FILM
ಯುವ ಉದ್ಯಮಿ ಜೊತೆ ಅಮಲಾ ಪೌಲ್ ಲಿಪ್ ಲಾಕ್
ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ಉದ್ಯಮಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.
ಹೆಬ್ಬುಲಿ ಬೆಡಗಿ ನಟಿ ಅಮಲಾ ಪೌಲ್ ಉದ್ಯಮಿಯೊಬ್ಬರ ಜೊತೆ ಲಿಪ್ ಲಾಕ್ ಮಾಡಿರುವ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಿದೆ.
ನಟಿ ಅಮಲಾ ಜೊತೆ ಲಿಪ್ ಲಾಕ್ ಮಾಡಿಕೊಂಡಿದ್ದ ವಿಡಿಯೋವನ್ನು ಜಗತ್ ದೇಸಾಯಿ ಇನ್ಸ್ಟಾದಲ್ಲಿ ಶೇರ್ ಮಾಡಿದ್ದರು.
ಜಗತ್ ದೇಸಾಯಿ ಯುವ ಉದ್ಯಮಿಯಾಗಿದ್ದು, ಅವರೊಂದಿಗೆ ಅಮಲಾ ಎರಡನೇ ಮದುವೆ ಆಗಲಿದ್ದಾರೆ ಎನ್ನುವುದು ಈಗ ಬಹಿರಂಗವಾಗಿದೆ.
ಅಮಲಾ ಪೌಲ್, ಸಿನಿಮಾಗಳಿಗಿಂತ ಹೆಚ್ಚು ವಿವಾದಗಳಿಂದಲೇ ಸುದ್ದಿ ಆದವರು.2014ರಲ್ಲಿ ತಮಿಳು ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾದರು.
ಆದರೆ, ಆ ಸಂಬಂಧ ತುಂಬಾ ದಿನ ಉಳಿಯಲಿಲ್ಲ. ಮದುವೆಯಾದ ಮೂರೇ ಮೂರು ವರ್ಷಕ್ಕೆ ಜೀವನ ಮುರಿದು ಬಿತ್ತು. ಇದೀಗ ಬಾಯ್ ಫ್ರೆಂಡ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
bangalore
ಇವ್ರು ಯಾರಂತ ಗೊತ್ತಾಯ್ತ ಫ್ರೆಂಡ್ಸ್? ನ್ಯೂ ಕಪಲ್ಸ್ ಫಾರಿನ್ ಟ್ರಿಪ್ ಅಂತೆ..!
Film: ತೆಲುಗು ನಟ ನರೇಶ್ ಈಗಾಗಲೇ ಮೂರನೇ ಪತ್ನಿ ರಮ್ಯಾ ರಘುಪತಿಯವರಿಂದ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದ್ರೆ ರಮ್ಯಾ ಡಿವೋರ್ಸ್ ನೀಡಲು ಒಪ್ಪುತ್ತಿಲ್ಲ. ಹೀಗಿರುವಾಗಲೇ ಪವಿತ್ರಾ ಲೋಕೇಶ್ ಜೊತೆ ನರೇಶ್ ಸಹಜೀವನ ನಡೆಸುತ್ತಿದ್ದಾರೆ.
ಬಹುದಿನಗಳ ನಂತರ ನರೇಶ್ ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. “ನಾನು ನನ್ನ ಜೀವನದಲ್ಲಿ ಸಂಕಷ್ಟದಲ್ಲಿದ್ದಾಗ, ಈ ಒಂದು ಹಾಡು ನನಗೆ ಸ್ಫೂರ್ತಿ ನೀಡಿತು. ಆ ಸಮಯದಲ್ಲಿ ನಾನು ನನ್ನ ಕರಿಯರ್ ಕಳೆದುಕೊಂಡೆ. ನಾನು ಆರ್ಥಿಕ ಸಮಸ್ಯೆ ಎದುರಿಸಿದೆ. ನನ್ನ ಆತ್ಮೀಯರು ನನ್ನನ್ನು ಅಗಲಿದ್ದರು. ಕ್ಷುಲ್ಲಕ ಪ್ರಕರಣದಲ್ಲಿ ಸಂಬಂಧಿಕರಿಂದ ಕಿರಿಕಿರಿ, ಜೋಕರ್‌ನಿಂದ ತೊಂದರೆ ಎದುರಾದರೂ ನನ್ನ ಬೆಂಬಲಕ್ಕೆ ನಿಂತಿದ್ದು ನನ್ನ ತಾಯಿ ಮತ್ತು ಸ್ನೇಹಿತ ವಿಜಯ್ ವಾಧ್ವಾ ಮಾತ್ರ.ಈಗ ಈ ರೀತಿ ಬದಲಾಗಿದ್ದೇನೆ. ಈ ಹಾಡು ನನಗೆ ಸ್ಫೂರ್ತಿ ನೀಡಿದ್ದು ಮಾತ್ರವಲ್ಲ. ಮತ್ತೆ ಬಲವಾಗಿ ಎದ್ದು ನಿಲ್ಲುವಂತೆ ಮಾಡಿದೆ. ಈಗಲೂ ಪ್ರೇರೇಪಿಸುತ್ತದೆ. ಈಗ ನಾನು ನನ್ನ ವೃತ್ತಿಜೀವನದ 50ನೇ ವರ್ಷದಲ್ಲಿದ್ದೇನೆ. ಈ ಮಹತ್ತರವಾದ ಮೈಲಿಗಲ್ಲನ್ನು ಸಾಧಿಸಲು ನನಗೆ ತುಂಬಾ ಸಹಾಯ ಮಾಡಿದ ಎಲ್ಲರಿಗೂ ನನ್ನ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ” ಎಂದು ನರೇಶ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
bangalore
ಮಾಲಿವುಡ್ ನ ಹಿರಿಯ ನಟಿ ಆರ್. ಸುಬ್ಬಲಕ್ಷ್ಮಿ ಇನ್ನಿಲ್ಲ..!
Film: ಮಲಯಾಳಂ ಚಿತ್ರದ ಖ್ಯಾತ ಹಿರಿಯ ನಟಿ ಹಾಗೂ ಸಂಗೀತ ಕ್ಷೇತ್ರದಲ್ಲೂ ಹಲವು ಸಾಧನೆ ಮಾಡಿರುವ ಆರ್. ಸುಬ್ಬಲಕ್ಷ್ಮಿ ಅವರು ನಿಧನ ಹೊಂದಿದರು.
ಕಾಯಿಲೆಯಿಂದ ಬಳಲುತ್ತಿದ್ದ ಆರ್. ಸುಬ್ಬಲಕ್ಷ್ಮಿ ಅವರಿಗೆ 87 ವಯಸ್ಸಾಗಿತ್ತು. ಸಿನಿಮಾ ರಮಗದಲ್ಲಿ ಹಲವಾರು ವರ್ಷಗಳ ಕಾಲ ನಟನೆ ಮಾಡಿ ಅಲ್ಲದೆ ಚಿತ್ರಕಲೆ, ಸಂಗೀತ ಕ್ಷೇತ್ರದಲ್ಲೂ ಸಾಧನೆ ಮಾಡಿರುವ ಹಿರಿಯ ನಟಿ.
ಇವರಿಗೆ ವಯಸ್ಸಾದರೂ ಇತ್ತೀಚಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಅಜ್ಜಿ ಪಾತ್ರ ಮಾಡಿ ಫೆಮಸ್ ಆಗಿದ್ದರು. ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ನಟಿಯ ನಿಧನಕ್ಕೆ ಸಿನಿಮಾ ತಾರೆಯರು ಅಲ್ಲದೆ ಮುಖ್ಯಮಂತ್ರಿಗಳು ಕೂಡ ಸಂತಾಪ ಸೂಚಿಸಿದ್ದಾರೆ.
FILM
ಮೊದಲ ಬಾರಿ ಮದುವೆ ರಹಸ್ಯ ಬಿಚ್ಚಿಟ್ಟ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್
ಬೆಂಗಳೂರು : ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಹಲವು ಸ್ಪರ್ಧಿಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಾರೆ. ಇದರಲ್ಲಿ ಹುಲಿ ಉಗುರು ಧರಿಸಿದ ಕಾರಣಕ್ಕೆ ಪೊಲೀಸರಿಂದ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರ ಬಂಧನವಾಗಿತ್ತು. ಈಗ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ.
ಬಿಗ್ ಬಾಸ್ ಮನೆಯಲ್ಲಿಯೇ ತಮ್ಮ ಮದುವೆ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ವರ್ತೂರು ಸಂತೋಷ್ ಅವರಿಗೆ ಮದುವೆ ಆಗಿದೆ. ಒಬ್ಬಳು ಹೆಣ್ಣು ಮಗು ಕೂಡ ಇದೆ. ಆದರೆ ಅವರು ಮದುವೆ ಆಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕೆಲದಿನಗಳ ಹಿಂದೆ ಸೋಷಿಯಲ್‌ಮೀಡಿಯಾದಲ್ಲಿ ಗುಲ್ಲೆದ್ದಿತ್ತು. ಈಗ ಬಿಗ್ ಬಾಸ್ ಮನೆಯಲ್ಲಿ ಸ್ವತಃ ವರ್ತೂರ್ ಅವರೇ ತಮ್ಮ ಮದುವೆ, ಪತ್ನಿ ಜೊತೆಗಿನ ಭಿನ್ನಾಭಿಪ್ರಾಯಗಳ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ಬಿಗ್‌ಬಾಸ್ ಮನೆ ಸೇರಿದಾಗಿನಿಂದ ಈ ವರೆಗೂ ತನಗೆ ಮದುವೆ ಆಗಿದೆ ಎಂಬ ಒಂದೇ ಒಂದು ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿರಲಿಲ್ಲ ವರ್ತೂರು ಸಂತೋಷ್. ಈಗ ಗುಟ್ಟು ರಟ್ಟಾಗಿದೆ.
‘ವರ್ತೂರ ಸಂತೋಷ್ ಒಳಗಡೇ ಏನೈತೆ ಅನ್ನೋದನ್ನು ಹೇಳ್ತಿದ್ದೇನೆ. ನೋಡು ದೊಡ್ಡಪ್ಪ ನೀನು ಹೀಗು ತಾಳಿಕಟ್ಟು ಅಂದ್ರೆ ಕಟ್ಟಿಬಿಡ್ತಿನಿ. ನಾನು ಅವರಿಗೆ ಮಾತು ಕೊಟ್ಟು ಒಪ್ಪಿಕೊಂಡು ಬಿಟ್ಟೆ. ಮದುವೆಯೂ ಆಯ್ತು, ದಿನ ಕಳೆದಂತೆ, ಅಮ್ಮನನ್ನು ಇಗ್ನೋರ್ ಮಾಡೋಕೆ ಶುರು ಮಾಡಿದ್ರು. ನಾನು ಸಂಪಾದನೆ ಮಾಡಿದ ಜನರನ್ನು ತೊರೆದು ಇವರ ಹಿಂದೆ ಹೋಗಬೇಕು ಎಂದರೆ ಅದು ಸಾಧ್ಯವಾಗದ ಮಾತು. ಆಗ ಹೆಂಡತಿ ಮನೆ ಹತ್ತಿರ ಹೋಗ್ತಿನಿ. ನನ್ನ ಮಾತಿನ ಪ್ರಕಾರ ಬಂದ್ರೆ, ನೀನು ರಾಣಿನೇ ಎಂದು ಕರೆದೆ. ಮೊದಲು ನೀನು ಗೇಟಿಂದ ಆಚೆ ಹೋಗು ಎನ್ನುತ್ತಾರೆ. ಆವತ್ತು ನಾನು ಮಾತು ಕೊಟ್ಟು ಬಂದಿದ್ದೀನಿ ಇವತ್ತು ಆ ಮಾತಿನ ಮೇಲೆ ನಿಂತಿದ್ದೀನಿ’ ಎಂದಿದ್ದಾರೆ ವರ್ತೂರು.
ಮುಂದೇನಾಗುತ್ತೆ ಅನ್ನುವುದನ್ನ ಇವತ್ತಿನ ಎಪಿಸೋಡ್ ನಲ್ಲಿ ನೋಡ್ಬೇಕಷ್ಟೆ..
- bangalore4 days ago
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ನಲ್ಲಿ ಎಂಟ್ರಿಯಾದ ಈ ಸ್ಪರ್ಧಿಗಳು ಯಾರು..?
- FILM3 days ago
ಆಲಿಯಾ ಭಟ್ ಡೀಫ್ ಫೇಕ್ ವಿಡಿಯೋ ವೈರಲ್ – ವಿಡಿಯೋ ನೋಡಿದ್ರಾ..?
- bangalore6 days ago
ಬೆಂಗಳೂರು ಕಂಬಳಕ್ಕೆ ಚಾಲನೆ ನೀಡಿದ ಅಶ್ವಿನಿ ಪುನಿತ್ ರಾಜ್ ಕುಮಾರ್
- DAKSHINA KANNADA6 days ago
Puttur: ಮಹಿಳೆಗೆ ಅಮಲು ಬರಿಸುವ ಪಾನೀಯ ಕುಡಿಸಿ ಅತ್ಯಾಚಾರ..!