Connect with us

ಪೆರ್ನೆಯ ಗಂಡಾಂತರಗಳಿಗೆ ಕಾರಣವಾದ 3 ಶತಮಾನಗಳಿಂದ ಪಾಳು ಬಿದ್ದ ಆ ದೈವಸ್ಥಾನ ಮರು ನಿರ್ಮಾಣ..

Published

on

ಪೆರ್ನೆಯ ಗಂಡಾಂತರಗಳಿಗೆ ಕಾರಣವಾದ 3ಶತಮಾನಗಳಿಂದ ಪಾಳು ಬಿದ್ದ ಆ ದೈವಸ್ಥಾನ ಮರು ನಿರ್ಮಾಣ..

ಪುತ್ತೂರು : ಪರಶುರಾಮ ಸೃಷ್ಟಿ ತುಳುನಾಡಿನಲ್ಲಿ ದೈವಗಳಿಗೆ ಹಾಗೂ ನಾಗನಿಗೆ ವಿಶೇಷ ಆರಾಧನೆ . ದೇವರು ತನ್ನ ಅಸ್ತಿತ್ವವನ್ನು ದೈವ ಹಾಗೂ ನಾಗನ ಮೂಲಕ ಪ್ರಕಟಿಸುತ್ತಾರೆ ಎನ್ನುವುದು ಸರ್ವವಿದಿತ. 

ಇಂತಹುದೇ ಒಂದು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆ  ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಒಂದು ವರ್ಷದ ಹಿಂದೆ ನಡೆದಿದ್ದು, ಗ್ರಾಮದಲ್ಲಿ ಸಾವು-ನೋವು, ರೋಗ-ರುಜಿನಗಳು ಸೇರಿದಂತೆ 13 ಮೃತ ನಾಗರಹಾವಿನ ದೇಹಗಳು ಪೆರ್ನೆ ಗ್ರಾಮದಲ್ಲಿ ಪತ್ತೆಯಾಗಿತ್ತು.ಆ ಊರಿನ ಜನರಲ್ಲಿ ನೆಮ್ಮದಿ ಬದುಕೆಂಬುದೇ ನಷ್ಟವಾಗಿ ಹೋಗಿತ್ತು. ಅಲ್ಲಲ್ಲಿ ಅಪಮೃತ್ಯುಗಳು, ಅತ್ಯಂತ ನಂಬಿಕೆಯ ನಾಗಗಳ ಸಾವುಗಳು ಅಲ್ಲಿನ ಜನರನ್ನು ನಿದ್ದೆಗೆಡಿಸಿತ್ತು.

ನಾಗಗಳ ಸಾವನ್ನು ಬೆನ್ನತ್ತಿ ಹೋದ ಆ ಊರಿನ ಜನರಿಗೆ ವಿಸ್ಮಯವೇ ಕಾದಿತ್ತು. ಊರಿನಲ್ಲಿ ನಡೆಯುತ್ತಿರುವ ಇಂಥಹ ಗಂಡಾಂತರಗಳಿಗೆ 300 ವರ್ಷಗಳಿಂದ ಪಾಳು ಬಿದ್ದ ಆ ದೈವಸ್ಥಾನವೇ ಕಾರಣ ಎಂದು ತಿಳಿದಾಗಿ ಊರಿನ ಜನರಿಗೆ ಬರ ಸಿಡಿಲೇ ಬಡಿದಿತ್ತು. ಕೊರತಿಕಟ್ಟೆ ಮಾಡತ್ತಾರುವಿನಲ್ಲಿ ನಡೆದ ಈ ಘಟನೆ ಧಾರ್ಮಿಕ ಮಾತ್ರವಲ್ಲದೆ ವೈಜ್ಞಾನಿಕ ಲೋಕಕ್ಕೂ ಅಚ್ಚರಿ ಮೂಡಿಸಿತ್ತು. ದುರ್ಘಟನೆಗೆ ಕಾರಣ ಏನೆಂಬುದು ಹುಡುಕಾಟ ನಡೆಸಿದಾಗ ಗ್ರಾಮಸ್ಥರು ಮೊರೆ  ಹೋಗಿದ್ದು ಅಷ್ಟ ಮಂಗಲ ಪ್ರಶ್ನೆಗೆ.

ಅದರಲ್ಲಿ ಕಂಡು ಬಂದಂತೆ ಶೋಧ ಕಾರ್ಯ ನಡೆಸಿದಾಗ ಪಾಳು ಬಿದ್ದ ದೈವಸ್ಥಾನ ಹಾಗೂ ದೈವದ ಭಂಡಾರದ ಮನೆ ಗೋಚರವಾಗಿತ್ತು. ಇದೀಗ ಮಣ‍್ಣಿನ ಅಡಿಯಲ್ಲಿ ಸಿಕ್ಕಿದ್ದ 500 ವರ್ಷಗಳ ಇತಿಹಾಸವುಳ್ಳ  ದೈವಸ್ಥಾನಕ್ಕೆ ಜೀರ್ಣೋದ್ದಾರ ಕೆಲಸಗಳು ನಡೀತಾ ಇವೆ.

ಶಿವಶಕ್ತಿ ಅರಸು  ದೈವ ಉಳ್ಳಾಕ್ಲು, ಸತ್ಯ ರಾಜನ್ ದೈವ ವ್ಯಾಘ್ರಚಾಮುಂಡಿ, ಮತ್ತು ಶಕ್ತಿ ಸ್ವರೂಪಿಣಿಯಾದ ಕೊರತಿ ದೈವಗಳ ಮೊಗ ಮೂರ್ತಿಗಳು, ದೀಪ, ಖಡ್ಸಲೆ,  ಹಾಗೂ ದೈವಾರಾಧನೆಯ ಪರಿಕರಗಳು ಸೇರಿದಂತೆ ದೈವಗಳಿಗೆ ನೂತನ ಗುಡಿ ಮಾಡಗಳಿಗೆ ಪಾದುಕಾನ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.

ವಾಸ್ತು ಶಿಲ್ಪಿಗಳಾದ ಮಹೇಶ್ ಮುನಿಯಂಗಳ ಇವರ ನೇತೃತ್ವದಲ್ಲಿ ಸುಮಾರು 1.25 ಕೋಟಿ ವೆಚ್ಚದಲ್ಲಿ ಕೇರಳೀಯ ಶೈಲಿಯಲ್ಲಿ ಕೆಂಪುಕಲ್ಲಿನ ನೂತನ ಗುಡಿ ಮಾಡಗಳು ನಿರ್ಮಾಣವಾಗಲಿದ್ದು, ಜೀರ್ಣೋದ್ಧಾರದ ಕೆಲಸಗಳು ಭರದಿಂದ ಸಾಗುತ್ತಿದೆ.

ವಿಡಿಯೋಗಾಗಿ..

Click to comment

Leave a Reply

Your email address will not be published. Required fields are marked *

LATEST NEWS

70 ರ ವೃದ್ಧನಿಗೆ ಸಂಗಾತಿ ಬೇಕಾಗಿದ್ದಾಳೆ; ಆತ ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು ಗೊತ್ತಾ!?

Published

on

ಇತ್ತೀಚೆಗೆ ಯುವಕರು ಮದುವೆಯಾಗಲು ಯುವತಿಯರು ಸಿಗುತ್ತಿಲ್ಲ ಎಂದು ಗೋಳಾಡುವುದನ್ನು ಕಾಣುತ್ತೇವೆ ಹುಡುಗಿಯರು ಸಿಗುತ್ತಿಲ್ಲವೆಂದು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಇತ್ತೀಚೆಗೆ ಆಟೋ ಮೂಲಕ ಪ್ರಚಾರ, ವೀಡಿಯೋ ಮೂಲಕ ಪ್ರಚಾರ ಹೀಗೆ ನಾನಾ ರೀತಿಯಲ್ಲಿ ‘ವಧು ಬೇಕಾಗಿದ್ದಾಳೆ’ ಎಂದು ಜಾಹೀರಾತು ನೀಡುತ್ತಾರೆ. ಅದೇನೋ ಯುವಕರು ಬಿಡಿ…ಆದರೆ, ಇಲ್ಲಿ 70 ರ ಹರೆಯದ ವೃದ್ಧನೂ ಜಾಹೀರಾತು ಕೊಟ್ಟಿದ್ದಾರೆ. ಆಶ್ಚರ್ಯವಾದರೂ ಇದು ಸತ್ಯ!

ಜಾಹೀರಾತಿಗಾಗಿ ಮಾಡುತ್ತಿರೋ ಖರ್ಚೆಷ್ಟು?

ವಯಸಾಗುತ್ತಿದ್ದಂತೆ ಸಂಗಾತಿಯ ಆಸರೆ ಬೇಕಾಗುತ್ತದೆ. ಒಂಟಿಯಾಗಿರುವುದು ಕಷ್ಟ ಎಂದೆನಿಸುತ್ತದೆ. ಈಗ ಈ ಅಜ್ಜನಿಗೂ ಮದುವೆಯಾಗಲು ಮನಸ್ಸಾಗಿದೆ. ಸಂಗಾತಿಯ ಸಂಗಡ ಬೇಕೆನಿಸಿ ಆತ ಗೆಳತಿಯ ಅರಸುತ್ತಿದ್ದಾರೆ. ಆತನ ವಯಸ್ಸು 70 ವರ್ಷ…ತನಗೆ ಜೊತೆಗಾರ್ತಿ ಬೇಕೆಂಬ ಹಂಬಲದಲ್ಲಿ ಜಾಹೀರಾತು ನೀಡುತ್ತಿದ್ದಾರೆ.

ಜಾಹೀರಾತಿಗಾಗಿ ಆತ ಖರ್ಚು ಮಾಡುತ್ತಿರುವುದು ಎಷ್ಟು ಗೊತ್ತಾ!? 30 ಸಾವಿರ ರೂಪಾಯಿ. ಆತ ವಾರಕ್ಕೆ ಇಷ್ಟು ಖರ್ಚು ಮಾಡುತ್ತಿದ್ದಾರೆ. ಅದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆಯಂತೆ.

ಆಕೆ ಕರೆದಲ್ಲಿ ಹೋಗಲು ಸಿದ್ಧ!

ಅಂದಹಾಗೆ ವೃದ್ಧನ ಹೆಸರು ಗಿಲ್ಬರ್ಟ್. ಆತ ಅಮೆರಿಕಾದ ಟೆಕ್ಸಾಸ್ ನ ಸ್ವೀಟ್ ವಾಟರ್ ಸಿಟಿಯಲ್ಲಿ ವಾಸವಿದ್ದಾನೆ. 20 ಅಡಿ ಬಿಲ್ ಬೋರ್ಡ್ ಹಾಕಿಸಿ ಪ್ರತಿವಾರ $400 ನೀಡುತ್ತಿದ್ದಾನೆ. ಒಂಟಿಯಾಗಿರುವ ತನಗೆ ಸಂಗಾತಿ ಹುಡುಕುತ್ತಿರುವುದಾಗಿ ಆತ ಜಾಹೀರಾತು ಮೂಲಕ ತಿಳಿಸಿದ್ದಾನೆ. ಜೊತೆಗೆ ಆತ. ಆಕೆ ಕರೆದ ಕಡೆ ರಿಲೊಕೇಟ್ ಆಗಲು ಸಹ ಸಿದ್ಧನಿದ್ದಂತೆ. ಆಕೆಗೆ ಇಲ್ಲಿ ಇರಲು ಇಷ್ಟವಿಲ್ಲದಿದ್ದರೆ, ಎಲ್ಲಿ ಬೇಕಾದರೂ ರಿ ಲೊಕೇಟ್ ಆಗಲು ಸಿದ್ಧ ಎಂದು ಬರೆದುಕೊಂಡಿದ್ದಾರೆ.

ನಾನು ಬಿಲ್‌ಬೋರ್ಡ್‌ ಜಾಹೀರಾತು ಹಾಕಿಸಿದ್ದು ಕಂಡು ನೂರಾರು ಮಂದಿ ಕರೆ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಬಹುತೇಕರು ಹಣ ಮಾತ್ರ ಕೇಳುತ್ತಿದ್ದಾರೆ. ನಾನು ಜಾಹೀರಾತು ನೀಡಿದ್ದು ಕಂಡು ಅವರು ನಾನು ಶ್ರೀಮಂತ ಎಂದುಕೊಂಡಿದ್ದಾರೆ. ಹೀಗಾಗಿ ನನಗೆ ಬರುವ ಕರೆಗಳನ್ನು ಪರಿಶೀಲಿಸಲು ನಾನು ನನ್ನ ಸ್ನೇಹಿತರಿಗೆ ವರ್ಗಾಯಿಸುತ್ತೇನೆ ಅವರು ವಿಚಾರಣೆ ನಡೆಸುತ್ತಾರೆ ಎಂದು ಗಿಲ್ಬರ್ಟ್ ಹೇಳಿಕೊಂಡಿದ್ದಾರೆ.

ನನಗೆ ಸರಿಯಾದ ವ್ಯಕ್ತಿ ಸಿಕ್ಕರೆ ನಾನು ಎಲ್ಲಿಗೆ ಬೇಕಾದರು ಪ್ರಯಾಣಿಸುತ್ತೇನೆ. ನಾನು ಸರಿಯಾದ ವ್ಯಕ್ತಿಯನ್ನು ಭೇಟಿಯಾದರೆ ಅವರ ಕಣ್ಣುಗಳನ್ನು ನೋಡಲು ಮತ್ತು ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಲು ನಾನು ಬಯಸುತ್ತೇನೆ. ಯಾರನ್ನಾದರೂ ಭೇಟಿಯಾಗಲು ಯುರೋಪಿಗೆ ಬೇಕಾದರು ನಾನು ಹೋಗುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ : ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

ಹಲವರಿಂದ ಕರೆ !

ಗಿಲ್ಬರ್ಟ್ 2015 ರಿಂದ ಒಂಟಿಯಾಗಿ ಬದುಕುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇತ್ತ ಜಾಹೀರಾತು ನೋಡಿ ಕರೆ ಮಾಡುವವರು ಮೊದಲಿಗೆ ಹಣ ಮತ್ತು ಆಸ್ತಿ ಕುರಿತು ವಿಚಾರಣೆ ನಡೆಸುತ್ತಿದ್ದಾರಂತೆ. ಅಲ್ಲದೆ ಆಸ್ತಿಯನ್ನ ತಮ್ಮ ಹೆಸರಿಗೆ ವರ್ಗಾಯಿಸಿದರೆ ಮಾತ್ರ ಆತನ ಜೊತೆ ಇರಲು ಬಯಸಿರುವುದಾಗಿಯೂ ಹೇಳಿದ್ದಾರಂತೆ. ಆದರೆ ತಾನು ಆಸ್ತಿ, ಹಣದ ಹಿಂದೆ ಬಿದ್ದು ಈ ರೀತಿ ಜಾಹೀರಾತು ನೀಡಿಲ್ಲ, ಕೊನೆಯ ದಿನಗಳಲ್ಲಿ ನನ್ನ ಜೊತೆ ಇರುವವರು ಬೇಕಾಗಿದ್ದಾರೆ. ಅಂತವರು ಸಿಗುವವರೆಗೆ ಹುಡುಕುತ್ತೇವೆ ಎಂದಿದ್ದಾರೆ.

ಅಲ್ಲದೆ ಜಾಹೀರಾತು ನೋಡಿ ಆ ಮೂಲಕ ಸಂಪರ್ಕಿಸುವವರು ಹೆಚ್ಚಿನವರು ಕುಟುಂಬ, ಮದುವೆಯಾಗಿ ಮಕ್ಕಳು ಇದ್ದವರು ಆಗಿದ್ದಾರಂತೆ. ಅವರಲ್ಲಿ ಕೆಲವರು ಹಣ ನೀಡಿದರೆ ಅವರ ಜೊತೆ ಮನೆಯಲ್ಲಿ ಬಿಟ್ಟುಕೊಳ್ಳುವುದಾಗಿಯೂ ಆಫರ್ ನೀಡಿದ್ದರಂತೆ. ಇದನ್ನು ತಿರಸ್ಕರಿಸಿರುವುದಾಗಿ ಗಿಲ್ಬರ್ಟ್ ತಿಳಿಸಿದ್ದಾರೆ.

ನನ್ನ ಬಳಿ ಯಾವ ಆಸ್ತಿ ಇಲ್ಲ ಎಂದಿರುವ ಗಿಲ್ಬರ್ಟ್, ವಯಸ್ಸಿನಲ್ಲಿ ದುಡಿದ ಹಣ, ಒಂದು ಮನೆ ಇದೆ, ಹಣ ಮಾಡುವ ವಯಸ್ಸು ಸಹ ನನಗಿಲ್ಲ. ನಾನು ಶ್ರೀಮಂತನಲ್ಲ. ಜಾಹೀರಾತು ನೀಡಿದ್ದು ನೋಡಿ ಎಲ್ಲರು ನಾನು ಶ್ರೀಮಂತ ಕರೆ ಮಾಡುತ್ತಾರೆ. ನನ್ನ ಬಳಿ ಹಣವಿಲ್ಲವೆಂದಾಗ ಕರೆ ಕಟ್ ಮಾಡುತ್ತಿದ್ದಾರೆ ಎಂದು ಗಿಲ್ಬರ್ಟ್ ಅಳಲು ತೋಡಿಕೊಂಡಿದ್ದಾರೆ.

Continue Reading

LATEST NEWS

ನಿಲ್ದಾಣದಲ್ಲಿ ರೈಲು ಇಳಿಯುವಾಗ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ ಎಂದ ಹೈಕೋರ್ಟ್; ಏನಿದು ಪ್ರಕರಣ? ಆದೇಶದಲ್ಲಿ ಏನಿದೆ?

Published

on

ಬೆಂಗಳೂರು : ಚಲಿಸುತ್ತಿರುವ ರೈಲಿನಿಂದ ಇಳಿಯುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃ*ತಪಟ್ಟರೆ ಅದಕ್ಕೆ ರೈಲ್ವೆ ಇಲಾಖೆಯೇ ಹೊಣೆ. ಮೃ*ತ ಪ್ರಯಾಣಿಕರ ಕುಟುಂಬಕ್ಕೆ ರೈಲ್ವೇ ಇಲಾಖೆಯೇ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ.


ಏನಿದು ಪ್ರಕರಣ ?

ಜಯಮ್ಮ ಎಂಬವರು ರೈಲಿನಿಂದ ಬಿದ್ದು ಇಹಲೋಕ ತ್ಯಜಿಸಿದ್ದರು. ಜಯಮ್ಮ ತನ್ನ ಸಹೋದರಿಯೊಂದಿಗೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಇದು ಗೊತ್ತಾಗಿ ಆಕೆ ಕೆಳಗಿಳಿಯುವ ವೇಳೆ ರೈಲು ಚಲಿಸಲು ಆರಂಭಿಸಿತ್ತು. ಆಗ ನಿಯಂತ್ರಣ ಕಳೆದುಕೊಂಡು ಆಕಸ್ಮಿಕವಾಗಿ ಕೆಳಗೆ ಬಿದ್ದು ತೀವ್ರವಾಗಿ ಗಾ*ಯಗೊಂಡು ಸ್ಥಳದಲ್ಲೇ ಮೃ*ತಪಟ್ಟಿದ್ದರು. ಇದನ್ನು ಪರಿಗಣಿಸಿ ಆಕೆಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ನಿರ್ದೇಶಿಸುವಂತೆ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲ ಮನವಿ ಮಾಡಿದರು.

ರೈಲು ಇಳಿಯುವಾಗ ಸಂಭವಿಸಿದ ಅವಘಡದಲ್ಲಿ ಮೃ*ತಪಟ್ಟ ಜಯಮ್ಮ ಎಂಬವರ ಸಾ*ವಿಗೆ ಪರಿಹಾರ ಕಲ್ಪಿಸುವ ಸಂಬಂಧ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ತೀರ್ಪನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ರೋಜಮಣಿ ಹಾಗೂ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ, ತೀರ್ಪು ನೀಡಿದೆ.

ರೈಲ್ವೆ ಇಲಾಖೆ ವಾದ ಏನಾಗಿತ್ತು?

ಈ ಘಟನೆ ಆಕಸ್ಮಿಕವಾಗಿ ನಡೆದಿದ್ದಲ್ಲ, ಉದ್ದೇಶಪೂರ್ವಕ ಎಂದು ರೈಲ್ವೆ ಇಲಾಖೆ ಹೇಳಿದರೂ ಅದಕ್ಕೆ ಸಾಕ್ಷ್ಯಾಧಾರ ಒದಗಿಸಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ರೈಲ್ವೆ ಹಕ್ಕುಗಳ ನ್ಯಾಯಮಂಡಳಿ ಹೊರಡಿಸಿರುವ ಆದೇಶವನ್ನು ತಳ್ಳಿಹಾಕುವಂತೆ ಅರ್ಜಿದಾರರು ವಾದಿಸಿದ್ದರು.

ಮೃ*ತ ಮಹಿಳೆ ತಪ್ಪಾಗಿ ಬೇರೊಂದು ರೈಲು ಹತ್ತಿದ್ದರು. ಆಗ ಅವರು ಒಂದೋ ಪ್ರಯಾಣ ಮುಂದುವರಿಸಿ ಮುಂದಿನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲವೇ ಅಲಾರ್ಮ್ ಚೈನ್ ಎಳೆಯಬೇಕು. ಅದೆರಡನ್ನೂ ಮಾಡದೆ ರೈಲಿನಿಂದ ಇಳಿಯಲು ಪ್ರಯತ್ನಿಸಿ ಸ್ವಯಂಪ್ರೇರಿತ ಮತ್ತು ಉದ್ದೇಶಪೂರ್ವಕವಾಗಿ ಜಿಗಿದಿದ್ದಾರೆ.

ಹೀಗಾಗಿ ಘಟನೆ ಆಕಸ್ಮಿಕವಾಗಿ ಸಂಭವಿಸಿದೆ ಎನ್ನಲಾಗದು. ಆದ್ದರಿಂದ ರೈಲ್ವೆ ಕಾಯ್ದೆಯ ಸೆಕ್ಷನ್ 123(ಇ) ಅನ್ವಯ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಇಲಾಖೆ ಪ್ರತಿವಾದ ಮಂಡಿಸಿತ್ತು.

ಇದನ್ನೂ ಓದಿ : ಊಟಿಗೆ ಪ್ರಯಾಣ ಬೆಳೆಸೋ ಯೋಚನೆಯಲ್ಲಿದ್ದೀರಾ? ಹಾಗಾದ್ರೆ ಈ ಆದೇಶ ಪಾಲಿಸೋದು ಕಡ್ಡಾಯ!

ಪರಿಹಾರ ಎಷ್ಟು?

ಜಯಮ್ಮ ಸಾ*ವಿಗೆ ರೈಲ್ವೆಯಿಂದ 8 ಲಕ್ಷ ರೂ. ಪರಿಹಾರ ಕೋರಿದ್ದರು. ಆದೇಶದಲ್ಲಿ ಪೀಠವು ಪ್ರತಿವಾದಿಗಳು 4 ಲಕ್ಷ ರೂ. ವಾರ್ಷಿಕ ಶೇ.7 ಬಡ್ಡಿಯೊಂದಿಗೆ ಪಾವತಿಸುವಂತೆ ಹೇಳಿದೆ. ಇದಕ್ಕೆ ತಪ್ಪಿದ್ದಲ್ಲಿ ಪ್ರತಿವಾದಿಗಳು ಅರ್ಜಿದಾರರ ಮನವಿಯಂತೆ 8 ಲಕ್ಷ ರೂ. ಪಾವತಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಘಟನೆ ನಡೆದಿದ್ದು ಹೇಗೆ ?

2014ರ ಫೆ.22 ರಂದು ಜಯಮ್ಮ ತನ್ನ ಸಹೋದರಿ ರತ್ನಮ್ಮ ಅವರೊಂದಿಗೆ ಚನ್ನಪಟ್ಟಣ ರೈಲು ನಿಲ್ದಾಣಕ್ಕೆ ಹೋಗಿ ಮೈಸೂರಿನ ಅಶೋಕಪುರಂಗೆ ಹೋಗಲು ‘ತಿರುಪತಿ ಪ್ಯಾಸೆಂಜರ್’ ರೈಲಿಗಾಗಿ ಕಾಯುತ್ತಿದ್ದರು. ಆಗ ‘ಟುಟಿಕೋರಿನ್ ಎಕ್ಸ್‌ಪ್ರೆಸ್’ ರೈಲು ಬಂದಿದೆ. ಇಬ್ಬರೂ ಆ ರೈಲು ಹತ್ತಿದ್ದರು.

ಆಮೇಲೆ ಅವರಿಗೆ ಗೊತ್ತಾಗಿದೆ, ರೈಲು ಅಶೋಕಪುರಂಗೆ ಹೋಗುವುದಿಲ್ಲ ಎಂಬುದು. ಹಾಗಾಗಿ ರೈಲಿನಿಂದ ಜಯಮ್ಮ ಇಳಿಯಲು ತೊಡಗಿದ್ದಾರೆ. ಆ ವೇಳೆ ರೈಲು ಚಲಿಸಲಾರಂಭಿಸಿತು, ಪರಿಣಾಮ ಸಮತೋಲನ ತಪ್ಪಿ ಆಕಸ್ಮಿಕವಾಗಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾ*ವಿಗೀಡಾದರು. ಘಟನೆಗೆ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ ಎಂದು ರೈಲ್ವೆ ನ್ಯಾಯಮಂಡಳಿ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮೃ*ತರ ಕುಟಂಬಸ್ಥರು ಹೈಕೋರ್ಟ್ ಮೆಟ್ಟಿಲೇರಿದ್ದರು.

Continue Reading

LATEST NEWS

ಕೈಗಳನ್ನು ತೋರಿಸಿ ಲಕ್ಷಗಟ್ಟಲೆ ಹಣ ಸಂಪಾದಿಸುತ್ತಾಳಂತೆ ಈ ಮಹಿಳೆ..! ಅಷ್ಟಕ್ಕೂ ಯಾರು ಈಕೆ?

Published

on

ಎಲ್ಲರಿಗೂ ಒಂದು ಆಸೆ ಇರುತ್ತೆ. ಯಾವುದೇ ಒತ್ತಡದ ಕೆಲಸ ಇಲ್ಲದೆ ಆರಾಮದ ಕೆಲಸ ಸಿಗಬೇಕು. ಕುಳಿತಲ್ಲೇ ಹಣ ಗಳಿಸಬೇಕು ಅನ್ನುವ ಆಸೆ. ಆದರೆ ಅದೆಲ್ಲಾ ವಾಸ್ತವದಲ್ಲಿ ಕಷ್ಟನೇ ಸರಿ. ಆದ್ರೆ ಇಲ್ಲೊಂದು ಮಹಿಳೆ ಕೇವಲ ತನ್ನ ಕೈ ಬೆರಳಗಳನ್ನು ತೋರಿಸಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರಂತೆ. ಹೌದು, ಅಮೆರಿಕಾದಲ್ಲಿರುವ 37 ವರ್ಷದ ಈ ಮಹಿಳೆ ಕೇವಲ ಕೈ ಬೆರಳುಗಳನ್ನು ತೋರಿಸಿ ವರ್ಷಕ್ಕೆ 25ಲಕ್ಷ ರೂ. ಗಳಿಸುತ್ತಾರಂತೆ.

alexandra

 

ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಅಮೆರಕಾದ ನ್ಯಾಯಾರ್ಕ್‌ನಲ್ಲಿ ವಾಸವಾಗಿದ್ದಾರೆ. ಅಷ್ಟಕ್ಕೂ ಈ ಮಹಿಳೆ ವೃತ್ತಿಯಲ್ಲಿ ‘ಹ್ಯಾಂಡ ಮಾಡೆಲ್’ ಆಗಿದ್ದಾರೆ. ಹಾಗಾಗಿ ತನ್ನ ಮುಖ ಸೌಂದರ್ಯ ತೋರಿಸದೆ ಬರೀಕೈ ಗಳಿಂದಲೇ ಸಂಪಾದನೆ ಮಾಡುತ್ತಿದ್ದಾರೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆಯ ಹೆಸರು ಅಲೆಕ್ಸಾಂಡ್ರಾ ಬೆರೊಕಲ್. ಇವರು ಪ್ರತಿಷ್ಠಿತ ಕಂಪೆನಿಗಳ ಆ್ಯಡ್‌ಗಳಲ್ಲಿ ತಮ್ಮ ಕೈ ಚಳಕ ತೋರಿಸುತ್ತಾರೆ. ಉಗುರಿಗೆ ಹಾಕುವ ನೇಯಿಲ್ ಫಾಲಿಶ್, ಕಾಫಿ ಯನ್ನು ಪಕ್‌ಗೆ ಸುರಿಯುವುದು, ಹಿಟ್ಟನ್ನು ಬೆರೆಸುವವುದು, ಪರ್ಫ್ಯೂಮ್‌ಗಳನ್ನು ತನ್ನ ಮಾದಕ ಕೈ ಬೆರಳುಗಳಿಂದ ಹಿಡಿದು ಹೀಗೆ ಅನೇಕ ಜಾಹಿರಾತುಗಳ ಶೂಟ್‌ನಲ್ಲಿ ಭಾಗವಹಿಸುತ್ತಾರೆ.

add2

 

ಅಲೆಕ್ಸಾಂಡ್ರಾ ತಾವು ಮಾಡುತ್ತಿರುವ ಕೆಲಸದ ಬಗ್ಗೆ ಸ್ನೇಹಿತರ ಜೊತೆ ಹಂಚಿಕೊಂಡಾಗ ಎಲ್ಲರೂ ಒಮ್ಮೆ ಅಚ್ಚರಿಗೊಳಗಾಗಿದ್ದರಂತೆ. ಕೈ ತೋರಿಸಿದಕ್ಕೆ ಲಕ್ಷ ಗಟ್ಟಲೆ ಹಣ ಕೊಡುತ್ತಾರೆ ಎಂದರೆ ನಂಬಲು ಸಾದ್ಯವಿಲ್ಲ ಎಂದು ಹೇಳಿದ್ದರಂತೆ. 2019 ರಲ್ಲಿ ಮಾಡಲಿಂಗ್ ಆರಂಭಿಸಿದ್ದು YSL, ಮೈಕ್ರೋಸಾಫ್ಟ್, ಬ್ರಾಂಡನ್ ಬ್ಲಾಕ್‌ವುಡ್, ಕಿಸ್ ನೈಲ್ಸ್, ಸೆರೆನಾ ವಿಲಿಯಮ್ಸ್ ಜ್ಯುವೆಲರಿಯಂತಹ ಬ್ರಾಂಡ್‌ಗಳಿಂಗೆ ಹ್ಯಾಂಡ್ ಮಾಡಲಿಂಗ್ ಮಾಡುತ್ತಿದ್ದಾರೆ.

ಮುಂದೆ ಓದಿ..;ನೇ*ಣಿಗೆ ಶರಣಾದ ಯುವ ನಟಿ..! ಸಾ*ವಿಗೂ ಮುನ್ನ ವ್ಯಾಟ್ಸಾಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು..!

ವಾರ್ಷಿಕ ಆದಾಯ 25 ಲಕ್ಷ ರೂ…!

add

ಇವರು ಈ ಮಾಡಲಿಂಗ್ ಕ್ಷೇತ್ರಕ್ಕೆ ಕೇವಲ 10 ನಿಮಿಷಗಳಲ್ಲಿ ಆಯ್ಕೆ ಅಗಿದ್ದಾರಂತೆ. ಅವರ ಕೈಗಳ ಆಕಾರ, ಬಣ್ಣ, ನಯವಾದ ಉಗುರುಗಳಿಂದಾಗಿ ಈ ಕೆಲಸವನ್ನು ಪಡೆದುಕೊಂಡಿದ್ದಾರಂತೆ. ಅವರ ಕೈ ಗಳು ಪುಟ್ಟದಾಗಿದ್ದು ಇದು ಅವರ ಕೆಲಸಕ್ಕೆ ಸಹಾಯವಾಗಿದೆಯಂತೆ. ಐಟಮ್‌ಗಳನ್ನು ಕೈಯಲ್ಲಿ ಹಿಡಿದಾಗ ಬ್ರ್ಯಾಂಡ್‌ಗಳು ದೊಡ್ಡದಾಗಿ ಕಾಣುತ್ತದೆ ಎಂದು ಹೇಳುತ್ತಾರೆ ಬೆರೊಕಲ್. ಇನ್ನು ಮನೆಯಲ್ಲಿ ಕೆಲಸಗಳನ್ನು ಮಾಡುವಾಗ ಕೈಗೆ ಗ್ಲೌಸ್‌ಗಳನ್ನು ಧರಿಸುತ್ತಾರೆಂತೆ. ಕೈ ತೊಳೆದ ಕೂಡಲೇ ಲೋಷನ್‌ಗಳಿಂದ ಮಸಾಜ್ ಮಾಡ್ತಾರಂತೆ. ಇನ್ನು ಈ ಕೆಲಸಕ್ಕೆ ಇವರು ಪಡೆಯುವ ಸಂಭಾವನೆ ಬರೋಬ್ಬರಿ 25 ಲಕ್ಷ ರೂ. ಹೌದು ವಾರ್ಷಿಕವಾಗಿ 25 ಲಕ್ಷ ಪಡೆದರೆ ಮಾಸಿಕವಾಗಿ 2 ಲಕ್ಷ ರೂ. ಸಂಪಾದನೆ ಮಾಡುತ್ತಾರಂತೆ.

 

 

Continue Reading

LATEST NEWS

Trending