Connect with us

LATEST NEWS

ಮದುವೆಯಲ್ಲಿ ಅವಧಿ ಮುಗಿದ ಐಸ್ ಕ್ರೀಂ​ ಸೇವನೆ.. 80ಕ್ಕೂ ಹೆಚ್ಚು ಜನರು ಅಸ್ವಸ್ಥ!

Published

on

ರಾಮನಗರ: ಮದುವೆಯಲ್ಲಿ ಐಸ್ ಕ್ರೀಂ ತಿಂದು ಜನರು ಅಸ್ವಸ್ಥಗೊಂಡ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಅಲ್ಲಿನ ಸಾತನೂರು ಸರ್ಕಲ್ ಬಳಿಯ ಟಿಪ್ಪುನಗರದ ಮಿಲನ್ ಶಾದಿ ಮಹಲ್ ನಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಈ ಘಟನೆ ನಡೆದಿದ್ದು, ಪರಿಣಾಮ 80 ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಚನ್ನಪಟ್ಟಣದ ವಧು ಮತ್ತು ಮಾಗಡಿಯ ವರನ ವಿವಾಹ ಸಮಾರಂಭ ಮಿಲನ್ ಶಾದಿ ಮಹಲ್ ನಲ್ಲಿ ನಡೆದಿತ್ತು. ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಐಸ್​ ಕ್ರೀಂ ತಿಂದ ಜನರು ಇದ್ದಕ್ಕಿದ್ದಂತೆಯೇ ಅಸ್ವಸ್ಥಗೊಂಡಿದ್ದಾರೆ. ಊಟದ ನಂತರ ಐಸ್ ಕ್ರೀಂ ತಿಂದ ಅರ್ಧಗಂಟೆಯಲ್ಲಿ ವಾಂತಿ, ಭೇದಿ ಶುರುವಾಗಿದೆ. 50ಕ್ಕೂ ಹೆಚ್ಚು ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಹೆಚ್ಚಿನವರು ಚನ್ನಪಟ್ಟಣದ ಯಾರಬ್ ನಗರ ಹಾಗೂ ಕೋಟೆ ನಿವಾಸಿಗಳು ಎಂದು ಗುರುತಿಸಲಾಗಿದೆ.

ಐಸ್​ ಕ್ರೀಂ ತಿಂದು ಆಸ್ವಸ್ಥಗೊಂಡವರಲ್ಲಿ 40 ಜನರು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಮಂಡ್ಯ ಹಾಗೂ ರಾಮನಗರ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಅವಧಿ ಮುಗಿದಿದ್ದ ಐಸ್ ಕ್ರೀಂ ತಿಂದಿದ್ದೇ ಈ ಅವಾಂತರಕ್ಕೆ ಕಾರಣ ಎನ್ನಲಾಗುತ್ತಿದೆ.

ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆ ಬಳಿ ಅಸ್ವಸ್ಥಗೊಂಡವರ ಕುಟುಂಬಸ್ಥರು ಆಗಮಿಸಿದ್ದಾರೆ. ಎಲ್ಲರಿಗೂ ಡ್ರಿಪ್ಸ್ ಹಾಕಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದೆ.

Click to comment

Leave a Reply

Your email address will not be published. Required fields are marked *

LATEST NEWS

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಸಹೋದರಿ ಆತ್ಮಹ*ತ್ಯೆಗೆ ಯತ್ನ

Published

on

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇರ ಹ*ತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಆಕೆಯ ತಂಗಿ ಯಶೋಧಾ ಆತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಮನೆಯಲ್ಲಿ ಫಿನಾಯಲ್ ಸೇವಿಸಿ ಜೀವಾಂತ್ಯಗೊಳಿಸಲು ಯತ್ನಿಸಿದ ಆಕೆಯನ್ನು ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಾಯಿತು. ಸದ್ಯ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕೊಲೆಗೀಡಾದ ಅಂಜಲಿ
ಅಂಜಲಿ ಅಂಬಿಗೇರ ಹ*ತ್ಯೆ ಖಂಡಿಸಿ ಶನಿವಾರ (ಮೇ 18) ರಂದು ಅಂಬಿಗರ ಚೌಡಯ್ಯ ಪೀಠದ ಶ್ರೀ ಶಾಂತಭೀಷ್ಮ ಸ್ವಾಮೀಜಿ, ದಿಂಗಾಲೇಶ್ವರ ಶ್ರೀ, ಮನಸೂರಿನ ಬಸವರಾಜ ದೇವರು ಶ್ರೀ ಸೇರಿದಂತೆ ವಿವಿಧ ಮಠಾಧೀಶರು ಮತ್ತು ಸಾರ್ವಜನಿಕರು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಯಶೋಧಾ ಕೂಡ ಭಾಗಿಯಾಗಿದ್ದಳು.

ಪ್ರತಿಭಟನೆ ವೇಳೆ ಯಶೋಧಾ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಕೂಡಲೇ ಆಕೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿತ್ತು. ರಾತ್ರಿ ಪಿನಾಯಲ್​ ಸೇವಿಸಿ ಜೀವಾಂತ್ಯಗೊಳಿಸಲು ಯತ್ನಿಸಿದ್ದಾಳೆ. ಅಕ್ಕನ ಸಾ*ವಿನಿಂದ ಮನನೊಂದಿದ್ದ ಯಶೋಧಾ ಆತ್ಮಹ*ತ್ಯೆಗೆ ಯತ್ನಿಸಿದ್ದಾಳೆ.

ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

ಏನಿದು ಪ್ರಕರಣ ?

ಮೇ 15 ರಂದು ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಬೆಳ್ಳಂಬೆಳಗ್ಗೆ ಯುವತಿಯ ಭೀಕರ ಹ*ತ್ಯೆ ನಡೆದಿತ್ತು. ಅಂಜಲಿ ಅಂಬಿಗೇರ (21) ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಆರೋಪಿ ಗಿರೀಶ್ ಅಲಿಯಾಸ್ ವಿಶ್ವ ಏಕಾಏಕಿ ಮನೆಗೆ ನುಗ್ಗಿದ್ದ. ಬಳಿಕ ಆಕೆಯ ಮನೆಯವರ ಎದುರೇ ಅಂಜಲಿಯನ್ನ ಭೀಕರವಾಗಿ ಹ*ತ್ಯೆಗೈದಿದ್ದ. ಪರಾರಿಯಾಗಿದ್ದ ಆರೋಪಿಯನ್ನು ಈಗಾಗಲೇ ಪೊಲೀಸರು ದಾವಣಗೆರೆಯಲ್ಲಿ ಬಂಧಿಸಿದ್ದಾರೆ.

Continue Reading

DAKSHINA KANNADA

‘ಆರ್‌ಸಿಬಿ’ ಸೂಪರ್‌ ಕಮ್‌ಬ್ಯಾಕ್..! ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

Published

on

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಒಂದು ಕಡೆ ಮಳೆಯ ಆರ್ಭಟ. ಇನ್ನೊಂದು ಕಡೆ ಸತತ 7 ಪಂದ್ಯಗಳಲ್ಲಿ ಸೋತು ಪ್ಲೇ ಆಫ್ ಕನಸಲ್ಲಿದ್ದ ತಂಡಕ್ಕೆ ಈ ಪದ್ಯ ಅದೃಷ್ಟವನ್ನು ತಂದುಕೊಟ್ಟಿದೆ. ಒಂದು ಕಡೆ ಪ್ಲೇ ಆಫ್ ಗೆ ಹೋಗಲು ರನ್ ಮಾತ್ರ ಅಲ್ಲ, ನಿಗದಿತ ರನ್ನಿನ ಒಳಗಡೆ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಕಟ್ಟಿ ಹಾಕಬೇಕಿತ್ತು.

 

ಅದೃಷ್ಟ ಹೊತ್ತು ತಂದ ಮಳೆರಾಯ

ಇನ್ನು ವಿಶೇಷ ಅಂದ್ರೆ ಬೆಂಗಳೂರಿನ ಹಲವು ಕಡೆ ಮಳೆರಾಯನ ಆರ್ಭಟ ಜೋರಾಗಿತ್ತು. ಎಡೆಬಿಡದೆ ಸುರಿದ ಮಳೆಯಿಂದ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.  ಅದೃಷ್ಟ ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ವಲ್ಪ ಹೊತ್ತಷ್ಟೇ ಮಳೆ ಸುರಿದಿದೆ. ಇದು ಮಳೆರಾಯನ ಕೃಪೆಯೆಂದೇ ನೆಟ್ಟಿಗರು ಹೇಳುತ್ತಿದ್ದಾರೆ. ಒಂದು ವೇಳೆ ಮಳೆಯಬ್ಬರ ಜೋರಾಗಿದ್ದು ಪಂದ್ಯ ಮಳೆಗೆ ಆಹುತಿಯಾಗಿದ್ದರೆ ಆರ್‌ಸಿಬಿ ಒಂದು ಆಂಕ ಪಡೆದು ಪಂದ್ಯಕೂಟದಿಂದ ನಿರ್ಗಮಿಸಬೇಕಾಗಿತ್ತು.

ಪ್ಲೇಆಫ್ ನಿರೀಕ್ಷೆಯಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೊನೆಯ ಮ್ಯಾಚ್​ನಲ್ಲಿ ಸೋಲುಣಿಸಿ ಇದೀಗ ಟಾಪ್-4 ಹಂತಕ್ಕೇರಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಆರ್​ಸಿಬಿ ಗ್ರೇಟೆಸ್ಟ್ ಕಂಬ್ಯಾಕ್ ಮಾಡಿದೆ. ಆರ್ಸಿಬಿ ಫ್ಯಾನ್ಸ್ ಗಳ ಹರ್ಷ ಹೇಳತೀರದು. ಎಲ್ಲೆಡೆ ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸ್ಟಾರ್ಸ್‌ ಕಲರವ

ಇನ್ನೂ ಈ ರೋಚಕ ಪಂದ್ಯ ವನ್ನು ವೀಕ್ಷಿಸಲು ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್, ಕಾಂತಾರ ಸಿನೆಮಾ ರಿಷಬ್ ಶೆಟ್ಟಿ ಭಾಗಿಯಾಗಿದ್ದರು. ಇನ್ನೂ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡು ಚಿಯರ್‌ ಅಪ್ ಮಾಡಿದ್ದು, ಕ್ಯಾಮೆರಾ ಕಣ್ಣಿಗೆ ಇಬ್ಬರೂ ಪೋಸ್ ನೀಡಿದ್ದಾರೆ. ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡಾ ಆರ್‌ಸಿಬಿ ಫ್ಯಾನ್‌ ಆಗಿದ್ದು ನಿನ್ನೆಯ ಪಂದ್ಯ ವನ್ನು ವೀಕ್ಷಣೆ ಮಾಡಿದ್ದಾರೆ.

ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ನ ಮಹಿಳಾ ತಂಡ ಈ ಬಾರಿಯ ಟ್ರೋಫಿಯನ್ನು ತಂದುಕೊಟ್ಟಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಮಹಿಳಾ ತಂಡ ಜರ್ಸಿಯನ್ನು ತೊಟ್ಟು ಚಿಯರ್ ಅಪ್ ಮಾಡಿದ್ದಾರೆ.

ಇನ್ನು ಎಲಿಮಿನೇಟರ್​ ಪಂದ್ಯಕ್ಕೆ ಅರ್ಹತೆ ಪಡೆದಿರುವ ಆರ್​ಸಿಬಿ ಪಾಲಿಗೆ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯ ಎದುರಾಗಿದೆ. ಮೇ 22 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಜಯ ಗಳಿಸಿದರೆ ಕ್ವಾಲಿಫೈಯರ್-2 ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈನಲ್​ಗೇರಲಿದೆಯಾ ಎಂದು ಕಾದು ನೋಡಬೇಕಿದೆ.

Continue Reading

LATEST NEWS

‘ಗೀತಾಂಜಲಿ ಸಿಲ್ಕ್ಸ್’, ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ನಿ*ಧನ

Published

on

ಉಡುಪಿ : ಉಡುಪಿಯ ಖ್ಯಾತ ಜವಳಿ ಮಳಿಗೆ ‘ಗೀತಾಂಜಲಿ ಸಿಲ್ಕ್ಸ್’ ಮತ್ತು ‘ಶಾಂತಿ ಸಾಗರ್’ ಹೊಟೇಲ್ ಸಂಸ್ಥಾಪಕ ನೀರೆಬೈಲೂರು ಗೋವಿಂದ ನಾಯಕ್ ಇಂದು ಮುಂಜಾನೆ ಸ್ವಗೃಹದಲ್ಲಿ ವಿಧಿವ*ಶರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಮೃ*ತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ : KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

Continue Reading

LATEST NEWS

Trending