Connect with us

    LATEST NEWS

    ಇಂದಿನಿಂದ 5 ದಿನ ರಾಜ್ಯದಲ್ಲಿ ಬಿಸಿಗಾಳಿ; ಕರ್ನಾಟಕಕ್ಕೆ ಆರೆಂಜ್ ಅಲರ್ಟ್

    Published

    on

    ಬೆಂಗಳೂರು: ಅಬ್ಬಾ.. ಸಾಕಪ್ಪಾ ಸಾಕು ಅನ್ನೋ ಬೇಸಿಗೆಯ ಬಿಸಿ ಮತ್ತೆ ಏರಿಕೆಯಾಗುತ್ತಿದೆ. ಗರಿಷ್ಠ ತಾಪಮಾನ ಸಹಿಸಿಕೊಳ್ಳಲಾಗದೇ ಪರದಾಡುತ್ತಿರುವ ಜನರಿಗೆ ಮತ್ತೊಂದು ಶಾಕಿಂಗ್‌ ನ್ಯೂಸ್‌ ಬಂದಿದೆ. ಇಂದಿನಿಂದ ಅಂದ್ರೆ ಏಪ್ರಿಲ್ 25ರಿಂದ ಮುಂದಿನ 5 ದಿನಗಳವರೆಗೆ ಬಿಸಿಗಾಳಿ ಮತ್ತು ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ.

    ನಾಳೆ ದೇಶದ 13 ರಾಜ್ಯಗಳ 89 ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದೆ. ನಾಳೆ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಬಿಸಿಗಾಳಿಯ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ಪಶ್ಚಿಮ ಬಂಗಾಳ ರಾಜ್ಯಕ್ಕೆ ರೆಡ್‌ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ರಾಜ್ಯಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.

    ನಾಳೆ ಕೇರಳ, ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಹೆಚ್ಚಿನ ಉಷ್ಣಾಂಶ ಇರುವ ಮುನ್ಸೂಚನೆ ನೀಡಲಾಗಿದೆ. ಕೇರಳ ರಾಜ್ಯದಲ್ಲಿ 36-40 ಡಿಗ್ರಿ ಉಷ್ಣಾಂಶ ದಾಖಲಾಗುವ ಮುನ್ಸೂಚನೆ ಇದೆ. ಚುನಾವಣಾ ಆಯೋಗವು ಬಿಸಿ ಗಾಳಿ ಸಮಸ್ಯೆ ಎದುರಿಸಲು ಟಾಸ್ಕ್ ಪೋರ್ಸ್ ರಚಿಸಿದೆ. ಪೋಲಿಂಗ್ ಬೂತ್‌ಗಳಲ್ಲಿ ಕುಡಿಯುವ ನೀರು, ಫ್ಯಾನ್‌ಗಳ ವ್ಯವಸ್ಥೆಯನ್ನು ಚುನಾವಣಾ ಆಯೋಗ ಮಾಡಿದೆ.

    ಏಪ್ರಿಲ್ 25ರಿಂದ ಏಪ್ರಿಲ್ 29ರವರೆಗೆ ಬಿಸಿಗಾಳಿ, ತೀವ್ರ ಬಿಸಿಗಾಳಿ ಕರ್ನಾಟಕದ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಾಗಿರುವ ಸಾಧ್ಯತೆಯಿದೆ. ಕರಾವಳಿ ಕರ್ನಾಟಕದಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

    LATEST NEWS

    ಅ*ನೈತಿಕ ಸಂಬಂಧಕ್ಕೆ ಬ*ಲಿಯಾದ ತಾಯಿ; ಕತ್ತು ಹಿಸುಕಿ ಕೊಂ*ದ ಮಗಳು

    Published

    on

    ಮಂಗಳೂರು/ಬೆಂಗಳೂರು : ಇತ್ತೀಚೆಗೆ ಕೊ*ಲೆ ಪ್ರಕರಣಗಳು ಹೆಚ್ಚುತ್ತಿವೆ. ಯಾರು ಯಾರನ್ನೂ ಸಾ*ಯಿಸಲು ಹೇಸದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೊಬ್ಬಳು ಹೆತ್ತ ತಾಯಿಯನ್ನೇ ಹ*ತ್ಯೆ ಮಾಡಿರುವ ಘಟನೆ ನಡೆದಿದೆ. ಬಾಡಿಗೆದಾರನೊಂದಿಗಿನ ಅ*ಕ್ರಮ ಸಂಬಂ*ಧ ಹೊಂದಿದ್ದ ವಿಚಾರ ತಿಳಿದು ಜಗಳ ಮಾಡಿದ ಹೆತ್ತ ತಾಯಿಯನ್ನೇ ಮಗಳು ಕೊಂ*ದಿದ್ದಾಳೆ. ಈ ಘಟನೆ ಹೊಂಗಸಂದ್ರದಲ್ಲಿ ನಡೆದಿದೆ.

    ಜಯಲಕ್ಷ್ಮಿ( 46) ಮೃ*ತಪಟ್ಟ ಮಹಿಳೆ. ಪವಿತ್ರಾ (29) ಹಾಗೂ ಲವಣೇಶ್ ಕೊ*ಲೆಗೈದ ಆರೋಪಿಗಳು.

    ಅಕ್ರಮ ಸಂಬಂಧಕ್ಕೆ ತಾಯಿ ಬ*ಲಿ :

    ಪವಿತ್ರ ಹಾಗೂ ಜಯಲಕ್ಷ್ಮಿ ಅವರ ಕಟ್ಟಡದಲ್ಲಿ ಪ್ರಾವಿಷನ್ ಸ್ಟೋರ್ ನಡೆಸುತ್ತಿದ್ದ ಆರೋಪಿ ಹಾಗೂ ಅದೇ ಕಟ್ಟಡದಲ್ಲಿ ಬಾಡಿಗೆದಾರನಾಗಿದ್ದ ಲವಣೇಶ್ ಎಂಬಾತನನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

    ಪವಿತ್ರಾ ಮತ್ತು ಆಕೆಯ ಆಪ್ತ ಲವಣೇಶ್ ಕೊ*ಲೆಯನ್ನು ಅಪಘಾ*ತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಆದರೆ, ಮ*ರಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಹ*ತ್ಯೆ ಮಾಡಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

    ಮದುವೆ-ಮಕ್ಕಳು-ಅಕ್ರ*ಮ ಸಂಬಂ*ಧ :

    ಪವಿತ್ರಾ 11 ವರ್ಷಗಳ ಹಿಂದೆ ಸುರೇಶ್ ಎಂಬಾತನನ್ನು ಮದುವೆಯಾಗಿದ್ದಳು. ಇವರಿಗೆ 10 ವರ್ಷದ ಮಗಳು ಮತ್ತು 6 ವರ್ಷದ ಮಗ ಇದ್ದಾನೆ. ಆದರೆ, ಇತ್ತೀಚೆಗಷ್ಟೇ ಲವಣೇಶ್ ಎಂಬಾತನೊಂದಿಗೆ ಅಕ್ರ*ಮ ಸಂಬಂ*ಧ ಹೊಂದಿದ್ದಳು. ಇದಕ್ಕೆ ತಾಯಿ ಒಪ್ಪಿರಲಿಲ್ಲ ಎನ್ನಲಾಗಿದೆ.

    ಇದನ್ನೂ ಓದಿ : ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ

    ಬುಧವಾರ(ಸೆ.11) ಮಧ್ಯಾಹ್ನ 3 ಗಂಟೆಗೆ ತನ್ನ ತಾಯಿ ಬಿದ್ದು ಸಾ*ವನ್ನಪ್ಪಿದ್ದಾಳೆ ಎಂದು ಪವಿತ್ರಾ ಪೊಲೀಸರಿಗೆ ದೂರು ನೀಡಿದ್ದಾಳೆ. ಆರೋಪಿ ಮತ್ತು ಆಕೆಯ ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಂಡ ಪೊಲೀಸರು ಆರಂಭದಲ್ಲಿ ಅದನ್ನು ಅಸಹಜ ಸಾ*ವು ಎಂದು ಭಾವಿಸಿದ್ದರು. ಆದರೆ, ಶುಕ್ರವಾರ ಮರ*ಣೋತ್ತರ ಪರೀಕ್ಷೆಯ ವರದಿಯಲ್ಲಿ ಜಯಲಕ್ಷ್ಮಿಯನ್ನು ಕತ್ತು ಹಿಸುಕಿ ಕೊ*ಲೆ ಮಾಡಿರುವುದು ದೃಢಪಟ್ಟಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ನಡೆಸುತ್ತಿದ್ದಾರೆ.

     

    Continue Reading

    LATEST NEWS

    ಚಿನ್ನದ ಅಂಗಡಿಗೆ ಬಂದು ಬೆಲೆಬಾಳುವ ಮಾಂಗಲ್ಯ ಸರದೊಂದಿಗೆ ಎಸ್ಕೇಪ್ ಆದ ಕಳ್ಳ

    Published

    on

    ಕಾರ್ಕಳ: ಗ್ರಾಹಕನ ಸೋಗಿನಲ್ಲಿ ಚಿನ್ನದ ಅಂಗಡಿಗೆ ಬಂದ ಮಧ್ಯ ವಯಸ್ಕ ವ್ಯಕ್ತಿಯೊಬ್ಬ ಮಾಂಗಲ್ಯ ಸರದೊಂದಿಗೆ ಪರಾರಿಯಾದ ಘಟನೆ ಕಾರ್ಕಳದಲ್ಲಿ ನಡೆದಿದೆ.

    ಸಪ್ಟೆಂಬರ್ 11 ರಂದು ಈ ಘಟನೆ ನಡೆದಿದ್ದು, ಮಾಂಗಲ್ಯ ಸರ ಖರೀದಿಯ ನೆಪದಲ್ಲಿ ಆರೋಪಿ ಅಂಗಡಿಗೆ ಬಂದಿದ್ದ. ಉಡುಪಿ ಜಿಲ್ಲೆಯ ಕಾರ್ಕಳದ ಉಷಾ ಜ್ಯುವೆಲ್ಲರಿಗೆ ಮಧ್ಯಾಹ್ನ 3 ಗಂಟೆಯ ವೇಳೆಗೆ ಆರೋಪಿ ಎಂಟ್ರಿಕೊಟ್ಟಿದ್ದ. ಅಲ್ಲಿದ್ದ ಸಿಬ್ಬಂದಿ ಯುವತಿಯ ಬಳಿ ಮಾಂಗಲ್ಯ ಸರ ತೋರಿಸುವಂತೆ ಕೇಳಿ ಬಳಿಕ ಅದರ ರೇಟ್‌ ಕೂಡಾ ಕೇಳಿದ್ದ. ಸೇಲ್ಸ್‌ ಗರ್ಲ್ ಮಾಂಗಲ್ಯ ಸರಕ್ಕೆ 1 ಲಕ್ಷದ 37 ಸಾವಿರ ರೂಪಾಯಿಗಳಾಗುತ್ತವೆ ಎಂದು ಹೇಳಿದಾಗ ನಗುತ್ತಲೇ ಸರ ಕೈಗೆತ್ತಿಕೊಂಡ ಆರೋಪಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ.

    ಸೇಲ್ಸ್‌ ಗರ್ಲ್‌ ತಕ್ಷಣ ಕಳ್ಳ ಕಳ್ಳ ಅಂತ ಬೊಬ್ಬೆ ಹೊಡೆದು ಹೊರಗಿದ್ದ ಜನರನ್ನು ಎಚ್ಚರಿಸಿದ್ದಾಳೆ. ಈ ವೇಳೆ ಸಾರ್ವಜನಿಕರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯು ಹೆರ್ಮುಂಡೆ ಗ್ರಾಮದ ನಿವಾಸಿ ಜಯರಾಮ್‌ ಎಂಬುದಾಗಿ ಮಾಹಿತಿ ಲಭ್ಯವಾಗಿದೆ. ಸದ್ಯ ಆರೋಪಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಕಾರಣ ಮಾಂಗಲ್ಯ ಸರವನ್ನು ಜ್ಯುವೆಲ್ಲರಿ ಮಾಲಕರಿಗೆ ಒಪ್ಪಿಸಲಾಗಿದೆ.

    Continue Reading

    LATEST NEWS

    ದೈತ್ಯಾಕಾರದ ಬಾಡಿ ಬಿಲ್ಡರ್ ಇನ್ನಿಲ್ಲ

    Published

    on

    ಮಂಗಳೂರು/ಹೊಸದಿಲ್ಲಿ: ಜಗತ್ತಿನ ಫೇಮಸ್ ಆಂಡ್ ಫೇವರೇಟ್ ಬಾಡಿ ಬಿಲ್ಡರ್ ಇಲಿಯಾ ಗೋಲೆಮ್ ಯಾಫೆಮ್‌ಚೆಕ್(36) ಹೃದಯಘಾತದಿಂದ ನಿಧನರಾಗಿದ್ದಾರೆ.


    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಡಿ ಬಿಲ್ಡರ್ :
    ಸೆ.6 ರಂದು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 6 ಅಡಿ ಎತ್ತರ ಹಾಗೂ 154 ಕೆ.ಜಿ ತೂಕದವನ್ನು ಹೊಂದಿದ್ದರು. ದಿ ಮ್ಯೂಟಂಟ್ ಎಂದು ಪ್ರಸಿದ್ಧಿಯಾಗಿದ್ದ ಇಲಿಯಾ ಅವರು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಕೋಮಾಗೆ ಹೋಗಿದ್ದರು. ಕೊನೆಗೆ ಸೆ.11ರಂದು ಕೊನೆಯುಸಿರೆಳೆದರು ಎಂಬುವುದಾಗಿ ವರದಿಯಾಗಿದೆ.

    Continue Reading

    LATEST NEWS

    Trending