ಬಂಟ್ವಾಳದ ಗೋಳ್ತಮಜಲು ಗ್ರಾಮದ ಕೃಷ್ಣಕೋಡಿಯಲ್ಲಿ ಪತ್ತೆಯಾಯ್ತು ಅಪರೂಪದ ಚಿಪ್ಪುಹಂದಿ..!
ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕೃಷ್ಣ ಕೋಡಿ ಎಂಬಲ್ಲಿ ಪುರುಷೋತ್ತಮ ಎಂಬವರ ಮನೆಯ ಪಕ್ಕದ ತೋಟದಲ್ಲಿ ಅಳಿವಿನಂಚಿನಲ್ಲಿರುವ ಚಿಪ್ಪುಹಂದಿ ಕಂಡು ಬಂದಿದ್ದು, ಅದನ್ನು ರಕ್ಷಣೆ ಮಾಡಲಾಗಿದೆ.
ಚಿಪ್ಪು ಹಂದಿ ಇರುವುದರ ಬಗ್ಗೆ ಪುರುಷೋತ್ತಮ ಅವರು ಬಂಟ್ವಾಳ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ.
ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿ ಸಹಿತ ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ ಚಿಪ್ಪು ಹಂದಿಯನ್ನು ಸುರಕ್ಷಿತವಾಗಿ ಹಿಡಿದು ಬಳಿಕ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಉಪವಲಯ ಅರಣ್ಯಾಧಿಕಾರಿ ಪ್ರೀತಂ ಎಸ್. ಯಶೋಧರ, ಅರಣ್ಯ ರಕ್ಷಕರಾದ ಜಿತೇಶ್ ಮತ್ತು ರೇಖಾ ಭಾಗವಹಿಸಿದ್ದರು.
ಅಪರೂಪದ ಪ್ರಾಣಿಯೊಂದನ್ನು ಹಿಡಿದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡುವಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ಸಿಬ್ಬಂದಿಗಳುಯಶಸ್ವಿಯಾಗಿದ್ದಾರೆ..