FILM
ಹೊಸ ಅವತಾರದಲ್ಲಿ ZEE ಕನ್ನಡ ‘ಕಾಮಿಡಿ ಕಿಲಾಡಿಗಳು’… ಸ್ಟಾರ್ ನಿರೂಪಕರು ಈಗ ಜಡ್ಜಸ್? ಏನಿದು ಟ್ವಿಸ್ಟ್?
ಬೆಂಗಳೂರು: ಜೀ ಕನ್ನಡ ವಾಹಿನಿ ವಿಭಿನ್ನ ರೀತಿಯ ಕಥೆಗಳನ್ನೊಳಗೊಂಡ ಧಾರವಾಹಿಗಳ ಜೊತೆಗೆ ರಿಯಾಲಿಟಿ ಶೋಗಳೂ ಜನರ ಮನಸ್ಸು ಗೆದ್ದಿದೆ. ಜೀ ಕನ್ನಡ ವಾಹಿನಿಯ ಅಚ್ಚು ಮೆಚ್ಚಿನ ರಿಯಾಲಿಟಿ ಶೋ ಗಳಲ್ಲಿ ಜನರನ್ನು ನಕ್ಕು ನಗಿಸುವ ರಿಯಾಲಿಟಿ ಶೋ ಅಂದ್ರೆ ಅದು ಕಾಮಿಡಿ ಕಿಲಾಡಿಗಳು… ಹೌದು, ನಗುವಿನ ಅಲೆಯಲ್ಲಿ ತೇಲಿಸಿ ಮನೆಯವರೆಲ್ಲರೂ ಒಟ್ಟಾಗಿ ಕೂತು ನೋಡುವಂತಹ ಶೋ ‘ಕಾಮಿಡಿ ಕಿಲಾಡಿಗಳು’.
ಮಾಸ್ಟರ್ ಆನಂದ್ ನಿರೂಪಣೆಯಲ್ಲಿ ಮೂಡಿ ಬರುತ್ತಿದ್ದ ಕಾರ್ಯಕ್ರಮವನ್ನು ‘ಸೈಡ್‌ಗಿಡ್ರಿ ನಿಮ್ ಟೆನ್ಷನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು’ ಎಂದು ಶೋ ಆರಂಭ ಮಾಡ್ತಾ ಇದ್ದು ಕರ್ನಾಟಕವನ್ನೇ ನಗುವಿನ ಕಡಲಲ್ಲಿ ತೇಲಿಸುವುದಿತ್ತು. ಇದೀಗ ಸೀಸನ್ 5 ಪ್ರೇಕ್ಷಕರ ಮುಂದೆ ಬರುತ್ತಿದೆ. ಈಗ ಜೀ ವಾಹಿನಿ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಮೂಲಕ ನಿಮ್ಮನ್ನು ಮನರಂಜಿಸಲು ಸಿದ್ಧವಾಗಿದೆ.
ಮುಂದೆ ಓದಿ..; “ನಿತ್ಯಾಮೆನನ್” ಚಿತ್ರರಂಗದಿಂದ ‘ಬ್ಯಾನ್’ ಆಗಲು ಕಾರಣವೇನು ಗೊತ್ತಾ? ಈ ಬಗ್ಗೆ ನಿತ್ಯಾ ಹೇಳಿದ್ದೇನು?
ಪ್ರೀಮಿಯರ್ ಲೀಗ್‌ನಲ್ಲಿ ಇರಲಿದ್ದಾರೆ 5 ಜಡ್ಜಸ್..!
ಈ ಕಾಮಿಡಿ ಪ್ರೀಮಿಯರ್ ಲೀಗ್‌ನಲ್ಲಿ ಈ ಬಾರಿ ಐವರು ನಿರೂಪಕರು ಇರಲಿದ್ದಾರೆ. ಸ್ಟೇಜ್‌ನಲ್ಲಿ ಕಂಟೆಂಸ್ಟೆಂಟ್‌ಗಳ ಕುರಿತು ಜಡ್ಜಸ್ ಗಳಲ್ಲಿ ಕಮೆಂಟ್ಸ್ ಕೆಳ್ತಾ ಇದ್ದ ನಿರೂಪಕರು ಈಗ ತಾವೇ ಜಡ್ಜ್‌ಮೆಂಟ್ ನೀಡಲು ಹೊರಟಿದ್ದಾರೆ. ಹೌದು, ನಿರೂಪಕರುಗಳಾದ ಅನುಶ್ರೀ, ಮಾಸ್ಟರ್ ಆನಂದ್, ಅಕುಲ್ ಬಾಲಾಜಿ, ಶ್ವೇತಾ ಚಂಗಪ್ಪ ಹಾಗೂ ಕುರಿ ಪ್ರತಾಪ್ ಅವರು ಈ ಕಾರ್ಯಕ್ರಮದಲ್ಲಿ ಹೊಸ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರಂತೆ.
5 ತಂಡಗಳು.. 1 ಟ್ರೋಫಿಗಾಗಿ ಗುದ್ದಾಟ..!
ಮೂಲಗಳ ಪ್ರಕಾರ ಈ ಬಾರಿಯ ಶೋನಲ್ಲಿ ಟಿ-20 ರೀತಿಯಲ್ಲಿ ಹೇಗೆ ತಂಡಗಳು, ಮಾಲೀಕರು , ಕ್ಯಾಪ್ಟನ್‌ಗಳು ಇರುತ್ತಾರೋ ಅದೇ ರೀತಿ ಇಲ್ಲಿಯೂ ಇರಲಿದೆ. ಕರ್ನಾಟಕದ 31 ಜಿಲ್ಲೆಗಳಿಂದ ಆಯ್ಕೆ ಮಾಡಿ ತಂದ ಕಲಾವಿದರನ್ನು ಮೆಗಾ ಆಕ್ಷನ್ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳಲಾಗುವುದು. 5 ತಂಡಗಳು 1 ಟ್ರೋಫಿಗಾಗಿ ಗುದ್ದಾಟ ನಡೆಸಲಿದೆ. ಈ ಶೋ ವಾರಾಂತ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಬರೋಬ್ಬರಿ 1 ಲಕ್ಷ ಬಹುಮಾನ ಪಡೆಯುವ ಅವಕಾಶವಿದೆ. ಈ ʻಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ʼಗೆ ಐವರು ನಿರೂಪಕರು ಹೊಸ ಜವಬ್ದಾರಿ ಹೊತ್ತಿದ್ದಾರೆ. ಹೀಗಾಗಿ ಹೊಸ ನಿರೂಪಕರನ್ನು ಈ ಶೋ ಮೂಲಕ ಕರೆ ತರಲಾಗುತ್ತಿದೆ ಎಂದು ವರದಿಯಾಗಿದೆ. ಆ ನಿರೂಪಕರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು ಇದಕ್ಕೆ ಇದೇ ಶನಿವಾರ ಹಾಗೂ ಭಾನುವಾರು ರಾತ್ರಿ 9ಗಂಟೆಗೆ ತೆರೆ ಬೀಳಲಿದೆ.
FILM
ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡ್ರಾ ಐಶ್ – ಅಭಿ; ಏನಿದರ ಅಸಲಿತ್ತು?
ಮುಂಬೈ : ಬಾಲಿವುಡ್ ಸೂಪರ್‌ಸ್ಟಾರ್ ಜೋಡಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಇದೀಗ ದಂಪತಿ ಪಬ್ಲಿಕ್ ಪ್ಲೇಸ್‌ನಲ್ಲಿ ಕಿತ್ತಾಡಿಕೊಂಡಿದ್ದಾಗಿ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಪಿಂಕ್ ಪ್ಯಾಂಥರ್ಸ್ ಕಬ್ಬಡಿ ಪಂದ್ಯದ ಸಮಯದಲ್ಲಿ ಗ್ಯಾಲರಿಯಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿರುವ ವಿಡಿಯೋ ಎಂದು ಹೇಳಲಾಗಿದೆ.
ಪ್ರೋ ಕಬಡ್ಡಿ ಪಂದ್ಯಾವಳಿಯ ವೇಳೆ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ಪುತ್ರಿ ಆರಾಧ್ಯ ಜೊತೆಯಲ್ಲಿ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಭಿಷೇಕ್ ಸೊಸೆ ನವ್ಯಾ, ಮತ್ತಾಕೆಯ ಸ್ನೇಹಿತ ಸಿಕಂದರ್ ಕೂಡಾ ಗ್ಯಾಲರಿಯಲ್ಲಿ ಇದ್ದಾರೆ. ಈ ವೇಳೆ ಅಭಿಷೇಕ್ ಮತ್ತು ಐಶ್ವರ್ಯಾ ನಡುವೆ ವಾಗ್ವಾದ ನಡೆದಿದ್ದು , ಐಶ್ವರ್ಯಾ ಕೈ ಹಿಡಿದು ಸಮಜಾಯಿಶಿ ನೀಡುವ ಪ್ರಯತ್ನವನ್ನು ಅಭಿಷೇಕ್ ಮಾಡಿದ್ದಾರೆ. ಆದ್ರೆ, ಐಶ್ವರ್ಯಾ ರೈ ಮಾತ್ರ ಕೋಪದಿಂದ ಹರಿಹಾಯ್ದಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಪಿಂಕ್ ಪ್ಯಾಂಥರ್ಸ್ ತಂಡದ ಮಾಲಕರಾಗಿರುವ ಅಭಿಷೇಕ್ ಬಚ್ಚನ್ ತಂಡಕ್ಕೆ ಪ್ರೋತ್ಸಾಹ ನೀಡಲು ಕುಟುಂಬ ಸಮೇತರಾಗಿ ಬಂದಿದ್ದರು. ಇದು ಜನವರಿಯಲ್ಲಿ ಮುಂಬೈನ ಸರ್ದಾರ್ ವಲ್ಲಭಾಯಿ ಪಟೇಲ್ ಇಂಡೋರ್ ಸ್ಟೇಡಿಯಂ ನಲ್ಲಿ ನಡೆದ ಘಟನೆ ಎಂದು ಗೊತ್ತಾಗಿದೆ.
ಈ ಹಿಂದೆ ಐಶ್ವರ್ಯಾ ರೈ ಸಂದರ್ಶನವೊಂದರಲ್ಲಿ ತಮ್ಮಿಬ್ಬರ ನಡುವೆ ನಿರಂತರ ಜಗಳ ನಡೆಯುತ್ತದೆ ಎಂದು ಹೇಳಿದ್ದರು. 2010 ರಲ್ಲಿ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲೂ ಐಶ್ವರ್ಯಾ ರೈ ಅಭಿಷೇಕ್ ಯಾವಾಗಲು ಜಗಳ ಆಡ್ತಾರೆ ಅಂತ ಹೇಳಿದ್ದರು. ಈ ವೇಳೆ ಅಭಿಷೇಕ್ ಅದು ಜಗಳ ಅಲ್ಲ ಭಿನ್ನಾಭಿಪ್ರಾಯ ಎಂದು ಸರಿ ಮಾಡಿದ್ದರು. ಅಂಬಾನಿ ಮಗನ ಮದುವೆಯಲ್ಲೂ ಇಬ್ಬರೂ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಬಳಿಕ ಐಶ್ವರ್ಯಾ ತನ್ನ ಮದುವೆ ಉಂಗರುವಿಲ್ಲದೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಇವರಿಬ್ಬರ ನಡುವೆ ಎಲ್ಲವೂ ಸರಿ ಇಲ್ಲ ವಿಚ್ಚೇದನ ಪಡೆಯಲಿದ್ದಾರೆ ಎನ್ನಲಾಗಿತ್ತು.
ಇದನ್ನೂ ಓದಿ : ಸರಿಯಾದ ಬಟ್ಟೆ ಹಾಕದಿದ್ದರೆ ಮುಖಕ್ಕೆ ಆ್ಯಸಿಡ್ ಹಾಕುವೆ; ಪತ್ರಕರ್ತನ ಹೆಂಡತಿಗೆ ಬೆದರಿಕೆ
ಇದೀಗ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವೀಡಿಯೋ ಕೂಡ ಇದೇ ರೀತಿಯಾಗಿದ್ದಾಗಿದೆ. ಅಸಲಿಗೆ ಪಂದ್ಯದಲ್ಲಿ ಗೆದ್ದಿದ್ದ ಅಭಿಷೇಕ್ ಬಚ್ಚನ್ ಅವರ ಪಿಂಕ್ ಪ್ಯಾಂಥರ್ ತಂಡಕ್ಕೆ ದಂಪತಿ ಚಿಯರ್‌ಅಪ್ ಮಾಡಿದ್ದಾರೆ. ಈ ವೇಳೆ ಪಂದ್ಯದ ವಿಚಾರವಾಗಿ ಇಬ್ಬರೂ ಮಾತನಾಡಿಕೊಂಡಿದ್ದಾರೆ. ಇದನ್ನೇ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಈ ಬಗ್ಗೆ ಬಚ್ಚನ್ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ
BIG BOSS
ಬಿಗ್ ಬಾಸ್ ಮನೆಯ ಸ್ವರ್ಗ ನರಕ ಇನ್ನಿಲ್ಲ.. ಕಾರಣ ಏನು ಗೊತ್ತಾ ?
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11 ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡು ಎರಡು ವಾರ ಕಳೆದಿದೆ. ಇದೇ ಎರಡು ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ.
ಹೌದು, ಸೆಪ್ಟೆಂಬರ್ 29ರಂದು ಬಹಳ ಅದ್ಧೂರಿಯಾಗಿ ಬಿಗ್‌ಬಾಸ್ ಓಪನಿಂಗ್ ಪಡೆದುಕೊಂಡಿತ್ತು. ಆದರೆ ಇದೀಗ ಬಿಗ್‌ಬಾಸ್ ಮನೆ ಪೂರ್ತಿಯಾಗಿ ಬದಲಾಗಿ ಬಿಟ್ಟಿದೆ. ಇಷ್ಟು ದಿನ ನರಕ ಸ್ವರ್ಗ ಎಂಬ ಎರಡು ಕಾನ್ಸೆಪ್ಟ್ಗಳನ್ನು ಒಳಗೊಂಡಿತ್ತು. ಆದರೆ ಬಿಗ್‌ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿ ಬಿಟ್ಟಿದೆ.
ನರಕದ ಮನೆಯನ್ನೇ ಬಿಗ್‌ಬಾಸ್ ತಂಡ ಒಡೆದು ಹಾಕಿದೆ. ಮಹಿಳಾ ಆಯೋಗ ಎಂಟ್ರಿ ಬೆನ್ನಲ್ಲೇ ನರಕವನ್ನು ಡೆಮಾಲಿಷ್ ಮಾಡಲಾಗಿದೆ. ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ಸಂಬಂಧ ಬಿಗ್‌ಬಾಸ್ ಕಾರ್ಯಕ್ರಮದ ವಿರುದ್ಧ ದೂರು ದಾಖಲಾಗಿತ್ತು. ಹೀಗಾಗಿ ಮಹಿಳಾ ಆಯೋಗವು 5 ದಿನದ ಡೆಡ್ ಲೈನ್ ಕೊಟ್ಟಿತ್ತು. ಅದರಂತೆ ಇಂದಿನ ಎಪಿಸೋಡ್ನಲ್ಲಿ ಬಿಗ್‌ಬಾಸ್ ತಂಡ ಬಿಗ್ ಮನೆಗೆ ಹೋಗಿ ನರಕದ ಬೇಲಿ ತೆರವು ಮಾಡಿದ್ದಾರೆ.
ಇನ್ನು, ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅದರಲ್ಲಿ 7 ಮಂದಿ ಬಿಗ್‌ಬಾಸ್ ನರಕಕ್ಕೆ ಸೇರಿದ್ದರು. ಉಳಿದ 10 ಮಂದಿ ಸ್ವರ್ಗಕ್ಕೆ ಸೇರಿದ್ದರು. ನರಕದಲ್ಲಿ ಇರೋ ಸ್ಪರ್ಧಿಗಳಿಗೆ ಸರಿಯಾದ ಊಟ ನೀಡುತ್ತಿರಲಿಲ್ಲ. ಜೊತೆಗೆ ಶೌಚಾಲಯದ ಸಮಸ್ಯೆ ಕೂಡ ಇದೆ ಅಂತ ಸ್ಪರ್ಧಿಗಳು ಕ್ಯಾಮೆರಾ ಮುಂದೆ ಬಂದು ಹೇಳುತ್ತಿದ್ದರು. ಈಗ ಬಿಗ್‌ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಇಂದಿನ ಎಪಿಸೋಡ್ನಲ್ಲಿ ಏನೆಲ್ಲಾ ಆಯ್ತು ಅಂತ ಗೊತ್ತಾಗಲಿದೆ.
BIG BOSS
ಕನ್ನಡ ಮರೆತ ಸ್ಪರ್ಧಿಗಳು.. ಮೌನಕ್ಕೆ ಶರಣಾದ್ರ ಬಿಗ್‌ಬಾಸ್ ?
‘ಬಿಗ್ ಬಾಸ್’ನಲ್ಲಿ ಹಲವು ಮೂಲ ನಿಯಮಗಳು ಇವೆ. ಅದನ್ನು ಮೀರಿ ಯಾರು ನಡೆದುಕೊಳ್ಳುವಂತಿಲ್ಲ. ನಿದ್ದೆ ಮಾಡಿದರೆ ಅದು ನಿಯಮ ಬ್ರೇಕ್ ಮಾಡಿದಂತೆಯೇ. ಆಗ ಬಿಗ್ ಬಾಸ್ ಎಚ್ಚರಿಸುತ್ತಾರೆ. ಅದೇ ರೀತಿ ಮತ್ತೊಂದು ನಿಯಮ ಇದೆ. ಆದರೆ, ಈ ನಿಯಮವನ್ನು ಯಾರೂ ಅಷ್ಟು ಗಂಭೀರವಾಗಿ ಸ್ವೀಕರಿಸಿದಂತಿಲ್ಲ. ಬಿಗ್ ಬಾಸ್ ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿಲ್ಲವೇಕೆ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್ಗಳಲ್ಲಿ ಇಂಗ್ಲಿಷ್ ಮಾತನಾಡಿದಾಗ ಬಿಗ್ ಬಾಸ್ ಎಚ್ಚರಿಕೆ ನೀಡುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಎಷ್ಟೇ ಇಂಗ್ಲಿಷ್ ಬಳಕೆ ಆದರೂ ಬಿಗ್ ಬಾಸ್ ಮಾತನಾಡುತ್ತಿಲ್ಲ, ಎಚ್ಚರಿಕೆಯನ್ನೂ ನೀಡುತ್ತಿಲ್ಲ. ಬಿಗ್ ಬಾಸ್ ಕಡೆಯಿಂದ ಮೌನವೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಲಾಯರ್ ಜಗದೀಶ್ ಅವರು ಹೆಚ್ಚೆಚ್ಚು ಇಂಗ್ಲಿಷ್ ಬಳಕೆ ಮಾಡುತ್ತಿದ್ದಾರೆ. ಅವರು 10 ಸಾಲುಗಳನ್ನು ಹೇಳಿದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚಿನದ್ದು ಇಂಗ್ಲಿಷ್ ಇರುತ್ತದೆ. ಇದು ವೀಕ್ಷಕರಿಗೆ ಸಾಕಷ್ಟು ಕಿರಿಕಿರಿ ಎನಿಸುತ್ತಿದೆ. ಅವರಿಗೆ ಕನ್ನಡ ಮಾತನಾಡೋಕೆ ಬರುತ್ತದೆ. ಹೀಗಿರುವಾಗ ಕನ್ನಡದಲ್ಲಿ ಮಾತನಾಡಲು ಸಮಸ್ಯೆ ಏನು ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
ಕೇವಲ ಜಗದೀಶ್ ಮಾತ್ರವಲ್ಲ ಐಶ್ವರ್ಯಾ ಸೇರಿ ಮೊದಲಾದವರು ಇಂಗ್ಲಿಷ್ ಪದ ಬಳಕೆ ಮಾಡುತ್ತಿದ್ದಾರೆ. ಮೋಕ್ಷಿತಾ, ಚೈತ್ರಾ ಕುಂದಾಪುರ ಸೇರಿದಂತೆ ಕೆಲವೇ ಕೆಲವರು ಸಂಪೂರ್ಣವಾಗಿ ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಹೇಳುವ ಜಗದೀಶ್ ಅವರೇ ಇಂಗ್ಲಿಷ್ನಲ್ಲಿ ಮಾತನಾಡೋದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.
- LATEST NEWS5 days ago
ಶಿಕ್ಷಕಿಯ ಅ*ಶ್ಲೀಲ ವಿಡಿಯೋ ಹಂಚಿಕೆ; ನಾಲ್ವರು ವಿದ್ಯಾರ್ಥಿಗಳ ಬಂಧನ
- FILM3 days ago
ಎರಡನೇ ಮದುವೆಯಾಗುತ್ತಿರುವ ಬಿಗ್‌ಬಾಸ್ ಕಂಟೆಸ್ಟೆಂಟ್
- BIG BOSS6 days ago
ಮಹಿಳೆಯರ ಒಳ ಉಡುಪಿನ ಬಗ್ಗೆ ಲಾಯರ್ ಜಗದೀಶ್ ಮಾತು.. ಏನಿದು ವಿವಾದ?
- DAKSHINA KANNADA4 days ago
ಮಂಗಳೂರು : ರಾತ್ರಿ ಹೊತ್ತಲ್ಲಿ ಯುವಕನ ಬೆತ್ತಲೆ ಓಡಾಟ; ಭಯದಲ್ಲಿ ಹಾಸ್ಟೆಲ್ ವಿದ್ಯಾರ್ಥಿನಿಯರು