Connect with us

  FILM

  ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!

  Published

  on

  ಕಿರುತೆರೆಯ ಖ್ಯಾತ ನಟಿ ಪವಿತ್ರಾ ಜಯರಾಮ್ ಇತ್ತೀಚೆಗೆ ಹೈದರಾಬಾದ್ ಸಮೀಪ ಕಾರು ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಈ ವೇಳೆ ಅವರ ಗೆಳೆಯ ಹಾಗೂ ತೆಲುಗು ನಟ ಚಂದು ಅವರಿಗೂ ಪೆಟ್ಟಾಗಿದೆ. ಗೆಳತಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಚಂದು ಆತ್ಮಹ*ತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ.
  ಚಂದು ಹಾಗೂ ಪವಿತ್ರಾ ಜಯರಾಂ ತೆಲುಗಿನ ‘ತ್ರಿನಯನಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು.

  ಪವಿತ್ರಾ ಹಾಗೂ ಚಂದು ಇಬ್ಬರೂ ಸೋಶಿಯಲ್ ಮೀಡಿಯಾಗಳಲ್ಲಿ ಆ್ಯಕ್ಟಿವ್ ಆಗಿದ್ದರು. ಇಬ್ಬರು ಜೊತೆಯಾಗಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದರು. ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ದರ್ಶನ್ ಸಿನಿಮಾಗೆ ಪವಿತ್ರಾ ಅವರಿಗೆ ಆಫರ್ ಬಂದಿತ್ತು. ಹೀಗಾಗಿ ಇವರಿಬ್ಬರು ಜೊತೆಯಾಗಿ ಬೆಂಗಳೂರಿಗೆ ಬಂದಿದ್ದರು. ಹಿಂತಿರುಗುವಾಗ ಪ್ರಯಾಣಿಸುತ್ತಿರುವ ಕಾರು ಅಪಘಾತವಾಗಿತ್ತು. ಈ ವೇಳೆ ನಟಿ ಪವಿತ್ರಾ ಜಯರಾಂ ಸಾ*ವನ್ನಪ್ಪಿದ್ದರು. ಚಂದು ಗಾಯಗೊಂಡಿದ್ದರು.

  ಇದನ್ನೂ ಓದಿ : ಬ್ಯಾಂಡೇಜ್ ಸುತ್ತಿಕೊಂಡೇ ಕೇನ್ಸ್ ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಂಡ ಐಶ್ವರ್ಯ ರೈ

  ಪವಿತ್ರಾ ಸಾವಿಗೆ ತೀವ್ರ ನೊಂದಿದ್ದ ಚಂದು ಸೋಶಿಯಲ್ ಮೀಡಿಯಾದಲ್ಲಿ ಮಿಸ್ ಯೂ ಎಂದು ಪವಿತ್ರಾ ಜೊತೆಗಿನ ವೀಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ.

   

  FILM

  ದುನಿಯಾ ವಿಜಯ್ ಡಿವೋರ್ಸ್ ಅರ್ಜಿ ವಜಾ..!

  Published

  on

  ಬೆಂಗಳೂರು/ಮಂಗಳೂರು: ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಹಾಗೂ ನಾಗರತ್ನಿ ದಂಪತಿ ಮಧ್ಯೆ ಬಿರುಕು ಕಂಡಿದ್ದು, ವರ್ಷಗಳ ಹಿಂದೆಯೇ ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ದರು. 2018ರಲ್ಲಿ ಡಿವೋರ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದು ಇದೀಗ ಫ್ಯಾಮಿಲಿ ಕೋರ್ಟ್ ಅರ್ಜಿ ವಜಾಗೊಂಡಿದೆ.

  ನಟ ದುನಿಯಾ ವಿಜಯ್‌ಗೆ ನಾಗರತ್ನರವರೊಂದಿಗೆ ಬಾಳ್ವೆ ಮಾಡಲು ಇಷ್ಟವಿಲ್ಲದೇ ಇದ್ದು ವಿಚ್ಚೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪತ್ನಿ ನಾಗರತ್ನ ಮಾತ್ರ ನನಗೆ ಗಂಡ ಬೇಕು ಎಂದು ಪಟ್ಟು ಹಿಡಿದ್ದಿದ್ದರು.  ನಾಗರತ್ನ ಮತ್ತು ದುನಿಯಾ ವಿಜಯ್ ಅವರ ಸಂಸಾರದಲ್ಲಿ ಹಲವು ವರ್ಷಗಳ ಹಿಂದೆಯೇ ಬಿರುಕು ಮೂಡಿತ್ತು. ಹಾಗಾಗಿ 2018ರಲ್ಲಿ ವಿಜಯ್ ಅವರು ಡಿವೋರ್ಸ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಮಕ್ಕಳ ಜವಾಬ್ದಾರಿಯನ್ನು ವಹಿಸುವುದಾಗಿ ಹೇಳಿದ್ದರು. ಅಲ್ಲದೇ ಪತ್ನಿಗೆ ಜೀವನಾಂಶವನ್ನು ನೀಡುವುದಾಗಿಯೂ ಹೇಳಿದ್ದರು. ಆದರೆ ಪತ್ನಿ ನಾಗರತ್ನಿ ಪತಿಯನ್ನು ಬಿಡಲು ಸಿದ್ಧರಿರಲಿಲ್ಲ. ಹಾಗಾಗಿ ಪ್ರಕರಣ ಮುಂದೂಡುತ್ತಾ ಬಂದಿದೆ.

  Read More..; ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

  ಜೂ.13ರಂದು ದುನಿಯಾ ವಿಜಯ್​ ಮತ್ತು ನಾಗರತ್ನ ಅವರು ವಿಚ್ಛೇನದ ಅಂತಿಮ ತೀರ್ಪು ಹೊರಬರಲಿದೆ ಎಂಬ ಕಾರಣಕ್ಕೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಕೌಟುಂಬಿಕ ನ್ಯಾಯಾಲಯವು ವಿಜಯ್​ಗೆ ವಿಚ್ಛೇನದ ನೀಡಿಲ್ಲ. ನಟನಾಗಿ, ನಿರ್ದೇಶಕನಾಗಿ ದುನಿಯಾ ವಿಜಯ್​ ಅವರು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಟಾಲಿವುಡ್​ನಲ್ಲೂ ಅವರಿಗೆ ಬೇಡಿಕೆ ಇದೆ.

  Continue Reading

  FILM

  ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ನಿರ್ಮಾಪಕರಿಂದ ಹಗರಣ..! ನೋಟೀಸ್ ಜಾರಿ..!!

  Published

  on

  ಕೇರಳ/ಮಂಗಳೂರು:  ‘ಮಂಜುಮ್ಮೇಲ್ ಬಾಯ್ಸ್‌’ ಸಿನೆಮಾ ಚಿತ್ರರಂಗದಲ್ಲೇ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಮಲಯಾಳಂನಲ್ಲಿ ಮೂಡಿ ಬಂದಿದ್ದ ಈ ಸಿನೆಮಾ ಸಿನಿಪ್ರೇಕ್ಷಕರನ್ನು ಮನರಂಜಿಸಿತ್ತು. ಮಲಯಾಳಂ ಅಲ್ಲದೇ ಎಲ್ಲಾ ಭಾಷೆಯವರು ಕೂಡಾ ಈ ಸಿನೆಮಾವನ್ನು ಮೆಚ್ಚಿಕೊಂಡಿದ್ದರು. ಅಲ್ಲದೆ ಬಾಕ್ಸ್ ಆಫೀಸ್‌ನಲ್ಲಿ 250ಕೋಟಿ ರೂ. ಗಳಿಕೆ ಮಾಡಿತ್ತು.

  Read More..; ಡ್ರೋನ್​ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್​ ಗಿಫ್ಟ್​

  ಆದರೆ ಇದೀಗ ಈ ಸಿನೆಮಾದ ಮೇಲೆ ಕೆಲವೊಂದು ಆರೋಪಗಳು ಕೇಳಿ ಬರುತ್ತಿದೆ. ಹೌದು, ಸಿನೆಮಾ ಪ್ರೊಡ್ಯೂಸರ್‌ಗೆ ಸಂಕಟ ಎದುರಾಗಿದೆ. ಅಕ್ರಮ ಹಣ ಪ್ರಕರಣದಲ್ಲಿ ಮಂಜುಮ್ಮೇಲ್ ಬಾಯ್ಸ್‌ ನಿರ್ಮಾಪಕರಾದ ಸೌಬಿನ್ ಶಾಹಿರ್, ಶಾನ್ ಆ್ಯಂಥೋನಿ, ಬಾಬು ಶಾಹಿರ್‌ರವರಿಗೆ ಕೊಚ್ಚಿಯಲ್ಲಿರುವ ಇವರ ಕಛೇರಿಗೆ ನೋಟೀಸ್ ನೀಡಲಾಗಿದೆ.  ಇಡಿ ಅಧಿಕಾರಿಗಳ ಎದುರು ನಿರ್ಮಾಪಕರುಗಳು ವಿಚಾರಣೆಗೂ ಹಾಜರಾಗಬೇಕಿದೆ.

  ಈ ಸಿನೆಮಾಗೆ ಸಿರಾಜ್ ಎಂಬಾತ 7 ಕೋಟಿ ರೂ. ಹೂಡಿಕೆ ಮಾಡಿದ್ದರು. ಈ ಸಿನೆಮಾದ ಲಾಭಾಂಶದಲ್ಲಿ ಶೇ.40 ರಷ್ಟು ಇವರಿಗೆ ನೀಡುವುದಾಗಿ ಮಾತುಕತೆ ನಡೆದಿತ್ತು. ಸಿನೆಮಾ 250 ಕೋಟಿ ರೂ. ಗಳಿಸಿತ್ತು. ಆದರೆ ಅವರಿಗೆ ಕೇವಲ 50ಲಕ್ಷ ರೂ. ಮಾತ್ರ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆ ಕಮರ್ಷಿಯಲ್ ಕೋರ್ಟ್‌ ಗೆ ಸಿರಾಜ್ ಅರ್ಜಿ ಸಲ್ಲಿಸಿ, ಮರಾಡು ಪೊಲೀಸ್ ಠಾಣೆಯಲ್ಲಿ ನನಗೆ ಮೋಸ ಆಗಿದೆ ಎಂಬುದಾಗಿ  ದೂರು ದಾಖಲಿಸಿದ್ದರು. ಇನ್ನು ಜಾರಿ ನಿರ್ದೇಶನಾಲಯದ ನೋಟೀಸ್‌ಗೆ ನಿರ್ಮಾಪಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದಾಗಿ ಕಾದು ನೋಡಬೇಕಿದೆ.

  ಮೇ ತಿಂಗಳಿನಲ್ಲಿ ರಿಲೀಸ್ ಆದ ಈ ಸಿನೆಮಾದ ಹಾಡಿನಿಂದಾಗಿ ಈ ಹಿಂದೆಯೂ ಸಿನೆಮಾ ತಂಡ ಸಂಕಷ್ಟಕ್ಕೀಡಾಗಿತ್ತು. ಈ ಸಿನೆಮಾದ ‘ಕಣ್ಮಣಿ ಅಂಬೋಡು..’  ಗೀತೆ ಬಳಸಿದಕ್ಕಾಗಿ ಇಳಯರಾಜರವರು ಕೇಸ್ ಹಾಕಿದ್ದರು. ಈ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು.

  Continue Reading

  FILM

  ಡ್ರೋನ್​ ಪ್ರತಾಪ್ ಹುಟ್ಟು ಹಬ್ಬಕ್ಕೆ ಸಿಕ್ತು ಬ್ಯೂಟಿಫುಲ್​ ಗಿಫ್ಟ್​

  Published

  on

  ಬೆಂಗಳೂರು: ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್​ ಮೂಲಕ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದ ಡ್ರೋನ್ ಪ್ರತಾಪ್​​ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿಕೊಂಡಿದ್ದಾರೆ. ಇನ್ನು, ನೆಚ್ಚಿನ ಸೆಲೆಬ್ರಿಟಿಗೆ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದ್ದಾರೆ.

  ಇನ್ನು, ತಮ್ಮನ ಸ್ಥಾನವನ್ನು ಪಡೆದುಕೊಂಡ ಡ್ರೋನ್​ ಪ್ರತಾಪ್​ ಹುಟ್ಟು ಹಬ್ಬವನ್ನು ಬಿಗ್​ಬಾಸ್​ ಖ್ಯಾತಿಯ ನೀತು ವನಜಾಕ್ಷಿ ಆಚರಿಸಿದ್ದಾರೆ. ನೀತು ವನಜಾಕ್ಷಿ ಅವರು ಡ್ರೋನ್​​ ಪ್ರತಾಪ್​ಗೆ ತಮ್ಮನ ಸ್ಥಾನವನ್ನು ಕೊಟ್ಟಿದ್ದಾರೆ. ಅದರಲ್ಲೂ ಬಿಗ್​ಬಾಸ್​​ನಲ್ಲಿದ್ದಾಗ ಡ್ರೋನ್​ ಪ್ರತಾಪ್​​, ನೀತು ವನಜಾಕ್ಷಿ ಅವರಿಗೆ ದಿದಿ ಅಂತ ಕರೆಯುತ್ತಿದ್ದ. ಜೊತೆಗೆ ಬಿಗ್​ಬಾಸ್​​ ಸ್ಪರ್ಧಿಗಳ ಜತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದ ಡ್ರೋನ್ ಪ್ರತಾಪ್​ಗೆ ನೀತು ವಿಶ್​ ಮಾಡುವುದರ ಜೊತೆಗೆ ಕೇಕ್​ ಕಟ್​ ಮಾಡಿಸಿ ಸಂಭ್ರಮಿಸಿದ್ದಾರೆ.

  ಸದ್ಯ ಇದೇ ವಿಡಿಯೋವನ್ನು ನೀತು ವನಜಾಕ್ಷಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಮುದ್ದಿನ ತಮ್ಮನಿಗೆ ತಿಳಿಸಿದ್ದಾರೆ. ನೂರಾರು ಕಾಲ ನಗು ನಗುತಾ ಸಂತೋಷವಾಗಿ ಹೆಮ್ಮರವಾಗಿ ಬೆಳೆದು ನಿನ್ನ ಕನಸೆಲ್ಲ ನನಸಾಗಲಿ ಅಂತ ಬರೆದುಕೊಂಡಿದ್ದಾರೆ.

  ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಜೊತೆಗೆ ಡ್ರೋನ್​ ಪ್ರತಾಪ್​ ಹಟ್ಟು ಹಬ್ಬಕ್ಕೆ ನೀತು ಅವರು ಪುಟ್ಟ ಗಿಡವೊಂದನ್ನು ಗಿಫ್ಟ್​ ಆಗಿ ಕೊಟ್ಟಿದ್ದಾರೆ. ಆ ಗಿಫ್ಟ್​ ಅನ್ನು ನೋಡಿದ ಡ್ರೋನ್​ ಪ್ರತಾಪ್ ಫುಲ್​ ಸಂತಸ ವ್ಯಕ್ತಪಡಿಸಿದ್ದಾರೆ.

  Continue Reading

  LATEST NEWS

  Trending