Connect with us

    FILM

    ಕಂಟೆಂಟ್‌ ಸ್ಟಾರ್ ನಿಹಾರಿಕಾಗೆ ಒಲಿದು ಬಂತು ಅದೃಷ್ಟ..! ‘ಯಶ್’ ಜೊತೆ ವೀಡಿಯೋ ಮಾಡಿ ಹಿಟ್‌ ಆದ ನಿಹಾರಿಕಾ..

    Published

    on

    ಆಂಧ್ರಪ್ರದೇಶ/ಮಂಗಳೂರು:  ಯಾರ ಅದೃಷ್ಟ ಹೇಗೆ ಬದಲಾಗುತ್ತೆ ಗೊತ್ತಿಲ್ಲ.. ಅದೃಷ್ಟ ಅನ್ನೋದು ಯಾವುದೇ ಹಣ ಕೊಟ್ಟು ಪಡೆಯುವಂತದಲ್ಲ. ಅದು ತಾನಾಗಿಯೇ ಒಳಿದು ಬರಬೇಕು. ಇನ್ನು ಬಹಳಷ್ಟು ಜನ ಸೋಶಿಯಲ್ ಮೀಡಿಯಾವನ್ನು ತಮ್ಮ ಪ್ರತಿಭೆಗೆ ಪ್ಲಾಟ್‌ಫಾರ್ಮ್‌ ಆಗಿ ಮಾಡಿಕೊಂಡಿದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ನಿಹಾರಿಕಾ…

    niharika

    ಹೌದು.. ಈಕೆ ತನ್ನದೇ ಆದ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ಮಿಂಚುತ್ತಿದ್ದ ಹುಡುಗಿ. ಆಂಧ್ರ ಸೋಶಿಯಲ್ ಮೀಡಿಯಾ ಸ್ಟಾರ್  ನಿಹಾರಿಕಾ ಕೇವಲ ತೆಲುಗು  ಅಲ್ಲದೇ ಬಾಲಿವುಡ್‌ನಲ್ಲೂ ತಮ್ಮ ನಿಲುವನ್ನು ಕಂಡುಕೊಂಡಿದ್ದಾರೆ. ಸಿನೆಮಾಗಳ ಪ್ರಚಾರಕ್ಕಾಗಿ ತಮ್ಮ ವಿಭಿನ್ನ ವೀಡಿಯೋ ಕಂಟೆಂಟ್‌ ಮೂಲಕ ಜನರನ್ನು ರೀಚ್‌ ಮಾಡ್ತಾರೆ. ಅಲ್ಲದೆ ತೆಲುಗು ಸ್ಟಾರ್ ಮಹೇಶ್ ಬಾಬು ಜೊತೆ ಸಿನೆಮಾ ಪ್ರಚಾರಕ್ಕಾಗಿ ಒಂದು ವಿಡಿಯೋವನ್ನು ಮಾಡಿದ್ದು ಸಖತ್ ವೈರಲ್ ಆಗಿತ್ತು. ಬಾಲಿವುಡ್‌ ನ ಕರೀನಾ ಕಪೂರ್ ಸೇರಿದಂತೆ ಕೆಜಿಎಫ್‌ ಮೂವಿ ರಿಲೀಸ್‌ ಸಮಯದಲ್ಲೂ ಯಶ್ ಜೊತೆ ವೀಡಿಯೋ ಕಂಟೆಂಟ್‌ ಮಾಡಿ ಹಂಚಿಕೊಂಡಿದ್ದರು.

    ಒಲಿದು ಬಂತು ಅದೃಷ್ಟ:

    ಇದೀಗ ನಿಹಾರಿಕಾಗೆ ಅದೃಷ್ಟ ಒಳಿದು ಬಂದಿದೆ. ಇನ್ನು ನಿಹಾರಿಕಾಗೆ ಎಷ್ಟರ ಮಟ್ಟಿಗೆ ಬೇಡಿಕೆ ಹೆಚ್ಚಾಗಿ ಅಂದ್ರೆ ನ್ಯಾಷನಲ್ ಸ್ಟಾರ್ ಯಶ್ ರವರ ಸಿನೆಮಾಗೆ ಪ್ರಮೋಷನ್‌ ನೀಡಿರುವುದೇ ಇದಕ್ಕೆ ಸಾಕ್ಷಿ. ಆ ಸಮಯದಲ್ಲಿ ಈ ವೀಡಿಯೋ ಕೂಡಾ ಸಖತ್ ವೈರಲ್ ಆಗಿತ್ತು.  ಇದೀಗ ಕಂಟೆಂಟ್‌ ಕ್ರಿಯೇಟರ್‌ ನಿಂದ ಸಿನೆಮಾ ಹಿರೋಯಿನ್‌ ಆಗಿ ಚಿತ್ರರಂಗಕ್ಕೆ ಹೆಜ್ಜೆ ಇಡುತ್ತಿದ್ದಾರೆ. ನಿಹಾರಿಕಾ  ತಮ್ಮ ಚೊಚ್ಚಲ ಸಿನೆಮಾವನ್ನು ತಮಿಳು ಚಿತ್ರದ ಮೂಲಕ ಆರಂಭಿಸುತ್ತಿದ್ದಾರೆ.

    Read More..; ಡಿ ಬಾಸ್ ಫ್ಯಾನ್ಸ್ ಗೆ ಗುಡ್ ನ್ಯೂಸ್; ‘ಡೆವಿಲ್’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್

    ದಕ್ಷಿಣದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದೆ. ಆಕಾಶ್ ಭಾಸ್ಕರ್‌ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ. ಇನ್ನೂ ಸಿನೆಮಾದಲ್ಲಿ ನಿಹಾರಿಕಾಳಿಗೆ ಅಥರ್ವ ಜೋಡಿಯಾಗಲಿದ್ದಾರೆ.

    ಈ ಸಿನೆಮಾಗೆ ಇನ್ನೂ ಹೆಸರು ಫೈನಲ್‌ ಆಗಿಲ್ಲ. ಆದರೆ ಈ ಸಿನೆಮಾ ಪಕ್ಕಾ ಹಾಸ್ಯ ಪ್ರದಾನವಾಗಿದ್ದು, ಪ್ರಣಯ, ಹಾಸ್ಯ, ಭಗ್ನ ಪ್ರೇಮ ಹಾಗೂ ರೋಡ್‌ ಟ್ರಿಪ್‌ಗಳನ್ನು ಒಳಗೊಂಡಿರುತ್ತದೆ. ಚಿತ್ರದ ಪ್ರಿ ಪ್ರೊಡಕ್ಷನ್ ಆರಂಭವಾಗಿದ್ದು, ಶೀಘ್ರದಲ್ಲಿಯೇ ಚಿತ್ರದ ಮುಹೂರ್ತ ಆಗಲಿದೆ.

    FILM

    ಯಶ್ ಜೊತೆ ಲಂಡನ್‌ಗೆ ಹಾರಿದ ನಯನತಾರಾ-ಕಿಯಾರ..!

    Published

    on

    ಮುಂಬೈ/ಮಂಗಳೂರು:  ಪ್ಯಾನ್ ಇಂಡಿಯಾ ಸ್ಟಾರ್ ಯಶ್ ರವರ ಬಹು ನಿರೀಕ್ಷಿತ ಟಾಕ್ಸಿಕ್ ಸಿನೆಮಾ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಕೆಜಿಎಫ್ ಸಿನೆಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಂಡ ಯಶ್ ಇದೀಗ ಟಾಕ್ಸಿಕ್ ಸಿನೆಮಾ ಮೂಲಕ ನೆಕ್ಸ್ಟ್‌ ಲೆವೆಲ್‌ನಲ್ಲಿ ಸಿನೆಮಾ ಮಾಡುವಲ್ಲಿ ತೊಡಗಿಕೊಂಡಿದ್ದಾರೆ. ಕೆಜಿಎಫ್-1, 2 ಸೂಪರ್‌ ಹಿಟ್‌ ಬಳಿಕ ಯಶ್ ಚಿತ್ರರಂಗದಲ್ಲೇ ತನ್ನ ಸ್ಟ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಹಾಗಾಗಿ ನಿರೀಕ್ಷೆಗಳೂ ಕೂಡಾ ಹೆಚ್ಚಾಗಿದೆ ಎನ್ನಬಹುದು.

    200 ದಿನಗಳ ಕಾಲ ಲಂಡನ್‌ನಲ್ಲಿ ಶೂಟಿಂಗ್..!

    ಇದೀಗ ಯಶ್ ಜೊತೆ ನಯನತಾರಾ-ಕಿಯಾರ ಅಡ್ವಾನಿ ಕೂಡಾ ಲಂಡನ್ ಗೆ ಹಾರಿದ್ದಾರಂತೆ. ಹೌದು, ಸಿನೆಮಾ ಶೂಟಿಂಗ್ ಗಾಗಿ ಯಶ್ ನಿರ್ದೇಶಕಿ ಗೀತಾ ಮೋಹನ್ ದಾಸ್ ಜೊತೆ ಲಂಡನ್‌ಗೆ ತೆರಳಿದ್ದಾರೆ. ಇನ್ನು ಸಿನೆಮಾ ಬರೋಬ್ಬರಿ 200 ದಿನಗಳ ಕಾಲ ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದು ಹೇಳಲಾಗಿದೆ.

    Read More..;  ಯಶ್ ಅಭಿನಯದ “ಟಾಕ್ಸಿಕ್” ಗೆ ಹಿರೋಯಿನ್‌ ಫಿಕ್ಸ್..!!

    ಯಶ್‌ ಪರಫೆಕ್ಟ್ ಮ್ಯಾನ್ ಎಂಬುದು ಅವರ ಈ ಹಿಂದಿನ ಸಿನಿಮಾಗಳಲ್ಲಿ ನೋಡಿದ್ದೇವೆ. ಟಾಕ್ಸಿಕ್ ಚಿತ್ರ ತಂಡದಲ್ಲೂ ಅದು ಮುಂದುವರಿಯಲಿದೆ. ಎಷ್ಟು ಹಂತದ ಚಿತ್ರೀಕರಣ ಆಗಿದೆ ಎಂಬುವುದರ ಬಗ್ಗೆ ಚಿತ್ರ ತಂಡ ಗೌಪ್ಯತೆ ಕಾಪಾಡಿಕೊಂಡು ಬಂದಿದೆ. ಇದು ಅಭಿಮಾನಿಗಳ ಕುತೂಹಲಕ್ಕೂ ಕಾರಣವಾಗಿದೆ. ಚಿತ್ರೀಕರಣದ ನಿಖರ ಸಮಯವನ್ನು ಗೌಪ್ಯವಾಗಿ ಇಡಲಾಗಿದೆ. ಇಂಟರ್‌ನ್ಯಾಷನಲ್ ಡಾನ್ ಪಾತ್ರದಲ್ಲಿ ಯಶ್ ಕಾಣಿಸುತ್ತಿದ್ದಾರೆ ಎನ್ನಲಾಗಿದೆ. ಇದರಲ್ಲಿ ಅನೇಕ ಸಾಹಸಮಯ ದೃಶ್ಯಗಳು ಇರಲಿದ್ದು. ಸಿನಿಮಾ ಅಂದುಕೊಂಡಂತೆ ಶೂಟಿಂಗ್ ಮುಗಿಸಿ ಮುಂದಿನ ವರ್ಷ 2025 ರಂದು ಏ. 10ಕ್ಕೆ ಬಿಡುಗಡೆಗೊಳ್ಳಲಿದೆ. ಇನ್ನೂ ಚಿತ್ರದಲ್ಲಿ ಯಶ್, ನಯನತಾರಾ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಅನೇಕ ಕಲಾವಿದರ ದಂಡೇ ಇರಲಿದೆ. ಅವರೊಂದಿಗೆ ಇತರ ಕೆಲವು ನಟರು ಸಹ ಸೇರಿಕೊಳ್ಳಲಿದ್ದಾರೆ. ಯಶ್ ಟಾಕ್ಸಿಕ್ ಸಿನಿಮಾವು ದೊಡ್ಡ ತಾರಾಗಣ ಹೊಂದಿರುವ ಸಿನಿಮಾ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

    Continue Reading

    FILM

    ‘ನನ್ನಿಂದ ಹೀಗೆ ಆಗೋಯ್ತಲ್ಲ’ ತಂದೆ ಶವದ ಮುಂದೆ ಕಣ್ಣೀರಿಟ್ಟ ದರ್ಶನ್ ಕೇಸ್‌ ಆರೋಪಿ..!

    Published

    on

    ಚಿತ್ರದುರ್ಗ/ಮಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಗ್ಯಾಂಗ್‌ನ ಕೊಲೆ ಆರೋಪಿ  ಎ-7 ಅನಿಲ್ ಅಲಿಯಾಸ್ ಅನು ತಂದೆ ಸಾವನಪ್ಪಿದ್ದು, ಅವರ ಆಂತ್ಯಕ್ರಿಯೆಯನ್ನು ತಡರಾತ್ರಿ ನೆರವೇರಿಸಲಾಗಿದೆ.

    Read More..;  ರೇಣುಕಾಸ್ವಾಮಿ ಹ*ತ್ಯೆ ಪ್ರಕರಣ : ಅನುಕುಮಾರ್ ಬಂಧನದ ಸುದ್ದಿ ಕೇಳಿ ತಂದೆ ಹೃದಯಾ*ಘಾತದಿಂದ ಸಾ*ವು

    ರೇಣುಕಾಸ್ವಾಮಿ ಕೊಲೆಯಿಂದಾಗಿ ಅನೇಕ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ದರ್ಶನ್ ಗ್ಯಾಂಗ್‌ನಲ್ಲಿದ್ದ ಎ-7 ಕೊಲೆ ಆರೋಪಿ ಅನಿಲ್ ಅಲಿಯಾಸ್ ಅನು ರೇಣುಕಾಸ್ವಾಮಿ ಕೊಲೆ ನಡೆದ ಮರುದಿನವೇ ಪೊಲೀಸರಿಗೆ ಸರಂಡರ್‌ ಆಗಿದ್ದ. ಈ ವಿಷಯ ತಿಳಿದ ಅನು ತಂದೆ ಚಂದ್ರಪ್ಪ ಆಘಾತಕ್ಕೊಳಗಾಗಿ ನಿಂತಲ್ಲೇ ಕುಸಿದು ಬಿದ್ದು, ಹೃದಯಾಘಾತದಿಂದ ಸಾವನಪ್ಪಿದ್ದರು. ಸಾವನ್ನಪ್ಪಿದ 24 ಗಂಟೆಗಳ ಬಳಿಕ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅನು ಬಂದ ಬಳಿಕವೇ ಶವ ಸಂಸ್ಕಾರ ಮಾಡುವುದಾಗಿ ಕುಟುಂಬಸ್ಥರು ತೀರ್ಮಾನಿಸಿದ್ದರು. ಶವದ ಮುಂದೆ ಕುಟುಂಬಸ್ಥರು ಅನು ಬರುವಿಕೆಗಾಗಿ ಕಾದು ಕುಳಿತಿದ್ದರು.

    ನ್ಯಾಯಾಧೀಶರ ಆದೇಶದಂತೆ ಆರೋಪಿ ಅನಿಲ್‌ನನ್ನು ಪೊಲೀಸರು ಚಿತ್ರದುರ್ಗಕ್ಕೆ ಕರೆತಂದರು.  ಮಗ ಬರುತ್ತಿದ್ದಂತೆಯೇ ಅನು ತನ್ನ ತಾಯಿ, ಅಕ್ಕನನ್ನು ತಬ್ಬಿ ಕಣ್ಣೀರು ಇಟ್ಟಿದ್ದಾನೆ. ತಂದೆಯ ಶವದ ಮುಂದೆ ಕೂತು ನನ್ನಿಂದ ಹೀಗೆ ಆಗೋಯ್ತಲ್ಲ ಎಂದು ಕಣ್ಣೀರು ಇಟ್ಟಿದ್ದಾನೆ.

    Continue Reading

    FILM

    ಯುವ ಪತ್ನಿ ವಿರುದ್ದ ಕೋರ್ಟ್‌ ಮೆಟ್ಟಿಲೇರಿದ ಸಪ್ತಮಿಗೌಡ..!!

    Published

    on

    ಬೆಂಗಳೂರು: ಸ್ಯಾಂಡಲ್‌ವುಡ್ ನಲ್ಲಿ ಇತ್ತೀಚೆಗೆ ಒಂದಲ್ಲೊಂದು ಪ್ರಕರಣಗಳು ಬೆಳಕಿಗೆ ಬರ್ತಾಇದೆ. ಅದರಲ್ಲಿ ನಿವೇದಿತಾ-ಚಂದನ್ ಡಿವೋರ್ಸ್‌ ಬಳಿಕ ದೊಡ್ಮನೆ ಕುಡಿಯ ವಿಚ್ಛೇದನ ವಿಚಾರ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಹೌದು, ರಾಜ್‌ಕುಮಾರ್‌ ರವರ ಮೊಮ್ಮಗ ರಾಘವೇಂದ್ರ ರಾಜ್‌ಕುಮಾರ್‌ ರವರ ಪುತ್ರ ಯುವ ರಾಜ್‌ಕುಮಾರ್‌ರವರು ತನ್ನ ಪತ್ನಿಗೆ ಡಿವೋರ್ಸ್‌ ನೋಟೀಸ್ ಕಳುಹಿಸಿದ್ದಾರೆ. ಅಲ್ಲದೆ, ಯುವ ಪರ ವಕೀಲ ಶ್ರೀದೇವಿ ಬೈರಪ್ಪ ವಿರುದ್ಧ ಕೆಲವೊಂದು ಆರೋಪಗಳನ್ನು ಮಾಡಿದ್ದಾರೆ.

    Read More..; ಸ್ಯಾಂಡಲ್​ವುಡ್‌ನಲ್ಲಿ ಮತ್ತೊಂದು ಡಿವೋರ್ಸ್‌; ವಿಚ್ಛೇದನಕ್ಕೆ ಯುವ ರಾಜ್​ಕುಮಾರ್ ಡಿಸೈಡ್‌!

    ಯುವ ಪರ ವಕೀಲ ಶ್ರೀದೇವಿ ಬೈರಪ್ಪರವರ ಚಾರಿತ್ರ್ಯದ ಬಗ್ಗೆ ಆರೋಪಗಳನ್ನು ಮಾಡಿದ್ದರು. ಇದಾದ ಬಳಿಕ ಶ್ರೀದೇವಿ ತನ್ನ ಪತಿಗೆ ನಟಿಯೊಬ್ಬರ ಜೊತೆ ಸಂಬಂಧ ಇರುವ ಬಗ್ಗೆ ಆರೋಪ ಮಾಡಿದ್ದರು. ಅಲ್ಲದೆ, ಸಪ್ತಮಿ ಗೌಡ ಹೆಸರನ್ನು ಬಹಿರಂಗವಾಗಿ ಪ್ರಕರಣದಲ್ಲಿ ಎಳೆದು ತಂದಿದ್ದರು. ಸಪ್ತಮಿ ಗೌಡ ಹಾಗೂ ಯುವ ಇಬ್ಬರು ಸಂಬಂಧದಲ್ಲಿದ್ದಾರೆ. ನಾನು ವಿದೇಶಕ್ಕೆ ಹೋದ ಸಮಯದಲ್ಲಿ ಇಬ್ಬರೂ ಸಜೀವನ ನಡೆಸಿದ್ದಾರೆ ಎಂದು ಆರೋಪಿಸಿದ್ದರು.  ಸಪ್ತಮಿಗಾಗಿ ನನ್ನನ್ನು ಮನೆಯಿಂದ ಹೊರ ಹಾಕುವ ಪ್ರಯತ್ನ ಕೂಡಾ ನಡೆದಿತ್ತು ಎಂದಿದ್ದರು. ಇದೀಗ ಈ ಬಗ್ಗೆ ಸಪ್ತಮಿ ಶ್ರೀ ದೇವಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ.  ತಮ್ಮ ವಿರುದ್ಧ ಶ್ರೀದೇವಿ, ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸಪ್ತಮಿ ಆರೋಪ ಮಾಡಿದ್ದು, ನನ್ನ ಮೇಲೆ ಮಾನಹಾನಿಕರ ಹೇಳಿಕೆಯನ್ನು ನೀಡದಂತೆ ಶ್ರೀ ದೇವಿ ಬೈರಪ್ಪ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವ ಸಪ್ತಮಿ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ.

    Read More..; ದರ್ಶನ್‌ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ ಸ್ಯಾಂಡಲ್ ವುಡ್ ಕ್ವೀನ್..!

    ಅಂತೆಯೇ ನಿರ್ಬಂಧಕಾಜ್ಞೆ ಆದೇಶಿಸಿರುವ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ, ಶ್ರೀದೇವಿ ಭೈರಪ್ಪ ಅವರಿಗೆ ನೊಟೀಸ್ ಜಾರಿ ಮಾಡುವಂತೆ ಆದೇಶ ಮಾಡಿದೆ. ಆದರೆ ಶ್ರೀದೇವಿ ಭೈರಪ್ಪ ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ತೊಡಗಿದ್ದಾರೆ. ಪ್ರಸ್ತುತ ಯುವರಾಜ್ ಕುಮಾರ್ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದು ತಿಳಿದು ಬರಲಿದೆ.

    Continue Reading

    LATEST NEWS

    Trending