Connect with us

    bengaluru

    ಲೈವ್ ವಿಡಿಯೋ ಮಾಡುತ್ತಲೇ ಪ್ರಾಣ ಬಿಟ್ಟ ಯುವಕ- ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನ

    Published

    on

    ರೇಬೀಸ್ ರೋಗ ಉಲ್ಬಣಗೊಂಡು ನಿಮಾನ್ಸ್ ಆಸ್ಪತ್ರೆ ಸೇರಿದ್ದ ಪ್ರಿಯತಮನೊಬ್ಬ ಪ್ರಿಯತಮೆಗೆ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಆಸ್ಪತ್ರೆಯ ಬೆಡ್ ಮೇಲೆ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಬೆಂಗಳೂರು: ರೇಬೀಸ್ ರೋಗ ಉಲ್ಬಣಗೊಂಡು ನಿಮಾನ್ಸ್ ಆಸ್ಪತ್ರೆ ಸೇರಿದ್ದ ಪ್ರಿಯತಮನೊಬ್ಬ ಪ್ರಿಯತಮೆಗೆ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನಿಸಿ ಲೈವ್ ವಿಡಿಯೋ ಮಾಡುತ್ತಲೇ ಆಸ್ಪತ್ರೆಯ ಬೆಡ್ ಮೇಲೆ ಪ್ರಾಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

    ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆ.​​​ 9 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಕಿರಣ್  (22)ಎಂಬ ಯುವಕ ಲೈವ್ ವಿಡಿಯೋ ಮಾಡಿ ಪ್ರಾಣ ಬಿಟ್ಟ ಯುವಕನಾಗಿದ್ದಾನೆ.

    ಕಿರಣ್ ಲೈವ್ ವಿಡಿಯೋ ಮಾಡುತ್ತಾ ತನ್ನ ಅಂತ್ಯಕ್ರಿಯೆಗೆ ಬರುವಂತೆ ಪ್ರಿಯತಮೆಗೆ ಆಹ್ವಾನಿಸಿ ಮೃತಪಟ್ಟಿದ್ದಾನೆ.

    ಈ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

    “ಹಾಯ್” ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, “ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಆಗು”.

    ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರೇ ಇಡಬೇಕು. ಇದು ನನ್ನ ಆಕಸ್ಮಿಕ ಸಾವು.

    ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು ಎಂದಿದ್ದಾನೆ.

    ಕಿರಣ್, ಆ. 3ರಂದು ತಾನು ಪ್ರೀತಿಸುತ್ತಿದ್ದ ಹುಡುಗಿಗೆ ರಿಂಗ್, ಕಾಲು ಚೈನ್ ಕೊಡಿಸಿದ್ದನಂತೆ.

    ಈ ವಿಷಯ ತಿಳಿದ ಯುವತಿಯ ತಂದೆ ಇವರಿಬ್ಬರ ಪ್ರಿತಿಯನ್ನು ನಿರಾಕರಿಸಿದ್ದರು.

    ಹೀಗಾಗಿ ಯುವತಿ ಮನೆಯವರೆ ಏನೋ ಮಾಡಿ ನನ್ನ ಮಗನ ಸಾವಿಗೆ ಕಾರಣರಾಗಿದ್ದಾರೆಂದು ಕಿರಣ್ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    bengaluru

    ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕ*ರಣಕ್ಕೆ ಟ್ವಿಸ್ಟ್..! ಎಸ್‌ಐಟಿ ರಚನೆ!!

    Published

    on

    ಹಾಸನ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ.  ಪ್ರಜ್ವಲ್ ಸಾವಿರಾರು ಹೆಣ್ಣುಮಕ್ಕಳ ಮೇಲಿನ ಲೈಂ*ಗಿಕ ದೌರ್ಜ*ನ್ಯ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ರವಿವಾರ ಪ್ರಕರಣ ದಾಖಲಾಗಿದೆ.

    prajwal

    47 ವರ್ಷದ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದಾರೆ. ಈ ಹಿಂದೆ ರೇವಣ್ಣ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಮಹಿಳೆ ನೀಡಿದ ದೂರಿನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ತಂದೆ ಎಚ್‌ಡಿ ರೇವಣ್ಣ ಅವರನ್ನು ಎ1 ಆರೋಪಿಯಾಗಿ ನಮೂದಿಸಿದ್ದು, ಎ2 ಪ್ರಜ್ವಲ್ ರೇವಣ್ಣ ಆಗಿದ್ದಾರೆ. ದೂರಿನಲ್ಲಿ ಏನಿದೆ ಅಂದರೆ… ನಮ್ಮ ಪತಿಗೆ ಎಚ್‌ಡಿ ರೇವಣ್ಣ ತಮ್ಮ ಡೇರಿಯಲ್ಲಿ ಕೆಲಸ ಕೊಡಿಸಿದ್ದರು. ಬಳಿಕ 2015ರಲ್ಲಿ ಹಾಸ್ಟೆಲ್‌ ಒಂದರಲ್ಲಿ ಅಡುಗೆ ಕೆಲಸಕ್ಕೆ ಸೇರಿಸಿದ್ದರು. ನಂತರ ತಮ್ಮ ಮನೆಯಲ್ಲಿ ಅಡುಗೆ ಕೆಲಸಕ್ಕೆ ಬರುವಂತೆ ರೇವಣ್ಣ ಹೇಳಿದ್ದರು. ಅಡುಗೆ ಕೆಲಸಕ್ಕೆ ಸೇರಿಕೊಂಡ ಬಳಿಕ ಭವಾನಿ ರೇವಣ್ಣ ಮನೆಯಲ್ಲಿ ಇಲ್ಲದ ವೇಳೆ ಮೈಕೈ ಮುಟ್ಟಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು. ಅಡುಗೆ ಮನೆಗೆ ಬಂದು ಪ್ರಜ್ವಲ್ ಸಹ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಪ್ರಜ್ವಲ್ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದಾರೆ. ನನ್ನ ಮಗಳಿಗೂ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ವರ್ತಿಸಿದ್ದಾರೆ. ಪದೇ ಪದೇ ಕಾಲ್ ಮಾಡಿದ್ದಕ್ಕೆ ಪುತ್ರಿ ಪ್ರಜ್ವಲ್ ನಂಬರ್ ಬ್ಲಾಕ್ ಮಾಡಿದ್ದರು. ಲೈಂಗಿಕ ಕಿರುಕುಳ ಹೆಚ್ಚಾದಾಗ ಕೆಲಸಬಿಟ್ಟು ಹೋಗಿದ್ದೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.  ಸದ್ಯ ಪೆನ್‌ಡ್ರೈವ್ ವಿವಾದದಲ್ಲಿರುವ ಪ್ರಜ್ವಲ್ ರೇವಣ್ಣ ದೇಶ ಬಿಟ್ಟು  ಜರ್ಮನಿ ಸೇರಿದ್ದಾರೆ ಎಂದು ಹೇಳಲಾಗಿದೆ. ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಹಾಸನದಲ್ಲಿ ಏಪ್ರಿಲ್ 26 ರಂದು ನಡೆದಿದೆ. ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದಾರೆ.

    ಮುಂದೆ ಓದಿ..; ಲೈಂ*ಗಿಕ ದೌರ್ಜ*ನ್ಯ ಆರೋಪ : ವಿಕಿಪೀಡಿಯಾದಲ್ಲಿ ಸೇವ್ ಆಯ್ತು ಪ್ರಜ್ವಲ್ ರೇವಣ್ಣ ಕೇಸ್!

    ಎಸ್‌ಐಟಿಗೆ ನೀಡುವುದಾಗಿ ಗೃಹಸಚಿವರಿಂದ ಸೂಚನೆ:

    ಚುನಾವಣೆಗೆ ಎರಡು ದಿನಗಳು ಬಾಕಿ ಉಳಿದಿರುವಾಗ ಈ ವಿಡಿಯೊ ದೃಶ್ಯಾವಳಿಗಳ ತುಣುಕುಗಳ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ವೈರಲ್ ಆಗಿತ್ತು. ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ನೀಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ.

    Continue Reading

    bengaluru

    ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

    Published

    on

    ಬೆಂಗಳೂರು : ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ನಡೆಸುತ್ತಿದ್ದ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಗೆ ಒಳಗಾಗಿದ್ದಾರೆ. ಯಾಕೆಂದರೆ, ಪ್ರಯಾಣಿಕನೊಬ್ಬನ ಬ್ಯಾಗ್ ನಲ್ಲಿ ಒಂದಲ್ಲ, ಎರಡಲ್ಲ ಬರೋಬ್ಬರಿ 10 ಅನಕೊಂಡಾ ಪತ್ತೆಯಾಗಿವೆ. ಆತ ಬ್ಯಾಂಕಾಕ್​ನಿಂದ ಅಕ್ರಮವಾಗಿ 10 ಅನಕೊಂಡಾ ಹಾವುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

    ಬ್ಯಾಂಕಾಕ್​ನಿಂದ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಲಗೇಜ್​ಗಳನ್ನು ಕಸ್ಟಮ್ಸ್​ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದರು. ಈ ವೇಳೆ ಪ್ರಯಾಣಿಕನೊಬ್ಬನ ಲಗೇಜ್​ ತಪಾಸಣೆ ಮಾಡುವಾಗ 10 ಹಳದಿ ಅನಕೊಂಡ ಪತ್ತೆಯಾಗಿವೆ.

    ಕೂಡಲೇ ಅಧಿಕಾರಿಗಳು ಪ್ರಯಾಣಿಕನನ್ನ ವಶಕ್ಕೆ ಪಡೆದಿದ್ದು, ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳು ಹಳದಿ ಬಣ್ಣ ಆನಕೊಂಡಾ ಹಾವುಗಳನ್ನು ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

    ಇದನ್ನೂ ಓದಿ : ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

    ವನ್ಯಜೀವಿಗಳ ಕಳ್ಳಸಾಗಣೆ ಮಾಡಿದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

    Continue Reading

    bangalore

    ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!

    Published

    on

    ಬೆಂಗಳೂರು: ಬಿಜೆಪಿ ಹಿರಿಯ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಆರು ವರ್ಷಗಳ ಕಾಲ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಿ ಬಿಜೆಪಿ ಶಿಸ್ತು ಸಮಿತಿ ಈ ನಿರ್ಧಾರ ಕೈಗೊಂಡಿದೆ.

    ishwarappaishwarappa

    ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಕೆಎಸ್‌ ಈಶ್ವರಪ್ಪ, ತಮ್ಮ ನಾಮಪತ್ರವನ್ನು ಹಿಂಪಡೆಯಲು ನಿನ್ನೆ(ಎ.22) ಕೊನೆಯ ದಿನವಾಗಿತ್ತು. ಆದರೆ, ಈಶ್ವರಪ್ಪ ನಾಮಪತ್ರವನ್ನು ಹಿಂಪಡೆಯಲು ನಿರಾಕರಿಸಿದ ಕಾರಣ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. ಆರು ವರ್ಷಗಳ ಕಾಲ ಅವರು ಬಿಜೆಪಿ ಪಕ್ಷದಡಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

    ಮುಂದೆ ಓದಿ..; ಚೌಟ ಪರ ಪ್ರಚಾರಕ್ಕೆ ಪುತ್ತೂರಿಗೆ ಬರಲಿದ್ದಾರೆ ಅಣ್ಣಾಮಲೈ

    ಬಿಜೆಪಿ ಪಕ್ಷದಲ್ಲೇ ಇದ್ದುಕೊಂಡ ಕೆ ಎಸ್ ಈಶ್ವರಪ್ಪ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡು ನಿಂದಿಸುತ್ತಿದ್ದರು. ಬಿ ಎಸ್ ಯಡಿಯೂರಪ್ಪ ಮತ್ತು ಅವರ ಕುಟುಂಬ ರಾಜಕಾರಣವನ್ನು ಕೆ ಎಸ್ ಈಶ್ವರಪ್ಪ ತೀವ್ರವಾಗಿ ಟೀಕಿಸುತ್ತಿದ್ದರು. ತನ್ನ ಬೆಂಬಲ ಮೋದಿ ಪ್ರಧಾನಿಗೆ ಇದೆ ಎಂದು ಹೇಳಿಕೊಂಡಿದ್ದ ಈಶ್ವರಪ್ಪ ತಾನು ಗೆದ್ದ ಬಳಿಕ ಮೋದಿಗೆ ಬೆಂಬಲ ನೀಡುವುದಾಗಿ ಹೇಳಿಕೆ ನೀಡುತ್ತಿದ್ದರು. ಆದರೆ ಇದೀಗ ಪಕ್ಷದಿಂದಲೇ ಇವರನ್ನು ಉಚ್ಛಾಟಿಸಲಾಗಿದೆ.

    Continue Reading

    LATEST NEWS

    Trending