International news
WATCH VIDEO : ಆಗಸದಲ್ಲೇ ಡಿ*ಕ್ಕಿಯಾದ ಸೇನಾ ಹೆಲಿಕಾಪ್ಟರ್; 10 ಮಂದಿ ಸಾ*ವು
ಕೌಲಾಲಂಪುರ : ಅಭ್ಯಾಸದ ವೇಳೆ 2 ಹೆಲಿಕಾಪ್ಟರ್ ಗಳು ಡಿ*ಕ್ಕಿಯಾದ ಪರಿಣಾಮ ಅದರೊಳಗಿದ್ದ 10 ಮಂದಿ ಇಹಲೋಕ ತ್ಯಜಿಸಿರುವ ಘಟನೆ ಮಲೇಷ್ಯಾದಲ್ಲಿ ನಡೆದಿದೆ. ಮುಂದಿನ ತಿಂಗಳು ನಡೆಯಲಿರುವ ಮಲೇಷ್ಯಾ ನೌಕಾಪಡೆಯ 90ನೇ ವಾರ್ಷಿಕೋತ್ಸವದ ಅಂಗವಾಗಿ ಹೆಲಿಕಾಪ್ಟರ್‌ಗಳು ನಾರ್ತ್ ಪೆರಾಕ್ ಸ್ಟೇಟ್‌ನ ನೌಕಾ ನೆಲೆಯಲ್ಲಿ ಕಸರತ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ದುರಂ*ತ ಸಂಭವಿಸಿದೆ.
ರಾಯಲ್ ಮಲೇಷ್ಯಾ ನೇವಿ ಹೆಲಿಕಾಪ್ಟರ್ ಗಳು ಪರಸ್ಪರ ಡಿಕ್ಕಿಯಾಗಿದ್ದು, ವೈಮಾನಿಕ ಕಸರತ್ತು ನಡೆಸುತ್ತಿದ್ದ ಎಲ್ಲಾ 10 ಸಿಬ್ಬಂದಿ ವಿ*ಧಿವಶರಾಗಿದ್ದಾರೆ. ಮೃ*ತರ ದೇಹಗಳನ್ನು ಮಲೇಷ್ಯಾ ನೌಕಾಪಡೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ
ತನಿಖೆಗೆ ಆದೇಶ:
ಘಟನೆಗೆ ಸಂಬಂಧಪಟ್ಟಂತೆ ಮಲೇಷ್ಯಾ ತನಿಖೆಗೆ ಆದೇಶಿಸಿದೆ. ಮಲೇಷ್ಯಾದ ವಸತಿ ಮತ್ತು ಸ್ಥಳೀಯ ಸರ್ಕಾರದ ಸಚಿವಾಲಯದ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳು ಯುರೋಕಾಪ್ಟರ್ ಫೆನೆಕ್ ಮತ್ತು ಅಗಸ್ಟಾ-ವೆಸ್ಟ್‌ಲ್ಯಾಂಡ್ ಸಂಸ್ಥೆ ನಿರ್ಮಿಸಿದ AW-1 ಚಾಪರ್ ಮೇ ತಿಂಗಳಲ್ಲಿ ಬೇಸ್‌ನಲ್ಲಿ ನಿಗದಿಪಡಿಸಲಾದ TLDM ಫ್ಲೀಟ್ ಓಪನ್ ಡೇಗಾಗಿ ಫ್ಲೈಪಾಸ್ಟ್ ರಿಹರ್ಸಲ್ ಮಾಡುತ್ತಿದ್ದವು.
ಈ ವೇಳೆ ಹೆಲಿಕಾಪ್ಟರ್ ಗಳ ರೆಕ್ಕೆಗಳು ಪರಸ್ಪರ ಬಡಿದಿದ್ದು, ಈ ವೇಳೆ ಕಾಪ್ಟರ್ ಗಳನ್ನು ಪತನವಾಗಿದೆ ಎಂದು ಹೇಳಿದೆ.
dehali
Paralympics 2024: 29 ಪದಕಗಳೊಂದಿಗೆ ದಾಖಲೆ ಬರೆದ ಭಾರತ
Paralympics 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಅದ್ಭುತ ಸಾಧನೆಯೊಂದಿಗೆ ಪಯಣ ಮುಗಿಸಿದೆ. ಕ್ರೀಡಾಕೂಟದ ಕೊನೆಯ ದಿನವಾದ ಇಂದು ಭಾರತ ದಾಖಲೆಯ 29 ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇವುಗಳಲ್ಲಿ ಏಳು ಚಿನ್ನ, ಒಂಬತ್ತು ಬೆಳ್ಳಿ ಮತ್ತು 13 ಕಂಚು ಸೇರಿವೆ.
ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಷ್ಟು ಸಂಖ್ಯೆಯ ಪದಕಗಳನ್ನು ಗೆದ್ದಿದ್ದು, ಇದೇ ಮೊದಲು. ಇದಕ್ಕೂ ಮೊದಲು ಟೊಕಿಯೋ ಪ್ಯಾರಾಲಿಂಪಿಕ್ನಲ್ಲಿ 19 ಪದಕಗಳನ್ನು ಗೆದ್ದಿದ್ದು, ಭಾರತದ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.
International news
ಶಾಲೆಯಲ್ಲಿ ಗುಂ*ಡಿನ ದಾ*ಳಿ ನಡೆಸಿದ 14 ರ ಬಾಲಕ..! ನಾಲ್ವರನ್ನು ಬ*ಲಿ ಪಡೆದ ವಿದ್ಯಾರ್ಥಿ..!
ಮಂಗಳೂರು/ಅಮೆರಿಕಾ : ಶಾಲೆಯಲ್ಲಿ ಗುಂ*ಡಿನ ದಾ*ಳಿ ನಡೆಸಿ ಇಬ್ಬರು ಸಹ ವಿದ್ಯಾರ್ಥಿಗಳ ಸಹಿತ ಇಬ್ಬರು ಶಿಕ್ಷರನ್ನು 14 ವರ್ಷದ ವಿದ್ಯಾರ್ಥಿಯೊಬ್ಬ ಕೊಂ*ದಿರುವ ಆಘಾ*ತಕಾರಿ ಘಟನೆ ನಡೆದಿದೆ. ಅಮೆರಿಕಾದ ಜಾರ್ಜಿಯಾದಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಯನ್ನು ಎಫ್‌ಬಿಐ ಅವರು ವಶಕ್ಕೆ ಪಡೆದಿದ್ದಾರೆ.
ಜಾರ್ಜಿಯಾದ ರಾಜಧಾನಿ ಅಟ್ಲಾಂಟದಿಂದ ಸುಮಾರು ಒಂದು ಗಂಟೆಗಳ ಪ್ರಯಾಣದ ದೂರ ಇರುವ ವಿಂಡರ್‌ನ ಅಪಾಲಾಚಿ ಹೈಸ್ಕೂಲ್‌ನಲ್ಲಿ ಈ ಘಟನೆ ಬುಧವಾರ(ಸೆ.4) ನಡೆದಿದೆ. ವಿದ್ಯಾರ್ಥಿ ನಡೆಸಿದ ಗುಂ*ಡಿನ ದಾ*ಳಿಗೆ ಒಂಬತ್ತು ಮಂದಿ ಗಂಭೀರವಾಗಿ ಗಾ*ಯಗೊಂಡಿದ್ದು, ನಾಲ್ವರು ಇಹಲೋಕ ತ್ಯಜಿಸಿದ್ದಾರೆ.
ಕೋಲ್ಟ್ ಗ್ರೇ ಈ ಕೃ*ತ್ಯ ಎಸಗಿದ ವಿದ್ಯಾರ್ಥಿ. ವಿಶೇಷ ಅಂದ್ರೆ ಈತನ ಬಗ್ಗೆ 2023 ರಲ್ಲೇ ಎಫ್‌ಬಿಐ ಒಂದು ಕಣ್ಣು ಇಟ್ಟಿತ್ತಂತೆ. ಕಳೆದ ವರ್ಷವೇ ಈತ ತನ್ನ ಮನೆಯ ಪಕ್ಕದ ಶಾಲೆಗಳಿಗೆ ಆನ್‌ಲೈನ್ ಮೂಲಕ ಬೆದರಿಕೆ ಹಾಕಿದ ಆರೋಪ ಎದುರಾಗಿತ್ತು. ಆದ್ರೆ, ಆ ವೇಳೆ ಆತನ ವಿರುದ್ಧ ಸರಿಯಾದ ಸಾಕ್ಷ್ಯ ಸಿಗದ ಕಾರಣ ಆತನ ಬಂಧನವಾಗಿರಲಿಲ್ಲ ಎಂದು ಎಫ್‌ಬಿಐ ಮಾಹಿತಿ ನೀಡಿದೆ.
ಆರೋಪಿ ಕೋಲ್ಟ್ ಗ್ರೇಯ ತಂದೆಯ ಬಳಿ ಬೇಟೆಯಾಡುವ ಬಂದೂಕುಗಳಿದ್ದು, ಅದು ಅವರ ಮೇಲ್ವಿಚಾರಣೆಯಲ್ಲೇ ಇತ್ತು. ಆದ್ರೆ, ಇದೇ ಬಂದೂಕನ್ನು ಶಾಲೆಗೆ ತೆಗೆದುಕೊಂಡು ಬಂದಿದ್ದ ಆರೋಪಿ ವಿದ್ಯಾರ್ಥಿ ಶಾಲೆಯಲ್ಲಿ ಮನ ಬಂದಂತೆ ಗುಂ(ಡು ಹಾರಿಸಿ ಇಬ್ಬರು ವಿದ್ಯಾರ್ಥಿ ಹಾಗೂ ಇಬ್ಬರು ಶಿಕ್ಷರನ್ನು ಬ*ಲಿ ಪಡೆದಿದ್ದಾನೆ.
ಇದನ್ನೂ ಓದಿ : ಪ್ರೇಯಸಿಯನ್ನು ಹ*ತ್ಯೆಗೈದಿದ್ದವನಿಗೆ ಜೀ*ವಾವಧಿ ಶಿಕ್ಷೆ; ಪೊಲೀಸ್ ಆಗಬೇಕಾಗಿದ್ದವನು ಕೊ*ಲೆಗಾರನಾದ ಕಥೆ
ಘಟನೆಯ ಬಳಿಕ ವಿದ್ಯಾರ್ಥಿ ಪೊಲೀಸರಿಗೆ ಶರಣಾಗತನಾಗಿದ್ದು, ಎಫ್‌ಬಿಐ ಅಧಿಕಾರಿಗಳು ಆರೋಪಿ ಬಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶ್ವೇತ ಭವನ ಕೂಡ ಈ ಘಟನೆಯನ್ನು ಖಂಡಿಸಿದ್ದು, ದೇಶದಲ್ಲಿ ನಡೆಯುತ್ತಿರುವ ಬಂದೂಕು ದುರ್ಬಳಕೆಯ ಬಗ್ಗೆ ಸೂಕ್ತ ಕ್ರಮದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
International news
WATCH VIDEO : ಅಯ್ಯೋ! ಉದ್ಘಾಟನೆಯಾದ ಅರ್ಧ ಗಂಟೆಯಲ್ಲೇ ಮಾಲ್ ಲೂಟಿ ಮಾಡಿದ ಪಾಕಿಸ್ತಾನಿಯರು
ಮಂಗಳೂರು/ಕರಾಚಿ : ಸಾಮಾನ್ಯವಾಗಿ ಮಾಲ್ ಉದ್ಘಾಟನೆ ಆದಾಗ ಆಫರ್ ಗಳನ್ನು ಇಡಲಾಗುತ್ತದೆ. ಹಾಗಾಗಿ ನೂಕು ನುಗ್ಗಲು ಸಾಮಾನ್ಯ. ಈ ವೇಳೆ ಅಲ್ಲಿನ ಸಿಬ್ಬಂದಿ ನಿಭಾಯಿಸುವ ಅನಿವಾರ್ಯತೆ ಇದೆ. ಆದ್ರೆ, ಪಾಕಿಸ್ತಾನದಲ್ಲಿ ಮಾತ್ರ ಇಡೀ ಮಾಲ್ ನಲ್ಲಿ ಅಲ್ಲೋಲ ಕಲ್ಲೋಲವಾಗಿದೆ.
ಹೌದು, ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಹೆಸರಿನ ಮಾಲ್ ಉದ್ಘಾಟನೆಯಾದ ಕೆಲವೇ ಗಂಟೆಗಳಲ್ಲಿ ಜನರು ಲೂಟಿ ಮಾಡಿದ್ದಾರೆ.
ಮಾಲ್ ಉದ್ಘಾಟನೆಯ ಪ್ರಯುಕ್ತ ಬಟ್ಟೆ, ಆಭರಣ, ಮನೆಯ ಅಲಂಕಾರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಭಾರಿ ಪ್ರಮಾಣದ ಕೊಡುಗೆ ನೀಡಲಾಗಿತ್ತು. ಮಾಲ್ ಬಾಗಿಲು ತೆರೆಯುತ್ತಿದ್ದಂತೆ ಏಕಾಏಕಿ ನುಗ್ಗಿದ ಸಾವಿರಾರು ಜನರು ಅಲ್ಲಿರುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ.
ಜನರನ್ನು ನಿಯಂತ್ರಿಸಲು ಸೆಕ್ಯುರಿಟಿಗಳು, ಮಾಲ್ ಆಡಳಿತ ಮಂಡಳಿ ಪ್ರಯತ್ನಿಸಿದರೂ ಗ್ಲಾಸ್ ಬಾಗಿಲುಗಳನ್ನು ಒಡೆದು ಜನರು ನುಗ್ಗಿದ್ದಾರೆ. ಮಧ್ಯಾಹ್ನ ಮೂರು ಗಂಟೆಗೆ ಮಾಲ್ ತೆರೆದಿದೆ. 3.30 ಆಗುವಷ್ಟರಲ್ಲಿ ಮಾಲ್ ಸಂಪೂರ್ಣವಾಗಿ ಲೂಟಿಯಾಗಿದೆ.
ಇದನ್ನೂ ಓದಿ : ಝೈದ್ ಖಾನ್ ‘ಕಲ್ಟ್’ ಸಿನೆಮಾದಲ್ಲಿ ರಚಿತಾ ರಾಮ್..!
ಮಾಲ್ ನಲ್ಲಿ ನೂಕು ನುಗ್ಗಲಾದ ದೃಶ್ಯಗಳ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಮಾಲ್ ಸುತ್ತಲೂ ಭಾರಿ ಪ್ರಮಾಣದ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲದೇ, ಅಪಾರ ಪ್ರಮಾಣದ ಆಸ್ತಿಗಳಿಗೆ ಹಾ*ನಿಯಾಗಿವೆ. ಮಾಲ್ ನ ಹೊರಗೆ ಸಾವಿರಾರು ಜನರು ಸಿಲುಕಿರುವ ದೃಶ್ಯಗಳು ವೈರಲ್ ವೀಡಿಯೋಗಳಲ್ಲಿವೆ.
ವಿದೇಶದಲ್ಲಿ ನೆಲೆಸಿರುವ ಪಾಕಿಸ್ತಾನಿ ಉದ್ಯಮಿಯೊಬ್ಬರು ಈ ಮಾಲ್ ನಿರ್ಮಿಸಿದ್ದಾರೆ ಎಂದು ಹೇಳಲಾಗಿದೆ.
- LATEST NEWS5 days ago
ಕನ್ನಡದಲ್ಲೇ ಔಷಧ ಚೀಟಿ ಬರೆಯಲಾರಂಭಿಸಿದ ವೈದ್ಯರು..! ವೈರಲ್ ಆಗ್ತಿದೆ ಈ ಪ್ರಿಸ್ಕ್ರಿಪ್ಶನ್
- FILM4 days ago
ಕನ್ನಡ ಬಿಗ್ ಬಾಸ್ ಸೀಸನ್ 11ಕ್ಕೆ ಮುಹೂರ್ತ ಫಿಕ್ಸ್! ಹೋಸ್ಟ್ ಕೂಡ ಕನ್ಫರ್ಮ್!
- LATEST NEWS3 days ago
ನೃತ್ಯ ಮಾಡಲು ನಿರಾಕರಿಸಿದ ನೃತ್ಯಗಾರ್ತಿಯರ ಮೇಲೆ ಸಾಮೂಹಿಕ ಅತ್ಯಾಚಾ*ರ
- FILM4 days ago
ರೇಣುಕಾಸ್ವಾಮಿ ಚಾರ್ಜ್ಶೀಟ್ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ..!