Connect with us

    DAKSHINA KANNADA

    ಊಟವಾದ ನಂತರ ನಿದ್ರೆ ಬರುತ್ತದೆಯೇ..? ಈ ರೀತಿ ಮಾಡಿ ನೋಡಿ

    Published

    on

    ಮಂಗಳೂರು: ಊಟವಾದ ನಂತರ ತೂಕಡಿಕೆ ಸಾಮಾನ್ಯ. ಮಧ್ಯಾಹ್ನ ಹೊಟ್ಟೆ ತುಂಬಿದ ನಂತರ ನಿದ್ರೆ ಬಂದಂತಾಗಿ ಕೆಲಸದಲ್ಲಿ ಆಸಕ್ತಿಯೇ ಇರುವುದಿಲ್ಲ. ಆಫೀಸಿಗೆ ಹೋಗುವವರಿಗೆ ಇದರಿಂದ ಬಹಳ ಸಮಸ್ಯೆ, ಕಿರಿಕಿರಿ ಉಂಟಾಗುತ್ತದೆ. ಊಟದ ನಂತರದ ಆಲಸ್ಯವನ್ನು ಕಡಿಮೆ ಮಾಡಲು ಕೆಲವು ಸಲಹೆಗಳು ಇಲ್ಲಿವೆ. ಊಟವಾದ ನಂತರ ನಾವು ಆ್ಯಕ್ಟಿವ್ ಆಗಿರಬೇಕೆಂದರೆ ನಮ್ಮ ದಿನಚರಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

    ಸಾಕಷ್ಟು ನೀರು ಕುಡಿಯಿರಿ:

    ಹೈಡ್ರೇಟೆಡ್ ಆಗಿರಲು ಮತ್ತು ನಿರ್ಜಲೀಕರಣವನ್ನು ಎದುರಿಸಲು ಊಟದ ನಂತರ ಸಾಕಷ್ಟು ನೀರು ಕುಡಿಯಿರಿ. ಇದು ಆಯಾಸದ ಭಾವನೆಗಳಿಗೆ ಕಾರಣವಾಗಬಹುದು. ದಿನವಿಡೀ ಕನಿಷ್ಠ 8 ರಿಂದ 10 ಗ್ಲಾಸ್ ನೀರನ್ನು ಕುಡಿದರೆ ಊಟದ ನಂತರ ನಿದ್ದೆ ಬರುವುದಿಲ್ಲ.

    ತಿಂಡಿ ತಿನ್ನಿ:

    ಊಟದ ನಡುವೆ ತ್ವರಿತ ಶಕ್ತಿಯ ವರ್ಧಕವನ್ನು ಒದಗಿಸಲು ತಾಜಾ ಹಣ್ಣುಗಳು, ನಟ್ಸ್ ಅಥವಾ ಪೌಷ್ಟಿಕಾಂಶದ ತಿಂಡಿಗಳನ್ನು ಸೇವಿಸಿ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸಲು ಮತ್ತು ಶಕ್ತಿಯ ಕುಸಿತವನ್ನು ತಡೆಯಲು ಪ್ರೋಟೀನ್ ಮತ್ತು ಫೈಬರ್‌ನಲ್ಲಿ ಹೆಚ್ಚಿನ ತಿಂಡಿಗಳನ್ನು ಆರಿಸಿ.

    ಸಮತೋಲಿತ ಆಹಾರವನ್ನು ಸೇವಿಸಿ:

    ನಿರಂತರ ಶಕ್ತಿಯನ್ನು ಒದಗಿಸಲು ಮತ್ತು ರಕ್ತದಲ್ಲಿನ ಸಕ್ಕರೆಯ ಏರಿಕೆ ತಡೆಗಟ್ಟಲು ನೇರ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒಳಗೊಂಡಿರುವ ಸಮತೋಲಿತ ಊಟವನ್ನು ಆರಿಸಿಕೊಳ್ಳಿ. ತರಕಾರಿಗಳು, ಧಾನ್ಯಗಳು ಮತ್ತು ನೇರ ಮಾಂಸಗಳು ಅಥವಾ ಸಸ್ಯ ಆಧಾರಿತ ಪ್ರೋಟೀನ್‌ಗಳಂತಹ ಪೌಷ್ಟಿಕಾಂಶ ದಟ್ಟವಾದ ಆಹಾರಗಳನ್ನು ಸೇರಿಸಿ.

    ಊಟದ ನಂತರ ಸ್ವಲ್ಪ ನಡೆಯಿರಿ:

    ಪರಿಚಲನೆಯನ್ನು ಉತ್ತೇಜಿಸಲು ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಕಚೇರಿ ಅಥವಾ ಹೊರಾಂಗಣದಲ್ಲಿ ಸ್ವಲ್ಪ ನಡೆಯುವ ಅಭ್ಯಾಸ ಇಟ್ಟುಕೊಳ್ಳಿ. ಲಘು ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ. ಇದು ಆಲಸ್ಯದ ಭಾವನೆಗಳನ್ನು ನಿವಾರಿಸಲು ಮತ್ತು ಜಾಗರೂಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ವಿಟ್ಲ : ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ : 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ

    Published

    on

    ವಿಟ್ಲ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ತಿನ ಚುನಾವಣೆ ನಡೆಯಿತು. ಈ ಚುನಾವಣೆಯ ಪೂರ್ವಭಾವಿಯಾಗಿ ಜೂನ್ 3 ರಂದು ಶಾಲಾ ಸಂಸತ್ತಿನ ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಯಿತು. ಜೂನ್ 6 ರಂದು ಶಾಲೆಯ ಚುನಾವಣಾ ಅಭ್ಯರ್ಥಿಗಳು ಶಾಲಾ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರಗಳನ್ನು ಸಲ್ಲಿಸಿದರು.


    ಜೂನ್ 11 ರಿಂದ ಜೂನ್ 13 ರ ವರೆಗೆ ಅಭ್ಯರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ 5 ರಿಂದ 10ನೇ ತರಗತಿಯವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕೆಲವು ಆಶ್ವಾಸನೆಗಳನ್ನು ನೀಡಿ ಮತ ಯಾಚಿಸಿದರು. ಜೂನ್ 15 ರಂದು ಡಿಜಿಟಲ್ ತಂತ್ರಜ್ಞಾನದ ಮುಖೇನ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿಗಳು ಅತೀ ಉತ್ಸಾಹದಿಂದ ಪಾಲ್ಗೊಂಡಿದ್ದರು.

    ಚುನಾಯಿತರಾದವರು :

    ಶಾಲಾ ಸಂಸತ್ತಿನ ಪ್ರಧಾನ ಮಂತ್ರಿಯಾಗಿ ಹತ್ತನೇ ತರಗತಿಯ ಸಾಕ್ಷಿ, ಗೃಹ ಮಂತ್ರಿಯಾಗಿ ಅಬೂಬಕರ್ ನವವಿ (10ನೇ ತರಗತಿ), ಸಂವಹನ ಮಂತ್ರಿಯಾಗಿ ಖತಿಜಾ ಇಫ್ಹಾ (10ನೇ ತರಗತಿ), ಕ್ರೀಡಾ ಮಂತ್ರಿಯಾಗಿ ಶುಭಂ ಶೆಟ್ಟಿ (10ನೇ ತರಗತಿ ), ಶಿಕ್ಷಣ ಮಂತ್ರಿಯಾಗಿ ನಿಧಿಶಾ (9ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಪ್ರಗತಿ (9ನೇ ತರಗತಿ), ಆರೋಗ್ಯ ಮತ್ತು ಸ್ವಚ್ಛತಾ ಮಂತ್ರಿಯಾಗಿ ಲಿಖಿತ್ ಕುಮಾರ್ ಎಲ್ (9ನೇ ತರಗತಿ) ಹಾಗೂ ನೀರಾವರಿ ಮತ್ತು ವಿದ್ಯುತ್ ಮಂತ್ರಿಯಾಗಿ ದೀಪಿತ್ (8ನೇ ತರಗತಿ) ಚುನಾಯಿತರಾದರು.

    ಸಹಾಯಕ ಮಂತ್ರಿಗಳಾಗಿ ಪ್ರಾಥಮಿಕ ವಿಭಾಗದಿಂದ ಯಶಸ್ವಿ ಟಿ ಎಮ್ (7ನೇ ತರಗತಿ), ದಿಯಾ ವೈ ಶೆಟ್ಟಿ (7ನೇ ತರಗತಿ), ಸನ್ನಿಧಿ ಎಲ್ ಎಸ್ (5ನೇ ತರಗತಿ), ಮುಹಮ್ಮದ್ ಫಹ್ಮಾನ್ (7ನೇ ತರಗತಿ), ಸಾತ್ವಿಕ್ ಕೆ (6ನೇ ತರಗತಿ), ಕೌಶಲ್ ಬಿ (5ನೇ ತರಗತಿ), ಸುಶಾನ್ (6ನೇ ತರಗತಿ) ಹಾಗೂ ಜಿ ಎಸ್ ರಿಷಿಕ್ ಅಂಚನ್ (5ನೇ ತರಗತಿ ಚುನಾಯಿತರಾದರು.

    ಇದನ್ನೂ ಓದಿ : ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

    ಚುನಾವಣಾ ಫಲಿತಾಂಶ ಘೋಷಣೆಯ ನಂತರ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಹಾಗೂ ಸಂಸ್ಥೆಯ ಪ್ರಾಚಾರ್ಯರಾದ ರವೀಂದ್ರ ದರ್ಬೆ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸಿದರು. ಈ ಚುನಾವಣಾ ಪ್ರಕ್ರಿಯೆಯಲ್ಲಿ ಶಿಕ್ಷಕಿಯರಾದ ಲೀಲಾ ಮುಖ್ಯ ಚುನಾವಣಾ ಅಧಿಕಾರಿಯಾಗಿ ಹಾಗೂ ಶೋಭಾ ಎಂ ಶೆಟ್ಟಿ ಉಪ ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿಯನ್ನು ನಿರ್ವಹಸಿದರು.

    ಶಿಕ್ಷಕಿ ರಶ್ಮಿ ಕೆ ಫೆರ್ನಾಂಡೀಸ್ ಚುನಾವಣಾ ಫಲಿತಾ0ಶ ಘೋಷಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಸಹಕರಿಸಿದರು.

    Continue Reading

    DAKSHINA KANNADA

    ಏಕಕಾಲಕ್ಕೆ ಅರಳಿ ನಿಂತ 42 ಬ್ರಹ್ಮಕಮಲ ಪುಷ್ಪ; ಮಧ್ಯರಾತ್ರಿಯೇ ವಿಶೇಷ ಪೂಜೆ ಸಲ್ಲಿಕೆ!

    Published

    on

    ಉತ್ತರ ಕನ್ನಡ: ಶ್ರಾವಣದ ಸಂಜೆಗಳಲ್ಲಿ ಬ್ರಹ್ಮ ಕಮಲ ಅರಳುವುದು ವಾಡಿಕೆ. ಒಮ್ಮೊಮ್ಮೆ ಅದಕ್ಕೆ ವ್ಯತಿರಿಕ್ತವಾಗಿ ಬೇಗವೂ ಬ್ರಹ್ಮ ಕಮಲ ಅರಳುತ್ತದೆ. ಆದರೆ ಒಮ್ಮೆಲೆ ಪುಷ್ಪಗುಚ್ಛದಷ್ಟು ಅಂದವಾಗಿ ಒಂದೆಡೆಗೇ ಅರಳುವ ಬ್ರಹ್ಮಕಮಲದ ಸೊಬಗನ್ನು ನೋಡುವ ಅನುಭವವೇ ಬೇರೆ! ಬ್ರಹ್ಮಕಮಲವು ಅಧ್ಯಾತ್ಮಿಕ ಸ್ಥಾನವನ್ನು ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳಲ್ಲಿ ಹೊಂದಿದೆ. ಹೀಗಾಗಿ ಬ್ರಹ್ಮಕಮಲ ಬರೀ ಹೂವಾಗದೇ ಈ ಹೂವೇ ಆರಾಧನೆಯ ವಸ್ತುವಾಗಿರುವುದು ವಿಶೇಷ!

    ಏಕಕಾಲಕ್ಕೆ 42 ಹೂಗಳು!

    ಯಲ್ಲಾಪುರ ಪಟ್ಟಣದ ರಾಮಾಪುರ ವ್ಯಾಪ್ತಿಯಲ್ಲಿ ವಾಸಿಸುವ ಗಣೇಶ್ ಪಂಡರಾಪುರ ಅವರ ಮನೆಯ ವಿಶೇಷವಾದ ಬ್ರಹ್ಮಕಮಲದ ಹೂವುಗಳು! ಯಾಕೆ ವಿಶೇಷ ಎಂದರೆ, ಹೋದ ವರ್ಷ ಇವರ ಮನೆಯಲ್ಲಿ ಸುಮಾರು 84 ಬ್ರಹ್ಮಕಮಲಗಳು ಒಟ್ಟಿಗೆ ಅರಳಿದ್ದವು. ಈ ವರ್ಷ 42 ಬ್ರಹ್ಮಕಮಲ ಏಕಕಾಲಕ್ಕೆ ಅರಳಿ ನಿಂತಿವೆ.

    ಪುಷ್ಪಕ್ಕೆ ಪೂಜೆ!

    ಮಧ್ಯರಾತ್ರಿ 12: 40 ರ ಸುಮಾರಿಗೆ ಈ ಹೂವುಗಳೆಲ್ಲಾ ಅರಳಿದ್ದವು ತಕ್ಷಣ ಗಣೇಶ್ ಪಂಡರಾಪುರ ಅವರ ಕುಟುಂಬ ವಾಡಿಕೆಯಂತೆ ಪೂಜೆ ಮಾಡಿ ನಂತರ ಮನೆಯವರಿಗೆ ಜನರಿಗೆ ಪ್ರಸಾದ ಹಂಚಿ ಹೂವುಗಳ ಮುಂದೆ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು, ಬ್ರಹ್ಮಕಮಲ ಅರಳುವ ವೇಳೆ ಕೇಳಿದ ಕೋರಿಕೆಗಳು ಈಡೇರುತ್ತವೆ ಎಂಬುದು ಪ್ರಸಿದ್ಧ ಲೋಕಾರೂಢಿಯ ನಂಬಿಕೆ.

    Continue Reading

    DAKSHINA KANNADA

    ಹಕ್ಕಿ ಜ್ವರ ಬಂದಿದೆ, ಮೊಟ್ಟೆ, ಕೋಳಿ ತಿನ್ನುವುದು ಸುರಕ್ಷಿತವೇ?

    Published

    on

    ಭಾರತದಲ್ಲಿ ಐದು ವರ್ಷಗಳ ಬಳಿಕ ವ್ಯಕ್ತಿಯೊಬ್ಬರಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ದೃಢಪಡಿಸಿತ್ತು. ಪಶ್ಚಿಮ ಬಂಗಾಳದಲ್ಲಿ ನಾಲ್ಕು ವರ್ಷದ ಮಗುವಿಗೆ ಹಕ್ಕಿ ಜ್ವರ ತಗುಲಿದ್ದು ಅಲ್ಲಿಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈರಸ್‌ನಿಂದ ಬಳಲುತ್ತಿರುವ ಮಗು ಮನೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇರುವ ಕೋಳಿಗಳೊಂದಿಗೆ ಸಂಪರ್ಕ ಹೊಂದಿತ್ತು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. H9N2 ವೈರಸ್‌ನಿಂದ ಉಂಟಾಗುವ ಹಕ್ಕಿ ಜ್ವರದಿಂದ ಮಾನವ ಸೋಂಕಿನ ಪ್ರಕರಣವನ್ನು ದೃಢಪಡಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

    ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ. ಹಾಗಾದರೆ ಹಕ್ಕಿ ಜ್ವರ ಸೋಂಕಿತ ಪಕ್ಷಿಯನ್ನು ಸೇವಿಸುವುದು ಸುರಕ್ಷಿತವೇ? ಎಂಬ ಅನುಮಾನ ಜನರಲ್ಲಿ ಮೂಡಿತ್ತು.

    ಮಾಹಿತಿಯ ಪ್ರಕಾರ, ಹಕ್ಕಿ ಜ್ವರದ ಸೋಂಕಿಗೆ ಒಳಗಾದ ಪಕ್ಷಿಗಳನ್ನು ತಿನ್ನುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬರಬಹುದು, ಆದರೂ ಪಕ್ಷಿಗಳನ್ನು ಬೇಯಿಸಿ, ಹೆಚ್ಚಿನ ಕಾಳಜಿ ವಹಿಸಿ ಸೇವನೆ ಮಾಡಬಹುದು. ಇದನ್ನು ಚೆನ್ನಾಗಿ ಬೇಯಿಸದಿದ್ದರೆ ವೈರಸ್ ಬರುವ ಅಪಾಯ ಹೆಚ್ಚಾಗಿರುತ್ತದೆ.
    ಹಾಗಾಗಿ ಅಡುಗೆ ಮಾಡುವಾಗ ಹೆಚ್ಚು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸಿ ಕೋಳಿಯನ್ನು ಸ್ವಚ್ಛಗೊಳಿಸಿದ ಮೇಲೆ ಕೈಗಳು, ಪಾತ್ರೆಗಳನ್ನು ಸ್ವಚ್ಛ ಮಾಡಬೇಕು. ಮೊಟ್ಟೆ ಬಳಸುವಾಗಲೂ ಕೂಡ ಈ ಕ್ರಮಗಳನ್ನು ಪಾಲನೆ ಮಾಡಬೇಕು.

    Continue Reading

    LATEST NEWS

    Trending