Connect with us

DAKSHINA KANNADA

15 ಸಾವಿರ ಸಂಬಳ..! ಮನೆಯಲ್ಲಿ ಕಂತೆ ಕಂತೆ ನೋಟು..! ED ಅಧಿಕಾರಿಗಳೇ ಶಾಕ್..!

Published

on

ಮಂಗಳೂರು ( ಜಾರ್ಖಂಡ್‌ ): ಆತ ತಿಂಗಳಿಗೆ 15 ಸಾವಿರ ಸಂಬಳ ಪಡೆಯುವ ಒಬ್ಬ ಸಾಮಾನ್ಯ ನೌಕರ. ಆದ್ರೆ ಆತನ ಮನೆಗೆ ಇಡಿ ದಾಳಿ ಮಾಡಿ ಬರೋಬ್ಬರಿ 30 ಕೋಟಿ ಹಣವನ್ನು ಜಪ್ತಿ ಮಾಡಿದೆ. ಇದು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, ಹತ್ತು ಸಾವಿರ ಲಂಚ ಪ್ರಕರಣದ ಸಂಬಂಧ ತನಿಖೆ ನಡೆಸಿದ್ದ ಇಡಿ  ಸಾಮಾನ್ಯ ನೌಕರನ ಮನಗೆ ದಾಳಿ ಮಾಡಿತ್ತು. ಅಲ್ಲಿ ಅಡಗಿಸಿಟ್ಟಿದ್ದ ಹಣ ನೋಡಿ ಇಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ಹಣ ಎಣಿಸಲು ಮೆಷಿನ್ ಹಾಗೂ ಹೆಚ್ಚುವರಿ ನೌಕರರನ್ನು ಮನೆಗೆ ಕರೆಸಿಕೊಂಡಿದ್ದಾರೆ.

ನೌಕರನ ಮನೆಗೆ ಲಂಚದ ಹಣ…!

ಜಾರ್ಖಂಡ್‌ ನ ಸಚಿವ ಅಲಂಗೀರ್ ಆಲಂ ಅವರ ಖಾಸಗಿ ಕಾರ್ಯದರ್ಶಿ ಮನೆ ಮೇಲೆ ರಾಂಚಿಯ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಲಂಗೀರ್ ಆಲಂ ಅವರ ಸಚಿವಾಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಲ್ಲಿನ ಲಂಚದ ಹಣ ನೌಕರನ ಮನೆಗೆ ಹೋಗುತ್ತದೆ ಅನ್ನೋ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಚಿವರ ಆಪ್ತ ಕಾರ್ಯದರ್ಶಿಯ ಅಡಿಯಲ್ಲಿ ಮಾಸಿಕ 15 ಸಾವಿರಕ್ಕೆ ಕೆಲಸ ಮಾಡುತ್ತಿದ್ದ ನೌಕರನ ಮನೆಗೆ ದಾಳಿ ಮಾಡಿದಾಗ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ.

ವಿಡಿಯೋ ನೋಡಿ :

ಹತ್ತು ಸಾವಿರ ಲಂಚದ ಹಿಂದೆ ಬಿದ್ದಿದ್ದ ಇಡಿ..!

ಕಳೆದ ವರ್ಷ ಹತ್ತು ಸಾವಿರ ರೂಪಾಯಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಇಂಜೀನಿಯರ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಈ ವೇಳೆ ಇಂಜೀನಿಯರ್ ಅವರ ಹೇಳಿಕೆಯನ್ನು ದಾಖಲಿಸಿದಾಗ ಲಂಚದ ಹಣ ಸಚಿವರಿಗೆ ತಲುಪಿಸಲಾಗುತ್ತದೆ ಎಂಬ ಸ್ಪೋಟಕ ಹೇಳಿಕೆ ನೀಡಿದ್ದರು. ಬಳಿಕ ಜಾರ್ಖಂಡ್‌ನ ಗ್ರಾಮೀಣ ಅಭಿವೃದ್ದಿ ಸಚಿವ ಅಲಂಗೀರ್ ಆಲಂ ಹಾಗೂ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಲಾಲ್ ಹೆಸರು ಮುನ್ನಲೆಗೆ ಬಂದಿತ್ತು . ಹೀಗಾಗಿ ಸಂಜೀವ್‌ ಲಾಲ್ ಅವರ ಬಳಿ ನೌಕರನಾಗಿದ್ದ ವ್ಯಕ್ತಿಯ ಮನೆಗೆ ದಾಳಿ ಮಾಡಲಾಗಿದೆ.

ಇದನ್ನೂ ಓದಿ : ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು..!

ಜಾರ್ಖಂಡ್ ಕಾಂಗ್ರೆಸ್ ಸರ್ಕಾರದ ಸಚಿವ…!

ಅಲಂಗೀರ್ ಆಲಂ ಜಾರ್ಖಂಡ್‌ನ ಪಾಕುರ್ ಕ್ಷೇತ್ರದಿಂದ ನಾಲ್ಕು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಮತ್ತು ಗ್ರಾಮೀಣಾಭಿವೃದ್ದಿ ಸಚಿವರಾಗಿದ್ದಾರೆ. ಈ ಹಿಂದೆ 2006 ರಿಂದ 2009 ರ ವರೆಗೆ ಅವರು ಸ್ಪೀಕರ್ ಕೂಡಾ ಆಗಿದ್ದರು. 2023ರ ಡಿಸೆಂಬರ್‌ ತಿಂಗಳಲ್ಲಿ ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಉದ್ಯಮಿ ಧೀರಜ್ ಸಾಹು ಮನೆ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಮನೆಯಲ್ಲಿ 350 ಕೋಟಿಯಷ್ಟು ಹಣ ಪತ್ತೆಯಾಗಿತ್ತು. ಈ ವೇಳೆ ಧೀರಜ್ ಸಾಹು ಅದು ಮದ್ಯದ ವ್ಯವಹಾರದ ಹಣವಾಗಿದ್ದು, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.

BELTHANGADY

ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನ ಬಂಧನ..! ಶಾಸಕ ಪೂಂಜಾ ಪ್ರತಿಭಟನೆ

Published

on

ಬೆಳ್ತಂಗಡಿ : ಅಕ್ರಮ ಕಲ್ಲಿನ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರನ್ನು ರಾತೋರಾತ್ರಿ ಬಂಧಿಸಿದ್ದಾರೆ. ಆದ್ರೆ, ಈ ಬಂಧನವನ್ನು ವಿರೋಧಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಇಡೀ ರಾತ್ರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಬೆಳ್ತಂಗಡಿಯ ಮೆಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬವರ ಜಾಗಕ್ಕೆ ಮೇ 18 ರ ಸಂಜೆ ತಹಶೀಲ್ದಾರ್‌ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಅಕ್ರಮ ಗಣಿಗಾರಿಕೆಯ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರ ಜೊತೆಯಲ್ಲಿ ದಾಳಿಯನ್ನು ನಡೆಸಲಾಗಿತ್ತು. ಈ ವೇಳೆ ಸ್ಥಳದಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ವಿಚಾರ ಪತ್ತೆಯಾಗಿದ್ದು, ಸ್ಥಳದಿಂದ ಒಂದು ಹಿಟಾಚಿ, ಕಂಪ್ರೆಸರ್, ಕಾರು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು. ವಿಚಾರಣೆಯ ವೇಳೆ ಈ ಅಕ್ರಮ ಗಣಿಗಾರಿಕೆ ಬಿಜೆಪಿ ಮುಖಂಡ ಪ್ರಮೋದ್ ದಿಡುಪೆ ಹಾಗೂ ಯುವ ಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್ ಶೆಟ್ಟಿ ಅವರದ್ದು ಎಂದು ಗೊತ್ತಾಗಿತ್ತು.

ಅಕ್ರಮ ಗಣಿಗಾರಿಕೆ ಸಾಬೀತಾದ ಹಿನ್ನೆಲೆಯಲ್ಲಿ ರಾತೋ ರಾತ್ರಿ ಶಶಿರಾಜ್ ಶೆಟ್ಟಿ ಅವರ ಮನೆಗೆ ನುಗ್ಗಿ ಅವರನ್ನು ಬಂಧಿಸಿದ್ದರು. ಈ ವಿಚಾರ ತಿಳಿದು ಠಾಣೆಗೆ ಆಗಮಿಸಿದ ಶಾಸಕ ಹರೀಶ್ ಪೂಂಜಾ, ಶಶಿರಾಜ್ ಶೆಟ್ಟಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ರು. ಆದ್ರೆ, ಶಾಸಕರ ಮಾತಿಗೆ ಒಪ್ಪದ ಪೊಲೀಸರು ಆರೋಪಿಯ ವಿರುದ್ಧ ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ಇದರಿಂದ ಆಕ್ರೋಶಿತರಾದ ಶಾಸಕ ಪೂಂಜಾ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

ಪೊಲೀಸರ ಮೇಲೆ ಕಾಂಗ್ರೆಸ್ ಏಜೆಂಟರ ಆರೋಪ :

ರಾತೋರಾತ್ರಿ ಮನೆಗೆ ನುಗ್ಗಿದ ಪೊಲೀಸರು ಅಕ್ರಮದಲ್ಲಿ ಭಾಗಿಯಾದ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿದ್ದಾರೆ ಅಂತ ಶಾಸಕ ಪೂಂಜಾ ಆರೋಪಿಸಿದ್ದಾರೆ. ಪೊಲೀಸರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸರ್ಕಾರ ಬಂದಾಗ ನೋಡಿಕೊಳ್ಳುವುದಾಗಿ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.

Continue Reading

DAKSHINA KANNADA

‘ಆರ್‌ಸಿಬಿ’ ಸೂಪರ್‌ ಕಮ್‌ಬ್ಯಾಕ್..! ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

Published

on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಡೆ ಮಳೆಯ ಆರ್ಭಟ. ಇನ್ನೊಂದು ಕಡೆ ಸತತ 7 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ಕನಸಲ್ಲಿದ್ದ ತಂಡಕ್ಕೆ ಈ ಪದ್ಯ ಅದೃಷ್ಟವನ್ನು ತಂದುಕೊಟ್ಟಿದೆ. ಒಂದು ಕಡೆ ಪ್ಲೇ ಆಫ್ ಗೆ ಹೋಗಲು ರನ್ ಮಾತ್ರ ಅಲ್ಲ, ನಿಗದಿತ ರನ್ನಿನ ಒಳಗಡೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕಟ್ಟಿ ಹಾಕಬೇಕಿತ್ತು.

 

ಅದೃಷ್ಟ ಹೊತ್ತು ತಂದ ಮಳೆರಾಯ

ಇನ್ನು ವಿಶೇಷ ಅಂದ್ರೆ ಬೆಂಗಳೂರಿನ ಹಲವು ಕಡೆ ಮಳೆರಾಯನ ಆರ್ಭಟ ಜೋರಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.  ಅದೃಷ್ಟ ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಲ್ಪ ಹೊತ್ತಷ್ಟೇ ಮಳೆ ಸುರಿದಿದೆ. ಇದು ಮಳೆರಾಯನ ಕೃಪೆಯೆಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಒಂದು ವೇಳೆ ಮಳೆಯಬ್ಬರ ಜೋರಾಗಿದ್ದು ಪಂದ್ಯ ಮಳೆಗೆ ಆಹುತಿಯಾಗಿದ್ದರೆ ಆರ್‌ಸಿಬಿ ಒಂದು ಆಂಕ ಪಡೆದು ಪಂದ್ಯಕೂಟದಿಂದ ನಿರ್ಗಮಿಸಬೇಕಾಗಿತ್ತು.

ಪ್ಲೇಆಫ್ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಮ್ಯಾಚ್​ನಲ್ಲಿ ಸೋಲುಣಿಸಿ ಇದೀಗ ಟಾಪ್-4 ಹಂತಕ್ಕೇರಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿ ಗ್ರೇಟೆಸ್ಟ್ ಕಂಬ್ಯಾಕ್ ಮಾಡಿದೆ. ಆರ್ಸಿಬಿ ಫ್ಯಾನ್ಸ್ ಗಳ ಹರ್ಷ ಹೇಳತೀರದು. ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

ಇನ್ನೂ ಈ ರೋಚಕ ಪಂದ್ಯ ವನ್ನು ವೀಕ್ಷಿಸಲು ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್, ಕಾಂತಾರ ಸಿನೆಮಾ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಇನ್ನೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡು ಚಿಯರ್‌ ಅಪ್ ಮಾಡಿದ್ದು, ಕ್ಯಾಮೆರಾ ಕಣ್ಣಿಗೆ ಇಬ್ಬರೂ ಪೋಸ್ ನೀಡಿದ್ದಾರೆ. ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಆರ್‌ಸಿಬಿ ಫ್ಯಾನ್‌ ಆಗಿದ್ದು ನಿನ್ನೆಯ ಪಂದ್ಯ ವನ್ನು ವೀಕ್ಷಣೆ ಮಾಡಿದ್ದಾರೆ.

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ನ ಮಹಿಳಾ ತಂಡ ಈ ಬಾರಿಯ ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಮಹಿಳಾ ತಂಡ ಜರ್ಸಿಯನ್ನು ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

ಇನ್ನು ಎಲಿಮಿನೇಟರ್​ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್​ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಜಯ ಗಳಿಸಿದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್​ಗೇರಲಿದೆಯಾ ಎಂದು ಕಾದು ನೋಡಬೇಕಿದೆ.

Continue Reading

DAKSHINA KANNADA

ಅಡುಗೆ ಮನೆಯಲ್ಲಿರುವ ಈ ಒಂದು ವಸ್ತುವನ್ನು ಪ್ರತಿದಿನ ಲಕ್ಷ್ಮೀಗೆ ಅರ್ಪಿಸಿ

Published

on

ಮಂಗಳೂರು: ಲಕ್ಷ್ಮೀ ನಿಮಗೆ ಒಲಿದರೆ ಆ ವ್ಯಕ್ತಿಗಳು ಐಶ್ವರ್ಯ  ದೊರೆತು ಲಕ್ಷ್ಮೀ ಪುತ್ರ ಎನಿಸಿಕೊಳ್ಳುತ್ತಾರೆ. ಲಕ್ಷ್ಮೀಯನ್ನು ಮೆಚ್ಚಿಸಲು ನಿಮ್ಮ ಅಡುಗೆ ಮನೆಯಲ್ಲಿರುವ ಒಂದು ವಸ್ತುವನ್ನು ಆಕೆಗೆ ಅರ್ಪಿಸಿದರೆ ಸಾಕು.

ಮನೆಯ ವಾಸ್ತುವಿಗೂ ಮನೆಯಲ್ಲಿರುವ ವಸ್ತುಗಳಿಗೂ ಸಂಬಂಧ ಇದೆ. ವಿಶೇಷವಾಗಿ ಅಡುಗೆ ಮನೆಯಲ್ಲಿರುವ ವಸ್ತುಗಳಿಗೂ ವಾಸ್ತುವಿಗೂ ಸಂಬಂಧ ಇದೆ. ಅಡುಗೆ ಮನೆಯಲ್ಲಿರುವ ಕೆಲವು ವಸ್ತುಗಳನ್ನು ಜ್ಯೋತಿಷ್ಯದಲ್ಲಿ ಪರಿಹಾರವಾಗಿ ಬಳಸಲಾಗುತ್ತದೆ. ಅಂತಹ ಒಂದು ವಸ್ತು ಯಾವುದೆಂದರೆ ಅದು ಕೊತ್ತಂಬರಿ.

ಪ್ರಮುಖ ಸಂಬಾರ ಪದಾರ್ಥವಾದ ಕೊತ್ತಂಬರಿಯನ್ನು ವಾಸ್ತು ಪರಿಹಾರವಾಗಿಯೂ ಬಳಸುತ್ತಾರೆ. ಜೊತೆಗೆ ಕೊತ್ತಂಬರಿ ಸೊಪ್ಪನ್ನು ವಾಸ್ತು ಪರಿಹಾರದಲ್ಲಿ ಬಳಸಲಾಗುತ್ತದೆ. ಈ ವಸ್ತುಗಳನ್ನು ಸರಿಯಾಗಿ ಬಳಸಿದರೆ ನಿಮ್ಮ ಜೀವನ ಬದಲಾಗಬಹುದು

ಬಹಳಷ್ಟು ಕಡೆ ಲಕ್ಷ್ಮೀಗೆ ಧನಿಯಾ ಕಾಳನ್ನು ಅರ್ಪಿಸಲಾಗುತ್ತದೆ. ಲಕ್ಷ್ಮೀಗೆ ಧನಿಯಾ ಬಹಳ ಇಷ್ಟ ಎಂಬ ನಂಬಿಕೆ ಇದೆ. ದೀಪಾವಳಿ ಹಬ್ಬದಂದು ಲಕ್ಷ್ಮೀಗೆ ಈ ಧನಿಯಾವನ್ನು ಅರ್ಪಿಸಲಾಗುತ್ತದೆ. ಪೂಜೆಯ ನಂತರ ಲಕ್ಷ್ಮೀಗೆ ಅರ್ಪಿಸಿದ ಈ ಧನಿಯಾವನ್ನು ಸುರಕ್ಷಿತವಾಗಿ ಇಡಬೇಕು. ಹೀಗೆ ಪ್ರತಿದಿನ ಲಕ್ಷ್ಮೀ ದೇವಿಗೆ ಧನಿಯಾವನ್ನು ಇಟ್ಟರೆ ಮನೆಯಲ್ಲಿ ಸುಖ-ಶಾಂತಿ-ಸಮೃದ್ಧಿ ಆಗುತ್ತದೆ ಎನ್ನುವ ನಂಬಿಕೆ ಇದೆ.

Continue Reading

LATEST NEWS

Trending