Wednesday, May 18, 2022

ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗದ ಡೋಸ್ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೋನಾ ದೃಢ.

ಕೋವಾಕ್ಸಿನ್ ಕ್ಲಿನಿಕಲ್ ಪ್ರಯೋಗದ ಡೋಸ್ ಪಡೆದಿದ್ದ ಹರಿಯಾಣ ಸಚಿವರಿಗೆ ಕೊರೋನಾ ದೃಢ..!

ಅಂಬಾಲಾ: ದೇಶದಲ್ಲಿ ತಯಾರಾಗುತ್ತಿರುವ ಕೊರೊನಾ ಲಸಿಕೆಯಾದ ‘ಕೊವಾಕ್ಸಿನ್’ನ ಕ್ಲಿನಿಕಲ್​ ಪ್ರಯೋಗದ ಡೋಸ್ ಪಡೆದಿದ್ದ ಹರಿಯಾಣ ಸಚಿವ ಅನಿಲ್ ವಿಜ್ ಅವರಿಗೂ ಈಗ ಸೋಂಕು ತಗುಲಿರುವುದು  ದೃಢಪಟ್ಟಿದೆ.

ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅನಿಲ್ ವಿಜ್ ನನ್ನ ಕೋವಿಡ್​ ವರದಿ ಪಾಸಿಟಿವ್​ ಬಂದಿದ್ದು, ಅಂಬಾಲಾದ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದೇನೆ.

ನನ್ನೊಂದಿಗೆ ಸಂಪರ್ಕಕ್ಕೆ ಬಂದವರೆಲ್ಲರೂ ದಯವಿಟ್ಟು ಕೊರೊನಾ ಪರೀಕ್ಷೆಗೆ ಒಳಪಡಿ’ ಎಂದು ಮನವಿ ಮಾಡಿದ್ದಾರೆ.

ಕೊವಾಕ್ಸಿನ್​​ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗ ಹರಿಯಾಣದಲ್ಲಿ ಆರಂಭವಾದ ದಿನ (ನವೆಂಬರ್​ 20)ದಂದು ರಾಜ್ಯ ಆರೋಗ್ಯ ಸಚಿವ ಅನಿಲ್ ವಿಜ್ ಮೊದಲ ಲಸಿಕೆ ಪ್ರಯೋಗ ನನ್ನ ಮೇಲೆಯೇ ಆಗಲಿ ಎಂದು ಸ್ವಯಂಪ್ರೇರಿತವಾಗಿ ಲಸಿಕೆ ಹಾಕಿಸಿಕೊಂಡಿದ್ದರು.

ಸಚಿವ ಅನಿಲ್ ವಿಜ್ ಲಸಿಕೆಯ ಎರಡನೇ ಡೋಸ್ ತೆಗೆದುಕೊಂಡಿರಲಿಲ್ಲ: ಭಾರತ ಬಯೋಟೆಕ್ ಸ್ಪಷ್ಟನೆ!

ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೋ ವಾಕ್ಸಿನ್ ತಯಾರು ಮಾಡಿರುವ ಬಯೋಟೆಕ್ ಕೊರೋನಾ ಸೋಂಕಿಗೆ ತುತ್ತಾಗಿರುವ ಹರ್ಯಾಣ ಸಚಿವ ಅನಿಲ್ ವಿಜ್ ಕೊರೋನಾ ವೈರಸ್ ಲಸಿಕೆಯ 2ನೇ ಡೋಸ್ ಅನ್ನು ಪಡೆದಿರಲಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇಂದು ಬೆಳಗ್ಗೆ ಹರ್ಯಾಣದ ಸಚಿವ ಅನಿಲ್ ವಿಜ್ ಅವರಲ್ಲಿ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ಅವರೇ ಟ್ವೀಟ್ ಮಾಡಿ, ಕಳೆದ 10 ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆಗೊಳಪಡುವಂತೆ ಮನವಿ ಮಾಡಿದ್ದರು. ಈ ಹಿಂದೆ ಇದೇ ಅನಿಲ್ ವಿಜ್ ಅವರು, ಕಳೆದ ನವೆಂಬರ್ 20ರಂದು ಕೋವ್ಯಾಕ್ಸಿನ್ ಕೊರೋನಾ ಲಸಿಕೆಯ 3ನೇ ಹಂತದ ಪರೀಕ್ಷೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು, ಹರ್ಯಾಣದ ಆಂಬಾಲದಲ್ಲಿ ನಡೆದಿದ್ದ ಪ್ರಯೋಗಾರ್ಥ ಪರೀಕ್ಷೆಯಲ್ಲಿ ಲಸಿಕೆಯ ಒಂದು ಡೋಸ್ ಅನ್ನು ಹಾಕಿಸಿಕೊಳ್ಳುವ ಮೂಲಕ ಪ್ರಯೋಗಕ್ಕೆ ಒಳಪಟ್ಟಿದ್ದರು.

ಇದಾಗ್ಯೂ ಸಚಿವರಿಗೆ ಸೋಂಕು ಒಕ್ಕರಿಸಿರುವುದು ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರಶ್ನಿಸುವಂತಿದೆ. ಅತ್ತ ಅನಿಲ್ ವಿಜ್ ಸೋಂಕಿಗೆ ತುತ್ತಾದ ಬೆನ್ನಲ್ಲೇ ಕೋವ್ಯಾಕ್ಸಿನ್ ಪರಿಣಾಮಕಾರಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದಿತ್ತು. ಇದೀಗ ಈ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತ್ ಬಯೋಟೆಕ್ ಸಂಸ್ಥೆ, ‘ಕೋವ್ಯಾಕ್ಸಿನ್ ಲಸಿಕೆಯ ಪರೀಕ್ಷಾರ್ಥ ಪ್ರಯೋಗ, 28 ದಿನಗಳ ಅಂತರದಲ್ಲಿ ನೀಡಲಾಗುವ ಎರಡು ಡೋಸ್​​​ಗಳ ಶೆಡ್ಯೂಲ್ ಆಧರಿಸಿದ್ದಾಗಿದೆ. ವ್ಯಕ್ತಿಗೆ ಎರಡನೇ ಡೋಸ್​ ನೀಡಿದ 14 ದಿನಗಳ ಬಳಿಕ, ಲಸಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಸ್ವಯಂ ಸೇವಕರು ಎರಡೂ ಡೋಸ್​​ ಪಡೆದ ನಂತರವಷ್ಟೇ ಕೋವ್ಯಾಕ್ಸಿನ್ ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದೆ.

ಕಳೆದ ನವೆಂಬರ್​ 20ರಂದು ದೇಶದಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗ ಆರಂಭವಾದ ದಿನ ಸಚಿವ ಅನಿಲ್​ ವಿಜ್ ತಾವೇ ಸ್ವಯಂಪ್ರೇರಿತರಾಗಿ ಲಸಿಕೆ ಹಾಕಿಸಿಕೊಂಡಿದ್ದರು.

ಈ ಮೂಲಕ ಮೂರನೇ ಹಂತದ ಕ್ಲೀನಿಕಲ್ ಟ್ರಯಲ್​ನಲ್ಲಿ ಕೋವ್ಯಾಕ್ಸಿನ್ ಲಸಿಕೆ ಪಡೆದ ಮೊದಲ ವಾಲಂಟಿಯರ್​ ಆಗಿದ್ದರು. 28 ದಿನಗಳ ನಂತರ ಅವರಿಗೆ ಎರಡನೇ ಡೋಸ್​ ನೀಡಬೇಕಿತ್ತು. ಆದರೆ ಅದಕ್ಕೂ ಮೊದಲೇ ಅವರಿಗೆ ಸೋಂಕು ಒಕ್ಕರಿಸಿದೆ. ಸದ್ಯ ಅವರು ಅಂಬಾಲಾದಲ್ಲಿರುವ ಕ್ಯಾಂಟ್​​ ಸಿವಿಲ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಉಡುಪಿ: ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ದಾರುಣ ಸಾವು

ಉಡುಪಿ: ಬೈಕ್ ನಲ್ಲಿ ಹೋಗುವಾಗ ಬೈಕ್ ಸ್ಕಿಡ್ ಆಗಿ ಹಿಂಬದಿ ಸವಾರೆ ಮೃತಪಟ್ಟಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರಿನ ಕಾಲ್ತೋಡು ಗ್ರಾಮದ ಮುರೂರು ಎಂಬಲ್ಲಿ ನಡದಿದೆ.ಕಾಲ್ತೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ...

ಬಂಟ್ವಾಳದಲ್ಲಿ ಬೈಕ್ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ

ಬಂಟ್ವಾಳ: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ನಗರ ಠಾಣಾ ಪೊಲೀಸ್ ಠಾಣೆಯ ‌ಇನ್ಸ್‌ಪೆಕ್ಟರ್ ವಿವೇಕಾನಂದ ಅವರ ನೇತೃತ್ವದ ತಂಡ ಬಂಧಿಸಿದೆ.ಅಕ್ಬರ್, ಸಿದ್ದೀಕ್, ಸಮೀರ್ ಬಂಧಿತ ಆರೋಪಿಗಳು. ಇತ್ತೀಚೆಗೆ ಬಂಟ್ವಾಳ ನಗರ...

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗೆ ಜಾಮೀನು

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಎ.ಜಿ. ಪೇರರಿವಾಳನ್‌ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ. ಆರ್....