HomeLATEST NEWSಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ವಶ

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ವಶ

ಉಡುಪಿ: ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 4 ಲಕ್ಷ ರೂ. ಹಣವನ್ನು ಪೊಲೀಸರು ನಿನ್ನೆ ವಶಪಡಿಸಿಕೊಂಡ ಘಟನೆ ಉಡುಪಿಯ ಮೂಡುತೋನ್ಸೆ ಗ್ರಾಮದ ನೇಜಾರು ಚೆಕ್ ಪೋಸ್ಟ್‌ನಲ್ಲಿ ನಡೆದಿದೆ.


ಉಡುಪಿ ಪೊಲೀಸ್ ಠಾಣೆಯ ಪಿಎಸ್‌ಐ ಸುಷ್ಮಾ ಜಿ ಭಂಡಾರಿಯವರ ನೇತೃತ್ವದಲ್ಲಿ ಮಾ.24 ರಂದು ವಾಹನ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಕೆಮ್ಮಣ್ಣು ಕಡೆಯಿಂದ ಸಂತೆಕಟ್ಟೆ ಕಡೆಗೆ ಬರುತ್ತಿದ್ದ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಲಾಗಿದೆ. ಕಾರಿನಲ್ಲಿ ಸಂತೋಷ್ ಕಿರಣ್ ಲೋಬೋ ಹಾಗೂ ರೇಖಾ ಲೋಬೋ ಪ್ರಯಾಣಿಸುತ್ತಿದ್ದರು.

ಕಾರಿನ ಡಿಕ್ಕಿನಲ್ಲಿದ್ದ ತಪಾಸಣೆ ನಡೆಸುತ್ತಿದ್ದಾಗ ಅದರಲ್ಲಿದ್ದ ಬ್ಯಾಗಿನೊಳಗೆ 500 ರೂ ಮುಖ ಬೆಲೆಯ ನೋಟುಗಳಿರುವ ಒಟ್ಟು 8 ಕಟ್ಟು ಇದ್ದು, ಒಟ್ಟು 4 ಲಕ್ಷ ಹಣವಿತ್ತು. ಚುನಾವಣೆಯ ಸಮಯವಾದುದರಿಂದ ಮೇಲಾಧಿಕಾರಿಯವರ ಆದೇಶದಂತೆ ಸದ್ರಿ ಹಣವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest articles

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಎಫೆಕ್ಟ್- ಮುಂಗಾರು ಮತ್ತಷ್ಟು ವಿಳಂಬ ಸಾಧ್ಯತೆ..!

ಜೂನ್ ಎರಡನೇ ವಾರಕ್ಕೆ ಕಾಲಿಟ್ಟರೂ ಮುಂಗಾರು ಮಳೆಯ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಹವಾಮಾನ ಇಲಾಖೆಯ ಪ್ರಕಾರ ಈ ಬಾರಿ...

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಕಿರುಕುಳ, ಕೇಸುಗಳಿಗೆ ಖಂಡನೆ – ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ

ಜನಪರ ಹೋರಾಟಗಾರ, ಬೀದಿ ವ್ಯಾಪಾರಿಗಳ ಮುಂದಾಳು ಬಿ ಕೆ ಇಮ್ತಿಯಾಝ್‌ ಮತ್ತು ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಾಸ್...

ರಾಮನಗರ: ಟೋಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ- ಯುವಕರ ತಂಡದಿಂದ ಸಿಬಂದಿ ಹತ್ಯೆ..!

ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ...