Connect with us

    LATEST NEWS

    ಪ್ರೇಯಸಿಯ ಜೊತೆ ಗೋವಾ ಟೂರ್..! ಕ್ಷೌರಿಕನಿಗೆ ದುಬಾರಿಯಾದ ಟೂರ್..!

    Published

    on

    ಗೋವಾ/ಮಂಗಳೂರು: ಆತ ತಾನು ಪ್ರೀತಿಸಿದ ಹುಡುಗಿ ಜೊತೆಗೆ ಗೋವಾ ಟೂರ್ ಹೋಗೋದಿಕ್ಕೆ ಎಲ್ಲಾ ಪ್ಲ್ಯಾನ್ ಮಾಡಿಕೊಂಡಿದ್ದ. ಇದಕ್ಕಾಗಿ ಸರಿ ಸುಮಾರು ತಿಂಗಳ ಕಾಲ ತಾನು ದುಡಿದ ಹಣವನ್ನು ಕೂಡಿಟ್ಟಿದ್ದ. ಹೀಗೆ ಕೂಡಿಟ್ಟ ಹಣದಲ್ಲಿ ಫ್ಲೈಟ್‌ ಟಿಕೆಟ್ ಬುಕ್ ಮಾಡಿ ತನ್ನ ಪ್ರೇಯಿಸಿ ಜೊತೆ ಗೋವಾಕ್ಕೂ ತಲುಪಿದ್ದ. ಆದ್ರೆ ಗೋವಾದಲ್ಲಿ ಲ್ಯಾಂಡ್‌ ಆಗ್ತಾ ಇದ್ದಂತೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾನೆ.

    flight

    ಇದು ಉತ್ತರ ಪ್ರದೇಶದ ಪ್ರೇಮಿಗಳ ಕಥೆಯಾಗಿದ್ದು, ತನ್ನ ಪ್ರಿಯತಮೆಯ ಜೊತೆ ಗೋವಾ ಸುತ್ತುವ ಪ್ರಿಯಕರನ ಕನಸು ಭಗ್ನವಾಗಿದೆ. ಲಕ್ನೋದ ಮೋಹನ್‌ಲಾಲ್‌ಗಂಜ್‌ ನ ಮೊಹಮ್ಮದ್ ಅಮನ್‌ ವೃತ್ತಿಯಲ್ಲಿ ಕ್ಷೌರಿಕನಾಗಿದ್ದು ತನ್ನ ಪ್ರಿಯತಮೆಯನ್ನು ಗೋವಾ ತಿರುಗಿಸುವ ಕನಸು ಕಂಡಿದ್ದ. ಇದಕ್ಕಾಗಿ ಆತನ ಆರು ತಿಂಗಳಿನಿಂದ ಹಣ ಕೂಡಿಟ್ಟು ಗೋವಾಕ್ಕೆ ಹೊರಟಿದ್ದ. ಲಕ್ನೋದಿಂದ ದೆಹಲಿಗೆ ಬಂದು ಅಲ್ಲಿಂದ ಗೋವಾಕ್ಕೆ ತನ್ನ ಪ್ರಿಯತಮೆಯ ಜೊತೆ ಪ್ರಯಾಣ ಮಾಡಿದ್ದ. ಆದ್ರೆ ಗೋವಾ ವಿಮಾನ ನಿಲ್ದಾಣದಲ್ಲಿ ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಖಾಲಿ ಬಿಯರ್ ಬಾಟಲಿಗಳಿಂದ ಲಕ್ಷಾಧಿಪತಿಯಾದ ವ್ಯಕ್ತಿ..!

    flight

    ಮೊಹಮ್ಮದ್ ಅಮಾನ್ ಮೋಹನ್‌ಲಾಲ್‌ಗಂಜ್‌ನ ನಿವಾಸಿಯಾಗಿದ್ದು, ತನ್ನ ನೆರೆಮನೆಯ ಯುವತಿಯನ್ನು ಪ್ರೀತಿಸಿದ್ದ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿದ್ದು, ಮನೆಯವರಿಗೆ ಹೇಳದೆ ಗೋವಾ ಟೂರ್ ಹೊರಟಿದ್ದರು. ಯಾವಾಗ ಮನೆಯ ಮಗಳು ನಾಪತ್ತೆಯಾಗಿದ್ದಾಳೋ ಆವಾಗ ಮನೆಯವರು ಪೊಲೀಸರಿಗೆ ದೂರು ನಿಡಿದ್ದಾರೆ. ಈ ವೇಳೆ ಮೊಹಮ್ಮದ್ ಅಮಾನ್ ಕೂಡಾ ಇಲ್ಲದ ಕಾರಣ ಆತನ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದರು.

    ದೂರಿನ ಹಿನ್ನಲೆಯಲ್ಲಿ ಅಮಾನ್‌ನನ್ನು ಹುಡುಕಲು ಆರಂಭಿಸಿದ ಪೊಲೀಸರು ಸೈಬರ್ ಸೆಲ್‌ ಮತ್ತು ಡಿಜಿಟಲ್‌ ಟ್ರಾಕ್‌ ಮೂಲಕ ಆತ ಫ್ಲೈಟ್ ಟಿಕೆಟ್ ಬುಕ್ ಮಾಡಿರುವುದು ಪತ್ತೆ ಹಚ್ಚಿದ್ದಾರೆ. ಈ ವೇಳೆ ದೆಹಲಿ ಹಾಗೂ ಗೋವಾ ಟಿಕೆಟ್ ಬುಕ್ ಮಾಡಿರೋದು ಗೊತ್ತಾಗಿ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಗೋವಾದಲ್ಲಿ ಇಳಿಯುತ್ತಿದ್ದಂತೆ ಪೊಲೀಸರು ಪ್ರೇಮಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕಷ್ಟಪಟ್ಟು ಹಣ ಉಳಿಸಿ ಗೋವಾ ಸುತ್ತುವ ಕನಸಿಗೆ ತಣ್ಣೀರು ಬಿದ್ದಿದ್ದು, ಇದೀಗ ಯುವತಿಯ ಅಪಹರಣ ಪ್ರಕರಣದಲ್ಲಿ ಮೊಹಮ್ಮದ್ ಅಮಾನ್ ಕಂಬಿ ಎಣಿಸುವಂತಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಮೂವರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಪಡೆ

    Published

    on

    ಮಂಗಳೂರು/ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದ ನಡೆಯುತ್ತಿರುವ ಎನ್ ಕೌಂಟರ್ ನಲ್ಲಿ ಇಂದು(ಸೆ.14) ನಸುಕಿನ ಜಾವ ಮೂವರು ಉಗ್ರರನ್ನು ಭದ್ರತಾ ಪಡೆ ಯೋಧರು ಹೊ*ಡೆದುರುಳಿಸಿದ್ದಾರೆ.

    ಸಾಂದರ್ಭಿಕ ಚಿತ್ರ

    ಸಾಂದರ್ಭಿಕ ಚಿತ್ರ

    ನಿನ್ನೆ ಶುಕ್ರವಾರ ತಡರಾತ್ರಿ ಉತ್ತರ ಕಾಶ್ಮೀರ ಜಿಲ್ಲೆಯ ಪಟ್ಟಾನ್ ಪ್ರದೇಶದ ಚಕ್ ಟಪ್ಪರ್ ಕ್ರೀರಿಯಲ್ಲಿ ಪ್ರದೇಶಗಳನ್ನು  ಭದ್ರತಾ ಪಡೆ ಯೋಧರು ಸುತ್ತುವರಿದು ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.

    ಇದನ್ನೂ ಓದಿ : ಬಾಲಕಿಯೊಂದಿಗೆ ಅಸಭ್ಯ ವರ್ತನೆ; ಪ್ರಯಾಣಿಕರಿಂದಲೇ ರೈಲ್ವೆ ಸಿಬ್ಬಂದಿ ಹ*ತ್ಯೆ

    ನಿನ್ನೆ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂ*ಡು ಹಾರಿಸಿದ ನಂತರ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತು. ಅದರಲ್ಲಿ ಇಬ್ಬರು ಯೋಧರು ಹು*ತಾತ್ಮರಾಗಿ ಮತ್ತಿಬ್ಬರು ಗಾ*ಯಗೊಂಡಿದ್ದರು. ಅದಕ್ಕೆ ಪ್ರತಿದಾ*ಳಿ ನಡೆಸಿದ ಯೋಧರು ಇಂದು ಮೂವರು ಉ*ಗ್ರರನ್ನು ಕೊಂ*ದು ಹಾಕಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಉಗ್ರರ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರಿದಿದೆ.

    Continue Reading

    LATEST NEWS

    ಸೆ.15: ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ

    Published

    on

    ಮಂಗಳೂರು: ಅಂತಾರಾಷ್ಟ್ರೀಯ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸೆ.15ರಂದು ಮನಪಾ ವ್ಯಾಪ್ತಿಯಲ್ಲಿ ನಡೆಯುವ ಮಾನವ ಸರಪಳಿಯ ಹಿನ್ನಲೆಯಲ್ಲಿ ಸಂಚಾರ ವ್ಯವಸ್ಥೆಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.

    ರಾ.ಹೆ.66ರಲ್ಲಿ ಉಡುಪಿ-ಹೆಜಮಾಡಿ ಗಡಿಯಿಂದ ನಂತೂರು ವೃತ್ತದ ಮೂಲಕ ರಾಷ್ಟ್ರೀಯ ಹೆದ್ದಾರಿ 73ರ ಅರ್ಕುಳ ಫರಂಗಿಪೇಟೆಯವರೆಗೆ ಬೆಳಗ್ಗೆ 7:30ರಿಂದ ಪೂ.11ರವರೆಗೆ ಮಾನವ ಸರಪಳಿ ನಿರ್ಮಿಸಲು ಉದ್ದೇಶಿಸಲಾಗಿದೆ.

    ಹಾಗಾಗಿ ಸುರಕ್ಷತೆ ದೃಷ್ಟಿಯಿಂದ ಹೆಜಮಾಡಿ-ಕಾರ್ನಾಡು-ಮುಕ್ಕ-ಸುರತ್ಕಲ್-ಪಣಂಬೂರು-ಕೊಟ್ಟಾರ ಚೌಕಿ-ಕುಂಟಿಕಾನ-ಕೆಪಿಟಿ ವೃತ್ತ-ಪದವು ಜಂಕ್ಷನ್ -ನಂತೂರು-ಬಿಕರ್ನಕಟ್ಟೆ-ಪಡೀಲ್-ಸಹ್ಯಾದ್ರಿ-ವಳಚ್ಚಿಲ್-ಅರ್ಕುಳವರೆಗಿನ ರಾ.ಹೆ. 66 ಮತ್ತು 73ರಲ್ಲಿ ಸಂಚರಿಸುವ ಎಲ್ಲ ವಾಹನಗಳ ಮಾಲಕರು, ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಲು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಸೂಚಿಸಿದ್ದಾರೆ.

    Continue Reading

    LATEST NEWS

    ಸಂಬಳ ಪಾವತಿಯಾಗದ್ದಕ್ಕೆ ದಿಢೀರ್‌ ಪ್ರತಿಭಟನೆಗೆ ಇಳಿದ 48 KSRTC ಚಾಲಕರು

    Published

    on

    ಮಡಿಕೇರಿ: ಸರಿಯಾಗಿ ವೇತನ ಪಾವತಿಯಾಗದ್ದಕ್ಕೆ ಕರ್ತವ್ಯ ಸ್ಥಗಿತಗೊಳಿಸಿ ಕೆಎಸ್‌ಆರ್‌ಟಿಸಿಯ 48 ಹೊರಗುತ್ತಿಗೆ ಚಾಲಕರು ದಿಢೀರ್‌ ಪ್ರತಿಭಟನೆ ನಡೆಸಿದ ಘಟನೆ ಮಡಿಕೇರಿಯಲ್ಲಿ ‌ಇಂದು(ಸೆ.14) ಬೆಳಿಗ್ಗೆ ನಡೆದಿದೆ.

    ಸರಿಯಾದ ವೇತನ ಸಿಗದಕ್ಕೆ ಇರುವುದರಿಂದ ಇಂದು ಬೆಳಿಗ್ಗೆಯಿಂದಲೇ ಬಸ್ಸುಗಳನ್ನು ರಸ್ತೆಗೆ ಇಳಿಸದೇ ಪ್ರತಿಭಟನೆ ನಡೆಸುತ್ತಿದ್ದು ಹಲವು ಮಾರ್ಗಗಳಲ್ಲಿ ಬಸ್‌ ಸಂಚಾರ ಬಂದ್‌ ಆಗಿದೆ.

    ಹೊರಗುತ್ತಿಗೆ ಆಧಾರದಲ್ಲಿ ನೇಮಕವಾಗಿದ್ದ ಬಸ್ಸು ಚಾಲಕರು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಇದ್ದ ಏಜೆನ್ಸಿ ಪ್ರತಿ ತಿಂಗಳು 23 ಸಾವಿರ ರೂ. ಸಂಬಳ ನೀಡುತ್ತಿತ್ತು. ಆದರೆ ಈ ಏಜೆನ್ಸಿ ಬದಲಾಗಿದ್ದು ಪೂಜ್ಯಾಯ ಸೆಕ್ಯುರಿಟಿ ಏಜೆನ್ಸಿ 13, 14 ಸಾವಿರ ರೂ. ಪಾವತಿಸುತ್ತಿದೆ. ಹಲವು ದಿನಗಳ ಬಳಿಕ ಒತ್ತಾಯದ ಬಳಿಕ ಶುಕ್ರವಾರ ಅರ್ಧ ಸಂಬಳ ಪಾವತಿಸಿದ್ದಾರೆ.

    ಸಿಎಲ್ ರಜೆ ಕೊಡದ ಏಜೆನ್ಸಿ ಯಾವುದೇ ಅಪಘಾತವಾದರೂ ಚಾಲಕರನ್ನೇ ಹೊಣೆ ಮಾಡುತ್ತಿದೆ. ಏಜೆನ್ಸಿ ಪೂರ್ಣ ಪ್ರಮಾಣದ ವೇತನ ಹಾಕುವವರೆಗೂ ಬಸ್ಸು ಸಂಚಾರ ಅರಂಭ ಮಾಡುವುದಿಲ್ಲ ಎಂದು 48 ಬಸ್ಸು ಚಾಲಕರು ಪಟ್ಟು ಹಿಡಿದ್ದಾರೆ.

    ದಿಢೀರ್‌ ಪ್ರತಿಭಟನೆಯಿಂದ ಕೊಡಗು ಜಿಲ್ಲೆಯ ಹಲವಾರು ಮಾರ್ಗಗಳಲ್ಲಿ ಸರ್ಕಾರಿ ಬಸ್ಸು ಸಂಚಾರ ಅಗದೇ ವ್ಯತ್ಯಯಗೊಂಡಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರಿ ಬಸ್ ಇಲ್ಲದೇ ಜನರು ಪರದಾಟ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending