Connect with us

DAKSHINA KANNADA

ಗುರುಪುರ ಬಂಟರ ಮಾತೃ ಸಂಘದ ವತಿಯಿಂದ ರಕ್ತದಾನ ಶಿಬಿರ

Published

on

ಮಂಗಳೂರು: ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ವತಿಯಿಂದ ಎಜೆ ಆಸ್ಪತ್ರೆ ಆಂಡ್ ರಿಸರ್ಚ್ ಸೆಂಟರ್ ಮಂಗಳೂರು ಇದರ ಸಹಯೋಗದೊಂದಿಗೆ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.


ಶಿಬಿರವನ್ನು ಉದ್ಯಮಿ ಉಮಾವತಿ ಎಂ ಶೆಟ್ಟಿ ನಾಡಾಜೆಗುತ್ತು ಉದ್ಘಾಟಿಸಿದರು. ಪ್ರಾಧ್ಯಾಪಕ ದಿನಕರ್ ಮೆಂಡ ಮಾತನಾಡಿ, ರಕ್ತದಾನಕ್ಕೆ ಜೀವ ಉಳಿಸುವ ಶಕ್ತಿ ಇದೆ. ರಕ್ತದಾನ ಮನಪೂರ್ವಕವಾಗಿ ಮಾಡಬೇಕು. ಬಡವ ಶ್ರೀಮಂತ ಎಲ್ಲರಿಗೂ ಹೊಂದಣಿಕೆಯಾಗುವ ವಸ್ತು ಎಂದರೆ ರಕ್ತ ಮಾತ್ರ ಎಂದರು. ಬ್ಲಡ್ ಬ್ಯಾಂಕ್‌ನ ಮ್ಯಾನೇಜರ್ ಗೋಪಾಲಕೃಷ್ಣ ಅವರು ಮಾತನಾಡಿ, ರಕ್ತದ ಅವಶ್ಯಕತೆ ಸಾಕಷ್ಟು ಇದೆ. ದ.ಕ.ಜಿಲ್ಲೆಗೆ 8 ಜಿಲ್ಲೆಗಳಿಂದ ಇಲ್ಲಿನ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ರಕ್ತದಾನದಿಂದ ಹಲವಾರು ಪ್ರಯೋಜನಗಳಿವೆ. ಇದು ಹಲವಾರು ರೋಗಗಳನ್ನು ತಡೆಯುತ್ತದೆ. ಇದನ್ನು ಎಲ್ಲರೂ ಅರಿಯಬೆಕೆಂದರು.

ಗುರುಪುರ ಬಂಟರ ಮಾತೃ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘ ಒಗ್ಗಟ್ಟಾಗಿಸುವ ಕಾರ್ಯ ಬಂಟರ ಭವನ ನಿರ್ಮಾಣಕ್ಕೆ ಪೂರಕವಾಗಿದೆ. ಹೊರಗಿನವರು ನಮ್ಮಸಂಘವನ್ನು ಗುರುತಿಸುವಂತಾಗಿದೆ ಎಂದರು.

ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆ ಪಿಆರ್‌ಒ ಹೇಮಂತ್ ಶೆಟ್ಟಿ ನಾರಳ ,ತಾಲೂಕು ಪಂಚಾಯತ್ ಮಾಜಿ ಸದಸ್ಯ ಸಚಿನ್ ಅಡಪ ಬಡಕರೆಗುತ್ತು, ಗುರುಪುರ ಬಂಟರ ಮಾತೃ ಸಂಘದ ಮಾಜಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಇಂದಿರಾಕಕ್ಷಿ ಪಿ ಶೆಟ್ಟಿ, ಮಾತೃ ಸಂಘದ ಕಾರ್ಯದರ್ಶಿ ಹರೀಶ್ ಶೆಟ್ಟಿ ಉಪ್ಪುಗೂಡು, ಕೋಶಾಧಿಕಾರಿ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಸಾವಿನಲ್ಲೂ ಒಂದಾದ ಸಹೋದರರು! ಅಣ್ಣನ ನಿಧನದ ಸುದ್ದಿ ಕೇಳಿ ಇಹಲೋಕ ತ್ಯಜಿಸಿದ ತಮ್ಮ

Published

on

ಸುಳ್ಯ :  ಸಹೋದರರಿಬ್ಬರು ಸಾ*ವಿನಲ್ಲೂ ಒಂದಾದ ಘಟನೆ ಸುಳ್ಯದ ಅರಂತೋಡಿನಲ್ಲಿ ನಡೆದಿದೆ. ಅರಂತೋಡು ಗ್ರಾಮದ 82 ವರ್ಷದ ಎಸ್. ಇ. ಅಬ್ದುಲ್ಲಾ ಹಾಗೂ ಮಹಮ್ಮದ್ ಎಸ್. ಇ  ಮೃ*ತ ಸಹೋದರರು.

ಅಬ್ದುಲ್ಲಾ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧ*ನರಾಗಿದ್ದಾರೆ. ಈ ವಿಚಾರ ತಿಳಿದ ಅವರ ಸಹೋದರ ಮಹಮ್ಮದ್ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

ಇಬ್ಬರನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

Continue Reading

DAKSHINA KANNADA

ಈ ತಿಂಗಳಿನಲ್ಲಿ ಬರುತ್ತೆ ಪಿಎಂ ಕಿಸಾನ್ ಯೋಜನೆಯ 17ನೇಕಂತು..!

Published

on

ದೆಹಲಿ: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡುತ್ತಿದೆ. ಈ ಯೋಜನೆಯಿಂದ ಪ್ರತೀ ವರ್ಷ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದ್ದು, ಮೂರು ಕಂತುಗಳಲ್ಲಿ 2000 ರೂ. ನೇರವಾಗಿ ಕೃಷಿಗರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಇದೀಗ ರೈತರು 17ನೇ ಕಂತಿನ ನಿರೀಕ್ಷೆಯಲ್ಲಿದ್ದು, ಮೇ.2024ರಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಕಂತನ್ನು ಪಡೆಯಬಹುದಾಗಿದೆ ಎಂದು ಮೂಲಗಳು ತಿಳಿಸಿವೆ.  ಆದರೆ ಈ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ.

16ನೇ ಕಂತನ್ನು ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್‌ ನಿಧಿ ಯೋಜನೆಯ ಕಂತನ್ನು ರೈತರಿಗೆ ವರ್ಗಾವಣೆ ಮಾಡಲಾಗಿದೆ. ಇನ್ನು 17ನೇ ಕಂತಿಗಾಗಿ ಕಾದು ನೋಡಬೇಕಿದೆ. ಈ ಯೋಜನೆಯ ಕಂತುಗಳನ್ನು ವರ್ಷದಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತದೆ. ಮೊದಲನೆಯ ಕಂತು ಏಪ್ರಿಲ್-ಜುಲೈನಲ್ಲಿ, ಎರಡನೆಯದು ಆಗಸ್ಟ್-ನವೆಂಬರ್ ನಲ್ಲಿ ಮತ್ತು ಮೂರನೆಯದು ಡಿಸೆಂಬರ್-ಮಾರ್ಚ್‌ನಲ್ಲಿ ನೀಡಲಾಗುತ್ತದೆ.

ಮುಂದೆ ಓದಿ..; “ಮದುವೆ ಗೌನ್‌”ಗೆ ಮತ್ತೊಂದು ಟಚ್ ಕೊಟ್ಟ ‘ಸಮಂತಾ’..!! ಶಾಕ್‌ನಲ್ಲಿಅಭಿಮಾನಿಗಳು!

ಈಗಾಗಲೇ 16ನೇ ಕಂತನ್ನು ಫೆಬ್ರವರಿಯಲ್ಲಿ ನೀಡಿದ್ದು, 17 ನೇ ಕಂತು ಮೇ ತಿಂಗಳಿನಲ್ಲಿ ವರ್ಗಾವಣೆಯಾಗಬಹುದು ಎನ್ನಲಾಗಿದ್ದು, ನಿರ್ದಿಷ್ಟ ದಿನಾಂಕ ಮಾತ್ರ ನಿಗದಿಯಾಗಿಲ್ಲ.

 

 

Continue Reading

BANTWAL

ULLALA : ನೇಣಿಗೆ ಶರಣಾದ ಇಬ್ಬರು ಪುಟ್ಟ ಮಕ್ಕಳ ತಂದೆ

Published

on

ಉಳ್ಳಾಲ :   ಎರಡು ಪುಟ್ಟ ಮಕ್ಕಳ ತಂದೆಯೋರ್ವರು ನೇಣಿಗೆ ಶರಣಾದ ಘಟನೆ ಉಳ್ಳಾಲದ ಕುಂಪಲದ ಹನುಮಾನ್ ನಗರದಲ್ಲಿ ಸೋಮವಾರ(ಏ. 29) ಮುಂಜಾನೆ ನಡೆದಿದೆ. 44 ವರ್ಷ ಯೋಗೀಶ್ ಆತ್ಮಹ*ತ್ಯೆಗೈದ ವ್ಯಕ್ತಿ.

ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ. ಯೋಗೀಶ್ ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ ನಲ್ವತ್ತು ಸಾವಿರ ರೂಪಾಯಿಗಳನ್ನ ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಅವರ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದೇ ಅವಮಾನದಲ್ಲಿ ಯೋಗೀಶ್ ಆತ್ಮಹ*ತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಇದನ್ನೂ ಓದಿ : ಮೇ 3 ರಂದು ಕುದ್ರೆಬೆಟ್ಟು ಕಾರಣಿಕದ ಕಲ್ಲುರ್ಟಿ ದೈವಸ್ಥಾನದ ಪುನ: ಪ್ರತಿಷ್ಠಾ ಮಹೋತ್ಸವ; ಈ ದೈವಸ್ಥಾನದ ಹಿಂದಿದೆ ರೋಚಕ ಕಥೆ!

ಉಳ್ಳಾಲ ಠಾಣಾ ಪೊಲೀಸರು ಮೃ*ತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿದ್ದಾರೆ.

ಯೋಗೀಶ್ ಪತ್ನಿಯೂ ಆತ್ಮಹತ್ಯೆಗೆ ಯತ್ನ:

ಯೋಗೀಶ್ ಸಾ*ವನ್ನಪ್ಪಿದನ್ನು ಕಂಡ ಪತ್ನಿಯೂ ನೇಣು ಬಿಗಿದು ಆತ್ಮ ಹ*ತ್ಯೆಗೈಯಲು ಮುಂದಾಗಿದ್ದಾರೆ. ಘಟನಾ ಸ್ಥಳದಲ್ಲಿ ನೆರೆದಿದ್ದ ಸ್ಥಳೀಯರು ಆಕೆಯನ್ನ ತಡೆದು ಸಂತೈಸಿದ್ದಾರೆ. ಮೃ*ತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು, ಪತ್ನಿ, ತಾಯಿಯನ್ನು ಅಗಲಿದ್ದಾರೆ.

Continue Reading

LATEST NEWS

Trending