನಹಿತ್ಲು ರಾಹುಗುಳಿಗ ಬನದ ಅರ್ಚಕ ಭಾಸ್ಕರ್‌ ತೆಂಗಿನಹಿತ್ಲು ಇವರು ಬಂಟ್ವಾಳ ತಾಲೂಕಿನ ಮಂಕುಡೆಕೋಡಿ ನಿವಾಸಿ ಎರಡರ ಹರೆಯದ ನ್ಯೂರೋಬ್ಲಾಸ್ಟೋಮಾ (ಕ್ಯಾನ್ಸರ್) ಕಾಯಿಲೆಯಿಂದ ಬಳಲುತ್ತಿರುವ ಹೇಮಂತ್‌ ಅನ್ನುವ ಮಗುವಿನ ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.

ಜನಾರ್ಧನ ನಾಯ್ಕ್ ಹಾಗೂ ಲೀಲಾವತಿ ದಂಪತಿ ಮಗುವಿಗೆ ಅಸೌಖ್ಯವಿದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ನ್ಯೂರೋಬ್ಲಾಸ್ಟೋಮಾ ಇರುವುದು ಬೆಳಕಿಗೆ ಬಂದಿದೆ.

ವೈದ್ಯರು ತಿಳಿಸಿದಂತೆ ಚಿಕಿತ್ಸೆಗೆ ರೂ.8 ಲಕ್ಷ ರೂ. ಮೌಲ್ಯವನ್ನು ಕೂಲಿಕೆಲಸ ನಿರ್ವಹಿಸುವ ಜನಾರ್ದನ ನಿಭಾಯಿಸಲು ಅಸಾಧ್ಯವಾಗಿದೆ.

ಲೀಲಾವತಿ ಅವರು ಮನೆಯಲ್ಲಿ ಇದ್ದುಕೊಂಡು ಮಗುವಿನ ಆರೈಕೆಯಲ್ಲಿ ತೊಡಗಿದ್ದಾರೆ.

ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲದ ಧರ್ಮನಗರ ಜ್ಯೂನಿಯರ್‌ ಬಾಯ್ಸ್‌ ತಂಡ ಧರ್ಮನಗರ ಜೂನಿಯರ್ ಬಾಯ್ಸ್ ಉಳ್ಳಾಲ ಇವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಸಾಯಿ ಪರಿವಾರ್ ಟ್ರಸ್ಟ್ ತೊಕ್ಕೊಟ್ಟು ನೇತೃತ್ವದಲ್ಲಿ ಧನಸಂಗ್ರಹದ ಸಂಕಲ್ಪ ಮಾಡಿಕೊಂಡು ತೊಕ್ಕೊಟ್ಟು ಹಾಗೂ ಕುಂಪಲದಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದಲ್ಲಿ ತಂಡದ ಸದಾಶಿವ ತೆಂಗಿನಹಿತ್ಲು,‌ ರೋಶನ್ ಸುಂದರಿಭಾಗ್, ನಿತಿನ್ ಸುಂದರಿಭಾಗ್, ಜೀವನ್‌ ಧರ್ಮನಗರ ಇವರುಗಳು ವಿಶಿಷ್ಠ ವೇಷ ಧರಿಸಿ ನೆರೆದವರ ಗಮನ ಸೆಳೆದು ರೂ. 1,26,600 ಧನ ಸಂಗ್ರಹಿಸಿದ್ದಾರೆ.

ಸಂಗ್ರಹಿಸಿದಷ್ಟೂ ಹಣವನ್ನು ಹೇಮಂತ್‌ ಪೋಷಕರಿಗೆ ಇದೀಗ ಹಸ್ತಾಂತರಿಸಿದ್ದಾರೆ.

ಈ ಸಂದರ್ಭ ಧರ್ಮನಗರ ಜೂನಿರ್ ಬಾಯ್ಸ್ ಉಳ್ಳಾಲ ಇದರ ಅಧ್ಯಕ್ಷ ವಿಧಿತ್, ಉಪಾಧ್ಯಕ್ಷ ಸೋನಿತ್, ಕಾರ್ಯದರ್ಶಿ ಹರ್ಷದೀಪ್, ಸದಸ್ಯ ಶೇಖರ್‌ ತೆಂಗಿನಹಿತ್ಲು, ರಮೇಶ್ ತೆಂಗಿನಹಿತ್ಲು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್

Published

on

ಮಂಗಳೂರು : ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬೀಳುತ್ತಿರೋದು ವಿಪರ್ಯಾಸ. ಇದೀಗ ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಇಲ್ಲಿ 72 ವರ್ಷದ ನಿವೃತ್ತ ಇಂಜಿನಿಯರ್‌ ಒಬ್ಬರು ಸಾವಿರ  ಅಲ್ಲ, ಲಕ್ಷ ಅಲ್ಲ ಬರೋಬ್ಬರಿ 1.60 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.


ಮುಂಬೈ ಕ್ರೈಂ ಬ್ರಾಂಚ್ ಹೆಸರಲ್ಲಿ ವಂಚನೆ:

ಮುಂಬೈ ಕ್ರೈಂ ಬ್ರಾಂಚ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆನ್‌ಲೈನ್ ವಂಚಕರು ನಿವೃತ್ತ ಇಂಜಿನಿಯರ್ ಗೆ ಬೆದರಿಕೆ ಒಡ್ಡಿದ್ದಾರೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ.

ಫೋನ್ ಮಾಡಿದ ಅಪರಿಚಿತ ವ್ಯಕ್ತಿ ತನ್ನ ಹೆಸರು ರಾಜೇಶ್ ಕುಮಾರ್ ಮತ್ತು ಫೆಡೆಕ್ಸ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ನೀವು ಥೈಲ್ಯಾಂಡ್‌ಗೆ ಕಳುಹಿಸಿದ್ದ ಪಾರ್ಸೆಲ್ ನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಇದು ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್‌ಪೋರ್ಟ್‌ಗಳನ್ನು, ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದೆ. 140 ಗ್ರಾಂ ಎಂಡಿಎಂಎ ಔಷಧ, ನಾಲ್ಕು ಕಿಲೋ ಬಟ್ಟೆ ಮತ್ತು ಲ್ಯಾಪ್‌ಟಾಪ್ ಹೊಂದಿದೆ. ಮುಂಬೈ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಖತರ್ನಾಕ್ ವಂಚಕ ಹೆದರಿಸಿದ್ದಾನೆ.

ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡ ಇನ್ನೊಬ್ಬ ವ್ಯಕ್ತಿ ಸಿಬಿಐ ಅಧಿಕಾರಿ ರುದ್ರ ರಾಥೋಡ್ ಹೆಚ್ಚುವರಿ ಮಾಹಿತಿಯನ್ನು ನೀಡಲಿದ್ದಾರೆ ಮತ್ತು ಇ-ಮೇಲ್ ಮೂಲಕ rathoreb@21 ಗೆ ಸಂಪರ್ಕಿಸಲು ನಿವೃತ್ತ ಎಂಜಿನಿಯರ್​​​ಗೆ ಸೂಚಿಸಿದ್ದಾರೆ. ನಂತರ ರುದ್ರ ರಾಥೋಡ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ಹಲವು ಮಕ್ಕಳನ್ನು ಹತ್ಯೆಗೈದ ತಂಡ ಈ ಪ್ರಕರಣದಲ್ಲಿ ಶಾಮೀಲಾಗಿದೆ ಎಂದು ತಿಳಿಸಿದ್ದಾನೆ. ಜತೆಗೆ, ನೀವು ತನಿಖೆಗೆ ಸಹಕರಿಸದಿದ್ದರೆ ನಿಮ್ಮ ಮಗ ಮತ್ತು ಮಗಳನ್ನು ಇಂಟರ್‌ಪೋಲ್ ಮೂಲಕ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.

ಖದೀಮರ ಫೋನ್ ಕರೆಗೆ ನಿವೃತ್ತ ಎಂಜಿನಿಯರ್ ಭಯಭೀತರಾಗಿದ್ದಾರೆ. ಇದು ಮೋಸದ ಕರೆ ಎಂಬುದೂ ಭೀತಿಯಲ್ಲಿ ಅವರಿಗೆ ಅರಿವಾಗಿರಲಿಲ್ಲ. ವಂಚಕರು ಸ್ಕೈಪ್ ಖಾತೆ ತೆರೆಯುವಂತೆ ಒತ್ತಾಯಿಸಿದ್ದಾರೆ. ಸ್ಕೈಪ್ ಅಪ್ಲಿಕೇಶನ್‌ನಲ್ಲಿ ಸಿಬಿಐ ಅಧಿಕಾರಿಗಳಂತೆ ಪೋಸ್ ನೀಡಿ ಹಲವಾರು ನೋಟಿಸ್‌ಗಳನ್ನು ಕಳುಹಿಸಿದ್ದಾರೆ. ಬಂಧನದಿಂದ ಬಚಾವಾಗಬೇಕಾದರೆ ಬಾಂಡ್‌ಗಳ ರೂಪದಲ್ಲಿ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಮೊತ್ತವನ್ನು ಹಿಂದಿರುಗಿಸುವುದಾಗಿ ನಿವೃತ್ತ ಎಂಜಿನಿಯರ್‌ಗೆ ಭರವಸೆ ನೀಡಿದ್ದರು. ತನಗೆ ಮತ್ತು ಮಕ್ಕಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ ಎಂಜಿನಿಯರ್, ಐಸಿಐಸಿಐ ಬ್ಯಾಂಕ್ ಖಾತೆಯಿಂದ ಮೇ 2 ರಂದು 1.1 ಕೋಟಿ ರೂ. ಮತ್ತು ಮೇ 6 ರಂದು 50 ಲಕ್ಷ ರೂ. ಗಳನ್ನು ಹಣ ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

ಮರುದಿನ ಅಪರಿಚಿತರಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಅವರು ತನ್ನ ಮಗಳಿಗೆ ಮಾಹಿತಿ ನೀಡಿದ್ದು, ತಾವು ವಂಚನೆಗೊಳಗಾಗಿರುವುದು ಅವರಿಗೆ ಅರಿವಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು ವಂಚನೆ ಪ್ರಕರಣ ನೆನಪಿಸಿದ ಕೇಸ್:

ಈಗಾಗಲೇ ಹಲವಾರು ಆನ್ ಲೈನ್ ವಂಚನೆ ಪ್ರಕರಣ ನಡೆಯುತ್ತಿವೆ. ಮಾರ್ಚ್ ತಿಂಗಳಲ್ಲಿ ವೈದ್ಯರೊಬ್ಬರು ವಂಚನೆಗೊಗಾಗಿದ್ದರು. ಪುತ್ತೂರು ನಗರದ ಬೊಳ್ವಾರು ನಿವಾಸಿ ಡಾ. ಚಿದಂಬರ ಅಡಿಗ ವಂಚನೆಗೊಳಗಾಗಿದ್ದರು. ಮಾ.28 ರಂದು ಬೆಳಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಮಾಡಿ ದೆಹಲಿ ಪೊಲೀಸ್ ಎಂಬುದಾಗಿ ನಂಬಿಸಿದ್ದಾನೆ.   ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಎಂದು ಹೇಳಿ, ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಸೆನ್ ಮೂಲಕ ಕೋರ್ಟ್ ನ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬರ್ ಗೆ ವರ್ಗಾವಣೆ ಮಾಡಬೇಕು.

ನಿಮ್ಮ ಕೋರ್ಟ್ ಕೆಲಸ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ, ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ. ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಆನ್‌ಲೈನ್ ಮೋಸದ ಜಾಲಕ್ಕೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಪುತ್ತೂರಿನ ವೈದ್ಯ..! ಕೇಸ್‌ಗೆ ಭಯಬಿದ್ರಾ ವೈದ್ಯ..!!
ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು ಅಡಿಗ ತಮ್ಮ ಬ್ಯಾಂಕ್ ಖಾತೆಯಿಂದ, RTGS ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದರು.

Continue Reading

DAKSHINA KANNADA

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

Published

on

ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನ ಬಂಧನವಾಗಿದೆ. ಆರೋಪಿ ಮಹಮ್ಮದ್ ಮುಸ್ತಾಫಾನನ್ನು ಎನ್‌ಐಎ ಅಧಿಕಾರಿಗಳು ಹಾಸನದ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ. ಆರೋಪಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪೈಚಾರು ಗ್ರಾಮದ ಶಾಂತಿನಗರ ನಿವಾಸಿ.

nettaru

2022 ರ ಜುಲೈ 26 ರಂದು ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರ ಹತ್ಯೆ ನಡೆಸಲಾಗಿತ್ತು. ಕೋಳಿ ಅಂಗಡಿ ನಡೆಸುತ್ತಿದ್ದ ಪ್ರವೀಣ್ ನೆಟ್ಟಾರು ಅಂಗಡಿ ಬಂದ್ ಮಾಡುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಪ್ರವೀಣ್ ನೆಟ್ಟಾರು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಪ್ರವೀಣ್ ನೆಟ್ಟಾರು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದರು.

ಮುಂದೆ ಓದಿ..; ಬಿಜೆಪಿ ನಾಯಕನ ಅಪ್ರಾಪ್ತ ಪುತ್ರನಿಂದ ಮತ ಚಲಾವಣೆ.!! ವಿವಾದಕ್ಕೆ ಕಾರಣವಾದ ವೀಡಿಯೋ

ಬಾರಿ ಸದ್ದು ಮಾಡಿದ್ದ ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಪಿಎಫ್‌ಐ ಕೈವಾಡ ಇದೆ ಎಂದು ಆರೋಪಿಸಿ ಅಂದಿನ ಸರ್ಕಾರ ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿತ್ತು. ತನಿಖೆ ನಡೆಸಿದ ಎನ್‌ಐಎ ತಂಡ ಕರ್ನಾಟಕ ಹಾಗೂ ಕೇರಳದಲ್ಲಿ ಜಾಲಾಡಿ ಹಲವು ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿತ್ತು. ಗೌಪ್ಯ ಸಭೆ ನಡೆಸಿದ ಸಭಾಂಗಾಣ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಛೇರಿಗಳಿಗೆ ಭೀಗ ಜಡಿದಿತ್ತು. ಆದ್ರೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಮಾಹಿತಿ ನೀಡಿದವರಿಗೆ ಎನ್‌ಐಎ ಬಹುಮಾನದ ಘೋಷಣೆ ಮಾಡಿತ್ತು. ಇಷ್ಟೇ ಅಲ್ಲದೆ ಆರೋಪಿಗಳ ಆಸ್ತಿಮುಟ್ಟುಗೋಲು ಹಾಕುವ ಬಗ್ಗೆಯೂ ನೋಟಿಸು ಜಾರಿ ಮಾಡಿತ್ತು.

ಇದೀಗ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಎನ್‌ಐಎ ತಂಡ ಆರೋಪಿಗೆ ಆಶ್ರಯ ನೀಡಿದವನ ಸಹಿತ ಮೂವರನ್ನು ಬಂಧಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರಲ್ಲಿ ಓರ್ವ ಆರೋಪಿ ಮಹಮ್ಮದ್ ಮುಸ್ತಾಫಾ ಅನ್ನೋದು ಸ್ಪಷ್ಟವಾಗಿದ್ದು ಮತ್ತೋರ್ವ ಯಾರು ಅನ್ನೋದು ಇನ್ನೂ ಮಾಹಿತಿ ಲಭ್ಯವಾಗಬೇಕಾಗಿದೆ. ಇನ್ನು ಆರೋಪಿ ಮುಸ್ತಫಾ ಪೈಚಾರ್ ಪತ್ತೆಗಾಗಿ  5 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.

ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿದ ಎನ್‌ಐಎ:

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)- 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ (40)-5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್‍ಐಎ ಘೋಷಿಸಿದೆ.

ಆರೋಪಿಗಳು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಪಡಂಗಡಿ ‌ಗ್ರಾಮದ ನೌಷದ್ (32 ವರ್ಷ), ಕೊಡಗು ಜಿಲ್ಲೆ ಸೋಮವಾರಪೇಟೆಯ ಚೌಡ್ಲಿ ನಿವಾಸಿ ಅಬ್ದುಲ್‌ ನಾಸಿರ್‌ (41 ವರ್ಷ), ಸೋಮವಾರಪೇಟೆಯ ಹನಗಲ್‌ ಕಲಂದಕೂರ್‌ ನಿವಾಸಿ, ಅಬ್ದುಲ್‌ ರಹಿಮಾನ್‌ (36 ವರ್ಷ)ಈ ಮೂವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ತಿಳಿಸಿದೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಮುಸ್ತಫಾ ಪೈಚಾರ್ ಮತ್ತು ಅಬುಬಕ್ಕರ್ ಸಿದ್ಧೀಕ್ ಅವರು ತಲೆಮರೆಸಿಕೊಂಡಿದ್ದು, ಇವರು ಬೆಳ್ಳಾರೆ ಗ್ರಾಮದವರಾಗಿದ್ದಾರೆ. ಇವರನ್ನು ಹುಡುಕಿಕೊಟ್ಟಲ್ಲಿ ತಲಾ 5 ಲಕ್ಷ ಮತ್ತು 2 ಲಕ್ಷ ರೂ ಬಹುಮಾನವನ್ನು ಎನ್.ಐ.ಎ.ವಿಶೇಷ ನ್ಯಾಯಾಲಯ ಘೋಷಣೆ ಮಾಡಿತ್ತು.

Continue Reading

DAKSHINA KANNADA

ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಮುಡಿಪು ಜ್ಞಾನದೀಪಾ ಶಾಲೆಗೆ ಶೇ. 100 ಫಲಿತಾಂಶ

Published

on

ಮಂಗಳೂರು : ಮುಡಿಪು ಕುರ್ನಾಡಿನಲ್ಲಿರುವ ಜ್ಞಾನದೀಪಾ ಸ್ಕೂಲ್‌ ಎಸ್‌ಎಸ್‌ಎಲ್‌ಸಿ ವಿಭಾಗದಲ್ಲಿ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳನ್ನು ಶಿಕ್ಷಣ ಸಂಸ್ಥೆಯ ಡಾ. ಮಂಜುನಾಥ ರೇವಣ್ಕರ್‌ ಅವರು ಅಭಿನಂದಿಸಿದ್ದಾರೆ.


2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಯ 30 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಮೂವರು ಡಿಸ್ಟಿಂಕ್ಷನ್ ಹಾಗೂ 15 ವಿದ್ಯಾರ್ಥಿಗಳು ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆಗಿದ್ದಾರೆ. 582 ಅಂಕ ಪಡೆದಿರುವ ಸಾತ್ವಿಕ್‌ ಆರ್. ಸಾಮಾನಿ, 537 ಅಂಕ ಪಡೆದಿರುವ ವೀಕ್ಷಿತಾ ಬಿ ಹಾಗೂ 533 ಅಂಕ ಗಳಿಸಿರುವ ಕೀರ್ತನಾ ಎಂ ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ.

ಶಾಲೆಯ ಶಿಕ್ಷಕರು ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಶ್ರಮ ವಹಿಸಿದ ಕಾರಣದಿಂದ ಶೇಕಡಾ ನೂರು ಫಲಿತಾಂಶ ಪಡೆಯಲು ಸಾಧ್ಯವಾಗಿದೆ ಎಂದು ಡಾ. ಮಂಜುನಾಥ ರೇವಣ್ಕರ್ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

ಮುಡಿಪಿನಲ್ಲಿ ವಿಶಾಲವಾದ ಪ್ರದೇಶದಲ್ಲಿ ಸೂರಜ್ ಪಿಯು ಕಾಲೇಜು ಹಾಗೂ ಜ್ಞಾನದೀಪಾ ಹೈಸ್ಕೂಲ್‌ ಇದ್ದು, ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಡಾ. ಮಂಜುನಾಥ ರೇವಣ್ಕರ್ ಅವರು ಹುಟ್ಟು ಹಾಕಿದ್ದಾರೆ.

Continue Reading

LATEST NEWS

Trending