Connect with us

DAKSHINA KANNADA

Ullala: ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಮೋರಿಗಳನ್ನು ಒಡೆದಾಕಿದ ಕೋಟೆಕಾರು ಕೌನ್ಸಿಲರ್..!

Published

on

ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಮೋರಿಗಳನ್ನ ಜೆಸಿಬಿಯಲ್ಲಿ ಒಡೆದು, ಕೋಟೆಕಾರು ಕೌನ್ಸಿಲರ್ ಬಿಸಾಕಿದ್ದು, ಮಕ್ಕಳು, ವೃದ್ಧರು ಚರಂಡಿ ದಾಟಲು ಕಷ್ಟ ಪಡುತ್ತಿದ್ದು, ಇಲ್ಲಿಯ ಜನರು ಸದಸ್ಯನಲ್ಲಿ ಈ ಬಗ್ಗೆ ಕೇಳಿದರೆ ಧಮ್ಕಿ ಹಾಕಿದ ಘಟನೆ ಸಾಯಿನಗರ ಎಂಬಲ್ಲಿ ನಡೆದಿದೆ.

ಉಳ್ಳಾಲ: ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಮೋರಿಗಳನ್ನ ಜೆಸಿಬಿಯಲ್ಲಿ ಒಡೆದು, ಕೋಟೆಕಾರು ಕೌನ್ಸಿಲರ್ ಬಿಸಾಕಿದ್ದು, ಮಕ್ಕಳು, ವೃದ್ಧರು ಚರಂಡಿ ದಾಟಲು ಕಷ್ಟ ಪಡುತ್ತಿದ್ದು, ಇಲ್ಲಿಯ ಜನರು ಸದಸ್ಯನಲ್ಲಿ ಈ ಬಗ್ಗೆ ಕೇಳಿದರೆ ಧಮ್ಕಿ ಹಾಕಿದ ಘಟನೆ ಉಳ್ಳಾಲ ಸಾಯಿನಗರ ಎಂಬಲ್ಲಿ ನಡೆದಿದೆ.

 

ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರೋರ್ವರು ಪಂಚಾಯತ್ ಆಡಳಿತದ ಗಮನಕ್ಕೆ ತರದೆ ಚರಂಡಿ ಅಗೆಯೋ ನೆಪದಲ್ಲಿ ಮೋರಿಗಳನ್ನೇ ಒಡೆದು ಬಿಸಾಕಿದ್ದಾರೆ.

ಇದ್ದರಿಂದ ಮಕ್ಕಳು, ವೃದ್ಧರು ಚರಂಡಿ ದಾಟಲು ಕಷ್ಟ ಪಡುತ್ತಿದ್ದಾರೆ.

ಈ ಬಗ್ಗೆ ಪ್ರಶ್ನೆ ಮಾಡಿದ್ರೆ ಧಮ್ಕಿ ಹಾಕುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೋಟೆಕಾರು ಪಟ್ಟಣ ಪಂಚಾಯತ್ನ 11 ನೇ ವಾರ್ಡ್ ನ ಸದಸ್ಯ ಹರೀಶ್ ರಾವ್ ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯ ಎಂತದ್ದು ನೋಡಿ.

ಕಳೆದ ಹತ್ತು ದಿವಸಗಳ ಹಿಂದೆ ಸಾಯಿನಗರಕ್ಕೆ ಬಂದ ಹರೀಶ್ ಚರಂಡಿ ಕಾಮಗಾರಿ ನಡೆಸಲಿಕ್ಕಿದೆ ಎಂದು ಹೇಳಿ ಇಲ್ಲಿನ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮನೆಯವರು ಸ್ವಂತ ಖರ್ಚಲ್ಲಿ ನಿರ್ಮಿಸಿದ್ದ ಮೋರಿಗಳನ್ನ ಜೆಸಿಬಿಯಲ್ಲಿ ಒಡೆದು ಬಿಸಾಕಿದ್ದಾರೆ.

ಸದಸ್ಯರು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆಂದು ಸುಮ್ಮನಿದ್ದ ಸ್ಥಳೀಯರು ಹತ್ತು ದಿವಸಗಳಾದರೂ ಕಾಮಗಾರಿಯೇ ನಡೆಯದ್ದನ್ನು ಕಂಡು ಕೆರಳಿದ್ದಾರೆ.

ಮೋರಿಗಳನ್ನ ಬಿಸಾಕಿದ ಕೌನ್ಸಿಲರ್ ಹರೀಶ್ ಅವರು ಚರಂಡಿ ದಾಟಲು ತಾತ್ಕಾಲಿಕ ವ್ಯವಸ್ಥೆಯನ್ನೂ ಮಾಡಿಲ್ಲವಂತೆ.

ಸ್ಥಳೀಯರೆ ಸೆಂಟ್ರಿಗ್ ಹಲಗೆಗಳನ್ನ ತಂದು ಚರಂಡಿ ದಾಟಲು ವ್ಯವಸ್ಥೆ ಮಾಡಿದ್ದಾರೆ.

ಮೋರಿಗಳಿಲ್ಲದೆ ಮನೆ ಮಂದಿ ತಮ್ಮ ವಾಹನಗಳನ್ನ ಮನೆಯೊಳಗೆ ಕೊಂಡೊಯ್ಯಲು ಸಾಧ್ಯವಾಗದೆ, ಚರಂಡಿ ದಾಟಲು ಬವಣೆ ಪಡುತ್ತಿದ್ದಾರೆ.

ಕಳೆದ ವಾರ ಸುರಿದ ಮಳೆಗೆ ವೃದ್ಧರು ಹಲಗೆಯಲ್ಲಿ ಚರಂಡಿ ದಾಟುತ್ತಿದ್ದ ವೇಳೆ ಬಿದ್ದು ಗಾಯಗೊಂಡಿದ್ದಾರೆ.

ಪಟ್ಟಣ ಸದಸ್ಯರು ಕೈಗೊಂಡಿರುವ ಕಾಮಗಾರಿಯ ಬಗ್ಗೆ ಪಂಚಾಯತ್ ಅಧಿಕಾರಿಗಳಲ್ಲಿ ಸ್ಥಳೀಯರು ಕೇಳಿದ್ದು ಚರಂಡಿ ಅಗೆಯಲು ಯಾವುದೇ ಅನುದಾನ, ಟೆಂಡರ್ ಆಗಿಲ್ಲವೆಂದು ಅಧಿಕಾರಿಗಳು ಹೇಳಿದ್ದಾರಂತೆ.

ಕೌನ್ಸಿಲರ್ ಹರೀಶ್ ಸ್ವಯಂ ಹಿತಾಸಕ್ತಿಯಿಂದ ಮನೆಗಳ ಸಂಪರ್ಕದ ಮೋರಿಗಳನ್ನ ಒಡೆದು ಹಾಕಿದ್ದು ಕೇಳಲು ಹೋದವರಲ್ಲಿ ನಿಮ್ಮನ್ನ ನೋಡಿ ಕೊಳ್ಳುತ್ತೇನೆಂದು ಧಮ್ಕಿ ಹಾಕುತ್ತಿದ್ದು, ನಮ್ಮ ಸಮಸ್ಯೆ ಬಗೆ ಹರಿಸದಿದ್ದರೆ ನಾವೆಲ್ಲರೂ ಪಟ್ಟಣ ಪಂಚಾಯತ್ಗೆ ಮುತ್ತಿಗೆ ಹಾಕಿ ಧರಣಿ ನಡೆಸುತ್ತೇವೆಂದು ಸ್ಥಳೀಯ ನಿವಾಸಿ ಬಿಜು ಜಾರ್ಜ್ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ರಾತ್ರಿಯೂ ಕೌನ್ಸಿಲರ್ ಹರೀಶ್ ಸ್ಥಳಕ್ಕೆ ಬಂದು ಚರಂಡಿ ದಾಟಲು ಹಾಕಿದ್ದ ಸೆಂಟ್ರಿಗ್ ಹಲಗೆಗಳನ್ನು ಕೊಂಡೊಯ್ದಿದ್ದು ಮನೆ ಮಂದಿ ಕುರ್ಚಿ, ಸ್ಟೂಲ್, ಏಣಿಗಳನ್ನು ಇಟ್ಟು ಚರಂಡಿ ದಾಟುವಂತಾಗಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ಪ್ರತಿ ಮಹಿಳೆಗೆ ಸಿಗುತ್ತೆ 3 ಲಕ್ಷ ರೂಪಾಯಿ..! ಈ ಹಣ ಸಿಗಲು ಹೀಗೆ ಮಾಡಿ ಸಾಕು!

Published

on

ಮಂಗಳೂರು: ಕೇಂದ್ರ ಸರ್ಕಾರ ಕೆಲವು ರೀತಿಯ ವ್ಯಾಪಾರ ಮಾಡುವವರಿಗೆ ರೂ.3 ಲಕ್ಷ ದರದಲ್ಲಿ ಹಣ ನೀಡುತ್ತಿದೆ. ಆ ಯೋಜನೆಯ ಹೆಸರು ಎಂಪ್ಲಾಯಿ ಸ್ಕೀಮ್. ಈ ಬ್ಯುಸಿನೆಸ್‌‌ ಮಾಡುವವರು ಮಹಿಳೆಯರೇ ಆಗಿರಬೇಕು ಎಂಬುದು ಷರತ್ತು. ಇದು ಕೇವಲ ಮಹಿಳೆಯರಿಗಾಗಿ ಮಾತ್ರ ಇರುವ ಸ್ಕೀಂ ಆಗಿದ್ದು ಪುರುಷರು ಇದರ ಲಾಭ ಪಡೆಯಲಾರರು.

 

ಟೀ ಸ್ಟಾಲ್ ಹಾಕಿಕೊಂಡು ಕೇಂದ್ರ ಸರ್ಕಾರದಿಂದ ರೂ.1 ಲಕ್ಷದಿಂದ ರೂ.3 ಲಕ್ಷ ಸಾಲ ಪಡೆಯಬಹುದು. ಇದರಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮಹಿಳೆಯರಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಅಂದರೆ ರೂ.3 ಲಕ್ಷ ಸಾಲ ತೆಗೆದುಕೊಂಡರೆ ರೂ.1.5 ಲಕ್ಷ ಮಾತ್ರ ಬ್ಯಾಂಕಿಗೆ ಹಿಂತಿರುಗಿಸಬೇಕಾಗುತ್ತದೆ . ಸಾಲ ಪಡೆಯುವ ಮಹಿಳೆ ವಿಶೇಷ ವರ್ಗ ಅಥವಾ ಸಾಮಾನ್ಯ ವರ್ಗದವರಾಗಿದ್ದರೆ, ಸಾಲದ ಮೇಲಿನ ಸಬ್ಸಿಡಿ 305 ಇರಲಿದೆ. ಹೀಗಾಗಿ ಸಾಮಾನ್ಯ ವರ್ಗದ ಮಹಿಳೆಯರು ರೂ.2.1 ಲಕ್ಷವನ್ನು ಹಿಂದಿರುಗಿಸಬೇಕು.

ಈ ಯೋಜನೆಯಡಿ ಸಾಲ ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು. ಒಂಟಿ ಮಹಿಳೆಯರು ಮತ್ತು ಅಂಗವಿಕಲ ಮಹಿಳೆಯರಿಗೆ ಕುಟುಂಬದ ಆದಾಯ ಮಿತಿ ಇಲ್ಲ. ಈ ಸಾಲ ನೀಡುವಾಗ SC/ST ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಮಹಿಳೆಯ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬಹುದು. ಸಾಲ ಪಡೆಯಬಯಸುವ ಮಹಿಳೆಯರು ಬ್ಯಾಂಕ್‌ಗಳಲ್ಲಿ ಪಡೆದಿರುವ ಸಾಲವನ್ನು ಸಕಾಲದಲ್ಲಿ ಪಾವತಿಸಬೇಕು.

ಸಾಲ ಪಡೆಯಲು ಅಗತ್ಯವಿರುವ ದಾಖಲೆಗಳು:

ಯೋಜನೆಯಡಿಯಲ್ಲಿ ಸಾಲ ಪಡೆಯಲು ಉದ್ಯೋಗಿಗೆ ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಜನನ ಪ್ರಮಾಣಪತ್ರ, ವಿಳಾಸ ಪುರಾವೆ, ಆದಾಯ ಪ್ರಮಾಣಪತ್ರ, ಪಡಿತರ ಚೀಟಿ, ಬಿಪಿಎಲ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕದ ನಕಲು ಮತ್ತು ಇತರೆ ಬ್ಯಾಂಕ್‌ಗೆ ಅಗತ್ಯವಿರುವ ದಾಖಲೆಗಳು ಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗಿ ಯೋಜನೆಯನ್ನು ಪಡೆಯಲು ಬಯಸುವ ಮಹಿಳೆಯರು ತಮ್ಮ ಹತ್ತಿರದ ಬ್ಯಾಂಕ್‌ನ್ನು ಸಂಪರ್ಕಿಸಬೇಕಾಗುತ್ತದೆ. ಬಳಿಕ ಬ್ಯಾಂಕ್‌ನವರು ಹೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಬ್ಯಾಂಕ್‌ನವರು ನೀಡುವ ಅರ್ಜಿ ನಮೂನೆಯನ್ನೂ  ಪೂರ್ಣಗೊಳಿಸಬೇಕು. ಬಳಿಕ ಎಲ್ಲವನ್ನೂ ಪರಿಶೀಲಿಸಿ ಅರ್ಹತೆ ಇದ್ದಲ್ಲಿ ಈ ಸಾಲ ನೀಡಲಾಗುತ್ತದೆ. ಇಲ್ಲವೇ.. ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ಗಳಲ್ಲೂ ಅರ್ಜಿ ಸಲ್ಲಿಸಬಹುದು. ಹಾಗಾಗಿ ಆನ್‌ಲೈನ್‌ಗಿಂತ ನೇರವಾಗಿ ಹೋಗಿ ಕೇಳುವ ಮೂಲಕ ಕೆಲಸವನ್ನು ವೇಗವಾಗಿ ಮುಗಿಸಬಹುದು.

Continue Reading

DAKSHINA KANNADA

ಸ್ಕೂಟರ್ ಸವಾರರ ಮೇಲೆ ಹರಿದ ಟಿಪ್ಪರ್; 17 ವರ್ಷದ ಬಾಲಕ ಸಾ*ವು, ಇಬ್ಬರಿಗೆ ಗಂಭೀ*ರ ಗಾಯ

Published

on

ಮಂಗಳೂರು : ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ವೇಳೆ ಸ್ಕೂಟರ್ ಸವಾರರ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಮೃ*ತಪಟ್ಟು, ಇಬ್ಬರು ಗಂಭೀ*ರ ಗಾ*ಯಗೊಂಡ ಘಟನೆ ರಾ.ಹೆ.75ರ ಪಡೀಲ್ ಸಮೀಪದ ನಾಗುರಿ-ಅಳಪೆಯ ಮಧ್ಯೆ ನಡೆದಿದೆ.


ಮೃ*ತರನ್ನು ಎಕ್ಕೂರು ನಿವಾಸಿ 17 ವರ್ಷದ ಹರ್ಷನ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಂಭೀ*ರವಾಗಿ ಗಾಯಗೊಂಡ 17 ವರ್ಷದ ಕೀರ್ತನ್ ಮತ್ತು 18 ವರ್ಷದ ಕಿಶೋರ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಡೀಲ್‌ನಿಂದ ಪಂಪ್‌ವೆಲ್‌ಗೆ ತೆರಳುತ್ತಿದ್ದ ಸ್ಕೂಟರ್ ನಾಗುರಿ-ಅಳಪೆಯ ರಸ್ತೆ ಮಧ್ಯೆ ಸ್ಕಿಡ್ ಆಗಿ ಹೆದ್ದಾರಿಗೆ ಮಗುಚಿ ಬಿದ್ದಿದೆ. ಈ ವೇಳೆ ಸ್ಕೂಟರ್‌ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟರು. ಈ ಸಂದರ್ಭ ಅದೇ ರಸ್ತೆಯಲ್ಲಿ ಚಲಿಸುತ್ತಿದ್ದ ಟಿಪ್ಪರ್ ಹರ್ಷನ್ ಮೇಲೆ ಹರಿದಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ನಗರದ ದಕ್ಷಿಣ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

DAKSHINA KANNADA

ಮಂಗಳೂರಿನಲ್ಲಿ ಬೆಳಕಿಗೆ ಬಂತು ಬಹುದೊಡ್ಡ ಆನ್ಲೈನ್ ವಂಚನೆ ಪ್ರಕರಣ; ಕೋಟಿಗಟ್ಟಲೆ ಕಳೆದುಕೊಂಡ ನಿವೃತ್ತ ಇಂಜಿನಿಯರ್

Published

on

ಮಂಗಳೂರು : ಇತ್ತೀಚೆಗೆ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬೀಳುತ್ತಿರೋದು ವಿಪರ್ಯಾಸ. ಇದೀಗ ಮಂಗಳೂರಿನಲ್ಲಿ ಮತ್ತೊಂದು ಪ್ರಕರಣ ನಡೆದಿದೆ. ಇಲ್ಲಿ 72 ವರ್ಷದ ನಿವೃತ್ತ ಇಂಜಿನಿಯರ್‌ ಒಬ್ಬರು ಸಾವಿರ  ಅಲ್ಲ, ಲಕ್ಷ ಅಲ್ಲ ಬರೋಬ್ಬರಿ 1.60 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.


ಮುಂಬೈ ಕ್ರೈಂ ಬ್ರಾಂಚ್ ಹೆಸರಲ್ಲಿ ವಂಚನೆ:

ಮುಂಬೈ ಕ್ರೈಂ ಬ್ರಾಂಚ್ ಮತ್ತು ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಆನ್‌ಲೈನ್ ವಂಚಕರು ನಿವೃತ್ತ ಇಂಜಿನಿಯರ್ ಗೆ ಬೆದರಿಕೆ ಒಡ್ಡಿದ್ದಾರೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಕಳುಹಿಸಲಾದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಹೇಳಿದ್ದಾರೆ.

ಫೋನ್ ಮಾಡಿದ ಅಪರಿಚಿತ ವ್ಯಕ್ತಿ ತನ್ನ ಹೆಸರು ರಾಜೇಶ್ ಕುಮಾರ್ ಮತ್ತು ಫೆಡೆಕ್ಸ್ ಕಂಪನಿಯಿಂದ ಕರೆ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ನೀವು ಥೈಲ್ಯಾಂಡ್‌ಗೆ ಕಳುಹಿಸಿದ್ದ ಪಾರ್ಸೆಲ್ ನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ. ಇದು ಅಫ್ಘಾನಿಸ್ತಾನ ಮತ್ತು ಕೀನ್ಯಾದ ಐದು ಪಾಸ್‌ಪೋರ್ಟ್‌ಗಳನ್ನು, ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿದೆ. 140 ಗ್ರಾಂ ಎಂಡಿಎಂಎ ಔಷಧ, ನಾಲ್ಕು ಕಿಲೋ ಬಟ್ಟೆ ಮತ್ತು ಲ್ಯಾಪ್‌ಟಾಪ್ ಹೊಂದಿದೆ. ಮುಂಬೈ ಅಪರಾಧ ವಿಭಾಗವು ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಖತರ್ನಾಕ್ ವಂಚಕ ಹೆದರಿಸಿದ್ದಾನೆ.

ಮುಂಬೈ ಕ್ರೈಂ ಬ್ರಾಂಚ್ ಅಧಿಕಾರಿ ಎಂದು ಹೇಳಿಕೊಂಡ ಇನ್ನೊಬ್ಬ ವ್ಯಕ್ತಿ ಸಿಬಿಐ ಅಧಿಕಾರಿ ರುದ್ರ ರಾಥೋಡ್ ಹೆಚ್ಚುವರಿ ಮಾಹಿತಿಯನ್ನು ನೀಡಲಿದ್ದಾರೆ ಮತ್ತು ಇ-ಮೇಲ್ ಮೂಲಕ rathoreb@21 ಗೆ ಸಂಪರ್ಕಿಸಲು ನಿವೃತ್ತ ಎಂಜಿನಿಯರ್​​​ಗೆ ಸೂಚಿಸಿದ್ದಾರೆ. ನಂತರ ರುದ್ರ ರಾಥೋಡ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಕರೆ ಮಾಡಿ ಹಲವು ಮಕ್ಕಳನ್ನು ಹತ್ಯೆಗೈದ ತಂಡ ಈ ಪ್ರಕರಣದಲ್ಲಿ ಶಾಮೀಲಾಗಿದೆ ಎಂದು ತಿಳಿಸಿದ್ದಾನೆ. ಜತೆಗೆ, ನೀವು ತನಿಖೆಗೆ ಸಹಕರಿಸದಿದ್ದರೆ ನಿಮ್ಮ ಮಗ ಮತ್ತು ಮಗಳನ್ನು ಇಂಟರ್‌ಪೋಲ್ ಮೂಲಕ ಬಂಧಿಸಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.

ಖದೀಮರ ಫೋನ್ ಕರೆಗೆ ನಿವೃತ್ತ ಎಂಜಿನಿಯರ್ ಭಯಭೀತರಾಗಿದ್ದಾರೆ. ಇದು ಮೋಸದ ಕರೆ ಎಂಬುದೂ ಭೀತಿಯಲ್ಲಿ ಅವರಿಗೆ ಅರಿವಾಗಿರಲಿಲ್ಲ. ವಂಚಕರು ಸ್ಕೈಪ್ ಖಾತೆ ತೆರೆಯುವಂತೆ ಒತ್ತಾಯಿಸಿದ್ದಾರೆ. ಸ್ಕೈಪ್ ಅಪ್ಲಿಕೇಶನ್‌ನಲ್ಲಿ ಸಿಬಿಐ ಅಧಿಕಾರಿಗಳಂತೆ ಪೋಸ್ ನೀಡಿ ಹಲವಾರು ನೋಟಿಸ್‌ಗಳನ್ನು ಕಳುಹಿಸಿದ್ದಾರೆ. ಬಂಧನದಿಂದ ಬಚಾವಾಗಬೇಕಾದರೆ ಬಾಂಡ್‌ಗಳ ರೂಪದಲ್ಲಿ ಹಣವನ್ನು ಕಳುಹಿಸುವಂತೆ ಹೇಳಿದ್ದಾರೆ. ಅಷ್ಟೇ ಅಲ್ಲದೇ, ಪ್ರಕರಣದ ತನಿಖೆ ಪೂರ್ಣಗೊಂಡ ನಂತರ ಮೊತ್ತವನ್ನು ಹಿಂದಿರುಗಿಸುವುದಾಗಿ ನಿವೃತ್ತ ಎಂಜಿನಿಯರ್‌ಗೆ ಭರವಸೆ ನೀಡಿದ್ದರು. ತನಗೆ ಮತ್ತು ಮಕ್ಕಳಿಗೆ ಹಾನಿ ಮಾಡಬೇಡಿ ಎಂದು ಮನವಿ ಮಾಡಿದ ಎಂಜಿನಿಯರ್, ಐಸಿಐಸಿಐ ಬ್ಯಾಂಕ್ ಖಾತೆಯಿಂದ ಮೇ 2 ರಂದು 1.1 ಕೋಟಿ ರೂ. ಮತ್ತು ಮೇ 6 ರಂದು 50 ಲಕ್ಷ ರೂ. ಗಳನ್ನು ಹಣ ವರ್ಗಾವಣೆ ಮಾಡಿದ್ದರು.

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ತಲೆಮರಿಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್

ಮರುದಿನ ಅಪರಿಚಿತರಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹೀಗಾಗಿ ಅವರು ತನ್ನ ಮಗಳಿಗೆ ಮಾಹಿತಿ ನೀಡಿದ್ದು, ತಾವು ವಂಚನೆಗೊಳಗಾಗಿರುವುದು ಅವರಿಗೆ ಅರಿವಾಗಿದೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಪುತ್ತೂರು ವಂಚನೆ ಪ್ರಕರಣ ನೆನಪಿಸಿದ ಕೇಸ್:

ಈಗಾಗಲೇ ಹಲವಾರು ಆನ್ ಲೈನ್ ವಂಚನೆ ಪ್ರಕರಣ ನಡೆಯುತ್ತಿವೆ. ಮಾರ್ಚ್ ತಿಂಗಳಲ್ಲಿ ವೈದ್ಯರೊಬ್ಬರು ವಂಚನೆಗೊಗಾಗಿದ್ದರು. ಪುತ್ತೂರು ನಗರದ ಬೊಳ್ವಾರು ನಿವಾಸಿ ಡಾ. ಚಿದಂಬರ ಅಡಿಗ ವಂಚನೆಗೊಳಗಾಗಿದ್ದರು. ಮಾ.28 ರಂದು ಬೆಳಗ್ಗೆ, ಅಪರಿಚಿತ ವ್ಯಕ್ತಿಯಿಂದ ಫೋನ್ ಕರೆ ಮಾಡಿ ದೆಹಲಿ ಪೊಲೀಸ್ ಎಂಬುದಾಗಿ ನಂಬಿಸಿದ್ದಾನೆ.   ನಿಮ್ಮ ಮೇಲೆ ದೆಹಲಿಯಲ್ಲಿ ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಹಾಗೂ ಅಕ್ರಮ ಹಣ ಹೊಂದಿರುವ ಬಗ್ಗೆ ಮತ್ತು ಮಾನವ ಕಳ್ಳ ಸಾಗಾಣಿಕ ಪ್ರಕರಣ ದಾಖಲಾಗಿ, ಅರೆಸ್ಟ್ ಮಾಡಲು ಕೋರ್ಟ್ ನಿಂದ ವಾರಂಟ್ ಎಂದು ಹೇಳಿ, ನೀವು ದೆಹಲಿಯ ಸಿಬಿಐ ಕೋರ್ಟ್ ಗೆ ಹಾಜರಾಗಬೇಕು. ನಿಮಗೆ ಇಲ್ಲಿಗೆ ಬರಲು ಆಗದಿದ್ದರೆ ಈಗ ಆನ್ಸೆನ್ ಮೂಲಕ ಕೋರ್ಟ್ ನ ಕೇಸ್ ನಡೆಸುತ್ತೇವೆ. ನೀವು ನಿಮ್ಮ ಬ್ಯಾಂಕ್ ಅಕೌಂಟ್ ನಲ್ಲಿದ್ದ ಹಣವನ್ನು ನಾನು ಹೇಳುವ ಅಕೌಂಟ್ ನಂಬರ್ ಗೆ ವರ್ಗಾವಣೆ ಮಾಡಬೇಕು.

ನಿಮ್ಮ ಕೋರ್ಟ್ ಕೆಲಸ ಮುಗಿದ ಮೇಲೆ ನಿಮಗೆ ನಿಮ್ಮ ಹಣ ವಾಪಾಸು ಸಿಗುತ್ತದೆ, ಇಲ್ಲದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಎಂಬುದಾಗಿ ತಿಳಿಸಿದ್ದಾರೆ. ದೂರುದಾರರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿರುವಂತೆ ಬಿಂಬಿಸುವ ಕೆಲವೊಂದು ದಾಖಲೆಗಳನ್ನು ಅಡಿಗ ರವರ ಮೊಬೈಲ್ ಫೋನ್ ನ ವಾಟ್ಸ್ ಆಪ್ ಗೆ ಕಳುಹಿಸಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ : ಆನ್‌ಲೈನ್ ಮೋಸದ ಜಾಲಕ್ಕೆ ಬಿದ್ದು ಲಕ್ಷಗಟ್ಟಲೆ ಹಣ ಕಳೆದುಕೊಂಡ ಪುತ್ತೂರಿನ ವೈದ್ಯ..! ಕೇಸ್‌ಗೆ ಭಯಬಿದ್ರಾ ವೈದ್ಯ..!!
ಅಪರಿಚಿತನ ಮಾತನ್ನು ನಂಬಿ, ಗಾಬರಿಗೊಂಡು ಅಡಿಗ ತಮ್ಮ ಬ್ಯಾಂಕ್ ಖಾತೆಯಿಂದ, RTGS ಮೂಲಕ ಸದರಿ ಅಪರಿಚಿತ ತಿಳಿಸಿದ ಬ್ಯಾಂಕ್ ಖಾತೆಗೆ ರೂ 16,50,000/- ಹಣವನ್ನು ವರ್ಗಾವಣೆ ಮಾಡಿ ಮೋಸ ಹೋಗಿದ್ದರು.

Continue Reading

LATEST NEWS

Trending