Connect with us

  LATEST NEWS

  ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

  Published

  on

  ಮಂಗಳೂರು / ಮಧುರೈ : ಅದು ಹತ್ತೂರಿನ ಜನರು ಭಾಗವಹಿಸುವ ಊರ ಜಾತ್ರೆಯಾಗಿದ್ದು ಕನಿಷ್ಟ ಅಂದ್ರೂ ಹತ್ತರಿಂದ ಹದಿನೈದು ಸಾವಿರ ಜನರು ಭಾಗವಹಿಸ್ತಾರೆ. ಆದ್ರೆ, ವಿಶೇಷ ಅಂದ್ರೆ ಈ ಜಾತ್ರೆಯಲ್ಲಿ ಎಲ್ಲೂ ಒಂದೇ ಒಂದು ಹೆಣ್ಣು ಮಕ್ಕಳು ಕಾಣೋದಿಕ್ಕೆ ಸಿಗೋದಿಲ್ಲ. ಹೆಣ್ಣು ಮಕ್ಕಳು ಈ ಜಾತ್ರೆ ಗದ್ದೆಗೆ ಇಳಿಬೇಕು ಅಂದ್ರೆ ಇಲ್ಲಿ ಪುರುಷರು ಊಟ ಮಾಡಿ ಬಿಟ್ಟು ಹೋದ ಬಾಳೆ ಎಲೆಗಳು ಒಣಗಿ ಹೋಗಬೇಕು. ಅಂದ್ರೆ ಕನಿಷ್ಟ ಅಂದ್ರೂ ಒಂದು ವಾರದ ಬಳಿಕವಷ್ಟೇ ಹೆಣ್ಣು ಮಕ್ಕಳು ಈ ಜಾತ್ರೆಗೆ ಬರಬಹುದು.


  ಇದು ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ಬಳಿಯ ಸೂರಿಕಂಬಟ್ಟಿ ಪಂಚಾಯತ್‌ನಲ್ಲಿ ನಡೆಯುವ ವಿಶೇಷ ಜಾತ್ರೆ. ಪೆರುಮಾಳ್ಕೋವಿಲ್ಪಟ್ಟಿ ಗ್ರಾಮ ದೇವರಾದ ಕರುಂಪರೈ ಮುತ್ತಯ್ಯ ದೇವಸ್ಥಾನದಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಮಾಂಸಾಹಾರಿ ಊಟದ ಜಾತ್ರೆಯಾಗಿದ್ದು, ಉತ್ಸವದ ಸಂಪ್ರದಾಯದಂತೆ ಪುರುಷರು ಮಾತ್ರ ಭಾಗವಹಿಸುತ್ತಾರೆ.

  ದೇವರಿಗೆ ಮೇಕೆ ಬ*ಲಿ :

  ಗ್ರಾಮ ದೇವರಿಗೆ ಭಕ್ತರು ತಮ್ಮ ಕೃಷಿ ಸಮೃದ್ಧಿಯಾಗಲು, ರೋಗ ರುಜಿನಗಳು ಬಾರದೇ ಇರಲು ಇಲ್ಲಿಗೆ ಕಪ್ಪು ಆಡುಗಳನ್ನು ಹರಕೆ ಹೇಳಿರುತ್ತಾರೆ. ಹರಕೆ ಹೇಳಿದ ಆಡುಗಳನ್ನು ಈ ಪರಿಸರದಲ್ಲಿ ತಂದು ಬಿಟ್ಟ ಬಳಿಕ ಆ ಆಡುಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಯಾವ ತೋಟಕ್ಕೆ ಹೋಗಿ ಮೇವು ತಿಂದ್ರೂ ಅದು ಸಾಕ್ಷಾತ್ ಮುತ್ತಯ್ಯ ಕರುಪ್ಪು ಸ್ವಾಮಿಯೇ ಮೇವು ತಿನ್ನುತ್ತಿದ್ದಾರೆ ಅಂತ ಭಕ್ತರು ನಂಬಿಕೆ ಇಟ್ಟಿದ್ದಾರೆ. ಮುತ್ತಯ್ಯ ಸ್ವಾಮಿಗೆ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಇದೇ ಮೇಕೆಗಳನ್ನು ಬ*ಲಿ ಕೊಡಲಾಗುತ್ತದೆ. ಹಬ್ಬಕ್ಕೆ ಒಂದು ವಾರ ಮೊದಲು ಗ್ರಾಮಾಂತರ ಪ್ರದೇಶದಲ್ಲಿ ತಿರುಗಾಡುವ ಎಲ್ಲ ಮೇಕೆಗಳನ್ನು ಸಂಗ್ರಹಿಸಿ ಸ್ವಾಮಿಗೆ ಬ*ಲಿ ಕೊಡುತ್ತಾರೆ.


  ಈ ಹಿನ್ನೆಲೆಯಲ್ಲಿ ಇಂದು ( ಮೆ 18 ) ಬೆಳಗ್ಗೆ ಉತ್ಸವ ಆರಂಭವಾಗಿದ್ದು, ದೇವಸ್ಥಾನದಲ್ಲಿ ಮುತ್ತಯ್ಯ ಸ್ವಾಮಿಗೆ ಪೊಂಗಲ್ ಹಾಕಿ ಪೂಜೆಗೆ ಚಾಲನೆ ನೀಡಲಾಯಿತು. ನಂತರ 125 ಮೇಕೆಗಳನ್ನು ಬ*ಲಿ ನೀಡಿ 2500 ಕೆಜಿ ಅಕ್ಕಿಯನ್ನು ಬೇಯಿಸಲಾಯಿತು. ನಂತರ ಬೇಯಿಸಿದ ಅನ್ನ ಮತ್ತು ಮಾಂಸವನ್ನು ಸ್ವಾಮಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು.

  ಮಹಿಳೆಯರಿಗಿಲ್ಲ ಪ್ರವೇಶ :


  ಈ ಜಾತ್ರೆಯಲ್ಲಿ ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪುರುಷರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಇವರು ಆಹಾರ ಸೇವಿಸಿದ ಎಲೆಗಳನ್ನು ಹಾಗೆ ಬಿಟ್ಟು ಬಿಡುವುದು ಕೂಡಾ ಇಲ್ಲಿನ ಪ್ರಮುಖ ಸಂಪ್ರದಾಯದಲ್ಲಿ ಒಂದು. ಹೀಗೇ ಬಿಟ್ಟು ಹೋದ ಎಲೆಗಳು ಒಣಗುವ ತನಕ ಈ ಪ್ರದೇಶಕ್ಕೆ ಮಹಿಳೆಯರು ಎಂಟ್ರಿ ಕೊಡುವಂತಿಲ್ಲ. ಎಲೆಗಳು ಒಣಗಿದೆ ಎಂದು ದೇವಸ್ಥಾನದ ಪೂಜಾರರು ಹೇಳಿದ ಬಳಿಕ ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.

  ಇದನ್ನೂ ಓದಿ : ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

  ಮಾಂಸದೂಟದ ಹಬ್ಬದಲ್ಲಿ ತಿರುಮಂಗಲಂ, ಸೊರಿಕಂ ಪಟ್ಟಿ, ಪೆರುಮಾಳ್ ಕೋವಿಲ್ಪಟ್ಟಿ, ಕರಡಿಕ್ಕಲ್. ಮಾವಿಲಿಪಟ್ಟಿ, ಚೇಕನುರಾಣಿ, ಚೋಳವಂತನ್, ಕರುಮತ್ತೂರು, ಚೆಲ್ಲಂಪಟ್ಟಿ ಸೇರಿದಂತೆ ವಿವಿಧ ಪ್ರದೇಶಗಳ ಪುರುಷ ಭಕ್ತರು ಮಾತ್ರ ಭಾಗವಹಿಸಿದ್ದರು.

  LATEST NEWS

  WATCH : ಕಾರು ಚಲಾಯಿಸುವಾಗ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಯುವತಿ

  Published

  on

  ಮಂಗಳೂರು/ ಮಹಾರಾಷ್ಟ್ರ : ಇದು ಸೋಶಿಯಲ್ ಮೀಡಿಯಾ ಯುಗ. ಇಲ್ಲಿ ಎಲ್ಲವನ್ನೂ ಪ್ರದರ್ಶನಕ್ಕಾಗಿ, ಶೋಕಿಗಾಗಿ ಹಂಚಿಕೊಳ್ಳುವ ಪರಿಪಾಠ ಹೆಚ್ಚಾಗಿದೆ. ರೀಲ್ಸ್ ಮಾಡೋದು ಕಾಮನ್ ಆಗೋಗಿದೆ. ವೀವ್ಸ್ ಗಿಟ್ಟಿಸಿಕೊಳ್ಳಲು ಸರ್ಕಸ್ ಮಾಡೋರ ಸಂಖ್ಯೆ ಹೆಚ್ಚಾಗಿದೆ. ಈ ರೀಲ್ಸ್ ಹುಚ್ಚು ಪ್ರಾಣಕ್ಕೆ ಕುತ್ತಾಗಿರೋ ಉದಾಹರಣೆಗಳಿಗೇನೂ ಕಮ್ಮಿಯಿಲ್ಲ ಬಿಡಿ. ಇದೀಗ ಯುವತಿಯೊಬ್ಬಳು ಕಾರು ಚಲಾಯಿಸುವ ರೀಲ್ಸ್ ಮಾಡಲು ಹೋಗಿ ಪ್ರಾ*ಣ ಕಳೆದುಕೊಂಡ ಘಟನೆ ನಡೆದಿದೆ.


  ಮಹಾರಾಷ್ಟ್ರದ ಛತ್ರಿಪತಿ ಸಂಭಾಜಿನಗರದ ಸುಲಿಭಂಜನ್ ಪ್ರದೇಶದಲ್ಲಿ ಈ ಅವಘಡ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಯುವತಿ ರಿವರ್ಸ್​ ಗೇರ್ ​ನಲ್ಲಿದ್ದಾಗ ಏಕಾಏಕಿ ಎಕ್ಸಲೇಟರ್​​ ಒತ್ತಿದ್ದಾಳೆ. ಪರಿಣಾಮ ಕಾರು ಕಂದಕಕ್ಕೆ ಬಿದ್ದಿದೆ. ಪರಿಣಾಮ ಗಂಭೀ*ರವಾಗಿ ಗಾಯಗೊಂಡ ಯುವತಿ ಇಹಲೋಕ ತ್ಯಜಿಸಿದ್ದಾಳೆ.

  ಶ್ವೇತಾ ಸುರ್ವಾಸೆ(23) ಮೃತ ಯುವತಿ. ಯುವತಿ ಆಕಸ್ಮಿಕವಾಗಿ ರಿವರ್ಸ್​ ಗೇರ್​ನಲ್ಲಿ ಎಕ್ಸಲೇಟರ್ ಒತ್ತಿದ ಕಾರಣ ಕಾರು ಹಿಂಬದಿಯ ಕ್ರ್ಯಾಶ್​ ಬ್ಯಾರಿಯರ್​ ಅನ್ನು ಮುರಿದು ಕಂದಕಕ್ಕೆ ಬಿದ್ದ ಪರಿಣಾಮ ಸಾ*ವನ್ನಪ್ಪಿದ್ದಾಳೆ. ಕಾರು ರಿವರ್ಸ್ ಗೇರ್ ನಲ್ಲಿದ್ದಾಗ ಯುವತಿ ಕ್ಲಚ್ ಬದಲು ಎಕ್ಸಲೇಟರ್ ಒತ್ತಿದ ಪರಿಣಾಮ ಕಾರು ನೇರವಾಗಿ ಕಂದಕಕ್ಕೆ ಬಿದ್ದಿದೆ.

  ಸ್ನೇಹಿತ ಶಿವರಾಜ್ ಮುಳೆ ಕಾರಿನಲ್ಲಿ ಸಂಭಾಜಿನಗರದಿಂದ ದತ್ ಮಂದಿರ ಪ್ರದೇಶಕ್ಕೆ ಬಂದಿದ್ದರು. ಶಿವರಾಜ್ ಇತ್ತೀಚೆಗಷ್ಟೇ ಶ್ವೇತಾಳಿಗೆ ಕಾರು ಓಡಿಸಲು ಕಲಿಸಿದ್ದ. ಶ್ವೇತಾಗೆ ಕಾರು ಓಡಿಸುವಾಗ ರೀಲ್ಸ್ ತಯಾರಿಸುವ ಆಸೆ ಇತ್ತು. ಮೊಬೈಲನ್ನು ಶಿವರಾಜ್ ಗೆ ಕೊಟ್ಟು ತನ್ನ ರೀಲ್ಸ್​ ಮಾಡುವಂತೆ ಹೇಳಿದ್ದಳು. ಇದ್ದಕ್ಕಿದ್ದಂತೆ ಕಾರು ರಿವರ್ಸ್ ಗೇರ್‌ನಲ್ಲಿ ಚಲಿಸಲು ಪ್ರಾರಂಭಿಸಿತು. ಈ ವೇಳೆ ಶ್ವೇತಾ ಎಕ್ಸಲೇಟರ್ ಒತ್ತಿದ್ದಾಳೆ. ಥಟ್ಟನೆ ಶ್ವೇತಾಳ ಕಾರು ವೇಗವಾಗಿ ಹಿಂದಕ್ಕೆ ಚಲಿಸತೊಡಗಿತು.

  ಇದನ್ನೂ ಓದಿ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

  ಶಿವರಾಜ್​ ಕ್ಲಚ್ ಕ್ಲಚ್​ ಎಂದು ಎಷ್ಟೇ ಕೂಗಿದರೂ ಆಕೆಗೆ ಕೇಳಿಸಲೇ ಇಲ್ಲ, ಅಷ್ಟರಲ್ಲಾಗಲೇ ಕಾರು ಕೆಳಗೆ ಬಿದ್ದಿದೆ. ಕಾರು ರಿವರ್ಸ್​ ಗೇರ್​ನಲ್ಲಿದ್ದಾಗ ಅಕಸ್ಮಾತ್​ ಆಗಿ ಎಕ್ಸಲರೇಟರ್ ಒತ್ತಿದ್ದರಿಂದ ಈ ಅವಘ*ಡ ಸಂಭವಿಸಿದೆ.

  ರಕ್ಷಣಾ ಸಿಬ್ಬಂದಿ ಆ ಪ್ರದೇಶವನ್ನು ತಲುಪಲು ಗಂಟೆಗಳ ಸಮಯವನ್ನು ತೆಗೆದುಕೊಂಡಿತು, ತಕ್ಷಣ ಯುವತಿಯನ್ನು ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ, ಯುವತಿ ಜೀವಾಂತ್ಯವಾಗಿದೆ. ಘಟನೆಯ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸದ್ಯ ವೀಡಿಯೋ ವೈರಲ್ ಆಗಿದೆ.

  Continue Reading

  LATEST NEWS

  ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಆತ್ಮಹ*ತ್ಯೆ ಮಾಡಿಕೊಂಡ ಪತಿ!

  Published

  on

  ಮಂಗಳೂರು/ಹಾಸನ : ಪತ್ನಿಯನ್ನು ಗುಂಡಿಕ್ಕಿ ಕೊಂ*ದು ಬಳಿಕ ಪತಿ ನೇ*ಣಿಗೆ ಶರಣಾಗಿರುವ ಘಟನೆ ಬೇಲೂರು ತಾಲೂಕಿನ ದೊಡ್ಡಸಾಲಾವರ ಗ್ರಾಮದಲ್ಲಿ ನಡೆದಿದೆ. ಪತಿ ಹರೀಶ್ (50,) ಪತ್ನಿ ಜಾಜಿ (45) ಮೃ*ತಪಟ್ಟವರು.
  ದಂಪತಿ ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸೋಮವಾರ (ಜೂ.17) ರಾತ್ರಿಯೂ ಮನೆಯಲ್ಲಿ ದಂಪತಿ ನಡುವೆ ಕಲಹವಾಗಿದೆ.

  ಈ ಜಗಳ ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಹರೀಶ್​​ ಪತ್ನಿ ಜಾಜಿಗೆ ನಾಡ ಬಂದೂಕಿನಿಂದ ಗುಂಡು ಹಾರಿಸಿ ಹ*ತ್ಯೆ ಮಾಡಿದ್ದಾನೆ. ಬಳಿಕ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾನೆ.

  ಇದನ್ನೂ ಓದಿ : ಉಡುಪಿಯಲ್ಲಿ ಮತ್ತೊಂದು ಗ್ಯಾಂಗ್ ವಾರ್..!

  ಈ ಬಗ್ಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  Continue Reading

  LATEST NEWS

  ಸಂತ್ರಸ್ತೆ ಅಪಹರಣ ಪ್ರಕರಣ : ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

  Published

  on

  ಬೆಂಗಳೂರು : ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಹೈಕೋರ್ಟ್ ಭವಾನಿ ರೇವಣ್ಣ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಅಲ್ಲದೇ, ಅವರಿಗೆ ಮೈಸೂರು, ಹಾಸನ ಜಿಲ್ಲೆ ಪ್ರವೇಶಿಸದಂತೆ ಷರತ್ತು ವಿಧಿಸಿ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ.


  ಪೊಲೀಸರ 85 ಪ್ರಶ್ನೆಗಳಿಗೆ ಭವಾನಿ ರೇವಣ್ಣ ಅವರು ಉತ್ತರಿಸಿದ್ದಾರೆ. ಹೀಗಾಗಿ ತನಿಖೆಗೆ ಸಹಕರಿಸಿಲ್ಲ ಎಂಬ ವಾದ ಒಪ್ಪಲಾಗುವುದಿಲ್ಲ. ಪೊಲೀಸರಿಗೆ ಬೇಕಾದಂತಹ ಉತ್ತರ ಕೊಡಬೇಕೆಂದಿಲ್ಲ. ಸಂತ್ರಸ್ತೆಗೆ ಊಟ ಬಟ್ಟೆ ಕೊಟ್ಟಿಲ್ಲವೆಂಬ ವಾದವನ್ನು ಒಪ್ಪಲಾಗುವುದಿಲ್ಲ. ಭವಾನಿ ರೇವಣ್ಣ ಊಟ, ಬಟ್ಟೆ ಕಳುಹಿಸಿದ್ದರೆಂದು ಸಂತ್ರಸ್ತೆ ಹೇಳಿಕೆಯಿದೆ ಎಂದು ನ್ಯಾ. ಕೃಷ್ಣ ಎಸ್​ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

  ಪ್ರಕರಣದ ವಿವರ :

  ಪ್ರಜ್ವಲ್​ ರೇವಣ್ಣ ಅವರದ್ದು ಎನ್ನಲಾದ ಅಶ್ಲೀ*ಲ ವಿಡಿಯೋದಲ್ಲಿ ನನ್ನ ತಾಯಿಯ ಚಿತ್ರವೂ ಇದ್ದು, ಇದೀಗ ಅವರು ಕಣ್ಮರೆಯಾಗಿದ್ದಾರೆ ಎಂದು ಮೇ 2ರ ತಡರಾತ್ರಿ ಮೈಸೂರಿನ ಕೆಆರ್​​ ನಗರ ಠಾಣೆಯಲ್ಲಿ ಸಂತ್ರಸ್ತೆ ಪುತ್ರ ದೂರು ನೀಡಿದ್ದರು.

  ಈ ಬಗ್ಗೆ ಹೆಚ್.​ಡಿ.ರೇವಣ್ಣ, ಭವಾನಿ ರೇವಣ್ಣ ಮತ್ತು ಭವಾನಿ ರೇವಣ್ಣ ಸಂಬಂಧಿ ಬಾಬು ವಿರುದ್ಧ ದೂರು ದಾಖಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್​ಐಟಿ ಅಧಿಕಾರಿಗಳು ಈಗಾಗಲೇ ಆರೋಪಿ ಬಾಬು ಅನ್ನು ಬಂಧಿಸಿದ್ದಾರೆ. ಪ್ರಕರಣದ ಮೊದಲ ಆರೋಪಿಯಾಗಿರುವ ಮಾಜಿ ಸಚಿವ ಹೆಚ್​ಡಿ ರೇವಣ್ಣ ಅವರನ್ನು ಎಸ್​ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡು, ವಿಚಾರಣೆ ನಡೆಸಿದ್ದರು. ಈಗಾಗಲೇ ಹೆಚ್​ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಸದ್ಯ ಹೆಚ್​ಡಿ ರೇವಣ್ಣ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ.

  ಇದೇ ಪ್ರಕರಣದಲ್ಲಿ ಭವಾನಿ ರೇವಣ್ಣ ಅವರನ್ನೂ ಕೂಡ ಎಸ್​ಐಟಿ ಅಧಿಕಾರಿಗಳ ವಿಚಾರಣೆಗೆ ಹಾಜರಾಗಬೇಕೆಂದು ಎರಡೆರಡು ನೋಟೀಸ್​ ಕೊಡಲಾಗಿತ್ತು. ನೋಟೀಸ್​ ನೀಡುತ್ತಿದ್ದಂತೆ ಭವಾನಿ ರೇವಣ್ಣ ಅವರು ವಿಚಾರಣಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ನ್ಯಾಯಾಲಯ ನೀರಿಕ್ಷಣಾ ಜಾಮೀನು ಅರ್ಜಿ ತಿರಸ್ಕತಿಸಿತ್ತು.

  ಹೀಗಾಗಿ ಭವಾನಿ ರೇವಣ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್​​ನ ಏಕ ಸದಸ್ಯ ಪೀಠ ಈ ಹಿಂದೆ ಭವಾನಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿ ಆದೇಶ ಕಾಯ್ದಿರಿಸಿತ್ತು. ಇದೀಗ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶಿಸಿದೆ.

  Continue Reading

  LATEST NEWS

  Trending