Connect with us

    International news

    ನಾಪತ್ತೆಯಾಗಿದ್ದ ಬಾಂಗ್ಲಾದೇಶದ ಸಂಸದ ಕೋಲ್ಕತ್ತಾದಲ್ಲಿ ಶ*ವವಾಗಿ ಪತ್ತೆ!

    Published

    on

    ಕೋಲ್ಕತ್ತಾ : ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಆಗಮಿಸಿದ್ದ ಬಾಂಗ್ಲಾದೇಶದ ಸಂಸದ ಅನ್ವರುಲ್ ಅಝೀಂ ಅನಾರ್ ಶ*ವವಾಗಿ ಪತ್ತೆಯಾಗಿದ್ದಾರೆ. ಬಾಂಗ್ಲಾದೇಶದ ಪ್ರಧಾನಿ ಶೇಖ್​ ಹಸೀನಾ ಅವರ ಪಕ್ಷದ ಸದಸ್ಯರಾಗಿದ್ದ ಅನಾರ್ ಮೇ 12ರಂದು ಕೋಲ್ಕತ್ತಾಗೆ ಬಂದಿದ್ದರು. ಬಳಿಕ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಅವರ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಬುಧವಾರ(ಮೇ 22) ಬೆಳಿಗ್ಗೆ ಕೋಲ್ಕತ್ತಾದ ನ್ಯೂಟೌನ್ ನಲ್ಲಿ ಅವರ ಶ*ವ ಪತ್ತೆಯಾಗಿದೆ.

    ಸಂಸದರು ಚಿನ್ನದ ಆಮದು ಹಾಗೂ ರಫ್ತು ವ್ಯವಹಾರವನ್ನು ಹೊಂದಿದ್ದರು.  ಕೋಲ್ಕತ್ತಾದ ನ್ಯೂಟೌನ್ ನಲ್ಲಿನ ಸಂಜೀವ ಗಾರ್ಡನ್ ಪ್ಲ್ಯಾಟ್ ನಲ್ಲಿ ಅವರ ಶ*ವ ಸಿಕ್ಕಿದ್ದು, ಕೊ*ಲೆ ಶಂಕೆ ವ್ಯಕ್ತವಾಗಿದೆ.  ಈಗಾಗಲೇ ಪ್ರಕರಣದ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ವರದಿಯಾಗಿದೆ.

    ಇದನ್ನೂ ಓದಿ : ಮಲಗಿದ್ದಲ್ಲೇ ಸಾವು ಕಂಡ ಕುಮಾರಸ್ವಾಮಿ ಮತ್ತು ಕುಟುಂಬ..! ಅನಿಲ ಸೋರಿಕೆ ಶಂಕೆ

    ನಾಪತ್ತೆಯಾಗಿದ್ದ ಸಂಸದ :

    ಚಿಕಿತ್ಸೆಗಾಗಿ ಕೋಲ್ಕತ್ತಾಕ್ಕೆ ಅನ್ವರುಲ್ ಆಗಮಿಸಿದ್ದು, ಬಾರಾನಗರದಲ್ಲಿರುವ ಸ್ನೇಹಿತ ಗೋಪಾಲ್​ ಬಿಸ್ವಾಸ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಮೇ 13 ರಂದು ಯಾರನ್ನೋ ಭೇಟಿಯಾಗಲು ಹೋಗುತ್ತಿದ್ದೇನೆಂದು ಹೊರಟವರು ಹಿಂದಿರುಗಿ ಬಂದಿರಲಿಲ್ಲ ಎಂದು ಹೇಳಲಾಗಿದೆ.
    ಮೇ 13 ರ ಮಧ್ಯಾಹ್ನ 1.40 ರ ಸುಮಾರಿಗೆ ವೈದ್ಯರ ಭೇಟಿಗಾಗಿ ಅನ್ವರುಲ್, ಗೋಪಾಲ್ ಮನೆಯಿಂದ ತೆರಳಿದ್ದರು. ಸಂಜೆ ವಾಪಾಸಾಗುವುದಾಗಿಯೂ ತಿಳಿಸಿದ್ದರು ಎನ್ನಲಾಗಿದೆ. ಆದರೆ, ಆ ಬಳಿಕ ಅವರು ವಾಪಾಸಾಗದೆ ನಾಪತ್ತೆಯಾಗಿದ್ದು, ಇದೀಗ ಶ*ವವಾಗಿ ಪತ್ತೆಯಾಗಿದ್ದಾರೆ.

    International news

    ಕುವೈತ್ ಅ*ಗ್ನಿ ದುರಂ*ತ: 40 ಭಾರತೀಯರ ಸಾ*ವು; ಪ್ರಧಾನಿ ಮೋದಿ ಸಂತಾಪ

    Published

    on

    ಮಂಗಳೂರು/ಕುವೈತ್ : ಕುವೈತ್‌ನ ವಸತಿ ಕಾರ್ಮಿಕರ ಕಟ್ಟಡದಲ್ಲಿ ಬುಧವಾರ ಸಂಭವಿಸಿದ ಭಾರೀ ಅ*ಗ್ನಿ ಅವಘ*ಡದಲ್ಲಿ 43ಕ್ಕೂ ಅಧಿಕ ಮಂದಿ ಸಾ*ವನ್ನಪ್ಪಿದ್ದಾರೆ. ಇವರಲ್ಲಿ 40 ಜನ ಭಾರತೀಯರು ಕೂಡ ಸೇರಿದ್ದಾರೆ. ಮಲಯಾಳಿ ಉದ್ಯಮಿಯೊಬ್ಬರಿಗೆ ಸೇರಿದ ಕುವೈತ್​ನ ದಕ್ಷಿಣ ಅಹ್ಮದಿ ಗವರ್ನರೇಟ್‌ನಲ್ಲಿರುವ ಮಂಗಾಫ್ ಪ್ರದೇಶದಲ್ಲಿರುವ ಕಟ್ಟಡದಲ್ಲಿ 160ಕ್ಕೂ ಹೆಚ್ಚು ಕಾರ್ಮಿಕರು ನೆಲೆಸಿದ್ದರು. ಬುಧವಾರ 6 ಅಂತಸ್ತಿನ ಕಟ್ಟಡದ ಅಡುಗೆ ಕೋಣೆಯಲ್ಲಿ ಬೆಂ*ಕಿ ಕಾಣಿಸಿಕೊಂಡಿದೆ.

    ಕುವೈತ್ ಉಪಪ್ರಧಾನ ಮಂತ್ರಿ ಶೇಖ್ ಫಹಾದ್ ಯೂಸುಫ್ ಸೌದ್ ಅಲ್-ಸಬಾಹ್ ಈ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಘಟನೆಯಿಂದ 43 ಕಾರ್ಮಿಕರು ಸಾ*ವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.


    ಪ್ರಧಾನಿ ಮೋದಿ ಸಂತಾಪ :

    ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಕುವೈತ್ ನಗರದಲ್ಲಿ ಸಂಭವಿಸಿದ ಅ*ಗ್ನಿ ದುರಂ*ತವು ದುಃಖಕರವಾಗಿದೆ. ನನ್ನ ಆಲೋಚನೆಗಳು ತಮ್ಮ ಹತ್ತಿರದ ಮತ್ತು ಆತ್ಮೀಯರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ನಾವಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಸಂತ್ರಸ್ತರಿಗೆ ಸಹಾಯ ಮಾಡಲು ನಮ್ಮ ದೇಶದವರು ಅಲ್ಲಿದ್ದಾರೆ ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.

    ಇದನ್ನೂ ಓದಿ : ಪುರಿ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳು ಭಕ್ತರ ಪ್ರವೇಶಕ್ಕೆ ಮುಕ್ತ

    ಭಾರತೀಯ ರಾಯಭಾರಿ ಘಟನೆ ನಡೆದ ಸ್ಥಳಕ್ಕೆ ತೆರಳಿದ್ದಾರೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಕುವೈತ್ ನಗರದಲ್ಲಿ ನಡೆದ ಅ*ಗ್ನಿ ದುರಂ*ತದ ಸುದ್ದಿಯಿಂದ ತೀವ್ರ ಆಘಾತವಾಗಿದೆ. 40ಕ್ಕೂ ಹೆಚ್ಚು ಸಾ*ವುಗಳು ಸಂಭವಿಸಿದ್ದು, 50ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಮ್ಮ ರಾಯಭಾರಿ ಘಟನಾ ಸ್ಥಳಕ್ಕೆ ಹೋಗಿದ್ದು ನಾವು ಹೆಚ್ಚಿನ ಮಾಹಿತಿಗಾಗಿ ಕಾಯುತ್ತಿದ್ದೇವೆ, ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಮಾಹಿತಿ ನೀಡಿದ್ದಾರೆ.

    Continue Reading

    DAKSHINA KANNADA

    ಸೌದಿ ಅರೇಬಿಯಾದ ದಮಾಮ್‌ನಲ್ಲಿ ಅ*ಗ್ನಿ ದುರಂತ; ಮೂಡುಬಿದಿರೆಯ ಮಗು ಸಾ*ವು

    Published

    on

    ಮೂಡುಬಿದಿರೆ : ಸೌದಿ ಅರೇಬಿಯಾದ ದಮಾಮ್‌ನಲ್ಲಿ ಶನಿವಾರ(ಮೇ 25) ನಡೆದ ಅ*ಗ್ನಿ ಅವಘಡದಲ್ಲಿ ಕರಾವಳಿ ಮೂಲದ ಮಗುವೊಂದು ಇಹಲೋಕ ತ್ಯಜಿಸಿದೆ. ಅನಿವಾಸಿ ಭಾರತೀಯ ಕುಟುಂಬವೊಂದು ವಾಸಿಸುತ್ತಿದ್ದ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ ಮೂರು ವರ್ಷದ ಮಗುವೊಂದರ ಜೀವಾಂತ್ಯವಾಗಿದ್ದರೆ, ಮೂವರು ತೀವ್ರ ಅಸ್ವಸ್ಥರಾಗಿದ್ದಾರೆ.

    ದಮಾಮ್‌ನ ಅದಮಾ ಎಂಬಲ್ಲಿಯ ಲುಲು ಮಾಲ್‌ ಹಿಂಭಾಗದಲ್ಲಿರುವ ಅಲ್‌ ಹುಸೇನಿ ಕಂಪೌಂಡ್‌ನ‌ಲ್ಲಿ ಮೂಡುಬಿದಿರೆಯ ಕೋಟೆಬಾಗಿಲು ಖೀಲಾ ಸುನ್ನಿ ಜಾಮಿಯಾ ಮಸೀದಿ ಎದುರಿನ ಮನೆಯ ಶೇಖ್‌ ಫಹಾದ್‌ ಮತ್ತು ಅವರ ಕುಟುಂಬ ವಾಸವಾಗಿದೆ. ಇವರು ರಾತ್ರಿ ಮಲಗಿದ್ದ ವೇಳೆ ಅ*ಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಫಹದ್‌ ಅವರ ಮಗು ಸಾಯಿಕ್‌ ಶೇಖ್‌ (2) ಉಸಿರುಗಟ್ಟಿ ಮೃ*ತಪಟ್ಟಿದೆ.

    ಇದನ್ನೂ ಓದಿ : WATCH : ಚಲಿಸುತ್ತಿದ್ದ ಟ್ರಕ್ ನಲ್ಲಿ ಕಳ್ಳರ ಕರಾಮತ್ತು; ಸಿನಿಮೀಯ ರೀತಿಯಲ್ಲಿ ಸರಕು ಕದ್ದ ಖದೀಮರು! ನಿಬ್ಬೆರಗಾದ ನೆಟ್ಟಿಗರು!

    ಫಹದ್‌, ಅವರ ಪತ್ನಿ ಸಲ್ಮಾ ಕಾಝಿ ಮತ್ತು ಪುತ್ರ ಶಾಹಿದ್‌ ಶೇಖ್‌(6) ಹೊಗೆಯಿಂದ ಉಸಿರುಗಟ್ಟಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಅವರನ್ನು ಸಮೀಪದ ನಿವಾಸಿಗಳು ಆಸ್ಪತ್ರೆಗೆ ದಾಖಲಿಸಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಮನೆಯೊಳಗಿದ್ದ ರೆಫ್ರಿಜರೇಟರ್‌ನಿಂದ ಶನಿವಾರ ರಾತ್ರಿ ಅನಿಲ ಸೋರಿಕೆ ಉಂಟಾಗಿ ಈ ದುರಂ*ತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಫಹಾದ್‌ ಕುಟುಂಬವು ಕಳೆದ ಆರು ತಿಂಗಳಿನಿಂದ ಈ ಕಟ್ಟಡದಲ್ಲಿ ವಾಸವಾಗಿದೆ.

    Continue Reading

    International news

    ಭಾರತದ ಆಟೋ ಚಾಲಕಿಗೆ ಲಂಡನ್ ನ ಪ್ರತಿಷ್ಠಿತ ಪ್ರಶಸ್ತಿ

    Published

    on

    ಮಂಗಳೂರು / ಲಂಡನ್ : ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಹಳ್ಳಿಯೊಂದರ 18 ವರ್ಷದ ರಿಕ್ಷಾ ಚಾಲಕಿ ಆರತಿ ಬ್ರಿಟನ್​​ನ ಪ್ರತಿಷ್ಠಿತ ಮಹಿಳಾ ಸಬಲೀಕರಣ ಪ್ರಶಸ್ತಿ ಪಡೆದಿದ್ದಾರೆ. ಪ್ರಿನ್ಸ್ ಟ್ರಸ್ಟ್ ಅವಾರ್ಡ್ಸ್‌ನಲ್ಲಿ ವಿಶ್ವಪ್ರಸಿದ್ಧ ಮಾನವ ಹಕ್ಕುಗಳ ನ್ಯಾಯವಾದಿಯ ಹೆಸರಿನಲ್ಲಿ ಅಮಲ್ ಕ್ಲೂನಿ ಮಹಿಳಾ ಸಬಲೀಕರಣ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆದ ಆರತಿ ಬ್ರಿಟನ್ ರಾಜ ಕುಟುಂಬದ ಅರಮನೆ ಬಕಿಂಗ್‌ ಹ್ಯಾಮ್ ಪ್ಯಾಲೇಸ್‌ನಲ್ಲಿ ಕಿಂಗ್ ಚಾರ್ಲ್ಸ್ III ಅವರನ್ನು ಭೇಟಿಯಾದರು.


    ಸರ್ಕಾರದ ಪಿಂಕ್ ಇ-ರಿಕ್ಷಾ ಚಾಲನೆ ಮಾಡುವ ಮೂಲಕ ಇತರ ಯುವತಿಯರಿಗೆ ಮಾದರಿ ಮತ್ತು ಮಹಿಳಾ ಸಬಲೀಕರಣಕ್ಕೆ ಆರತಿ ಸ್ಪೂರ್ತಿಯಾಗಿದ್ದಾರೆ.
    “ಇದೇ ರೀತಿಯ ಸವಾಲುಗಳನ್ನು ಎದುರಿಸುವ ಇತರ ಹುಡುಗಿಯರನ್ನು ಪ್ರೇರೇಪಿಸಲು ನಾನು ಹೆಮ್ಮೆಪಡುತ್ತೇನೆ. ಸರ್ಕಾರ ಈ ಪಿಂಕ್​​ ರಿಕ್ಷಾ ಯೋಜನೆ ಜಗತ್ತನ್ನು ವಿಭಿನ್ನ ಬೆಳಕಿನಲ್ಲಿ ನೋಡಲು ನನಗೆ ಸಹಾಯ ಮಾಡಿದೆ. ಈಗ ನಾನು ನನ್ನ ಸ್ವಂತ ಕನಸುಗಳನ್ನು ಮಾತ್ರವಲ್ಲದೆ ನನ್ನ ಮಗಳ ಕನಸುಗಳನ್ನೂ ಈಡೇರಿಸಬಲ್ಲೆ.  ಇ ರಿಕ್ಷಾ ಡಿಸೇಲ್ ಪೆಟ್ರೋಲ್‌ನಂತೆ ಪರಿಸರ ಮಾಲಿನ್ಯ ಮಾಡುವುದಿಲ್ಲ, ಇ ರಿಕ್ಷಾಗೆ ನಾನು ಮನೆಯಲ್ಲಿ ದಿನವೂ ರಾತ್ರಿ ಚಾರ್ಜ್ ಮಾಡುತ್ತೇನೆ ” ಎಂದು ಆರತಿ ಹೇಳಿಕೆ ನೀಡಿರುವ ಬಗ್ಗೆ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.

    ಪ್ರಶಸ್ತಿಯ ವಿಶೇಷತೆ ಏನು?

    ಪ್ರಿನ್ಸ್ ಆಫ್ ವೇಲ್ಸ್ ಎಂದು ಕಿಂಗ್ ಚಾರ್ಲ್ಸ್ ಸ್ಥಾಪಿಸಿದ ಪ್ರಿನ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಅನ್ನು ಈಗ ಕಿಂಗ್ಸ್ ಟ್ರಸ್ಟ್ ಇಂಟರ್ನ್ಯಾಷನಲ್ ಎಂದು ಕರೆಯಲಾಗುತ್ತದೆ.

    ಇದನ್ನೂ ಓದಿ : 2 ಸಾವಿರ ರೂಪಾಯಿಗಾಗಿ ಯುವತಿಯ ಹ*ತ್ಯೆ ಮಾಡಿದ್ದ ಅಪ್ರಾಪ್ತ ಅರೆಸ್ಟ್!

    ಕೆಂದರೆ ಇದು ಉದ್ಯೋಗ, ಶಿಕ್ಷಣ ಮತ್ತು ಉದ್ಯಮ ಕಾರ್ಯಕ್ರಮಗಳ ಮೂಲಕ 20 ದೇಶಗಳಲ್ಲಿನ ಯುವಜನರಿಗೆ ಬೆಂಬಲ ನೀಡುತ್ತಿದೆ. ಪ್ರಿನ್ಸ್ ಟ್ರಸ್ಟ್ ಮಹಿಳಾ ಸಬಲೀಕರಣ ಪ್ರಶಸ್ತಿಯು ಸ್ವಾಭಿಮಾನಿ ಮಹಿಳೆಯರು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಗೌರವಿಸುವ ಪ್ರಶಸ್ತಿಯಾಗಿದೆ.

    Continue Reading

    LATEST NEWS

    Trending