Connect with us

  DAKSHINA KANNADA

  ”ನಮ್ಮ ಕಂಬಳ ಪ್ರಶಸ್ತಿ ಪ್ರದಾನ 2024”ರ ಸಂಭ್ರಮ; ಕಂಬಳ ಸಾಧಕರನ್ನು ಗುರುತಿಸಿ ಗೌರವಿಸಿದ “ನಮ್ಮ ಕುಡ್ಲ”

  Published

  on

  ಮಂಗಳೂರು : ತುಳುನಾಡಿನ ಜಾನಪದ ಕ್ರೀಡೆ ಕಂಬಳಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2023/24 ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆದ ಒಟ್ಟು 24 ಕಂಬಳಗಳ 6 ವಿಭಾಗಗಳಲ್ಲಿ ಪ್ರಶಸ್ತಿ ನೀಡುವ ವಿಶೇಷ ಕಾರ್ಯಕ್ರಮ ಶುಕ್ರವಾರ (ಮೇ 17) ಮಂಗಳೂರಿನ ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು.


  ನಮ್ಮಕುಡ್ಲ ಟಿವಿ ಚಾನೆಲ್, ನಮ್ಮ ಕಂಬಳ ಟೀಮ್ ದುಬಾಯಿ ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭವನ್ನು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಮತ್ತು ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ರೆಕ್ಟರ್ ಫಾ. ಮೆಲ್ವಿನ್ ಜೋಸೆಫ್ ಪಿಂಟೋ ಅವರು ಉದ್ಘಾಟಿಸಿದರು. ನಮ್ಮಕುಡ್ಲ ಚಾನೆಲ್ ನ ಸಿಒಒ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು ‘ನಮ್ಮಕಂಬಳ ಪ್ರಶಸ್ತಿ 2024’ ರ ಬಗ್ಗೆ ಮಾಹಿತಿ ನೀಡಿದರು.

  ‘ನಮ್ಮ ಕಂಬುಲ ನನ ದುಂಬುಲ’ ಕೈಪಿಡಿ ಬಿಡುಗಡೆ

  ಕದ್ರಿ ನವನೀತ ಶೆಟ್ಟಿ ಮತ್ತು ಸನತ್ ಕುಮಾರ್ ಶೆಟ್ಟಿ ದುಬಾಯಿ ಸಂಪಾದಿತ ‘ನಮ್ಮ ಕಂಬುಲ ನನ ದುಂಬುಲ’ ಎಂಬ 2023/24 ನೇ ಸಾಲಿನ ಕಂಬಳದ ಮಾಹಿತಿ ಕೈಪಿಡಿಯನ್ನು ಮೂಲ್ಕಿ ಸೀಮೆ ದುಗ್ಗಣ್ಣ ಸಾವಂತರಸರು ಬಿಡುಗೆಡೆ ಮಾಡಿದರು. ರಿಯಲ್‌ಎಸ್ಟೇಟ್‌ಉದ್ಯಮಿ ಹಾಗೂ ಬಿಲ್ಡರ್ ಕ್ಷೇತ್ರದ ಹಿರಿಯ ಸಾಧಕ ರೋಹನ್ ಕಾರ್ಪೋರೇಷನಿನ ಆಡಳಿತ ನಿರ್ದೇಶಕ ರೋಹನ್ ಮೊಂತೆರೊ ಅವರಿಗೆ ಪೇಟ ಧರಿಸಿ, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವ ಸನ್ಮಾನ ನೀಡಲಾಯಿತು.

  ಅಧ್ಯಕ್ಷತೆ ವಹಿಸಿದ್ದ ಡಾ.ಮೋಹನ್ ಆಳ್ವ ಮಾತನಾಡಿ, ಕಾಲದೊಂದಿಗೆ ಬದಲಾದ ಕಂಬಳ ಇಂದು ಜಗತ್ತಿನ ಗಮನ ಸೆಳೆದೆದಿದೆ. ಹಂತ ಹಂತವಾಗಿ ಕಂಬಳ ಬದಲಾಗಿ ಇಂದು ಲಕ್ಷಾಂತರ ಜನರನ್ನು ತಲುಪಿದೆ. ಇಂತಹ ಬದಲಾವಣೆಗಳ ಜತೆಗೆ ಕಂಬಳದಲ್ಲಿ ಕೋಣಗಳನ್ನು ಬಿಡುವ ವಿಚಾರದಲ್ಲೂ ಬದಲಾವಣೆ ಆಗ ಬೇಕು ಎಂದರು.

  ರೋಹನ್ ಮೊಂತೆರೊ ಅವರು ಮಾತನಾಡಿ, ಈ ಸನ್ಮಾನದಿಂದ ನನ್ನ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಬಾಲ್ಯದಲ್ಲಿ ತಾನು ಕೂಡಾ 2 ವರ್ಷ ಗದ್ದೆಯಲ್ಲಿ ಉಳುಮೆ ಮಾಡಿದ್ದೇನೆ. ಕೋಣಗಳನ್ನು ಸಾಕುವ ಕಷ್ಟ ನನಗೂ ಗೊತ್ತು ಎಂದು ಹೇಳಿ ನಮ್ಮಕುಡ್ಲ ಚಾನೆಲ್ ಮತ್ತು ಸಂಘಟಕರನ್ನು ಅಭಿನಂದಿಸಿದರು.

  ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಪುತ್ತೂರು ಶಾಸಕ, ಬೆಂಗಳೂರು ಕಂಬಳದ ಸಾರಥಿ ಅಶೋಕ್‌ ಕುಮಾರ್ ರೈ, ಆಭರಣ ಟೈಮ್ ಲೆಸ್ ಜುವೆಲ್ಲರಿ ಬೆಂಗಳೂರು ಇದರ ಮಾಲಕ ಪ್ರತಾಪ್ ಮಧುಕರ ಕಾಮತ್, ಎಸ್.ಎಲ್. ಡೈಮಂಡ್ ಹೌಸ್ ನ ಮಾಲಕ ಪ್ರಶಾಂತ್ ಶೇಟ್, ಜನಪದ ವಿದ್ವಾoಸ ಹಾಗೂ ಕಂಬಳದ ಪ್ರಧಾನ ತೀರ್ಪುಗಾರ ಗುಣಪಾಲ ಕಡoಬ, ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿಯ ಶಿಸ್ತು ಸಮಿತಿಯ ಅಧ್ಯಕ್ಷ ಭಾಸ್ಕರ ಕೋಟ್ಯಾನ್, ಸೈoಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯ ಡೀನ್ ಡಾ. ಆದರ್ಶ ಗೌಡ, ಅದಾನಿ ಸಂಸ್ಥೆಯ ಸಿಇಒ ಕಿಶೋರ್ ಆಳ್ವ, ಪಟ್ಲ ಫೌಂಡೇಶನಿನ ಸ್ಥಾಪಕ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

  ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಬಿ. ಕರ್ಕೇರ ಸ್ವಾಗತಿಸಿ, ವಂದಿಸಿದರು. ನಿರ್ದೇಶಕರಾದ ಹರೀಶ್ ಬಿ. ಕರ್ಕೇರ, ಸುರೇಶ್ ಬಿ. ಕರ್ಕೇರ, ಮೋಹನ್ ಬಿ. ಕರ್ಕೇರ, ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಸುದರ್ಶನ್, ಅಮಿತಾ, ಸುರೇಖಾ ಶೆಟ್ಟಿ ಮತ್ತಿತರರು ಇದ್ದರು. ನಿತಿನ್ ಸಾಲ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.

  120 ಪ್ರಶಸ್ತಿ ಪ್ರದಾನ :

  ಕಂಬಳದ ಚಾಂಪಿಯನ್ ಕೋಣ ಹಾಗೂ ಕೋಣದ ಯಜಮಾನರಿಂದ ಹಿಡಿದು ತಂಡದ ಎಲ್ಲಾ ಸದಸ್ಯರನ್ನು ಗುರುತಿಸಿ ವಿವಿಧ ವಿಭಾಗಗಳಲ್ಲಿ ಒಟ್ಟು ಸುಮಾರು 120 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಕನೆ ಹಲಗೆ ಮತ್ತು ಅಡ್ಡ ಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ, ಹಗ್ಗ ಹಿರಿಯ ವಿಭಾಗದಲ್ಲಿ ನಂದಳಿಕೆ ಶ್ರೀಕಾಂತ ಭಟ್, ಹಗ್ಗ ಕಿರಿಯ ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ, ನೇಗಿಲು ಹಿರಿಯ ಬೋಳದ ಗುತ್ತು ಸತೀಶ್ ಶೆಟ್ಟಿ, ನೇಗಿಲು ಕಿರಿಯ ಮುನಿಯಾಲ್ ಉದಯಕುಮಾರ್ ಶೆಟ್ಟಿ ಸೇರಿದಂತೆ ಕೋಣಗಳ ಯಜಮಾನರಿಗೆ ಪ್ರಶಸ್ತಿ ನೀಡಲಾಯಿತು.

  ಇದನ್ನೂ ಓದಿ : ಕೊನೆಗೂ ಮೌನ ಮುರಿದ ಎಚ್‌ಡಿ ದೇವೇಗೌಡ..! ಪ್ರಜ್ವಲ್ ಬಗ್ಗೆ ಹೇಳಿದ್ದೇನು?

  ಬೈಂದೂರು ಮಹೇಶ್ ಪೂಜಾರಿ, ಭಟ್ಕಳ ಹರೀಶ್, ಬಂಬ್ರಾಣ ಬೈಲ್ ವಂದಿತ್ ಶೆಟ್ಟಿ, ಭಟ್ಕಳ ಶಂಕರ ನಾಯ್ಕ್, ಕಕ್ಕೆ ಪದವು ಪೆರ್oಗಾಲ್ ಕೃತಿಕ್ ಗೌಡ ಮತ್ತು ಮಾಸ್ತಿಕಟ್ಟೆ ಸ್ವರೂಪ್ ಸಹಿತ 6 ವಿಭಾಗಗಳಲ್ಲಿ ಕೋಣ ಓಡಿಸುವವರನ್ನು ನಮ್ಮ ಕಂಬಳ ಪ್ರಶಸ್ತಿ ನೀಡಿ ಗೌರವಿಸಲಾಯಿತು. 6 ವಿಭಾಗಗಳ ಕೋಣಗಳಿಗೆ ಚಾoಪಿಯನ್ ಅವಾರ್ಡ್ ಪ್ರದಾನ ಮಾಡಲಾಯಿತು. ಕಂಬಳ ಸಂಯೋಜಕರು ಮತ್ತು ತೀರ್ಪುಗಾರರನ್ನು ಶಾಲು ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

  DAKSHINA KANNADA

  ಇಂಡಿಯಾನ ಕಾಲೇಜ್‌ ಆಫ್‌ ನರ್ಸಿಂಗ್‌ ಉದ್ಘಾಟನೆ

  Published

  on

  ಮಂಗಳೂರು: ಮಂಗಳೂರಿನ ಪಂಪ್ವಲ್ ಬಳಿ ಇರುವ ಹೃದ್ರೋಗಿಗಳಿಗೆ ಆಶಾಕಿರಣವಾಗಿರುವ ಖ್ಯಾತ ಇಂಡಿಯಾನಾ ಕಾಲೇಜ್‌ ಆಫ್‌ ನರ್ಸಿಂಗ್‌ ಇದರ ಉದ್ಘಾಟನಾ ಸಮಾರಂಭ ಇಂಡಿಯಾನಾ ಆಸ್ಪತ್ರೆ ಸಭಾಂಗಣದಲ್ಲಿ ನಡೆಯಿತು.

  ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸ್ವಾಗತಿಸಲಾಯಿತು. ಮಸೂದ್ ಕಾಲೇಜ್ ಆಫ್ ನರ್ಸಿಂಗ್ ನ ಪ್ರಾಂಶುಪಾಲೆ ಡಾ. ವೀಣಾ ಗ್ರೆಟ್ಟಾ ತೌರೋ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಉದಯೋನ್ಮುಖ, ಪರಿಣತ ದಾದಿಯರ ತಂಡದೊಂದಿಗೆ ವೈದ್ಯಕೀಯ ಸಂಸ್ಥೆ ಬೆಳೆಯ ಬೇಕು. ಪರಿಣತ ವೈದ್ಯರ ಪ್ರೋತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳು ಬೆಳೆಯ ಬೇಕು ಎಂದು ಅವರು ಕರೆ ನೀಡಿದರು.

  ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯೂಸುಫ್ ಕುಂಬ್ಳೆ, ಇಂಡಿಯಾನಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ ಮನು ಕೆ. ಜೋಸೆಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ನಸಿಂಗ್‌ ಕಾಲೇಜಿನ ವಿದ್ಯಾರ್ಥಿ ಸಮೂಹವು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಮನರಂಜಿಸಿತು.

  Continue Reading

  DAKSHINA KANNADA

  ಜೂ.17: ಜಾಗತಿಕ ಬಂಟರ ಸಂಘಗಳ ಒಕ್ಕೂಟ – ಮೆಗಾ ಆರ್ಥಿಕ ನೆರವು ವಿತರಣೆ, ನೂತನ ಸಂಸದರಿಗೆ ಸಮ್ಮಾನ

  Published

  on

  ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಹಾ ನಿರ್ದೇಶಕ ಹಾಗೂ ವಿ. ಕೆ. ಗ್ರೂಪ್ ಆಫ್ ಕಂಪೆನೀಸ್ ಕೆ. ಮುಂಬಯಿ ಸಿಎಂಡಿ ಕೆ.ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ಸಮಾಜ ಕಲ್ಯಾಣ ಮೆಗಾ ಆರ್ಥಿಕ ನೆರವು ವಿತರಣೆ ಹಾಗೂ ದಕ್ಷಿಣ ಕನ್ನಡ ನೂತನ ಸಂಸದ ಕ್ಯಾ। ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಜೂ. 17ರಂದು ಸಮ್ಮಾನ ಸಮಾರಂಭವು ಬೆಳಗ್ಗೆ 10ರಿಂದ ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

  ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ವಿ.ಕೆ ಗ್ರೂಫ್ ಆಫ್ ಕಂಪೆನೀಸ್ ನ ಸಿಎಂಡಿ ಕೆ ಎಂ ಶೆಟ್ಟಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಒಕ್ಕೂಟದ ಮಹಾದಾನಿ ಮತ್ತು ಹೇರಂಬಾ ಇಂಡಸ್ಟ್ರೀಸ್ ಲಿ. ನ ಮ್ಯಾನೆಜಿಂಗ್ ಡೈರೆಕ್ಟರ್ ಕನ್ಯಾನ ಸದಾಶಿವ ಶೆಟ್ಟಿ ಭಾಗವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಸ್ ಸಿ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರಕುಮಾರ್ ಭಾಗವಹಿಸಲಿದ್ದಾರೆ.

  Read Moreವಿಧಾನ‌ಪರಿಷತ್ ಸದಸ್ಯ ಐವನ್ ಡಿಸೋಜಾರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಅಭಿನಂದನೆ

  ಒಕ್ಕೂಟದ ವಿಶೇಷ ಮಹಾನಿರ್ದೇಶಕರು ಮತ್ತು ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್‌ನ ತೋನ್ಸೆ ಆನಂದ್ ಎಂ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ, ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಹಾ ನಿರ್ದೇಶಕರಾದ ಎಂಆರ್‌ಜಿ ಗ್ರೂಪ್ಸ್ ನ ಚೆಯರ್ ಮೆನ್ ಕೆ. ಪ್ರಕಾಶ್‌ ಶೆಟ್ಟಿ, ಶಶಿ ಕೇಟರಿಂಗ್ ಸರ್ವಿಸಸ್ ಬರೋಡ ಇದರ ಎಂ ಡಿ ಶಶಿಧರ ಶೆಟ್ಟಿ ಬರೋಡ, ರಾಕ್ಷಿ ಬಿಲ್ಡರ್ಸ್‌ನ ರಾಜೇಶ್ ಎನ್. ಶೆಟ್ಟಿ ಅಲಿಯನ್ಸ್ ಇಂಫ್ರಾಸ್ಟ್ರಕ್ಟರ್ ರಿಯಲ್ಟಸ್ ೯ನ ಅರವಿಂದ್ ಆನಂದ್ ಶೆಟ್ಟಿ, ಫಾರ್ಚುನ್ ಗ್ರೂಪ್ ಆಫ್ ಹೊಟೇಲ್ಸ್‌ನ ಮಾಲಕ ವಕ್ವಾಡಿ ಪ್ರವೀಣ್ ಕುಮಾ‌ರ್ ಶೆಟ್ಟಿ ಮೆರಿಟ್ ಹಾಸ್ಪಿಟಾಲಿಟಿಯ ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಪಂಜುರ್ಲಿ ಗ್ರೂಪ್‌ ಆಫ್ ಹೊಟೇಲ್ಸ್‌ನ ರಾಜೇಂದ್ರ ಶೆಟ್ಟಿ, ಜಾಗತಿ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ಳೂರು ಮೋಹನದಾಸ್ ಶೆಟ್ಟಿ ಜತೆ ಕಾರ್ಯದರ್ಶಿ ಚಂದ್ರಹಾಸ್‌ ಡಿ. ಶೆಟ್ಟಿ ರಂಗೋಲಿ ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ.

  ಸಮಾರಂಭದಲ್ಲಿ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ಶ್ರೀಲತಾ ನಾಗರಾಜ್ ಶಿಷ್ಯ ವೃಂದದವರಿಂದ “ಸನಾತನ ರಾಷ್ಟ್ರಂಜಲಿ” ಕಾರ್ಯಕ್ರಮ‌ ನಡೆಯಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇ ಶಕರು, ಮಹಾಪೋಷಕರು, ಪೋಷಕರು, ದಾನಿಗಳು, ಬಂಟರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸರ್ವ ಸದಸ್ಯರು ಪಾಲ್ಗೊಂಡು ಸಮಾರಂಭದ ಯಶಸ್ಸಿಗೆ ಸಹಕರಿಸುವಂತೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪ್ರಕಟಣೆ ತಿಳಿಸಿದೆ.

  Continue Reading

  DAKSHINA KANNADA

  ವಿದ್ಯಾರ್ಥಿಗಳ ಪೋಷಕರಿಗೆ ಬೆದರಿಕೆ ಕರೆ..! ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಹಣಕ್ಕೆ ಬೇಡಿಕೆ!

  Published

  on

  ಮಂಗಳೂರು: ಮಂಗಳೂರು ನಗರ ಮತ್ತು ಸುರತ್ಕಲ್‌ ಭಾಗದ ಕೆಲವು ಕಾಲೇಜು ವಿದ್ಯಾರ್ಥಿಗಳ ಹೆತ್ತವರಿಗೆ ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದ್ದು, ಈ ಬಗ್ಗೆ ಮಂಗಳೂರಿನ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂ. 11 ಮತ್ತು 12ರಂದು ಹಲವಾರು ವಿದ್ಯಾರ್ಥಿಗಳ ಹೆತ್ತವರಿಗೆ ಅಪರಿಚಿತರು ಪೊಲೀಸ್‌ ಅಧಿಕಾರಿಗಳಂತೆ ಬಿಂಬಿಸಿಕೊಂಡು ವಾಟ್ಸ್‌ಆ್ಯಪ್‌ ಮೂಲಕ ಕರೆ ಮಾಡಿ ನಿಮ್ಮ ಮಗ/ಮಗಳನ್ನು ಬಂಧಿಸಿದ್ದೇವೆ. ಅವರ ಬಿಡುಗಡೆಗೆ ಕೂಡಲೇ ಹಣ ನೀಡಿ ಎಂದಿದ್ದಾರೆ.

  Read More..; ಮಗುವಿನಿಂದ ಬಾಂ*ಬ್‌ ಬೆದರಿಕೆ ಸಂದೇಶ..! ಮಗು ಹೇಳಿದ್ದೇನು ?

  ಹೆತ್ತವರು ಆತಂಕಿತರಾಗಿ ಶಾಲೆಗಳಲ್ಲಿ ವಿಚಾರಿಸಿದಾಗ ಅವರ ಮಕ್ಕಳು ಶಾಲೆಯಲ್ಲಿ ಸುರಕ್ಷಿತರಾಗಿರುವುದು ಗೊತ್ತಾಗಿದೆ. ನಿನ್ನೆ ಇಬ್ಬರು ಹೆತ್ತವರಿಗೆ ಇದೇ ರೀತಿಯ ಕರೆಗಳು ಬಂದಿವೆ. ಓರ್ವ ಹೆತ್ತವರಿಗೆ ಕರೆ ಮಾಡಿದ ಅಪರಿಚಿತರು ನಿಮ್ಮ ಮಗನ ಮೇಲೆ ಡ್ರಗ್ಸ್‌ ಕೇಸ್‌ ಹಾಕಿದ್ದೇವೆ. ಈತನನ್ನು ಬಿಡಿಸಿಕೊಂಡು ಹೋಗಬೇಕಾದರೆ ಕೂಡಲೇ ಹಣ ನೀಡಿ ಎಂಬುದಾಗಿ ಹೇಳಿದ್ದಾರೆ. ಮತ್ತೋರ್ವರಿಗೆ ಮಗಳನ್ನು ಅಪಹರಣ ಮಾಡಲಾಗಿದೆ ಎಂಬುದಾಗಿ ಹೇಳಿ ಹಣಕ್ಕೆ ಒತ್ತಾಯಿಸಿದ್ದಾರೆ. ಹೆತ್ತವರು ಕೂಡಲೇ ಕಾಲೇಜಿಗೆ ಕರೆ ಮಾಡಿ ಕೇಳಿದಾಗ ಇದೊಂದು ನಕಲಿ ಬೆದರಿಕೆ ಕರೆ ಎಂಬುದಾಗಿ ಗೊತ್ತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು, ಕರೆ ಬಂದಿರುವ ಸಂಖ್ಯೆಗಳನ್ನು ಪರಿಶೀಲಿಸಿದಾಗ ಪೋಲಂಡ್‌, ಪಾಕಿಸ್ಥಾನ ದೇಶಗಳ ಕೋಡ್‌ ಸಂಖ್ಯೆಯನ್ನು ಹೊಂದಿರುವುದು ಕಂಡು ಬಂದಿದೆ. ನಕಲಿ ಅಧಿಕಾರಿಗಳು ಹಣ ದೋಚಲು ನಡೆಸಿರುವ ತಂತ್ರ ಇದು. ಈ ರೀತಿ ವಾಟ್ಸ್‌ಆ್ಯಪ್‌ನಲ್ಲಿ ವಿದೇಶಗಳಿಂದ ಬರುವ ಯಾವುದೇ ಅಪರಿಚಿತ ವ್ಯಕ್ತಿಗಳ ಕರೆಗಳನ್ನು ಸ್ವೀಕರಿಸಬಾರದು. ಒಂದು ವೇಳೆ ಇಂತಹ ಕರೆಗಳನ್ನು ಸ್ವೀಕರಿಸಿದರೆ ಕೂಡಲೇ ಪಕ್ಕದ ಪೊಲೀಸ್‌ ಠಾಣೆಗೆ ತಿಳಿಸ ಬೇಕು. ಶಾಲಾ ಕಾಲೇಜುಗಳು ಕೂಡಾ ಇಂತಹ ನಕಲಿ ಕರೆಗಳ ಕುರಿತು ಹೆತ್ತವರು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದ್ದಾರೆ. ಪ್ರಥಮ ಪಿಯುಸಿಯ ಮಕ್ಕಳ ಹೆತ್ತವರ ನಂಬರ್‌ ವಂಚಕರ ಕೈಗೆ ಸಿಕ್ಕಿದ್ದು ಹೇಗೆ ಎಂಬುದು ನಿಗೂಢವಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  Continue Reading

  LATEST NEWS

  Trending