Connect with us

  LATEST NEWS

  ‘ತಂದೆಯನ್ನು ಭೇಟಿ ಮಾಡಲು ಹೋದರೆ ಹೊಡಿತಾರೆ..’ ಸಿ.ಪಿ ಯೋಗೇಶ್ವರ್‌ ಪುತ್ರಿಯ ಅಳಲು..! ರಾಜಕೀಯ ಚರ್ಚೆಗೆ ಕಾರಣವಾಯ್ತು ಈ ವೀಡಿಯೋ

  Published

  on

  ಬೆಂಗಳೂರು: ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಬಿಜಿಪಿ ಮುಖಂಡರ ಪುತ್ರಿಯ ಹೇಳಿಕೆಯ ವೀಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್‌ ಅವರ ಪುತ್ರಿ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಮಾಡಿ ತಂದೆ ವಿರುದ್ಧ ಹರಿಹಾಯ್ದಿದ್ದಾರೆ.

  nisha yogeshwar

  ಸಿ.ಪಿ. ಯೋಗೇಶ್ವ‌ರ್ ಮತ್ತು ಅವರ ಎರಡನೇ ಪತ್ನಿ ವಿರುದ್ಧ ಮೊದಲನೇ ಪತ್ನಿಯ ಪುತ್ರಿ ನಿಶಾ ಯೋಗೇಶ್ವ‌ರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.  ಕೌಟುಂಬಿಕ ಸಮಸ್ಯೆಗಳ ಕುರಿತಾಗಿ ವಿಡಿಯೊ ವೊಂದನ್ನು ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವೀಡಿಯೋ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  ‘ನನ್ನ ತಂದೆ ಮತ್ತು ಚಿಕ್ಕಮ್ಮ(ಮಲತಾಯಿ) ಇಬ್ಬರೂ ಮೊದಲನೇ ಪತ್ನಿಯ ಮಗಳಾದ ನನ್ನನ್ನು ಬೆಳೆಸಿ ಆದರ್ಶವಾಗಲಿಲ್ಲ. ತಂದೆಯ ಭೇಟಿಗೆ ಹೋದರೆ ಪೊಲೀಸರನ್ನು ಕರೆಯಿಸುತ್ತಾರೆ. ಮಾತನಾಡಿಸಲು ಮುಂದಾದರೆ ಕಪಾಳಕ್ಕೆ ಹೊಡೆಯುತ್ತಾರೆ. ನಿನಗೆ ಒಂದು ರೂಪಾಯಿ ಕೂಡ ಕೊಡುವುದಿಲ್ಲ. ಭಿಕ್ಷೆ ಬೇಡಿ ಬದುಕು ಎನ್ನುತ್ತಾರೆ. ನನ್ನ ಬದುಕಿನಿಂದ ತಂದೆ ಹೊರ ಹೋದಾಗಿನಿಂದಲೂ ವನವಾಸ ಅನುಭವಿಸುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.

  Read More..; ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಬಾಲಿವುಡ್‌ನಿಂದ ಹೊರಬರುತ್ತೇನೆ: ಕಂಗನಾ ರಣಾವತ್

  ‘ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನು ವಿಡಿಯೊವೊಂದನ್ನು ಪೋಸ್ಟ್ ಮಾಡಿದ್ದೆ. ನನ್ನ ಹೆಸರಿನ ಮುಂದೆ ತಮ್ಮ ಹೆಸರನ್ನು ಬಳಸದಂತೆ ತಾಕೀತು ಮಾಡಿದರು. ಅವರ ಹೆಸರು ಇಲ್ಲದೆ ನನಗೆ ಅಸ್ತಿತ್ವವೇ ಇಲ್ಲ ಎಂದು ಹೀಯಾಳಿಸಿದ್ದಾರೆ. ಈ ಬಗ್ಗೆ ಮಾತನಾಡಲು ಇಷ್ಟಪವಿಲ್ಲದಿದ್ದರೂ ಕೂಡಾ ಮಾತನಾಡಲೇಬೇಕಾದ ಪರಿಸ್ಥಿತಿ ಬಂದಿದೆ. ನಾನು ಹತ್ತು ವರ್ಷವಿದ್ದಾಗಲೇನನ್ನ ತಂದೆ ನಮ್ಮ ಬದುಕಿನಿಂದ ಹೊರ ನಡೆದಿದ್ದಾರೆ. ಆದರೂ, ಚುನಾವಣೆ ಸಂದರ್ಭದಲ್ಲಿ ಕರೆದಾಗ ಅವರ ಪರ ಪ್ರಚಾರ ಮಾಡಿದ್ದೆ. ಅವರಿಷ್ಟಕ್ಕೆ ಅನುಗುಣವಾಗಿ ಕೆಲಸ ಮಾಡಿದಾಗ ಎಲ್ಲವೂ ಚೆನ್ನಾಗಿತ್ತು. ಈಗ 24 ವರ್ಷದ ನಂತರ ನನ್ನ ಬಗ್ಗೆ ಯೋಚಿಸಿದ್ದಕ್ಕೆ ಆದರ್ಶ ಮಗಳಾಗದೆ ಯಾರಿಗೂ ಬೇಡವಾಗಿದ್ದೇನೆ. ತಂದೆ ಹೆಸರನ್ನು ಬಳಸಬಾರದೆಂಬ ಮಾತು ಬರುತ್ತಿವೆ’ ಎಂದು ನಿಶಾ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.

  ‘ಈ ರೀತಿ ಕಾಮೆಂಟ್ ಮಾಡುವವರು ಯಾರೆಂದು ನನಗೆ ಗೊತ್ತಿದೆ. ಅವರೆಲ್ಲರೂ ಒಂದು ಕಡೆ ಸೇರಿ ನನ್ನ ಆಧಾರ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಸೇರಿದಂತೆ ಹಲವು ಕಡೆ ತಂದೆ ಹೆಸರನ್ನು ಹೇಗೆ ತೆಗೆಯಬೇಕೆಂದು ನನಗೆ ಹೇಳಿ ಕೊಡಲಿ. ಹೆಸರು ತೆಗೆದರೆ ಅವರು ನನ್ನ ತಂದೆ ಎಂಬ ಸತ್ಯ ಸುಳ್ಳಾಗುತ್ತಾ..?  24 ವರ್ಷದ ಹಿಂದೆ ಅವರ ಜೀವನದಿಂದ ನನ್ನನ್ನು ತೆಗೆದುಬಿಟ್ಟಿದ್ದೀರಿ. ಈಗ ಹೆಸರಿನ ಮುಂದೆಯೇ ಅವರನ್ನು ತೆಗೆಯಲು ಮುಂದಾಗಿದ್ದೀರಾ’ ಎಂದು ಪ್ರಶ್ನಿಸಿದ್ದಾರೆ.

  ಕೈ ಸೇರಲು ಯತ್ನ:

  ಇನ್ನು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸಕ್ರಿಯವಾಗಿದ್ದ ನಿಶಾ, ಕಾಂಗ್ರೆಸ್ ಸೇರಲು ಪ್ರಯತ್ನಿಸಿದ್ದರು. ಕಾಂಗ್ರೆಸ್ ನಾಯಕರ ಜೊತೆಯೂ ಕಾಣಿಸಿಕೊಂಡಿದ್ದರು. ಪಕ್ಷ ಸೇರ್ಪಡೆ ಕುರಿತು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಆ ವೇಳೆ ಮಾಧ್ಯಮದವರ ಜೊತೆ ಪ್ರತಿಕ್ರಿಯಿಸಿದ್ದ ಶಿವಕುಮಾರ್ ನಿಶಾ ರವರಿಗೆ ಇನ್ನೂ ಮದುವೆ ಆಗಿಲ್ಲ. ಅವರು ತಂದೆ ಮನೆಯಲ್ಲೇ ಇರಬೇಕು. ಮಗಳ ಮದುವೆ ಸಮಯದಲ್ಲಿ ತಂದೆ ಧಾರೆ ಎರೆದು ಕೊಡಬೇಕು. ತಂದೆ- ಮಗಳನ್ನು ದೂರ ಮಾಡಿದ ಅಪಕೀರ್ತಿ ನನಗೆ ಬೇಡ ಎಂದು ಸುಮ್ಮನಿದ್ದೇನೆ ಎಂದು ಹೇಳಿದ್ದರು.

  ಮೋದಿ ಭೇಟಿ ಮಾಡಿಸಲಿಲ್ಲ – ನಿಶಾ

  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಿದ ನನ್ನ ತಾಯಿಯ ಕಪಾಳಕ್ಕೆ ತಂದೆ ಹೊಡೆದಿದ್ದರು. ಚಿಕ್ಕಮ್ಮನ ಮಗ ನನ್ನ ತಮ್ಮನಿಗೆ ಹೊಡೆದು, ಮನೆಯಿಂದ ಸಾಮಗ್ರಿ ಹೊರ ಹಾಕಿದ್ದರು. ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ಬಂದಾಗ ಅವರನ್ನು ಭೇಟಿ ಮಾಡಿಸಿ ಎಂದು ಕೇಳಿಕೊಂಡಿದ್ದೆ. ಆದರೆ, ಬೇಕೆಂದೇ ಭೇಟಿ ಮಾಡಿಸಲಿಲ್ಲ. ಇದೆಂಥಾ ನ್ಯಾಯ ಎಂದು ನಿಶಾ ಪ್ರಶ್ನಿಸಿದ್ದಾರೆ.

  ಮಗಳಿಗೆ ಯಾಕೆ ಒಂದು ದಾರಿ ತೋರಿಸಲಿಲ್ಲ ಎಂದು ನನ್ನ ತಂದೆಯನ್ನು ಪ್ರಶ್ನಿಸಿ. ಅವರು ನನ್ನಿಂದ ಮಾತ್ರ ಸರಿಯಾದುದನ್ನು ಬಯಸಿದರೆ ಸಾಕೇ? ಅವರು ಸರಿಯಾಗಿರಬೇಕಲ್ಲವೇ? ಮಾತನಾಡಲು ನನ್ನ ಬಳಿ ಸಾಕಷ್ಟಿದೆ. ನನ್ನನ್ನು ಶಾಂತವಾಗಿರಲು ಬಿಡಿ. ಇಲ್ಲದಿದ್ದರೆ, ನೀವು ಎಲ್ಲಿ ತಲೆ ಎತ್ತಿ ನಡೆಯುವುದಕ್ಕೆ ಸಾಧ್ಯವಾಗುವುದಿಲ್ಲವೊ ಅಲ್ಲಿಗೆ ವಿಡಿಯೊ ಕಳಿಸುತ್ತೇನೆ ಎಂದು ತಂದೆಗೆ ಎಚ್ಚರಿಸಿದ್ದಾರೆ.

  LATEST NEWS

  ಆನ್​ಲೈನ್​ ಮೂಲಕ ಆರ್ಡರ್​ ಮಾಡಿದ್ದ ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆ

  Published

  on

  ಮುಂಬೈ: ಐಸ್​ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್‌ಲೈನ್‌ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಅವರು ಬಹಳ ಆಸಕ್ತಿಯಿಂದ ಐಸ್​ಕ್ರೀಂ ತೆಗೆದು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಆ ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

  ಮೊದಲು ವಾಲ್ನಟ್​ ಎಂದುಕೊಂಡೆವು. ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ. ನಾನು ಮೂರು ಐಸ್​ಕ್ರೀಂಗಳನ್ನು ಆರ್ಡರ್​ ಮಾಡಿದ್ದೆ, ನಾನು ಬಟರ್​ಸ್ಕಾಚ್​ ಐಸ್​ ಕ್ರೀಮ್ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ ತಾಗಿದಂತಾಯಿತು. ನಾನು ವಾಲ್ನಟ್ ಅಥವಾ ಚಾಕೊಲೇಟ್​ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ. ನಾನು ವೈದ್ಯನಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದು ನಾನು ಅರ್ಥಮಾಡಿಕೊಂಡೆ ಅದರಲ್ಲಿ ಉಗುರು ಕೂಡ ಇದೆ ಎಂದರು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ವೈದ್ಯೆ ಹೇಳಿದ್ದಾರೆ.

  ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ, ಐಸ್​​ಕ್ರೀಂ ಬ್ರ್ಯಾಂಡ್​ ವಿರುದ್ಧ ಕಲಬೆರಕೆ ಮತ್ತು ಜನರ ಜೀವಕ್ಕೆ ಅಪಾಯ ತಂದಿರುವ ಆರೋಪದಡಿ ಪ್ರಕರಣ ದಾಖಲಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  ಪೊಲೀಸರು ಬೆರಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ, ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಐಸ್​ಕ್ರೀಂನಲ್ಲಿ ಬೆರಳು ಎಲ್ಲಿಂದ ಬಂತು ಎಂಬುದನ್ನೂ ಪತ್ತೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

  ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದೆ. Yummo ಐಸ್ ಕ್ರೀಮ್ ಒಂದು ಹೆಸರಾಂತ ಬ್ರ್ಯಾಂಡ್ ಎಂದು ಹೇಳಲಾಗುತ್ತಿದೆ. ಈಗ ಪೊಲೀಸರು ಮುಂದಿನ ಕ್ರಮ ಏನು ಎಂಬುದು ವರದಿ ಬಂದ ನಂತರವೇ ತಿಳಿದುಬರಲಿದೆ.

  Continue Reading

  LATEST NEWS

  ಇನ್ಮುಂದೆ ತಿರುಮಲ ಬೆಟ್ಟದಲ್ಲಿ ‘ಗೋವಿಂದ..ಗೋವಿಂದ’ ಘೋಷ ಮಾತ್ರ ಮೊಳಗಬೇಕು-ಸಿಎಂ ನಾಯ್ಡು

  Published

  on

  ಆಂಧ್ರಪ್ರದೇಶ/ಮಂಗಳೂರು: ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ತಿರುಪತಿ ತಿಮ್ಮಪ್ಪನ ಬೆಟ್ಟಕ್ಕೆ ಕುಟುಂಬ ಸಮೇತರಾಗಿ ತೆರಳಿ ದೇವರ ದರ್ಶನ ಪಡೆದಿದ್ದಾರೆ.

  ತಿರುಮಲ ಒಂದು ಪವಿತ್ರ ದೇವಸ್ಥಾನವಾಗಿದ್ದು ಇಲ್ಲಿನ ಪಾವಿತ್ರ್ಯತೆ ಕಾಪಾಡಬೇಕಾಗಿದೆ. ಹಾಗಾಗಿ ಇನ್ಮುಂದೆ ದೇವಸ್ಥಾನದಲ್ಲಿ ‘ಏಕಕುಂಡಲವಾಡ ಸ್ವಾಮಿ ಗೋವಿಂದ.. ಗೋವಿಂದ ‘ ಎಂಬ ಘೋಷ ಮಾತ್ರ ಮೊಳಗಬೇಕು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

  Read More.; ಮೊಣಕಾಲಿನಲ್ಲಿ ತಿರುಮಲ ಬೆಟ್ಟ ಏರಿದ ಬಾಲಿವುಡ್ ನಟಿ ಜಾಹ್ನವಿ ಕಪೂರ್..!!

  ಅವರು ತಿರುಮಲ ಬೆಟ್ಟದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಇನ್ನು ಮುಂದೆ ಬೆಟ್ಟದಲ್ಲಿ ರಾಜಕೀಯ ಹೇಳಿಕೆಗಳು, ಘೋಷಣೆಗಳು ಕೇಳಬಾರದು. ಕೇವಲ ‘ಗೋವಿಂದ.. ಗೋವಿಂದ’ ಎಂಬ ಘೋಷ ಮಾತ್ರ ಕೇಳಿಬರಬೇಕು. ಇದು ಹಿಂದೂಗಳ ಪವಿತ್ರ ದೇವಸ್ಥಾವಾಗಿದ್ದು ಇಲ್ಲಿನ ಪಾವಿತ್ರ್ಯತೆಯನ್ನು ನಾವು ಕಾಪಾಡಬೇಕು. ಇಲ್ಲಿಗೆ ಬರುವ ಭಕ್ತರಿಗೆ ದೇವರ ದರ್ಶನ ಹಾಗೂ ಶಾಂತಿಯುವಾದ ವ್ಯವಸ್ಥೆಯನ್ನು ಕಲ್ಪಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು.

  ಕಳೆದ ಐದು ವರ್ಷಗಳಲ್ಲಿ ಪವಿತ್ರ ದೇವಾಲಯದ ಪಾವಿತ್ರ್ಯತೆ ಹಾಳಾಗಿದೆ, ಶಕ್ತಿಶಾಲಿಗಳ ಮನೆ ಬಾಗಿಲಿಗೆ ದೇವರನ್ನು ಕೊಂಡೊಯ್ಯುವುದನ್ನು ಎಂದಾದರೂ ನೀವು ಕೇಳಿದ್ದೀರಾ. ಇಲ್ಲಿ ಡ್ರಗ್ಸ್​, ಮದ್ಯ ಮಾಂಸ ಸೇವನೆಗೆ ಅವಕಾಶ ಕಲ್ಪಿಸಲಾಗಿತ್ತು, ಕಳೆದ ಐದು ವರ್ಷಗಳಲ್ಲಿ ಬೆಟ್ಟದಲ್ಲಿ ಆಹಾರದ ಗುಣಮಟ್ಟವೂ ಹದಗೆಟ್ಟಿದೆ, ತಿರುಮಲ ಬೆಟ್ಟದಲ್ಲಿ ಗೋವಿಂದ ಗೋವಿಂದ ಘೋಷ ಕೇಳಬೇಕೇ ಹೊರತು ರಾಜಕೀಯ ಘೋಷಣೆಗಳಲ್ಲ ಎಂದು ಹೇಳಿದ್ದಾರೆ.

  Continue Reading

  LATEST NEWS

  ಚಾರ್ಮಾಡಿ ಘಾಟ್​​​ನಲ್ಲಿ KSRTC ಬಸ್​ಗೆ ಅಡ್ಡನಿಂತ ಒಂಟಿ ಸಲಗ

  Published

  on

  ಚಿಕ್ಕಮಗಳೂರು: ಚಾರ್ಮಾಡಿ ಘಾಟ್​ನಲ್ಲಿ ಒಂಟಿ ಸಲಗದ ಆತಂಕ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್​​​ ಬಳಿ ಕೆಎಸ್​ಆರ್​​ಟಿಸಿ ಬಸ್​ಗೆ ಒಂಟಿ ಸಲಗ ಅಡ್ಡನಿಂತು ಭಯ ಹುಟ್ಟಿಸಿದೆ. ಮಧ್ಯರಾತ್ರಿ ಒಂಟಿ ಸಲಗದ ಉಪಟಳಕ್ಕೆ ಪ್ರಯಾಣಿಕರು ಕಂಗಾಲಾದರು.

  ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್​ಗೆ ಅಡ್ಡಲಾಗಿ ಆನೆಯೊಂದು ಬಂದು ನಿಂತಿದ್ದು ಸುಮಾರು ಅರ್ಧ ಗಂಟೆಗಳ ಕಾಲ ದಾರಿಯೇ ಬಿಟ್ಟಿಲ್ಲ. ಅರ್ಧ ಗಂಟೆ ಚೂರೂ ಅಲುಗಾಡದೆ ಭಯದಲ್ಲೇ ಪ್ರಯಾಣಿಕರು ಕೂರುವಂತಾಗಿತ್ತು.

  ಚಾರ್ಮಾಡಿ ಘಾಟ್​ನಲ್ಲಿ ಪದೇಪದೇ ಒಂಟಿ ಸಲಗ ಕಾಣಿಸಿಕೊಳ್ಳುತ್ತಿದೆ. ಒಂಟಿ ಸಲಗದ ಸೆರೆಗೆ ಗ್ರಾಮಸ್ಥರು, ಪ್ರಯಾಣಿಕರು ಮನವಿ ಮಾಡಿದ್ದಾರೆ. ಈ ರೀತಿ ಆನೆಗಳು ಪ್ರಯಾಣಿಕರಿಗೆ ಕಾಟ ಕೊಡೋದು, ದಾಳಿ ಮಾಡೋದು ಹೊಸದೇನಲ್ಲ. ಆದರೆ ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು.

  ಎರಡು ದಿನಗಳ ಹಿಂದಷ್ಟೇ ಪುತ್ತೂರಿನಲ್ಲೂ ಆನೆ ಕಾಟ ಶುರುವಾಗಿತ್ತು. ಗುಂಪಿನಿಂದ ತಪ್ಪಿಸಿಕೊಂಡು ಬಂದ ಕಾಡಾನೆಯೊಂದು ಕಳೆದ ಹತ್ತು ದಿನಗಳಿಂದ ಪುತ್ತೂರು ತಾಲೂಕಿನ ಹತ್ತಾರು ಹಳ್ಳಿಗಳಲ್ಲಿ ಓಡಾಡುತ್ತಿದೆ. ಇದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಹೋದ ಕಡೆಯಲ್ಲೆಲ್ಲ ಹಾನಿ ಮಾಡುತ್ತಿದೆ.

  Continue Reading

  LATEST NEWS

  Trending