HomeBANTWALಬಂಟ್ವಾಳ: ಆಸ್ತಿಗಾಗಿ ಹೆತ್ತ ತಾಯಿಯ ಜುಟ್ಟು ಹಿಡಿದು ಮುಖಚಚ್ಚಿದ ಪಾಪಿ ಮಗ

ಬಂಟ್ವಾಳ: ಆಸ್ತಿಗಾಗಿ ಹೆತ್ತ ತಾಯಿಯ ಜುಟ್ಟು ಹಿಡಿದು ಮುಖಚಚ್ಚಿದ ಪಾಪಿ ಮಗ

ಬಂಟ್ವಾಳ: ಆಸ್ತಿಯಲ್ಲಿ ಪಾಲುಕೊಡುವಂತೆ ಹೆತ್ತ ತಾಯಿಗೆ ಬೆದರಿಸಿ ಗಾಯಗೊಳಿಸಿ ಮಗ ಪರಾರಿಯಾದ ಘಟನೆ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಘಟನೆ ವಿವರ
ಮಾ.24 ರಂದು ಇಡ್ಕಿದು ಗ್ರಾಮದ ನಾರಾಯಣ ಗೌಡ ಎಂಬುವವರ ಹಿರಿಯ ಪುತ್ರ ಚೇತನ್‌ ಕುಮಾರ್ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಮನೆಯ ಅಡಿಗೆಕೋಣೆಯಿಂದ ಅಮ್ಮ ರೋಹಿಣಿ ಅಳುವ ಶಬ್ದ ಕೇಳಿಬರುತ್ತಿತ್ತು.

ತಕ್ಷಣ ಅಡುಗೆ ಕೋಣೆಗೆ ಓಡಿಹೋದಾಗ ಅಲ್ಲಿ ತಾಯಿ ರೋಹಿಣಿಯನ್ನು ಚೇತನ್‌ ಅವರ ತಮ್ಮ ಸಚಿನ್‌ ಎಂಬಾತನು ತಲೆ ಕೂದಲು ಹಿಡಿದು, ಮುಖಕ್ಕೆ ಕೈಯಿಂದ ಹೊಡೆಯುತ್ತಾ, ನನಗೆ ಜಾಗದಲ್ಲಿ ಪಾಲುಕೊಡಿ, ಇಲ್ಲದಿದ್ದರೆ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳುತ್ತಿದ್ದನು.

ತಕ್ಷಣ ಇದನ್ನು ತಡೆಯಲು ಚೇತನ್‌ ಮುಂದಾದಾಗ ಸಚಿನ್ ಅಲ್ಲೇ ಇದ್ದ ಚೂರಿಯಿಂದ ಅಮ್ಮನಿಗೆ ಚುಚ್ಚಲು ಮುಂದಾಗಿದ್ದಾನೆ. ಚೇತನ್‌ ಚೂರಿಯನ್ನು ಕಸಿಯುತ್ತಿದ್ದಂತೆ ಅಡುಗೆ ಕೋಣೆಯಲ್ಲಿದ್ದ ಕಲ್ಲನ್ನು ತೆಗೆದು ಚೇತನ್‌ ತಲೆಯ ಹಿಂಬದಿಗೆ ಹೊಡೆದು ಕೈಗೆ ಕಚ್ಚಿ ಓಡಿಹೋಗಿದ್ದಾನೆ. ಆಗ ಆತ “ನೀವು ನನಗೆ ಜಾಗದಲ್ಲಿ ಪಾಲು ಕೊಡದೇ ಇದ್ದಲ್ಲಿ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ” ಎಂದು ಜೀವ ಬೆದರಿಕೆ ಹಾಕಿದ್ದಾನೆ.

ಗಾಯಗೊಂಡ ತಾಯಿ ರೋಹಿಣಿ ಹಾಗೂ ಚೇತನ್‌ರವರನ್ನು ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ಬಗ್ಗೆ ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿದೂರು ದಾಖಲು
ಸಚಿನ್‌ಗೆ ಆತನ ಅಣ್ಣ ಚೇತನ್‌ ಕುಮಾರ್‌ರನ್ನು ಉದ್ದೇಶಿಸಿ “ನನ್ನ ಜಮೀನಿನಲ್ಲಿ ನಿನಗೆ ಪಾಲು ಇಲ್ಲ” ಎಂದು ಹೇಳಿ ತಾಯಿ ರೋಹಿಣಿ ತಂದೆ ಹಾಗೂ ಚಿಕ್ಕಪ್ಪನನ್ನು ಕರೆದು ಎದೆಗೆ ತುಳಿದು ಚೂರಿಯಿಂದ ಇರಿದಿದ್ದಾರೆ. ಇದಕ್ಕೆ ತಾಯಿ ರೋಹಿಣಿ ಸಹಕರಿಸಿದ್ದು, ಹಲ್ಲೆಯಿಂದ ತಪ್ಪಿಸಿಕೊಂಡು ಓಡುತ್ತಿದ್ದಾಗ ತಂದೆ ನಾರಾಯಣ ಗೌಡ “ಈಗ ನೀನು ಓಡಿದ್ದೀಯಾ ನಿನ್ನನ್ನು ಸುಪಾರಿ ಕೊಟ್ಟು ಕೊಲ್ಲದೆ ಬಿಡುವುದಿಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎಂದು ವಿಟ್ಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest articles

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಕಿರುಕುಳ, ಕೇಸುಗಳಿಗೆ ಖಂಡನೆ – ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ

ಜನಪರ ಹೋರಾಟಗಾರ, ಬೀದಿ ವ್ಯಾಪಾರಿಗಳ ಮುಂದಾಳು ಬಿ ಕೆ ಇಮ್ತಿಯಾಝ್‌ ಮತ್ತು ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಾಸ್...

ರಾಮನಗರ: ಟೋಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ- ಯುವಕರ ತಂಡದಿಂದ ಸಿಬಂದಿ ಹತ್ಯೆ..!

ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ...

ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪನ ಮೇಲೆ ಪೊಲೀಸ್ ಕೋಪ..!

ವ್ಯಕ್ತಿಯೊಬ್ಬ ತನ್ನ ಊರಿಗೆ ಬಸ್ ಇಲ್ಲವೆಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ಸನ್ನೇ ಚಲಾಯಿಸಿ ನಿಲ್ದಾಣದಿಂದ ಹೊರಗಿರುವ ಡಿವೈಡರ್...