Connect with us

    LATEST NEWS

    ಚಾಕೊಲೇಟ್ ಗ್ಯಾಂಗ್ ಆಯ್ತು ಈಗ ದರೋಡೆಗಿಳಿದಿದೆ ಜ್ಯೂಸ್ ಗ್ಯಾಂಗ್!

    Published

    on

    ಮಂಗಳೂರು / ಬೆಳಗಾವಿ : ರಾಜ್ಯದಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ರೈಲಿನಲ್ಲಿ ಚಾಕೋಲೇಟ್ ನೀಡಿ ನಗ ನಗದು ದೋಚುತ್ತಿದ್ದ ಪ್ರಕರಣಗಳು ಹೆಚ್ಚಾಗಿದ್ದವು, ಆದರೆ, ಈಗ ಜ್ಯೂಸ್ ಗ್ಯಾಂಗ್ ಒಂದು ತಲೆ ಎತ್ತಿದೆ.


    ಹೌದು, ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಜ್ಯೂಸ್ ಹಾಗೂ ಬಾಳೆಹಣ್ಣು ನೀಡಿ ನಗ ನಾಣ್ಯ ದೋಚಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಡೆದಿರುವುದು ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ. ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರಿಂದ ಈ ಗ್ಯಾಂಗ್ ನಗ ನಗದು ದೋಚಿದೆ.

    ಪ್ರಜ್ಞೆ ತಪ್ಪಿಸಿ ಕೃತ್ಯ!

    ಸಂಜೀವ್ ಹಾಗೂ ಮತ್ತೋರ್ವ ಪ್ರಯಾಣಿಕನಿಗೆ ಈ ಗ್ಯಾಂಗ್ ಜ್ಯೂಸ್​​ನಲ್ಲಿ ಮೂರ್ಛೆ ಬರುವ ಪದಾರ್ಥ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿದೆ. ಬಳಿಕ ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ. ಸದ್ಯ ಹದಿನಾಲ್ಕು ಗಂಟೆಯಿಂದ ಸಂಪೂರ್ಣ ಪ್ರಜ್ಞಾಹೀನ‌ ಸ್ಥಿತಿಯಲ್ಲಿರುವ ಸಂಜೀವ್ ಖೋತಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

    ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
    ಇತ್ತೀಚೆಗೆ ರೈಲು ಪ್ರಯಾಣಿಕರನ್ನು ಲೂಟಿ ಮಾಡುತ್ತಿದ್ದ ಚಾಕೋಲೇಟ್ ಗ್ಯಾಂಗ್ ಪೊಲೀಸರ ನಿದ್ದೆಗೆಡಿಸಿತ್ತು.

    ಇದನ್ನೂ ಓದಿ : 100 ಅಡಿ ಎತ್ತರದಿಂದ ಕೆರೆಗೆ ಹಾರಿದ ಯುವಕ; ರೀಲ್ಸ್ ಗಾಗಿ ಹೋಯ್ತು ಪ್ರಾ*ಣ!

    ಪ್ರಯಾಣಿಕರ ಸೋಗಿನಲ್ಲಿ ಬಂದು ಈ ಗ್ಯಾಂಗ್ ಪ್ರಯಾಣಿಕರ ಗೆಳೆತನ ಬೆಳೆಸಿ ಚಾಕೋಲೇಟ್ ನೀಡಿ, ಪ್ರಜ್ಞೆ ತಪ್ಪಿಸಿ, ಬಳಿಕ ನಗ, ನಗದು ದೋಚಿ ಪರಾರಿಯಾಗುತ್ತಿತ್ತು. ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಖದೀಮರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

    LATEST NEWS

    ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ..! ವಾಹನ ಸವಾರರಿಗೆ ಬಿಗ್ ಶಾಕ್..

    Published

    on

    ಬೆಂಗಳೂರು: ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್‌ ದರ ಏರಿಕೆಗೊಳಿಸಿ ವಾಹನ ಸವಾರರಿಗೆ ಶಾಕ್ ನೀಡಿದೆ.

    ಪೆಟ್ರೋಲ್, ಡಿಸೇಲ್ ಮೇಲಿನ ಟ್ಯಾಕ್ಸ್ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಿಟೇಲ್‌ ಸೇಲ್ಸ್‌ ಟ್ಯಾಕ್ಸ್‌ ದರ ಹೆಚ್ಚಳ ಮಾಡಲಾಗಿದೆ. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ರಾಜ್ಯದಲ್ಲಿ ಪೆಟ್ರೋಲ್ ಬೆಲೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆ 3.50 ರೂಪಾಯಿ ಹೆಚ್ಚಳ‌ವಾಗಿದೆ. ಈ ಹಿಂದೆ ಟ್ಯಾಕ್ಸ್ ದರ ಪೆಟ್ರೋಲ್- 25.92% ಇದ್ದಿದ್ದು, ಈಗ 29.84% ಗೆ ಏರಿಕೆ ಅಂದರೆ 3.9% ಹೆಚ್ಚಳವಾಗಿದೆ. ಅಂತೆಯೇ ಡೀಸೆಲ್ ಈ‌ ಹಿಂದೆ- 14.34% ಇದ್ದಿದ್ದು, ಈಗ 18.44%ಗೆ ಏರಿಕೆ ಕಂಡಿದೆ. ಅಂದರೆ 4.1% ರಷ್ಟು ಏರಿಕೆಯಾಗಿದೆ. ಟ್ಯಾಕ್ಸ್ ಹೆಚ್ಚಳ ಹಿನ್ನೆಲೆ ಪೆಟ್ರೋಲ್‌ ದರ 100 ರೂಪಾಯಿ ದಾಟಲಿದೆ. ಈಗ ಪೆಟ್ರೋಲ್‌ ದರ 99.54 ರೂ. ಇದ್ದು, ಮುಂದೆ 102 ರೂಪಾಯಿಗೆ ಏರಿಕೆಯಾಗಲಿದೆ. ಇವತ್ತಿನ ಡೀಸೆಲ್‌ ದರ 85.93 ರೂಪಾಯಿ ಇದೆ. ಅದು 89.43 ರೂಪಾಯಿಗೆ ಏರಿಕೆಯಾಗಲಿದೆ.

    Continue Reading

    LATEST NEWS

    ಪ್ರಕಾಶ್ ಶೆಟ್ಟಿ, ರೊನಾಲ್ಡ್‌ ಕೊಲಾಸೋರಿಗೆ ಗೌರವ ಡಾಕ್ಟರೇಟ್ ಪ್ರದಾನ

    Published

    on

    ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 42ನೇ ವಾರ್ಷಿಕ ಘಟಿಕೋತ್ಸವ ಶನಿವಾರ ವಿ.ವಿ.ಯ ಆವರಣದಲ್ಲಿರುವ ಮಂಗಳಾ ಸಭಾಂಗಣದಲ್ಲಿ ಶನಿವಾರ ಜರಗಿತು.

    ಮಂಗಳೂರು ವಿವಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಎಂ.ಆರ್.ಜಿ. ಗ್ರೂಪ್ ಸ್ಥಾಪಕಾಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ಡಾ। ರೊನಾಲ್ಡ್‌ ಕೊಲಾಸೋ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನಿಸಿದರು. ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಡಾ। ತುಂಬೆ ಮೊಯ್ದೀನ್ ಅವರು ಕಾರ್ಯಕ್ರಮಕ್ಕೆ ಗೈರಾಗಿದ್ದರು.

    155 ಮಂದಿಗೆ ಪಿಎಚ್‌ಡಿ, 58 ಚಿನ್ನದ ಪದಕ ಮತ್ತು 57 ನಗದು ಬಹುಮಾನ ಪ್ರದಾನ ಮಾಡಿದರು.

    ಉನ್ನತ ಶಿಕ್ಷಣ ಸಚಿವ, ಸಹಕುಲಾಧಿಪತಿ ಡಾ। ಎಂ.ಸಿ.ಸುಧಾಕರ್ ಉಪಸ್ಥಿತರಿದ್ದರು. ನವದೆಹಲಿಯ ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆ ಮಹಾನಿರ್ದೇಶಕ ಪ್ರೊ। ಸಚಿನ್ ಚತುರ್ವೇದಿ ಅವರು ಘಟಿಕೋತ್ಸವ ಭಾಷಣ ಮಾಡಿದರು.

    ವಿ.ವಿ. ಕುಲಪತಿ ಪ್ರೊ। ಪಿ.ಎಲ್. ಧರ್ಮ ಪ್ರಸ್ತಾವಿಸಿದರು. ಕುಲಸಚಿವ (ಆಡಳಿತ) ರಾಜು ಮೊಗವೀರ, ಕುಲಸಚಿವ (ಪರೀಕ್ಷಾಂಗ) ಡಾ। ದೇವೇಂದ್ರಪ್ಪ, ವಿ.ವಿ.ಯ, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯ ಪರಿಷತ್ ಸದಸ್ಯರು, ವಿವಿಧ ನಿಕಾಯಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

    Continue Reading

    DAKSHINA KANNADA

    ಏಕಕಾಲಕ್ಕೆ ಅರಳಿ ನಿಂತ 42 ಬ್ರಹ್ಮಕಮಲ ಪುಷ್ಪ; ಮಧ್ಯರಾತ್ರಿಯೇ ವಿಶೇಷ ಪೂಜೆ ಸಲ್ಲಿಕೆ!

    Published

    on

    ಉತ್ತರ ಕನ್ನಡ: ಶ್ರಾವಣದ ಸಂಜೆಗಳಲ್ಲಿ ಬ್ರಹ್ಮ ಕಮಲ ಅರಳುವುದು ವಾಡಿಕೆ. ಒಮ್ಮೊಮ್ಮೆ ಅದಕ್ಕೆ ವ್ಯತಿರಿಕ್ತವಾಗಿ ಬೇಗವೂ ಬ್ರಹ್ಮ ಕಮಲ ಅರಳುತ್ತದೆ. ಆದರೆ ಒಮ್ಮೆಲೆ ಪುಷ್ಪಗುಚ್ಛದಷ್ಟು ಅಂದವಾಗಿ ಒಂದೆಡೆಗೇ ಅರಳುವ ಬ್ರಹ್ಮಕಮಲದ ಸೊಬಗನ್ನು ನೋಡುವ ಅನುಭವವೇ ಬೇರೆ! ಬ್ರಹ್ಮಕಮಲವು ಅಧ್ಯಾತ್ಮಿಕ ಸ್ಥಾನವನ್ನು ಹಿಂದೂ ಹಾಗೂ ಜೈನ, ಬೌದ್ಧ ಧರ್ಮಗಳಲ್ಲಿ ಹೊಂದಿದೆ. ಹೀಗಾಗಿ ಬ್ರಹ್ಮಕಮಲ ಬರೀ ಹೂವಾಗದೇ ಈ ಹೂವೇ ಆರಾಧನೆಯ ವಸ್ತುವಾಗಿರುವುದು ವಿಶೇಷ!

    ಏಕಕಾಲಕ್ಕೆ 42 ಹೂಗಳು!

    ಯಲ್ಲಾಪುರ ಪಟ್ಟಣದ ರಾಮಾಪುರ ವ್ಯಾಪ್ತಿಯಲ್ಲಿ ವಾಸಿಸುವ ಗಣೇಶ್ ಪಂಡರಾಪುರ ಅವರ ಮನೆಯ ವಿಶೇಷವಾದ ಬ್ರಹ್ಮಕಮಲದ ಹೂವುಗಳು! ಯಾಕೆ ವಿಶೇಷ ಎಂದರೆ, ಹೋದ ವರ್ಷ ಇವರ ಮನೆಯಲ್ಲಿ ಸುಮಾರು 84 ಬ್ರಹ್ಮಕಮಲಗಳು ಒಟ್ಟಿಗೆ ಅರಳಿದ್ದವು. ಈ ವರ್ಷ 42 ಬ್ರಹ್ಮಕಮಲ ಏಕಕಾಲಕ್ಕೆ ಅರಳಿ ನಿಂತಿವೆ.

    ಪುಷ್ಪಕ್ಕೆ ಪೂಜೆ!

    ಮಧ್ಯರಾತ್ರಿ 12: 40 ರ ಸುಮಾರಿಗೆ ಈ ಹೂವುಗಳೆಲ್ಲಾ ಅರಳಿದ್ದವು ತಕ್ಷಣ ಗಣೇಶ್ ಪಂಡರಾಪುರ ಅವರ ಕುಟುಂಬ ವಾಡಿಕೆಯಂತೆ ಪೂಜೆ ಮಾಡಿ ನಂತರ ಮನೆಯವರಿಗೆ ಜನರಿಗೆ ಪ್ರಸಾದ ಹಂಚಿ ಹೂವುಗಳ ಮುಂದೆ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದರು, ಬ್ರಹ್ಮಕಮಲ ಅರಳುವ ವೇಳೆ ಕೇಳಿದ ಕೋರಿಕೆಗಳು ಈಡೇರುತ್ತವೆ ಎಂಬುದು ಪ್ರಸಿದ್ಧ ಲೋಕಾರೂಢಿಯ ನಂಬಿಕೆ.

    Continue Reading

    LATEST NEWS

    Trending