HomeLATEST NEWSಉಡುಪಿ ಪಡುಬಿದ್ರೆಯಲ್ಲಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ಸವಾರರಿಬ್ಬರು ಮೃತ್ಯು..!

ಉಡುಪಿ ಪಡುಬಿದ್ರೆಯಲ್ಲಿ ಬೈಕಿಗೆ ಟ್ಯಾಂಕರ್ ಢಿಕ್ಕಿ; ಸವಾರರಿಬ್ಬರು ಮೃತ್ಯು..!

ಉಡುಪಿ : ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಉಚ್ಚಿಲದಲ್ಲಿ ಶನಿವಾರ ಸಂಜೆ ನಡೆದಿದೆ.

ಮೃತರನ್ನು ಫಲಿಮಾರು ಅವರಾಲುಮಟ್ಟುವಿನ ಅಡ್ಕ ಸುಬ್ರಹ್ಮಣ್ಯ (30) ಮತ್ತು ಗಿರೀಶ್ (26) ಎಂದು ಗುರುತಿಸಲಾಗಿದೆ.

ಉಡುಪಿ ಕಡೆಯಿಂದ ಪಡುಬಿದ್ರೆ ಕಡೆಗೆ ಇವರಿಬ್ಬರು ಸಂಚರಿಸುತ್ತಿದ್ದು, ಇದೇ ವೇಳೆ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆಯಿತು

ಮೂಳೂರಿನ ನರ್ಸರಿ ಬಳಿ ಈ ಅಪಘಾತ ಸಂಭವಿಸಿದ್ದು ಬೈಕ್‌ಗೆ ಟ್ಯಾಂಕರ್ ಢಿಕ್ಕಿ ಹೊಡೆದು ಅದರ ಚಕ್ರಕ್ಕೆ ಸಿಲುಕಿದ್ದರು.


ಸುಬ್ರಹ್ಮಣ್ಯ ಅವರು ಸ್ಥಳದಲ್ಲೇ ಮೃತಪಟ್ಟರೆ, ಗಂಭೀರ ಗಾಯಗೊಂಡ ಗಿರೀಶ್‌ ರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟದ್ದಾರೆ ಎಂದು ತಿಳಿದು ಬಂದಿದೆ.

ಕಾಪು ವೃತ್ತ ನಿರೀಕ್ಷಕ ಕೆ. ಸಿ ಪೂವಯ್ಯ ಪುರುಷೋತ್ತಮ್ ಪಡುಬಿದ್ರಿ ಠಾಣಾಧಿಕಾರಿ ಘಟನಾ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Latest articles

ಕಾಸರಗೋಡು: ಎಮರ್ಜೆನ್ಸಿಲೈಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ- ಓರ್ವನ ಬಂಧನ..!

ಅಕ್ರಮ ಚಿನ್ನ ಸಾಗಾಟಕ್ಕೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಡಿ ವೈ ಎಸ್ಪಿ ಪಿ. ಬಾಲಕೃಷ್ಣನ್ ನೇತೃತ್ವದ ಪೊಲೀಸರು...

ಯಾದಗಿರಿ: ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ- ಐದು ಮಂದಿ ಸ್ಥಳದಲ್ಲೇ ಸಾವು…!

ನಿಂತಿದ್ದ ಲಾರಿಗೆ ಕ್ರೂಷರ್ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು, 13 ಮಂದಿಗೆ ಗಾಯಗಳಾಗಿರುವ ಘಟನೆ...

ಬಂಟ್ವಾಳ ವಿಟ್ಲದಲ್ಲಿ ರಸ್ತೆಗೆ ಅಡ್ಡ ಬಂದ ದನ : ಆಟೋ ರಿಕ್ಷಾ ಪಲ್ಟಿ-50 ಲೀಟರ್ ಹಾಲು ನಷ್ಟ..!

ಸಾರಡ್ಕ - ಪುಣಚ ರಸ್ತೆಯ ತೋರಣಕಟ್ಟೆಯ ಸೊಸೈಟಿಯ ಸಮೀಪ ಮಂಗಳವಾರ ದನ ರಸ್ತೆಯಲ್ಲಿ ಅಡ್ಡ ಬಂದ ಹಿನ್ನಲೆಯಲ್ಲಿ ಹಾಲು...

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...